ಇಂದಿರಾ ಕ್ಯಾಂಟೀನ್ಸ್

ವಿಕಿಪೀಡಿಯ ಇಂದ
Jump to navigation Jump to search
ಇಂದಿರಾ ಕ್ಯಾಂಟೀನ್ಸ್
ಪ್ರಕಾರರೆಸ್ಟೋರೆಂಟ್ ಸರಪಳಿ
ಜಾತಿದಕ್ಷಿಣ ಭಾರತೀಯ ಸಸ್ಯಾಹಾರಿ ತಿನಿಸು
ಸಂಸ್ಥಾಪಕ(ರು)ಕರ್ನಾಟಕ ಸರ್ಕಾರ
ಮುಖ್ಯ ಕಾರ್ಯಾಲಯಬೆಂಗಳೂರು, ಭಾರತ
ವ್ಯಾಪ್ತಿ ಪ್ರದೇಶಕರ್ನಾಟಕ
ಉದ್ಯಮರೆಸ್ಟೋರೆಂಟ್ ಸೇವೆಗಳು
ಉತ್ಪನಆಹಾರ
ಸೇವೆಗಳುಅನುದಾನಿತ ಕಡಿಮೆ ವೆಚ್ಚದ ಆಹಾರ
ಆದಾಯಲಾಭರಹಿತ ಸಂಸ್ಥೆ
ಅಂತರಜಾಲ ತಾಣhttp://bbmp.gov.in/indira-canteen

ಇಂದಿರಾ ಕ್ಯಾಂಟೀನ್ಸ್ ಅಥವಾ ನಮ್ಮ ಕ್ಯಾಂಟೀನ್ಸ್ ಬೆಂಗಳೂರಿನಲ್ಲಿರುವ ರೆಸ್ಟೋರೆಂಟ್ಗಳ ಸರಪಳಿಗಳಾಗಿವೆ, ಇದು ಬೆಂಗಳೂರು, -ನಾಗರಿಕರಿಗೆ ಕಡಿಮೆ ದರದಲ್ಲಿ ತಿಂಡಿ ಮತ್ತು ಊಟ ವಿತರಿಸುವ ರಾಜ್ಯಸರ್ಕಾರದ ಕ್ಯಾಂಟೀನ್ಗಳಗಿವೆ.ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯಿಂದ ಸಬ್ಸಿಡಿ ದರದಲ್ಲಿ . ಈ ಕ್ಯಾಂಟೀನ್ಸ್ ಸ್ವಾತಂತ್ರ್ಯ ದಿನಾಚರಣೆ ದಿನದಂದು, 15 ಆಗಸ್ಟ್ 2017 ರಂದು ಪ್ರಾರಂಭವಾಗಲು ನಿರೀಕ್ಷಿಸಲಾಗಿದೆ.[೧]

ರಚನೆ[ಬದಲಾಯಿಸಿ]

ಬೆಂಗಳೂರಿನಲ್ಲಿ 197 ನಾಗರಿಕ ವಾರ್ಡ್ಗಳಲ್ಲಿ ಕ್ಯಾಂಟೀನ್ಗಳನ್ನು ನಿರ್ಮಿಸಲಾಗುವುದು ಎಂದು ಬಿಬಿಎಂಪಿ ಹೇಳಿದೆ. ರೆಸ್ಟಾರೆಂಟುಗಳು ಉಪಹಾರ, ಊಟ ಮತ್ತು ಭೋಜನವನ್ನು ಸ್ಥಳೀಯ ಜನರಿಗೆ ಹೆಚ್ಚು ಸಬ್ಸಿಡಿ ದರದಲ್ಲಿ ನೀಡಲಾಗುತ್ತದೆ.

  • ತಿಂಡಿಯಲ್ಲಿ ಇಡ್ಲಿ ಮತ್ತು ತೆಂಗಿನಕಾಯಿ ಚಟ್ನಿ .
  • ಊಟ ಮತ್ತು ಭೋಜನದಲ್ಲಿ ಅನ್ನ ಸಾಂಬಾರ್, ಮೊಸರನ್ನ, ಟೊಮೆಟೊ ಅನ್ನ ನೀಡಲಿದೆ.subsidized price.[೨][೩]

ಆಹಾರ ತಯಾರಿಕೆ[ಬದಲಾಯಿಸಿ]

ಆಹಾರ ತಯಾರಿಸುವುದು ಮತ್ತು ಕ್ಯಾಂಟೀನ್‍ಗಳಿಗೆ ಸರಬರಾಜು ಮಾಡುವ ಹೊಣೆಯನ್ನು ರಿವಾಡ್ರ್ಸ್, ಚೇಫ್ ಟಾಕ್ ಸಂಸ್ಥೆಗಳಿಗೆ ಗುತ್ತಿಗೆ ನೀಡಲಾಗಿದೆ.

  • ಅಡುಗೆ ತಯಾರಕರಿಗೆ ಪಾಲಿಕೆ ವತಿಯಿಂದ ಹಿರಿಯ ಅಧಿಕಾರಿಗಳು ಕಾರ್ಯಾಗಾರ ನಡೆಸಿದ್ದಾರೆ. 
  • ಒಂದು ಕ್ಯಾಂಟೀನ್‍ನಲ್ಲಿ ಕ್ಯಾಷಿಯರ್, ಸೂಪರ್‍ವೈಸರ್ಸ್, ವಾಚ್‍ಮೆನ್, ಸಪ್ಲೈಯರ್ ಮತ್ತು ಕ್ಲೀನರ್ ಸೇರಿದಂತೆ 7 ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ.
  • ಒಂದು ಕ್ಯಾಂಟೀನ್‍ನಲ್ಲಿ ದಿನವೊಂದಕ್ಕೆ ಸುಮಾರು 500ಕ್ಕೂ ಹೆಚ್ಚು ಜನರಿಗೆ ಊಟ ಮತ್ತು ಉಪಹಾರ ಪೂರೈಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ಕ್ಯಾಂಟೀನ್ ಮಾಹಿತಿಗೆ ಆ್ಯಪ್[ಬದಲಾಯಿಸಿ]

ಕ್ಯಾಂಟೀನ್‍ನ ಆಹಾರದ ಗುಣಮಟ್ಟ ಹಾಗೂ ಶುಚಿತ್ವಕ್ಕೆ ಹೆಚ್ಚು ಒತ್ತು ನೀಡಲು ಮತ್ತು ಕ್ಯಾಂಟೀನ್‍ಗಳ ಮಾಹಿತಿಗೆ ಹೊಸ ಆ್ಯಪ್ ಸಿದ್ಧಪಡಿಸಿದೆ ಮತ್ತು ಶೀಘ್ರದಲ್ಲೇ ಅನಾವರಣ ಮಾಡಲಿದೆ. ಆ್ಯಪ್‍ನಲ್ಲಿ ಕ್ಯಾಂಟೀನ್ ಮಾಹಿತಿ ಮತ್ತು ಆಯಾ ದಿನಗಳ ಮೆನು ಕೂಡ ಇರಲಿದ್ದು. ಕ್ಯಾಂಟೀನ್ ಕುರಿತಂತೆ ದೂರು ದಾಖಲಿಸಲು ಆ್ಯಪ್‍ನಲ್ಲಿ ಅವಕಾಶ ಕಲ್ಪಿಸಿದೆ.[೪]

ಕ್ಯಾಂಟೀನ್ ವೇಳಾಪಟ್ಟಿ[ಬದಲಾಯಿಸಿ]

  • ಬೆಳಗ್ಗೆ 7.30 ರಿಂದ 10.30 ವರೆಗೆ ತಿಂಡಿ ವಿತರಣೆ
  • ಮಧ್ಯಾಹ್ನ 12.30ರಿಂದ 2.30ರವರೆಗೆ ಮಧ್ಯಾಹ್ನದ ಊಟ
  • ರಾತ್ರಿ 7.30 ರಿಂದ 8.30ರವರೆಗೆ ಊಟ ಲಭ್ಯ.
  • ಆಯಾ ಕ್ಯಾಂಟೀನ್‍ಗಳಲ್ಲಿ ಎಷ್ಟು ಊಟ ಲಭ್ಯವಿದೆ ಎನ್ನುವ ಮಾಹಿತಿ ಡಿಸ್‍ಪ್ಲೇ ಬೋರ್ಡ್‍ನಲ್ಲಿ ಪ್ರಕಟಿಸಲಾಗುವುದು.
  • ಪ್ರತಿ ಕ್ಯಾಂಟೀನ್‍ನಲ್ಲೂ ಆಹಾರದ ಸುರಕ್ಷತೆಗಾಗಿ ಆರೋಗ್ಯಾಧಿಕಾರಿಗಳನ್ನು ನೇಮಿಸುವುದರ ಜೊತೆಗೆ ಕ್ಯಾಂಟೀನ್‍ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗುವುದು ಎಂದು ಹೇಳಿದೆ.[೫]

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]