ವಿಷಯಕ್ಕೆ ಹೋಗು

ಇಂಗ್ಲೆಂಡಿನ ಸಂಗೀತ ಪದ್ಧತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇಂಥ ಒಂದು ಪ್ರಕಾರದ ಸ್ಪಷ್ಟ ಸುಳಿಯನ್ನು 15ನೆಯ ಶತಮಾನದಿಂದೀಚೆಗೆ ಗುರುತಿಸಬಹುದು. ಜಾನ್ ಡನ್‍ಸ್ಟೇ ಬಲ್ (1370-1453) ಮೊದಲಬಾರಿಗೆ ಷಾನ್‍ಸನ್ ಎಂಬ ಪ್ರಬಂಧಪ್ರಕಾರದಲ್ಲಿ ಲೌಕಿಕ ಗಾನದಲ್ಲೂ ಬೈಬಲಿನ ಮಾತುಗಳನ್ನು ಹಾಡುವ ಮೋಟೆಟ್ ಎಂಬ ಧಾರ್ಮಿಕ ಸಂಗೀತದಲ್ಲೂ ಏಕಕಾಲಿಕವಾದ ಧಾತುವೈವಿಧ್ಯವನ್ನು ಬಳಸಿದ. ಇವನೂ ಇದೇ ಶತಮಾನದಲ್ಲಿ ನೆದರ್‍ಲೆಂಡಿನ ಗಿಲ್ಲೆಡಿ ಬನ್‍ಷ್ವಾ, ಫ್ರಾನ್ಸಿನ ಗ್ವಿಲೋಮೆ ಡ್ಯೂಫೆûಯೂ ಇಂಗ್ಲೆಂಡಿನ ಲಯೊನೆಲ್ ಪವರ್‍ಗಳೂ ಇಡೀ ಯೂರೋಪಿನಲ್ಲೆಲ್ಲ ಖ್ಯಾತಿಗಳಿಸಿದ್ದರು. ಇಂಗ್ಲೆಂಡಿನಲ್ಲಿ ಪ್ರಾಚೀನಕಾಲದಿಂದಲೂ ಚರ್ಚಿನಲ್ಲಿ ಹಾಡುವ ಗೋಷ್ಠಿಗಾನ (ಕಾಯ್ರ್) ಪ್ರಮುಖವಾಗಿತ್ತು; ಚರ್ಚ್‍ಸಂಗೀತವಾದರೂ ಮುಖ್ಯವಾಗಿ ರೋಮನ್ ಸಂಗೀತದಿಂದ ಪ್ರಭಾವಿತವಾಗಿತ್ತು. ಆದರೆ ಈ ಯುಗದಲ್ಲಿ ಶಬ್ದೋಚ್ಛಾರಣೆಯನ್ನು ಸ್ಫುಟಗೊಳಿಸಿ, ಪ್ರಾಟೆಸ್ಟಂಟರ ಗೀತೆಗಳಿಗೂ ಏಕಕಾಲಿಕ ಧಾತುವೈವಿಧ್ಯವನ್ನು ಅನ್ವಯಿಸಲಾಯಿತು.

ಆಧುನಿಕತೆಯ ಆದಿ

[ಬದಲಾಯಿಸಿ]

ಮುಂದಿನ ಶತಮಾನಗಳಲ್ಲಿ ಥಾಮಸ್ ಟ್ಯಾಲಿ (1520-1585), ಅವನ ಶಿಷ್ಯನಾದ ವಿಲಿಯಂ ಬರ್ಡ್ (1542-1623), ಸಂಗೀತದಲ್ಲಿ ಡಾಕ್ಟರೇಟ್ ಪಡೆದು ಗ್ರೆಷಾಮ್ ಕಾಲೇಜಿನಲ್ಲಿ ಸಂಗೀತ ಪ್ರಾಧ್ಯಾಪಕನಾಗಿದ್ದ ಜಾನ್‍ಬುಲ್ (1563-1628) ಜಾನ್ ಷಫರ್ಡ್ (1520-1563) ರಾಬರ್ಟ್ ವೈಟ್ (?-1574). ಮುಂತಾದವರು ಆಧುನಿಕ ಇಂಗ್ಲಿಷ್ ಸಂಗೀತಕ್ಕೆ ಬುನಾದಿಯನ್ನು ಕಟ್ಟಿದ ಊಧ್ರ್ವಸ್ವರಶ್ರೇಣಿಪದ್ಧತಿಯನ್ನೂ (ಕಾರ್ಡ್) ಪ್ರಬಂಧರೀತಿಗಳನ್ನೂ ಬಳಸಿ ಯಶಸ್ವಿಯಾದರೂ ಇದೇ ಕಾಲದಲ್ಲಿ ಬ್ರೌನ್, ಫೇರ್‍ಫಾಕ್ಸ್, ಕಾರ್ನಿಷ್ ಈ ಮೂವರು ಸೇರಿ ರಚಿಸಿದ ವಿಪುಲವಾದ ಚರ್ಚ್‍ಸಂಗೀತ ಇಂದು ಪ್ರಸಿದ್ಧವಾದ ಈಟನ್ ಕಾಯ್ರ್‍ಬುಕ್ ಎಂಬ ಸಂಗ್ರಹದಲ್ಲಿ ಉಳಿದುಬಂದಿದೆ; ಇವರೂ ಏಕಕಾಲಿಕ ಧಾತುವೈವಿಧ್ಯವನ್ನು ಬಳಸಿದರು; ಹೀಗೆ ಈ ಯುಗದ ಸಂಗೀತ ಏಕಕಾಲಿಕ ಊಧ್ರ್ವಸ್ವರಶ್ರೇಣಿ (ಹಾರ್ಮೋನಿ) ಮತ್ತು ಏಕಕಾಲಿಕ ಧಾತುವೈವಿಧ್ಯ (ಕೌಂಟರ್‍ಪಾಯಿಂಟ್, ಪಾಲಿಫೊನಿ) ಎರಡರಿಂದಲೂ ಮುಂದಿನ ಸಂಗೀತಕ್ಕೆ ಇಂಗ್ಲೆಂಡಿನಲ್ಲಿ ದಿಗ್ದರ್ಶನ ಮಾಡಿಸಿತು. ಇಟಲಿಯಿಂದ ಪ್ರಸಿದ್ಧವಾಗಿದ್ದ ಮ್ಯಾಡ್ರಿಗಲ್ ಎಂಬ ಸುಗಮ ಲಘುಗೀತೆ ಆಂಗ್ಲರನ್ನು ಬಹುವಾಗಿ ಆಕರ್ಷಿಸಿತು. ಆರ್ಲೆಂಡೋ ಗಿಬ್ಬನ್ಸ್ (1583-1625) ಥಾಮಸ್ ಮಾರ್ಲೆಗಳು (1557-1603) ಬಹುಸಂಖ್ಯೆಯಲ್ಲಿ ಉತ್ತಮವಾದ ಮ್ಯಾಡ್ರಿಗಲ್‍ಗಳನ್ನು ರಚಿಸಿದ್ದಾರೆ. ಮಾರ್ಲೆ ಅನೇಕ ಬ್ಯಾಲೆಗಳನ್ನೂ ಸಮಕಾಲೀನನಾದ ಷೇಕ್ಸ್‍ಪಿಯರ್‍ನ ನಾಟಕಗಳ ಹಾಡುಗಳಿಗೆ ಸಂಗೀತವನ್ನೂ ಕ್ಯಾನ್‍ಜೊóನೆಟ್ಟುಗಳನ್ನೂ ಅಂಥಂಗಳನ್ನೂ ಮೋಟೆಟ್‍ಗಳನ್ನೂ ರಚಿಸಿದ್ದಾನೆ. ಬರ್ಡನ ಶಿಷ್ಯನಾದ ಈತ ವೀಣಾತಂತ್ರವನ್ನು ಕುರಿತ ಪುಸ್ತಕವನ್ನೂ ಇಂಗ್ಲಿಷನ ಪ್ರಥಮ ಸಂಗೀತಶಾಸ್ತ್ರ ಗ್ರಂಥವನ್ನೂ ಬರೆದಿದ್ದಾನೆ. ಜಾನ್ ಬೆನೆಟ್ಟನ ಮ್ಯಾಡ್ರಿಗಲ್ಸ್ ಟು ಫೋರ್ ವಾಯ್ಸಸ್ ಅನ್ನು ಸಂಪಾದಿಸಿ ಪ್ರಕಟಿಸಿದ್ದಾನೆ. ಆರ್ಗನ್ ವಾದ್ಯಕೋವಿದರುಗಳಾದ ಜಾನ್ ಟ್ಯಾವರ್ನರ್ (ಸು. 1530) ಮತ್ತು ಕ್ರಿಸ್ಟೋಫರ್ ಟೈ (ಸು. 1572) ಅವರು ವಾದ್ಯ ಸಂಗೀತದ ರೂಪನಿಷ್ಪತ್ತಿಯನ್ನು ನಿರ್ಣಯಿಸಲು ಸಹಾಯಕರಾಗಿ ಭೂತಭವಿಷ್ಯಗಳ ಸಂಗೀತಪ್ರಬಂಧಗಳಲ್ಲಿ ಸೇತುವೆ ಕಟ್ಟಿದರು. ಅಲ್ಲಿಯವರೆಗೆ ಗಾಯಕರನ್ನು ನೆರಳಿನಂತೆ ಅನುಸರಿಸುತ್ತಿದ್ದ ಪಕ್ಕವಾದ್ಯಗಳು ಸ್ವತಂತ್ರವಾದ್ಯಗಳ ಸ್ಥಾನಮಾನಗಳನ್ನು; ಈ ಯುಗದಲ್ಲಿ ಗಳಿಸಿದ್ದಲ್ಲದೆ ಮನೆಗಳು ನಿಶ್ಚಿತವಾದ ಕೀಬೋರ್ಡ್ ವಾದ್ಯಗಳು ಲಕ್ಷ್ಯಲಕ್ಷಣಗಳಲ್ಲಿ ಸುಭದ್ರ ನೆಲೆಯನ್ನು ಪಡೆದುವು. ಈ ಕಾಲದಲ್ಲಿಯೇ ವೀಣೆಯ ತೆರದ ಲೂಟ್, ವಯೊಲ್ ಮುಂತಾದ ವಾದ್ಯಗಳಿಗೆಂದೇ ಬರೆದ ಫ್ಯಾಂಟಸಿ ಎಂಬ ಆಕರ್ಷಕ ಹಾಡಿನ ರೀತಿ ಪ್ರಸಿದ್ಧವಾಯಿತು; ಇಂಗ್ಲೆಂಡ್ ಜಗತ್ತಿಗೆ ಕೊಟ್ಟ ಹಾಡುಗಳಲ್ಲಿ ಮುಖ್ಯವಾದುದು ಇಂಗ್ಲಿಷ್ ಮ್ಯಾಡ್ರಿಗಲ್ ಮತ್ತು ಫ್ಯಾಂಟಸಿ; ಇನ್ ನಾಮಿನಿ ಎಂದು ಪ್ರಸಿದ್ಧವಾದ ಫ್ಯಾಂಟಸಿ ಇಂದಿಗೂ ಉಳಿದು ಬಂದಿದೆ. 16ನೆಯ ಶತಮಾನದ ಜಾನೆ ಡೊಲ್ಯಾಂಡ್ ಮತ್ತು ಹದಿನೇಳನೆಯ ಶತಮಾನದ ಥಾಮಸ್ ಕ್ಯಾಂಪಿಯನ್ನರೂ ಉತ್ತಮ ವಾಗ್ಗೇಯಕಾರರಾಗಿದ್ದರು. ಬುಲ್ ಮತ್ತು ಪೀಟರ್ ಫಿಲಿಪ್ಸರು ನೆದರ್‍ಲೆಂಡಿನಲ್ಲಿ ನೆಲೆಸಿ ಆಂಗ್ಲ ಸಂಗೀತ ಸೌರಭವನ್ನು ಹರಡಿದರು.

ಪರ್ಸೆಲ್ ಯುಗ

[ಬದಲಾಯಿಸಿ]

ಮಧ್ಯಕಾಲೀನ ಆಂಗ್ಲಸಂಗೀತ ಹೆನ್ರಿ ಪರ್ಸೆಲ್‍ನಿಂದ (1658-1695) ತನ್ನ ಅತ್ಯುನ್ನತಿಯನ್ನು ತಲುಪಿತು. ಟ್ಯಾಲಿಸ್ ಮತ್ತು ಬರ್ಡರಿಂದ ಆಂಗ್ಲ ಏಕಕಾಲಿಕ ಧಾತು ವೈವಿಧ್ಯವನ್ನೂ ಫ್ರಾನ್ಸಿನ ಪೆಲ್ಹ್ಯಾಂ ಹಂಫ್ರಿಸ್‍ನಿಂದ ಫ್ರೆಂಚ್ ಸಂಗೀತದ ಸಾರವನ್ನೂ ಕೊರೆಲ್ಲಿಯಿಂದ ಇಟಾಲಿಯನ್ ಸಂಗೀತದ ಸಾರವನ್ನೂ ಗ್ರಹಿಸಿ ಆತ ಹೃದ್ಯವಾದ, ಶಾಶ್ವತಸ್ಥಾನಗಳಿಸುವ ಸಂಗೀತವನ್ನು ರಚಿಸಿದ್ದಾನೆ. ಕಣ್ಣಿಗೆ ಕಟ್ಟುವಂಥ ಚಿತ್ರಣ, ಉತ್ತಮ ನಾಟಕೀಯತೆ, ಆಳವಾದ ರಸಾನುಭೂತಿ, ನವನವೋನ್ಮೇಷತೆ-ಇವು ಪರ್ಸೆಲ್ಲನ ಸಂಗೀತದ ವೈಶಿಷ್ಟ್ಯಗಳು. ಇಂಗ್ಲೆಂಡಿನಲ್ಲಿ ಬಂದುನೆಲೆಸಿದ ಹ್ಯಾಂಡೆಲ್ ಇವನಿಂದ ಬಹು ಪ್ರಭಾವಿತನಾಗಿ ಇವರ ಸಂಗೀತವನ್ನು ಆಧಾರವಾಗಿಟ್ಟು ಹಲವು ಹಾಡುಗಳನ್ನು ರಚಿಸಿದ್ದಾನೆ. ಅನಂತರದ ಆಂಗ್ಲ ವಾಗ್ಗೇಯಕಾರರು ಮೂಲ ಆಕರವಾದ ಪರ್ಸೆಲ್‍ನನ್ನು ಬಿಟ್ಟು ಹ್ಯಾಂಡೆಲ್‍ನನ್ನು ಅನುಕರಿಸುವ ತಪ್ಪು ಮಾಡಿದುದೇ 17ನೆಯ ಶತಮಾನದ ಅನಂತರದ ಇಂಗ್ಲೆಂಡ್ ಸಂಗೀತ ಅವನತಿಮುಖಿಯಾಗಲು ಕಾರಣವಾಯಿತು. ಎಲಿಜಬೆತ್ ಯುಗದಲ್ಲಿ ಪ್ರಚಲಿತವಾಗಿದ್ದು ಚಿತ್ರವಿಚಿತ್ರ ದೃಶ್ಯಪ್ರಧಾನವಾಗಿಯೂ ಸಂಗೀತರೂಪಕವಾಗಿಯೂ ಇದ್ದ ಮಾಸ್ಕ್ ಎಂಬ ಪ್ರಬಂಧ ವಿಶೇಷದಿಂದ ಪರ್ಸೆಲ್ ಪ್ರಭಾವಿತನಾಗಿ ಬ್ಯಾಲೆ, ಆಪೆರ, ಮ್ಯಾಡ್ರಿಗಲ್ ನಾಟಕದ ಮುಟ್ಟುಗಳು, ಆಂಥಂ, ಚರ್ಚಿನಲ್ಲಿ ದೀಕ್ಷಾ ವಿಧಿಯ ಪ್ರಾರ್ಥನೆ, ಮತೀಯ ಸಂಪ್ರದಾಯ ಮೊದಲಾದುವಕ್ಕೆ ಸಂಬಂಧಿಸಿದ ಹಾಡುಗಳು, ಓಡ್ ಎಂಬ ವಿಧದ ಪ್ರೇಮಗೀತೆಗಳು, ಕ್ಯಾಂಟಾಟ ಎಂಬ ಶ್ರವ್ಯ ನಾಟಕಗಳು, ಆರ್ಗನ್ ಸಂಗೀತ-ಇತ್ಯಾದಿಗಳನ್ನು ಬಹುವಾಗಿ ಬರೆದಿದ್ದಾನೆ. ಡ್ರೈಡನ್ ಕವಿ ಹೆಚ್ಚು ಕಡಿಮೆ ತನ್ನ ಸಮಕಾಲೀನನಾದ ಭಾರತೀಯ ಮೊಗಲ್ ಚಕ್ರವರ್ತಿ ಔರಂಗಜೇಬನನ್ನು ಕುರಿತು ಬರೆದ ದುರಂತ ಗೇಯನಾಟಕಕ್ಕೆ ಸಮಕಾಲೀನನಾದ ಪರ್ಸೆಲ್ ಸಂಗೀತವನ್ನು; ರಚಿಸಿರುವುದನ್ನಿಲ್ಲಿ ಉಲ್ಲೇಖಿಸಬಹುದು.

ಕ್ಷೀಣಯುಗ

[ಬದಲಾಯಿಸಿ]

17ನೆಯ ಶತಮಾನದ ಮೊದಲಲ್ಲಿ ಹೆನ್ರಿ ಲಾಸ್ ಇಂಗ್ಲಿಷ್ ಪದಗಳ ಸಹಜ ಉಚ್ಛಾರಣೆಗಾಗಿ ಸಂಗೀತದಲ್ಲಿ ಶ್ರಮಿಸಿದ : ಮ್ಯಥ್ಯೂ ಲಾಕ್ ಆಪೆರದ ಪೂರ್ಣಸ್ವರೂಪವನ್ನು ಇಂಗ್ಲೆಂಡಿನಲ್ಲಿ ಸಾಕ್ಷಾತ್ಕರಿಸಲು ಶ್ರಮಿಸಿದ; ಹೆನ್ರಿ ಆಲ್ಡ್ರಿಚ್ ಖ್ಯಾತಿವೆತ್ತ ಸಂಗೀತಗಾರನೂ ಶಿಲ್ಪಿಯೂ ಆಗಿದ್ದ. ಜಾನ್ ಬ್ಲೋ ಬಹುವಾಗಿ ಚರ್ಚ್ ಮತ್ತು ನಾಟಕ ಸಂಗೀತವನ್ನು ನಿರ್ಮಿಸಿ, ಪರ್ಸೆಲ್ಲಿಗಿಂತ ಮುಂಚೆಯೂ ಮತಾಚರಣೆಯ ಓಡ್‍ಗಳನ್ನು ರಚಿಸಿದ್ದ.ಆದರೆ ಪರ್ಸೆಲ್ಲನ ಅನಂತರ ಸುಮಾರು ನೂರೈವತ್ತು ವರ್ಷಗಳವರೆಗೆ ಇಂಗ್ಲೆಂಡಿನ ಸ್ವದೇಶೀ ಸಂಗೀತ ಹೀನಸ್ಥಿತಿಗೆ ಬಂತು. 18ನೆಯ ಶತಮಾನದಲ್ಲಿ ವಿದೇಶೀ ವಾಗ್ಗೇಯಕಾರರ ಪ್ರಭಾವವೇ ಇಂಗ್ಲೆಂಡಿನಲ್ಲಿ ಪ್ರಮುಖವಾಯಿತು. ಈ ಕಾಲದಲ್ಲಿಯೇ ಹೇಡ್ನ್, ಹ್ಯಾಂಡೆಲ್, ಮೆಂಡೆಲ್ ಸ್ಹಾನ್‍ರಂಥ ಮಹಾ ಪ್ರತಿಭಾವಂತರು ಆಂಗ್ಲರನ್ನೇ ಏಕೆ, ಇಡೀ ಯೂರೋಪನ್ನು ತಮ್ಮ ಸಂಗೀತದಿಂದ ಸೆರೆಹಿಡಿದಿಟ್ಟಿದ್ದರು. ಈ ವಾಗ್ಗೇಯಕಾರಸೂರ್ಯರ ಪ್ರಕಾಶದಲ್ಲಿ ಸ್ವದೇಶೀ ವಿದ್ವಾಂಸರ ಪ್ರತಿಭೆ, ಬೆಳದಿಂಗಳಿನಂತೆ ಮಂಕಾಗಿ ಕೊರಗಿತು. ದಕ್ಷಿಣ ಭಾರತದಲ್ಲೂ ಇದೇ ಕಾಲದಲ್ಲಿ ಸಂಗೀತ ತ್ರಿಮೂರ್ತಿಗಳಾದ ತ್ಯಾಗರಾಜ, ಮುತ್ತುಸ್ವಾಮಿ ದೀಕ್ಷಿತ ಮತ್ತು ಶ್ಯಾಮಶಾಸ್ತ್ರಿಗಳ ಪ್ರತಿಭೆ, ಪ್ರಭಾವಗಳ ಕಣ್ಣುಕೋರೈಸುವ ನಾದಜ್ಯೋತಿಯಲ್ಲಿ ಕರ್ನಾಟಕ, ಆಂಧ್ರಗಳಲ್ಲಿನ ಸಹಜಪ್ರತಿಭೆ, ಸೃಷ್ಟಿಶಕ್ತಿಗಳು ಮಂಕುಕವಿದುಹೋಗಿ ಅe್ಞÁತವಾಸವನ್ನು ಸುಮಾರು ನೂರು ವರ್ಷಗಳಿಗೂ ಮೀರಿ ಅನುಭವಿಸಿದುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. 18ನೆಯ ಶತಮಾನದಲ್ಲಿ ಇಂಗ್ಲೆಂಡಿನಲ್ಲಿ ದಕ್ಷರಾದ ಸಂಗೀತಕಾರರೂ ವಾಗ್ಗೇಯಕಾರರೂ ಇರಲಿಲ್ಲವೆಂದಲ್ಲ. ಆಗಸ್ಟೀನ್ ಅರ್ನ್ (1710-1778) ಆಪೆರ, ಮಾಸ್ಕ್, ಗೇಯಪ್ರಹಸನ, ಆರ್ಕೆಸ್ಟ್ರಾದ ಪೀಠಿಕಾ ಸಂಗೀತ (ಓವರ್ಚರ್), ಕ್ಯಾನನ್, ಸೊನ್ಯಾಟಾ, ಆರಟೋರಿಯೋಗಳನ್ನೂ ಪಿಟಿಲು, ಆರ್ಗನ್, ಹಾಪ್ರ್ಸಿಕಾರ್ಡ್‍ಗಳಿಗೆ ಸಂಗೀತವನ್ನು ರಚಿಸಿ ಆರಟೋರಿಯೋ ಗೋಷ್ಠಿಗಾನದಲ್ಲಿ ಪ್ರಪ್ರಥಮವಾಗಿ ಸ್ತ್ರೀಗಾನವನ್ನು ಏರ್ಪಡಿಸಿದ. ಈತ ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಸಂಗೀತ ಡಾಕ್ಟರೇಟ್ ಪ್ರಶಸ್ತಿಯನ್ನು ಗಳಿಸಿದ (1759), ವಿಲಿಯಂ ಬಾಯ್ಸ್ ಪ್ರಸಿದ್ಧ ಆರ್ಗನ್ ವಾದಕನೂ ಉತ್ತಮ ವಾಗ್ಗೇಯಕಾರನೂ ಆಗಿದ್ದ (1710-1779). ಚಾರಲ್ಸ್ ಡಿಬ್ಬಿನ (1745-1814) ಗಾಯಕ, ನಟ, ವ್ಯವಸ್ಥಾಪಕ, ವಾಗ್ಗೇಯಕಾರ, ಪಕ್ಕವಾದ್ಯಗಾರ, ಲೇಖಕ - ಹೀಗೆ ಬಹುಮುಖಪ್ರತಿಭೆಯನ್ನು ಪಡೆದಿದ್ದ. ಜೇಮ್ಸ್ ಹುಕ್ (1746-1827) ಆರ್ಗನ್ ವಾದಕನೂ ವಾಗ್ಗೇಯಕಾರನೂ ಆಗಿದ್ದ ಥಾಮಸ್ ಲಿನ್ಲಿ (1732-1795) ಗೋಷ್ಠಿಗಾಯಕನಾಗಿಯೂ ಗೇಯನಾಟಕಗಳ ರಚನಕಾರನಾಗಿಯೂ ಇದ್ದವ. ವಿಲಿಯಂ ಫೀಲ್ಡ್ (1748-1820) ಪಿಟೀಲುಗಾರ, ಲೇಖಕ ಮತ್ತು ಕೃತಿರಚನಕಾರ, ಸ್ಟೀಫನ್ ಸ್ಟೋರೇಸ್ (1763-1786) ಹದಿನೆಂಟು ನಾಟಕಸಂಬಂಧಿ ರಚನೆಗಳನ್ನು ಮಾಡಿದ್ದಾನೆ.

ಇತಿಹಾಸ

[ಬದಲಾಯಿಸಿ]

ಗ್ಲೀ ಎಂಬ ತನ್ನದೇ ಆದ, ಸರಳ ಏಕಕಾಲಿಕ ಧಾತುಬಾಹುಳ್ಯವುಳ್ಳ ವಾದನವಿಲ್ಲದ, ಮೂರು ನಾಲ್ಕು ಶಾರೀರಗಳನ್ನುಳ್ಳ ಹಾಡಿನ ರೀತಿಯನ್ನು ಈ ಶತಮಾನದಲ್ಲಿ ಇಂಗ್ಲೆಂಡ್ ವಿಶ್ವಸಂಗೀತಕ್ಕೆ ನೀಡಿತು. ಆಲ್ಫ್ರೆಡ್ ಕ್ಯಾಲ್ಡಿಕಾಟ್ ವಿಲಿಯಂ ಕ್ರಾಚ್ ಮತ್ತು ಸ್ಯಾಮುಯಲ್ ವೆಬ್ ಇದನ್ನು ಪ್ರವರ್ತಿಸಿ ಪಸರಿಸಿದರು.18ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ಯಾಲಡ್ ಆಪೆರ ಇಂಗ್ಲೆಂಡಿನಲ್ಲಿ ಅತ್ಯಧಿಕವಾಗಿ ಬೆಳೆಯಿತು; ಇದರಿಂದ ಆಂಗ್ಲಸಂಗೀತದ ಸಮತೂಕ ತಪ್ಪಿ ಅದರ ಸರ್ವಾಂಗೀಣ ಪ್ರಗತಿಗೆ ಅಡ್ಡಿಯಾಯಿತೆಂದು ಭಾವಿಸುವವರೂ ಇದ್ದಾರೆ. ಇದು ಹೇಗೇ ಇರಲಿ, ಇದೂ ಗ್ಲೀ ಪ್ರಬಂಧವೂ ಈ ಶತಮಾನದ ಅತ್ಯುತ್ತಮ ಸಾಧನೆಗಳೆಂದು ಭಾವಿಸಿದರೆ ತಪ್ಪಾಗುವುದಿಲ್ಲ.18ನೆಯ ಶತಮಾನದ ಉತ್ತರಾರ್ಧದಲ್ಲಿ ವಾಗ್ಗೇಯಕಾರರ ಮಹಾಪೂರವೇ ಇಂಗ್ಲೆಂಡಿನಲ್ಲಿ ಹರಿಯಿತು. ಸ್ಫೂರ್ತಿಹರಿತವಾಗಿ ಪ್ರಾರಂಭವಾದ ಈ ಶತಮಾನ ತನ್ನ ಅಂತ್ಯದಲ್ಲಿ ಮಹತ್ತನ್ನೇ ಕೊಟ್ಟಿತು. ಈ ಶತಮಾನದ ಎಲ್ಲ ಪ್ರಮುಖರನ್ನೂ ಹೆಸರಿಸಲು ಇಲ್ಲಿ ಸಾಧ್ಯವಿಲ್ಲ. ವಿಶೇಷ ಸೇವೆ ಸಲ್ಲಿಸಿದವರು ಈ ಕೆಲವರು: ಜಾನ್ ಫೀಲ್ಡ್ಸ್ (1782-1837) ಡಬ್ಲಿನ್ನಿನಲ್ಲಿ ಹುಟ್ಟಿ ಮಾಸ್ಕೋದಲ್ಲಿ ನಿಧನವಾದರೂ ಗ್ರೇಟ್ ಬ್ರಿಟನ್ನಿನಲ್ಲಿ ಅದರಲ್ಲೂ ಇಂಗ್ಲೆಂಡಿನಲ್ಲಿ ಪ್ರಭಾವಶಾಲಿಯಾಗಿದ್ದು ಷೋಪೆನ್ ಮೊದಲಾದ ವಿಭೂತಿ ಪುರುಷರಿಗಿಂತ ಮುಂಚೆಯೇ ನಾಕ್‍ಟೂರ್ನ್ ಎಂಬ ಪ್ರಬಂಧ ಪ್ರಕಾರವನ್ನು ಉದ್ಘಾಟಿಸಿದ; ಪಿಯಾನೋ ವಾದ್ಯದ ಉತ್ಕರ್ಷಕ್ಕಾಗಿ ಶ್ರಮಿಸಿದ. ಸರ್ ವಿಲಿಯಂ ಸ್ಟರ್ನ್‍ಡೇಲ್ (1816-1875) ಕೇಂಬ್ರಿಜ್ ವಿಶ್ವವಿದ್ಯಾನಿಲಯದಿಂದ ಸಂಗೀತದಲ್ಲಿ ಡಾಕ್ಟರೇಟ್ ಪ್ರಶಸ್ತಿ (1856) ಪಡೆದು ಅಲ್ಲಿನ ಸಂಗೀತ ಕಾಲೇಜಿಗೆ ಮುಖ್ಯಾಧಿಕಾರಿಯಾಗಿದ್ದು 1871ರಲ್ಲಿ ಸರ್ ಬಿರುದನ್ನು ಪಡೆದ. ಇವನೂ ಸರ್ ಆರ್ಥರ್ ಸಲಿವನ್ (1842-1900) ಎಂಬುವನೂ ಲೀಪ್ಜಿಗ್ ಕನ್ಸರ್ವೇಟಿರಿಯಲ್ಲಿ ಕಲಿತ ಧೀಮಂತರು; ಸಲಿವನ್ ಆಪೆರೆಟ್ಟ, ಕಾಮಿಕ್ ಆಪೆರ, ಆರಟೋರಿಯೋ, ಸಿಂಫೊನಿ ಮುಂತಾದ ರಚನೆಗಳಿಂದ ಪ್ರಸಿದ್ಧನಾಗಿದ್ದಾನೆ. ಗೋರಿಕ್ ಥಾಮಸ್ (1850-1892) ಅನೇಕ ಆಪೆರಗಳನ್ನು ರಚಿಸಿದ್ದಾನೆ. ಇವನು ಸಲಿವನ್ನನ ಬಳಿಯೂ ಕೆಲಕಾಲ ಕಲಿತಿದ್ದ. ಸರ್ ಚಾರಲ್ಸ್ ಸ್ಟ್ಯಾನ್ ಫರ್ಡ್ (1852-1924) ಪ್ರಸಿದ್ಧನಾದ ಬಹುಮುಖ ಪ್ರತಿಭೆಯ ವಾಗ್ಗೇಯಕಾರ. ಸರ್ ಚಾರಲ್ಸ್ ಹ್ಯೂಬರ್ಟ್ ಪ್ಯಾರಿ (1848-1918) ಅಷ್ಟೇ ಪ್ರತಿಭಾ ಸಂಪನ್ನ, ವಾಗ್ಗೇಯಕಾರರ ಜೀವನಚರಿತ್ರೆಯಲ್ಲೂ ಶಾಸ್ತ್ರದ ಬಹು ವಿವಿಧ ವಿಪುಲ ರಚನೆಯಲ್ಲೂ ಈತ ಶ್ರಮಿಸಿದ್ದಾನೆ. ಇವರಿಬ್ಬರಿಂದಲೇ ಈ ಶತಮಾನ ಸುವರ್ಣಯುಗದ ಪ್ರಾರಂಭವೆನ್ನಬಹುದು. ಆದರೆ ಸರ್ ಎಡ್ವರ್ಡ್ ಎಲ್ಗರ್ (1857-1934) ಈ ಯುಗದ ತುತ್ತ ತುದಿ ಎನ್ನುವುದು ನಿಸ್ಸಂದೇಹವಾದದ್ದು; ಆರ್ಗನ್ ಮತ್ತು ಪಿಟೀಲು ವಾದ್ಯಗಳಲ್ಲಿಯೂ ನಿಪುಣನಾದ ಈತ ಗೋಷ್ಠಿನಾಯಕನಾಗಿಯೂ ಸಂಗೀತಕಾರನಾಗಿಯೂ ಇದ್ದು ಹಲಕೆಲವು ವಾದ್ಯಗಳಿಗಾಗಿ ರಚಿಸಿ, ವಿದೇಶ ಪರ್ಯಟನೆ ಮಾಡಿ, ಬಹುಸಂಖ್ಯಾತ ರಚನೆಗಳಿಂದ ಸೇವೆ ಸಲ್ಲಿಸಿದ್ದಾನೆ. ಇದೇ ಕಾಲದಲ್ಲಿ ಆಂಗ್ಲ ಸಂಗೀತದ ಉತ್ಕರ್ಷಗಳನ್ನು ಇತರ ಕೆಲವರೂ ಸಾಧಿಸಿದರು. ಸರ್ ಜಾನ್ ಬ್ರಿಡ್ಜ್‍ನ ಭಾವಪೂರ್ಣವಾದ ಸಂಗೀತ, ಸರ್ ಗ್ರಾನ್‍ವಿಲ್ ಬ್ಯಾನ್‍ಟಕ್‍ನ ಆರ್ಗನ್ ಸಂಗೀತ ಹಾಗೂ ಸ್ಪಷ್ಟಚಿತ್ರಣ, ಗುಸ್ತಾವ್ ಹೋಲ್‍ಸ್ಟನ್‍ನ ಪ್ರಾಯೋಗಿಕ ಮತಿ, ಸರ್ ಫ್ರಾಂಕ್‍ಬಿಡ್ಜ್‍ನ ಚೇಂಬರ್ ಸಂಗೀತ, ಸರ್ ಜಾನ್ ಬ್ಲ್ಯಾಕ್‍ವುಡ್ ಮ್ಯಕ್ ಈವನ್ನನ ಚತುಸ್ತಂತ್ರೀ ರಚನೆಗಳು, ಜೋಸೆಫ್ ಹಾಲ್‍ಬ್ರೂಕನ ವೈವಿಧ್ಯ ಪೂರ್ಣರಚನಾಸಾಧನ, ರಟ್ಲ್ಯಾಂಡ್ ಬೌಟನ್ನನ ಹೊಸ ಬಗೆಯ ಅಪೆರ ರಚನೆ - ಇವುಗಳನ್ನು ಮಾತ್ರ ಇಲ್ಲಿ ಸಂಕ್ಷೇಪವಾಗಿ ಸೂಚಿಸಬಹುದು.

ರಾಲ್ಫ್‍ವಾನ್ ವಿಲಿಯಂಸ

[ಬದಲಾಯಿಸಿ]

ರಾಲ್ಫ್‍ವಾನ್ ವಿಲಿಯಂಸನ ಹೆಸರನ್ನು ಇಲ್ಲಿ ವಿಶೇಷವಾಗಿ ಉಲ್ಲೇಖಿಸಬೇಕು. ಪಾಶ್ಚಾತ್ಯ ಸಂಗೀತದಲ್ಲಿ ಶಾಶ್ವತವಾಗಿ ನಿಲ್ಲುವ ಹೆಸರು ಈ ಆಧುನಿಕ ವಾಗ್ಗೇಯಕಾರರ ಸಂಗೀತಕಾರನದು. ಶಾಸ್ತ್ರಜ್ಞನೂ ವಾದನಪಟುವೂ ಆದ ಈತ ರಷ್ಯದ ಜನಪದ ಸಂಗೀತದಿಂದ ರಾಷ್ಟ್ರೀಯ ಪ್ರಜ್ಞೆಯನ್ನು ಪಡೆದು ಆಧುನಿಕ ರಷ್ಯನ್ ಸಂಗೀತವನ್ನು ವಿಶ್ವಸಂಗೀತ ಶ್ರೇಣಿಯಲ್ಲಿ ಎತ್ತಿ ನಿಲ್ಲಿಸಿದ ಮೌಸ್ಸೋರ್‍ಗ್ಸ್ಕಿ, ಬಲಕಿರಫ್ ಬೊರೊಡಿನ್ ಕ್ವಿ, ರಮ್ಸಿಕೊರ್ಸಕಾಫ್ - ಈ ವಾಗ್ಗೇಯಕಾರ ಪಂಚಕದಂತೆ ಇಂಗ್ಲೆಂಡ್ ಸಂಗೀತಕ್ಕೆ ವಿಶ್ವಮಾನ್ಯತೆಯನ್ನು ದೊರಕಿಸಿಕೊಟ್ಟ, ಜನಪದ ಸಂಗೀತವನ್ನೂ ರಾಷ್ಟ್ರೀಯ ಪ್ರಜ್ಞೆಯನ್ನು ಸಂಕಲಿಸಿದುದರಿಂದ, ಸದ್ರುಂಚಿ, ಸಂಯಮ, ಮನಮೋಹಕತೆ, ಶ್ರದ್ಧೆ, ಆಳವಾದ ರಸಾನುಭೂತಿ ಇವುಗಳು ಇವನ ಸಂಗೀತದ ವೈಶಿಷ್ಟ್ಯ. ಆಂಗ್ಲ ಸಂಸ್ಕøತಿಯ ಪ್ರತೀಕವೇ ಇವನ ಸಂಗೀತವೆನ್ನಬಹುದು.[]

20ನೆಯ ಶತಮಾನ

[ಬದಲಾಯಿಸಿ]

ಈ ಶತಮಾನ ಆರ್ಥರ್ ಬ್ಲಿಸ್, ಆರ್ಥರ್ ಬೆಂಜûಮಿನ್, ಅರ್ನೆಸ್ಟ್ ಜಾನ್ ಮೊಎರನ್, ಹರ್ಬರ್ಟ್ ಹೊವೆಲ್ಸ್, ಪೀಟರ್, ವಾರ್ಲ್‍ಕ್ ಮೊದಲಾದ ಸ್ಫೂರ್ತಿ ಪಡೆದ ವಾಗ್ಗೇಯಕಾರರ ಶುಭೋದಯದಿಂದ, ನವಚೇತನದಿಂದ ಪ್ರಾರಂಭವಾಗುತ್ತದೆ. ಇವರ ಮತ್ತು ಈ ಯುಗದ ಸಾಧನೆಗಳನ್ನು ಅಳೆಯಲು ಕಾಲದ ದೂರ ಅವಶ್ಯಕವಾದ್ದರಿಂದ ಈ ಶತಮಾನ ಮೌಲ್ಯಮಾಪನವನ್ನಿಲ್ಲಿ ಯತ್ನಿಸಿರುವುದಿಲ್ಲ.ಇಂಗ್ಲೆಂಡಿನ ವಾಗ್ಗೇಯಕಾರರು ಹೆಚ್ಚು ಕಡಿಮೆ ಎಲ್ಲ ಮುಖ್ಯ ಪ್ರಬಂಧರೀತಿಗಳನ್ನೂ ಬಳಸಿ ರಚನೆ ಮಾಡುತ್ತಾರೆ. ಆದರೆ ಚಾರಿತ್ರಿಕ ಕಾರಣಗಳಿಂದಾಗಿ ಕೋರಲ್ ಸಂಗೀತವೇ (ಗೋಷ್ಠಿಗಾಯನ) ಅತ್ಯಂತ ಜನಪ್ರಿಯವಾಗಿ ಉಳಿದಿದೆ. ಇದನ್ನು ಬಿಟ್ಟರೆ ಆಪೆರವೇ ಅತ್ಯಂತ ಜನಾನುರಾಗವನ್ನು ಗಳಿಸಿದೆ. ಇದು ಆಂಗ್ಲರಲ್ಲಿ ಪ್ರಿಯವಾಗಲು ಸರ್ ಚಾರಲ್ಸ್ ಸ್ಟ್ಯಾನ್‍ಫರ್ಡನೂ ವಾನ್ ವಿಲಿಯಂಸನೂ ಲಂಡನ್ನಿನ ಸ್ಯಾಡ್ಲರ್ಸ್‍ವೆಲ್ಸ್ ಥಿಯೇಟರ್ ಎಂಬ ಪ್ರಸಿದ್ಧ ಪುರಾತನ ರಂಗಮಂದಿರವೂ ಮುಖ್ಯ ಕಾರಣ. ಈಚೆಗೆ ಬೆಂಜಮಿನ್ ಬ್ರಿಟನ್ ಮತ್ತು ಪೀಟರ್ ಗ್ರಿಮ್ಸ್‍ರ ಆಪೆರಗಳು ಹೆಚ್ಚು ಪ್ರಚಾರದಲ್ಲಿವೆ. ಇಂಗ್ಲೆಂಡಿನಲ್ಲಿ ಸಂಗೀತಕ್ಕೆ ಪ್ರಭುತ್ವದಿಂದ ವಿಶೇಷ ಸಹಾಯ, ಉತ್ತೇಜನಗಳು ದೊರೆಯುತ್ತವೆ. ಸರ್ಕಾರ ಲಲಿತಕಲೆಗಳ ಪ್ರೋತ್ಸಾಹಕ್ಕಾಗಿ ಬ್ರಿಟಿಷ್ ಕೌನ್ಸಿಲ್ ಎಂಬ ಸಂಸ್ಥೆಯನ್ನು ಸ್ಥಾಪಿಸಿತು (1934). ಅಂತೆಯೇ 1940ರಲ್ಲಿ ಸ್ಥಾಪಿತವಾದ ಕೌನ್ಸಿಲ್ ಫಾರ್ ದಿ ಎನ್‍ಕರೇಜ್‍ಮೆಂಟ್ ಆಫ್ ಮ್ಯೂಸಿಕ್ ಅಂಡ್ ದಿ ಆಟ್ರ್ಸ್ ಎಂಬುದು 1946ರಲ್ಲಿ ಶಾಸನದ ಮಂಜೂರಾತಿಯನ್ನು ಪಡೆದು ಆಟ್ರ್ಸ್ ಕೌನ್ಸಿಲ್ ಆಫ್ ಗ್ರೇಟ್ ಬ್ರಿಟನ್ ಎಂಬ ಹೆಸರಿನಲ್ಲಿ ಕೆಲಸ ಮಾಡುತ್ತಿದೆ. ಈ ಸಂಸ್ಥೆಗಳೂ ಯೆಹೂದಿ ಮೆನುಹಿನ್ ಅಧ್ಯಕ್ಷನಾಗಿರುವ ಏಷ್ಯನ್ ಮ್ಯೂಸಿಕ್ ಸರ್ಕಲ್ ಎಂಬ ಸಾರ್ವಜನಿಕ ಸಂಸ್ಥೆಯೂ ಹೊರದೇಶಗಳಿಂದ ಸಂಗೀತ ವಿದ್ವಾಂಸರನ್ನು ಆಹ್ವಾನಿಸಿ ಕಚೇರಿಗಳನ್ನು ಏರ್ಪಡಿಸುವುದು, ಆಂಗ್ಲ ಸಂಗೀತಕಾರರನ್ನೂ, ಸಂಗೀತದ ಆರ್ಕೆಸ್ಟ್ರಾಗಳನ್ನೂ, ಹೊರದೇಶಗಳಿಗೆ ಕಳುಹಿಸಿ ಅವರ ಸಂಗೀತ ಕಚೇರಿಗಳನ್ನು ಏರ್ಪಡಿಸುವುದು. ಆಂಗ್ಲ ಸಂಗೀತದ ಗ್ರಾಮೊಫೋನ್ ರೆಕಾರ್ಡ್‍ಗಳನ್ನು ತಯಾರಿಸಿ ಹಂಚುವುದು, ಸಂಗೀತೋತ್ಸವಗಳನ್ನು ನಡೆಸುವುದು-ಮುಂತಾದ ಕಾರ್ಯಕ್ರಮಗಳನ್ನು ಇಟ್ಟುಕೊಂಡಿವೆ. ಸರ್ಕಾರವೇ ಈ ಕೌನ್ಸಿಲುಗಳ ಮುಖಾಂತರವಾಗಿ ದುಬಾರಿಯಾದ ಆಪೆರಗಳನ್ನು ನಡೆಸಲು ಧನಸಹಾಯ ಮಾಡುವುದೂ ಉಂಟು. ಸರ್ಕಾರ ಅಭಿರುಚಿಯ, ಸಂಪ್ರದಾಯದ ವಿಷಯಗಳಲ್ಲಿ ತಲೆಹಾಕದೆ ಸಹಾಯ ಮಾತ್ರ ನೀಡುತ್ತದೆಂಬುದು ಶ್ಲಾಘ್ಯವಾದ ವಿಷಯ. ಇಂಗ್ಲೆಂಡಿನ ಬ್ರಿಟಿಷ್ ಬ್ರಾಡ್‍ಕ್ಯಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ) ಸಂಸ್ಥೆಯೂ ಇಂಥ ಒಂದು ಅಂಗವನ್ನು ನಡೆಸುತ್ತಿದೆ. ಈ ಎಲ್ಲ ಸಂಸ್ಥೆಗಳಲ್ಲೂ ಆಯಾ ಕ್ಷೇತ್ರದಲ್ಲಿ ದಕ್ಷರಾದ ತಜ್ಞರುಗಳನ್ನೊಳಗೊಂಡ ಸಮಿತಿಗಳಿವೆ.

ಇಂಗ್ಲೆಂಡಿನಲ್ಲಿ ನಡೆಯುವ ಪ್ರಸಿದ್ಧ ಸಂಗೀತೋತ್ಸವ

[ಬದಲಾಯಿಸಿ]

ಇಂಗ್ಲೆಂಡಿನಲ್ಲಿ ನಡೆಯುವ ಪ್ರಸಿದ್ಧ ಸಂಗೀತೋತ್ಸವಗಳನ್ನು ಇಲ್ಲಿ ಹೆಸರಿಸಬಹುದು. ದಿ ತ್ರೀ ಕಾಯ್ರ್ ಫೆಸ್ಟಿವಲ್ 1724 ರಿಂದ ಹೆರ್ಫರ್ಡ್, ಗ್ಲೌಸ್ಟರ್, ಮತ್ತು ವೋರ್ಸೆಸ್ಟರ್ ನಗರದ ತನ್ನ ಶಾಖೆಗಳಲ್ಲಿ ವಾರ್ಷಿಕ ಸಂಗೀತೋತ್ಸವಗಳನ್ನು ನಡೆಸುತ್ತಿರುವ ಪ್ರಾಚೀನತಮ ಸಂಸ್ಥೆ; 1945ರಿಂದೀಚೆಗೆ ಚೆಲ್ಟೆನ್ ಹ್ಯಾಂ ಫೆಸ್ಟಿವಲ್ ಆಫ್ ಕಾಂಟೆಂಪೊರರಿ ಮ್ಯೂಸಿಕ್, ಎಡಿನಬರೋದ ಇಂಟರ್ ನ್ಯಾಷನಲ್ ಫೆಸ್ಟಿವಲ್ ಆಫ್ ಮ್ಯೂಸಿಕ್ ಅಂಡ್ ಡ್ರಾಮಾಗಳು ಜಗತ್ತಿನಲ್ಲಿಯೇ ಅತ್ಯಂತ ಪ್ರಸಿದ್ಧ ಸುವ್ಯವಸ್ಥಿತ ಸಂಗೀತೋತ್ಸವಗಳು. 1948ರಲ್ಲಿ ಸಫೋಕ್‍ನಲ್ಲಿ ಪ್ರಾರಂಭವಾದ ಇಂಗ್ಲಿಷ್ ಆಪೆರ ಗ್ರೂಪ್ ಮತ್ತು ಸಂಗೀತಾಭಿವೃದ್ಧಿಗಾಗಿ ಗ್ಲಿನ್‍ಡೆನ್‍ಬರ್ನ್‍ನಲ್ಲಿ 1934ರಲ್ಲಿ ಜಾನ್ ಕ್ರಿಸ್ಟಿ ಪ್ರಾರಂಭಿಸಿದ ಮೊಜಾóಟ್ರ್ಸ್ ಗ್ಲಿನ್‍ಡೆನ್‍ಬರ್ನ್‍ನಲ್ಲಿ ಫೆಸ್ಟಿವಲ್ ಜಗತ್ತಿನಲ್ಲಿ ಮಾನ್ಯತೆ ಪಡೆದಿದೆ. ಮುಖ್ಯವಾದ ಆರ್ಕೆಸ್ಟ್ರಾಗಳೆಲ್ಲವೂ ಲಂಡನ್ನಿನಲ್ಲಿಯೇ ಇವೆ; ಲಂಡನ್ ಸಿಂಪೋನಿ ಆರ್ಕೆಸ್ಟ್ರಾ, ಬಿ.ಬಿ.ಸಿ. ಸಿಂಪೋನಿ ಆರ್ಕೆಸ್ಟ್ರಾ, ಲಂಡನ್, ಫಿಲ್ ಹಾರ್ಮೋನಿಕ್ ಆರ್ಕೆಸ್ಟ್ರ, ಫಿಲ್ ಹಾರ್ಮೋನಿಯ ಮುಂತಾದುವು ಮುಖ್ಯವಾದುವು. ವಿದ್ವಾಂಸರು ಧನಾಪೇಕ್ಷೆಯಿಲ್ಲದೆ ಸ್ವಯಂ ಪ್ರೇರಣೆಯಿಂದ ಭಾಗವಹಿಸುವ ರಾಯಲ್ ಕಾರಲ್ ಸೊಸೈಟಿ, ದಿ ಬಾಖ್ ಕಾಯ್ರ್, ಹಡರ್ಸ್‍ಫೀಲ್ಡ್ ಕಾಯ್ರ್ ಮತ್ತು ಷೆಪೀಲ್ಡ್ ಕಾಯ್ರ್‍ಗಳಲ್ಲಿ ಉಲ್ಲೇಖಿಸಬಹುದು. ಬ್ಯಾಂಕು, ಶಾಲೆ, ವ್ಯಾಪಾರೀಸಂಸ್ಥೆಗಳು ಮೊದಲಾದುವುಗಳಲ್ಲಿರುವ ಬಡವರಿಗೆ ಅಥವಾ ಮಧ್ಯಮ ವರ್ಗದವರಿಗೆ ಸುಲಭ ದರಗಳಲ್ಲಿ ಪ್ರಸಿದ್ಧವೂ ಉತ್ಕøಷ್ಟವೂ ಆದ ಸಂಗೀತಕ್ಕೆ ಟಿಕೆಟ್ಟುಗಳನ್ನು ಒದಗಿಸುವ ಹಲವು ಸಂಸ್ಥೆಗಳಿವೆ. ಮಕ್ಕಳಿಗಾಗಿ ನಡೆಸುವ, ಮಕ್ಕಳೇ ನಡೆಸುವ, ಸಂಗೀತ ಕಚೇರಿಗಳನ್ನು ಅರ್ನೆಸ್ಟ್ ರೀಡ್ ಮತ್ತು ಸರ್ ರಾಬರ್ಟ್ ಮೇಯರ್ ಪ್ರಾರಂಭಿಸಿದರು. ಇವು ಇಂದು ಪಾಶ್ಚಾತ್ಯ ಪ್ರಪಂಚದಲ್ಲೆಲ್ಲ ಅತ್ಯಂತ ಜನಪ್ರಿಯವಾಗಿವೆ.[]

ಇಂಗ್ಲೆಂಡಿನಲ್ಲಿ ನಡೆಯುವ ಸಂಗೀತ ಸಂಶೋಧನೆ

[ಬದಲಾಯಿಸಿ]

ಇಂಗ್ಲೆಂಡಿನಲ್ಲಿ ನಡೆಯುವ ಸಂಗೀತ ಸಂಶೋಧನೆ, ಕಚೇರಿಗಳ ವರ್ತಮಾನ, ಕಲಾವಿದರ ಪರಿಚಯ, ಗ್ರಂಥವಿಮರ್ಶೆ ಮುಂತಾದ ವಿಷಯಗಳನ್ನು ಮ್ಯೂಸಿಕ್ ಅಂಡ್ ಲೆಟರ್ಸ್ ಮ್ಯೂಸಿಕ್ ರೆವ್ಯೂ ಮ್ಯೂಸಿಕ್ ಟೈಮ್ಸ್, ಟೆಂಪೋ, ಮಂತ್ಲಿ ಮ್ಯೂಸಿಕಲ್ ರಿಕಾರ್ಡ್ ಮೊದಲಾದ ನಿಯತಕಾಲಿಕ ಪತ್ರಿಕೆಗಳು ಪ್ರಕಟಿಸುತ್ತವೆ. ಬ್ರಿಟಿಷ್ ಮ್ಯೂಸಿಯಮ್ಮಿನ ಸಂಗೀತ ವಿಭಾಗ, ಕೇಂಬ್ರಿಜ್, ಆಕ್ಸ್‍ಫರ್ಡ್ ಮುಂತಾದ ಕೇಂದ್ರಗಳಲ್ಲೂ ಲಂಡನ್ ಸ್ಕೂಲ್ ಆಫ್ ಓರಿಯಂಟಲ್ ಸ್ಟಡೀಸ್ ಸಂಸ್ಥೆಯಲ್ಲೂ ರಾಯಲ್ ಸೊಸೈಟಿ ಆಫ್ ಮ್ಯೂಸಿಕ್ ಸಂಸ್ಥೆಯಲ್ಲೂ ಸಂಶೋಧನೆ, ಶಾಸ್ತ್ರ ಜಿe್ಞÁಸೆಗಳು ನಡೆಯುತ್ತವೆ. ಬಾರ್‍ಕ್ಲೇ ಸ್ಕ್ವೈರ್, ಎಡ್ವರ್ಡ್, ಡೆಂಟ್, ಜೆರಾಲ್ಡ್, ಏಬ್ರಾಹಾಂ, ಜೆ.ಎ. ವೆಸ್ಟ್ರಪ್, ಬೊಸಾಂಕೆ, ಎಚ್. ಜಿ. ಫಾರ್ಮರ್, ಆರ್ನಲ್ಡ್ ಬಾಕೆ, ರಿಚರ್ಡ್ ಮಾರಿಸ್ ಮೊದಲಾದ ಪ್ರಸಿದ್ಧಸಂಗೀತ ಶಾಸ್ತ್ರಜ್ಞರನ್ನು ಇಲ್ಲಿ ಹೆಸರಿಸಬಹುದು.[]ಪಾಶ್ಚಾತ್ಯ ಪ್ರಪಂಚದಲ್ಲೆಲ್ಲ ಹರಡಿರುವಂತೆ ಬೀಟ್ಲ್, ಹಿಪ್ಪಿ, ಪಾಪ್ ಮುಂತಾದ ಅರಾಜಕ, ಸ್ವೇಚ್ಛಾಚಾರದ ಸಂಗೀತ ಆಂಗ್ಲ ತರುಣ ವರ್ಗವನ್ನು ಬಹುವಾಗಿ ಕಳೆದ ದಶಕದಿಂದಲೂ ಪ್ರಭಾವಿತಗೊಳಿಸಿವೆ

ಉಲ್ಲೇಖಗಳು

[ಬದಲಾಯಿಸಿ]