ಆಶಾಲತ

ವಿಕಿಪೀಡಿಯ ಇಂದ
Jump to navigation Jump to search

ಸಾವಿರಕ್ಕೂ ಮಿಕ್ಕಿದ ಪ್ರದರ್ಶನ ಕಂಡ 'ಸಂಸಾರದಲ್ಲಿ ಸರಿಗಮ, ಎನ್ನುವ ನಾಟಕವೂ ಸೇರಿದಂತೆ , ೨೫೦ ಕ್ಕೂ ಅಧಿಕ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ ಖ್ಯಾತಿ 'ಆಶಾಲತ'ರವರದು. ಅವರು, ಶಾಸ್ತ್ರೀಯವಾಗಿ ಸಂಗೀತ, ನೃತ್ಯ,, ಯಾವುದನ್ನೂ ಕಲಿಯದಿದ್ದರೂ ಅಭಿನಯ ರಕ್ತಗತವಾಗಿ ಬಂದಿತ್ತು. 'ಸಂಸಾರದಲ್ಲಿ ಸರಿಗಮ' ನಾಟಕದ ಮೊದಲ ೫೦೦ ಪ್ರದರ್ಶನದಲ್ಲಿ ನಾಯಕಿಯಾಗಿ ಅಭಿನಯಿಸಿದರು. ಮುಂದೆ ಅದನ್ನು ಅಭಿನೇತ್ರಿ ಉಮಾಶ್ರೀ, ಮತ್ತಿತರರು ಅದನ್ನು ಮುಂದುವರೆಸಿದರು. ಸಿನಿಮಾನಟಿಯಾದ ಬಳಿಕ ನಾಟಕದಲ್ಲಿ ಅಭಿನಯಿಸಲು ಸಂಕೋಚಪಡುತ್ತಿದ್ದರು.

ಆಶಾಲತರ ಪರಿವಾರ[ಬದಲಾಯಿಸಿ]

'ಆಶಾಲತರ ತಾಯಿ, ಬಿ. ರಾಜಮ್ಮ . ಬಿ.ಜಯಮ್ಮಮತ್ತು ಬಿ.ರಾಜಮ್ಮ ಸೋದರಿಯರು. ಇವರಿಬ್ಬರೂ ಕೆಲಕಾಲ ಗುಬ್ಬಿ ಕಂಪೆನಿಯಲ್ಲಿ ಕೆಲಸಮಾಡಿದ್ದರು. ಕಡೂರು ಶಾಸಕ ಮರುಳಪ್ಪ, ತಂದೆ. ಮಗಳು ನಟನೆಯನ್ನು ತನ್ನ ವೃತ್ತಿಯನ್ನಾಗಿ ಮಾಡುವುದು ಅವರಿಗೆ ಇಷ್ಟವಿರಲಿಲ್ಲ. ಹಾಗಾಗಿ ಮಗಳನ್ನು ಮಂಗಳೂರಿನ ಹತ್ತಿರದ ಅಳಿಕೆಯಲ್ಲಿ ಓದಲಿಕ್ಕೆ ಹಾಕಿದರು. ಕೃಷ್ಣದೇವರಾಯ ಚಿತ್ರವನ್ನು ನಿರ್ಮಿಸಿದ್ದ ಬಿ.ಆರ್. ಪಂತುಲುರವರ ಪತ್ನಿ,'ಎಂವಿ.ರಾಜಮ್ಮ'ನವರು, ರಾಜಮ್ಮನವರ ಅತಿ ಹತ್ತಿರದ ಸ್ನೇಹಿತೆ. ಎಂ.ವಿ.ರಾಜಮ್ಮ ದಂಪತಿಗಳು ಮರುಳಪ್ಪನವರ ಮನ ಒಲಿಸಿ, ಆಶಾಲತರವರನ್ನು ನಾಟಕದಲ್ಲಿ ಅಭಿನಯಿಸಲು ಒಪ್ಪಿಸಿದರು. ಹೀಗೆ ಆರಂಭವಾದ ನಟನಾ ವೃತ್ತಿಯಲ್ಲಿ ಮುಂದು ವರೆದು, 'ಒಂದು ಪ್ರೇಮದ ಕಥೆ,' ನಾಟಕದಲ್ಲಿ ಉತ್ತಮ ಅಭಿನಯದಿಂದ ಜನರ ಮನಗೆದ್ದರು. 'ನಮ್ಮಮ್ಮನ ಸೊಸೆ',ಚಿತ್ರದ ನಾಯಕಿಯ ಪಾತ್ರವೂ ಅವರಿಗೆ ಸಿಕ್ಕಿತು. 'ರೈತಜೀವಿ' ಮೊಟ್ಟಮೊದಲ ನಾಟಕ. ಅಲ್ಲಿ 'ಹಂಸಲೇಖ' ಆಶಾಲತರ ಅಭಿನಯದ ಬಗ್ಗೆ ತಮ್ಮ ಅತೃಪ್ತಿಯನ್ನು ವ್ಯಕ್ತಪಡಿಸಿದ್ದರು. ಆದರೆ,ಮುಂದೆ ಎರಡು ದಶಕಗಳ ನಂತರ, ಅದೇ ಹಂಸಲೇಖ, ಆಶಾಲತರ, ಮೊಮ್ಮೊಗ ಸಿನಿಮಾದ ಅಭಿನಯವನ್ನು ಮೆಚ್ಚಿಕೊಂಡು ಹೊಗಳಿ ಹರಸಿದರು.

'ಕೆಳದಿ ಚೆನ್ನಮ್ಮ, ಧಾರಾವಾಹಿ'ಯಲ್ಲಿ ನಟನೆ[ಬದಲಾಯಿಸಿ]

'ಜೋಕಾಲಿ ಧಾರವಾಹಿ'ಯಲ್ಲಿ ಅರ್ಚನಾ ತಾಯಿಪಾತ್ರ ಜನಪ್ರಿಯವಾಯಿತು. ಚೆನ್ನಮ್ಮ ಧಾರವಾಹಿಯ ರಾಣೀನಾಗಾಜಮ್ಮ ಜನರ ಪ್ರತಿಕ್ರಿಯೆ ಆಸಕ್ತಿದಾಯಕವಾಗಿದೆ. ಅತ್ತೆ-ಸೊಸೆ ಜಗಳ ಸರ್ವೇಸಾಮಾನ್ಯ. ಆದರೆ ಇಲ್ಲಿ ಅದು ಭಿನ್ನವಾಗಿರುವುದು ಅದರ ವಿಶೇಷತೆ. ಆಶಾಲತ, ಖಳನಾಯಕಿಯ ಪಾತ್ರದಲ್ಲಿ ಚೆನ್ನಾಗಿ ನಟಿಸುತ್ತಾರೆ. 'ಬಡ್ಡಿ ಬಂಗಾರಮ್ಮ' ತರಹದ ಪಾತ್ರ ಅವರಿಗೆ ಬಲು ಪ್ರಿಯ. ಆಶಾಲತರವರು ಅಭಿನಯಿಸಿದ 'ಕೆಳದಿ ಚೆನ್ನಮ್ಮ,' ದ 'ರಾಣಿ ನಾಗಾಜಮ್ಮ'ನ ಪಾತ್ರದಲ್ಲಿ, ಪೌರಾಣಿಕ, ಐತಿಹಾಸಿಕ ಧಾರಾವಾಹಿಗಳ ಪಾತ್ರಗಳಿಗೆ ಬೇಕಾದ ಗತ್ತು, ಮಾತಿನ ವೈಖರಿ ಮೂಡಿಬರುತ್ತದೆ.

"https://kn.wikipedia.org/w/index.php?title=ಆಶಾಲತ&oldid=715211" ಇಂದ ಪಡೆಯಲ್ಪಟ್ಟಿದೆ