ವಿಷಯಕ್ಕೆ ಹೋಗು

ಆಸರೆಗೋಡೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿಂಭಾಗದಲ್ಲಿರುವ ಮಣ್ಣಿನ ಒತ್ತಡವನ್ನು ತಡೆಯುವ ಗೋಡೆ (ತಡೆಗೋಡೆ; ರೀಟೇನಿಂಗ್ ವಾಲ್). ಆಳವಾದ ಸರೋವರದ ನೀರಿನ ಒತ್ತಡವನ್ನು ತಡೆಯುವ ಕಲ್ಲುಗಾರೆಯ ಕಟ್ಟೆಯಲ್ಲಿ ಹೇಗೋ ಹಾಗೆ ಆಸರೆ ಗೋಡೆಯ ಓರೆ ಚಿತ್ರದಲ್ಲಿರುವಂತೆ ಅದರ ಮುಖದ ಕಡೆ ಇರುತ್ತದೆ. ಗೋಡೆಯ ಮಣ್ಣಿನ ಕಡೆಯ ಮುಖ (ಬೆನ್ನು) ಲಂಬವಾಗಿರುತ್ತದೆ. ಹೊರಗಡೆಯ ಮುಖ ಕೆಲವುವೇಳೆ ಓರೆಯಾಗಿರುವುದರ ಬದಲು ಮೆಟ್ಟಿಲು ಮೆಟ್ಟಿಲಾಗಿರುತ್ತದೆ. ಆದರೂ ನೀರಾವರಿಯ ಕೆಲಸಗಳಲ್ಲಿ ಇಂಥ ಗೋಡೆ ಕಟ್ಟುವಾಗ ಓರೆಯನ್ನೆಲ್ಲ ಬೆನ್ನಿನ ಕಡೆಗೆ ಕೊಟ್ಟು ಮುಖವನ್ನು ಲಂಬವಾಗಿಡಬೇಕಾಗಿ ಬರುತ್ತದೆ. ಗೋಡೆಗಳನ್ನು ಇಟ್ಟಿಗೆ ಗಾರೆ ಯಿಂದ ಅಥವಾ ವರಸೆಯಾದ ಕಲ್ಲುಗ ಳಿಂದ ಕಟ್ಟಿದಾಗ ಹೀಗೆ ಮಾಡುವುದು ಅನುಕೂಲ. ಆದರೆ ಗೋಡೆಯ ಮುಖದ ಕಡೆ ಮೆಟ್ಟಲುಗಳನ್ನು ಬಿಡುವುದು ಅಪೇಕ್ಷಣೀ ಯವಲ್ಲ. ಏಕೆಂದರೆ ಮೆಟ್ಟಿಲುಗಳ ಮೇಲೆ ಬೀಳುವ ಮಣ್ಣಿನಲ್ಲಿ ಬಳ್ಳಿಗಳ ಬೀಜಗಳು ಬೇರುಬಿಟ್ಟು ಕುರುಚಲು ಗಿಡಗಳು ಬೆಳೆದುಕೊಳ್ಳುತ್ತವೆ. ಆದರೆ ದಕ್ಷಿಣಭಾರತದಲ್ಲಿನ ಹಾಗೆ ತಡೆಗೋಡೆಗಳನ್ನು ಕಲ್ಲಿನಿಂದ ಅಥವಾ ಗಿಲಾವು ಮಾಡಿದ ಇಟ್ಟಿಗೆಯಿಂದ ಕಟ್ಟಿದರೆ ಈ ಆಕ್ಷೇಪಣೆಯಿರುವುದಿಲ್ಲ. ಅಂಥ ಕಡೆಗಳಲ್ಲಿ ತಡೆಗೋಡೆಗಳನ್ನು ಮುಖದ ಕಡೆ ಓರೆಯಾಗಿರುವಂತೆ ಧಾರಾಳವಾಗಿ ಕಟ್ಟಬಹುದು. ನೀರಾವರಿಯ ಕೆಲಸದಲ್ಲಿ ಮಣ್ಣಿನ ಏರಿಯ ಇಳಿಜಾರಾದ ಪಕ್ಕಗಳನ್ನು ತಡೆಯುವುದಕ್ಕಾಗಿ ತಲೆಮಟ್ಟ ಇಳಿಜಾರಾಗಿರುವ ಆಸರೆಗೋಡೆಗಳನ್ನು ಕಟ್ಟುತ್ತಾರೆ. ಆಗ ಇವುಗಳ ತಲೆಮಟ್ಟವನ್ನು ಮಣ್ಣಿನ ಏರಿಯ ಪಕ್ಕಗಳ ಇಳಿಜಾರಿಗೆ ಸಮವಾಗಿ ಇಡುತ್ತಾರೆ.