ಆಸ್ತಿಕ ಸಮಾಜ, ಮಾಟುಂಗ, ಮುಂಬಯಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:P2290003.JPG
'ಮುಂಬಯಿನ ಬೈನ ಮಾಟುಂಗದಲ್ಲಿರುವ ಆಸ್ತಿಕ ಸಮಾಜದ,ಶ್ರೀ ರಾಮ ಮಂದಿರ, ಕೊಚ್ಚು ಗುರುವಾಯೂರ್, ರಾಜಗೊಪುರಮ್'

ಮುಂಬಯಿ ಮಹಾನಗರದ ಮಾಟುಂಗದಲ್ಲಿ ೧೯೨೩ ರಿಂದಲೂ 'ಶ್ರೀ ರಾಮಚಂದ್ರನ ಫೋಟೊ' ಇಟ್ಟುಕೊಂಡು, ಒಂದು ಒಳ್ಳೆಯ ಸಭಾಗೃಹದಲ್ಲಿ ಅರ್ಚನೆ ಮುಂತಾದವುಗಳನ್ನು ನಡೆಸಲಾಗುತ್ತಿತ್ತು. ಸನ್, ೧೯೫೩ ರಲ್ಲಿ ಕಂಚಿ ಕಾಮಕೋಟಿ ಮಠದ ಮಹಾಸ್ವಾಮಿಗಳ ಕೃಪೆಯಿಂದ ಶ್ರೀ ರಾಮಚಂದ್ರ, ಸೀತಾದೇವಿ, ಲಕ್ಷ್ಮಣನ್, ಹನುಮಾನ್ ಭಗವಾನ್ ರ, ಗರ್ಭಗುಡಿಗಳನ್ನು ಸ್ಥಾಪಿಸಲಾಯಿತು. ಮಾತಂಗ ಋಷಿ 'ಪಂಪಾ ನದಿಯ ದಡ'ದಮೇಲೆ, ಮಹಾಯಜ್ಞಗಳನ್ನು ನೆರವೇರಿಸಿದ ಯತಿವರ್ಯರಿಗೆ ಮಹರ್ಷಿಯೆಂಬ ಹೆಸರು ಬಂತು. ಅವರು ಬಂದು ತಪಸ್ಸುಮಾಡಿದ ಸ್ಥಳದಲ್ಲಿ ಒಂದು ಆಲದಮರವಿತ್ತು. ಅದು ಇಂದಿಗೂ ಸಾಕ್ಷಿಯಾಗಿ ನಿಂತಿದೆ ; ಕಾಲಾಂತರದಲ್ಲಿ,ಭಕ್ತಾದಿಗಳ ಇಷ್ಠಾರ್ಥಗಳನ್ನು ಈಡೇರಿಸುತ್ತಿದ್ದ ಭಗವಂತನ ಸನ್ನಿಧಾನದಲ್ಲಿ ಅವರ ಅಪೇಕ್ಷೆಯಂತೆ, ಹಲವಾರು ದೇವರ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡಲಾಯಿತು. ಉದಾಹರಣೆಗೆ :

  • ಕಾರ್ತಿಕೇಯಸ್ವಾಮಿ, ೧೯೬೫,
  • ನವಗ್ರಹಗಳು, ೧೯೬೭,
  • ಕೊಚ್ಚು ಗುರುವಾಯೂರಪ್ಪನ್, ೧೯೭೪,
  • ಸ್ವಾಮಿ ಅಯ್ಯಪ್ಪನ್, ೧೯೮ಲ೮.

ಅನೇಕ ಧಾರ್ಮಿಕ ಹಬ್ಬ-ಹರಿದಿನಗಳ ಅಚರಣೆಗಳನ್ನು ವರ್ಷಪೂರ್ತಿ ನಡೆಸಲಾಗುತ್ತಿದೆ. ಅವುಗಳಲ್ಲಿ ಪ್ರಮುಖವಾದದ್ದು:

  • ಶ್ರೀರಾಮನವಮಿ,
  • ಶ್ರೀ ಕೃಷ್ಣ ಜಯಂತಿ,
  • ಸ್ಕಂದ ಶಷ್ಠಿ,
  • ಥೈಪೂಸಂ,
  • ಶ್ರೀ ಭಾಗವತ ಸಪ್ತಾಹ,
  • ಮಹಾಯಜ್ಞಮ್ ಮಂಡಲಪೂಜ,
  • ಕೊಚ್ಚು ಗುರುವಾಯೂರಪ್ಪನ್ ಪ್ರತಿಷ್ಠಾಪನಾ ದಿನ,
  • ಕಥಾ ಶ್ರವಣ ಹಾಗೂ ಪ್ರವಚನಗಳು,

ಈ ದಿನಗಳಲ್ಲಿ ಸಂಕೀರ್ತನೆಗಳು, ಮತ್ತು ,ಹರಿಕಥ ಕಾಲಕ್ಷೇಪ, ವೇದ, ಉಪನಿಷತ್, ಪುರಾಣಗಳ ಮೇಲೆ ವಿದ್ವಾಂಸರಿಂದ ಪ್ರವಚನಗಳು. ಭಕ್ತಾದಿಗಳು ಶ್ರದ್ಧೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ, ಪೂಜೆಗಳಲ್ಲಿ, ಅಭಿಷೇಕ, ಹೋಮಗಳಲ್ಲಿ ಪಾಲುಗೊಳ್ಳುತ್ತಾರೆ. ದಿನನಿತ್ಯದ ಅರ್ಚನೆಗಳು ವೇದಸೂಕ್ತಗಳ ಉಚ್ಚಾರದೊಂದಿಗೆ ತಾಂತ್ರಿಕ ಮತ್ತು ಆಗಮ ರೀತ್ಯ ಜರುಗುತ್ತವೆ. ಸಮಾಜದ ವತಿಯಿಂದ ನಿರ್ಮಿಸಿದ ಸಾಂಸ್ಕೃತಿಕ ವೇದಿಕೆಯಲ್ಲಿ ವಿವಾಹಗಳು, ಉಪನಯನಗಳು, ಮತ್ತು ಇತರ ಸಮಾರಂಭಗಳು ಜರುಗುತ್ತವೆ. ಭಕ್ತಾದಿಗಳ ಹೆಚ್ಚಿನ ಉಪಯೋಗಕ್ಕಾಗಿ ಗಿರುವ ಕಟ್ಟಡವನ್ನು ಉತ್ತಮಗೊಳಿಸುವಲ್ಲಿ ಪ್ರಯತ್ನ ನಡೆದಿದೆ. 'ಆಸ್ತಿಕ ಸಮಾಜ, ಸಾರ್ವಜನಿಕರಿಗೆ, ಭಕ್ತರಿಗೆ, ಮತ್ತು ಶ್ರದ್ಧಾಳುಗಳಿಗೆ, ಮಾನ್ಯತೆ ಹೊಂದಿದ ಪವಿತ್ರ ಸ್ಥಾನವಾಗಿದೆ.

ಆಸ್ತಿಕ ಸಮಾಜವನ್ನು ತಲುಪಲು[ಬದಲಾಯಿಸಿ]

ಮಾಟುಂಗಾ (ಪೂ) ರೈಲ್ವೆ ಸ್ಟೇಷನ್ ನಿಂದ, ಲಕ್ಷ್ಮೀ ಜ್ಯೂಯರ್ಸ್, ಮಾಟುಂಗಾ ಪೋಸ್ಟ್ ಆಫೀಸ್, ಗಿರಿ ಸ್ಟೋರ್ಸ್, ಮುಖಾಂತರ, ನೇರವಾಗಿ ಮಹೇಶ್ವರಿ ಉದ್ಯಾನದ ದಾರಿಯಲ್ಲಿ, ಭಂಡಾರ್ಕರ್ ರಸ್ತೆಯಲ್ಲಿ ಸಾಗಿದರೆ, ನಾಗರಿಕ್ ಬಟ್ಟೆ ಅಂಗಡಿಯ ಎದುರಿಗೆ ಆಸ್ತಿಕ ಸಮಾಜವಿದೆ. ಬದಿಯಲ್ಲಿ ಅಂಬಾ ಭವನ ವೆಂಬ ಉಡುಪಿ ಹೋಟೆಲ್ ಇದೆ.

ಅರ್ಚನೆಮಾಡುವ ವೇಳಾಪಟ್ಟಿ[ಬದಲಾಯಿಸಿ]

ರವಿವಾರ : ೫.೦೦ - ೧೨.೦೦ ೪.೨೫ - ೯.೦೦ ಸೋಮವಾರ : ೫.೦೦ - ೧೧.೦೦ ೪.೩೦ - ೯.೦೦ ಮಂಗಳವಾರ : ೫.೦೦ - ೧೧.೦೦ ೪.೩೦ - ೯.೦೦ ಬುಧವಾರ : ೫.೦೦ - ೧೧.೦೦ ೪.೩೦ - ೯.೦೦ ಗುರುವಾರ : ೫.೦೦ - ೧೧.೩೦ ೪.೩೦ - ೯.೦೦ ಶುಕ್ರವಾರ : ೫.೦೦ - ೧೧.೦೦ ೪.೩೦ - ೯.೦೦ ಶನಿವಾರ ೫.೦೦ - ೧೧.೩೦ ೪.೩೦ - ೯.೦೦

ಬಾಹ್ಯ ಸಂಪರ್ಕ[ಬದಲಾಯಿಸಿ]