ಆವೇಗ (ಭೌತಶಾಸ್ತ್ರ)

ವಿಕಿಪೀಡಿಯ ಇಂದ
Jump to navigation Jump to search
ಅಪ್ಪಳಿಸಿದ ನಂತರ ಪೂಲ್ ಆಟದ ಕ್ಯೂ ಚೆಂಡಿನ ಆವೇಗವು ರ‍್ಯಾಕ್ ಮಾಡಿದ ಚೆಂಡುಗಳಿಗೆ ವರ್ಗಾವಣೆಗೊಳ್ಳುತ್ತದೆ

ಭೌತಶಾಸ್ತ್ರದಲ್ಲಿ, ಆವೇಗ ಎಂದರೆ ಒಂದು ವಸ್ತುವಿನ ದ್ರವ್ಯರಾಶಿ ಹಾಗೂ ವೇಗದ ಗುಣಲಬ್ಧ. ಇದು ಒಂದು ಮೂರು ಆಯಾಮದ ಸದಿಶ ಪರಿಮಾಣವಾಗಿದ್ದು, ವಿಸ್ತಾರ ಮತ್ತು ದಿಕ್ಕನ್ನು ಹೊಂದಿರುತ್ತದೆ. m ವಸ್ತುವಿನ ದ್ರವ್ಯರಾಶಿಯಾಗಿದ್ದರೆ ಮತ್ತು v ವೇಗವಾಗಿದ್ದರೆ, ಆವೇಗ p

p =m.v ,

ಎಸ್‍ಐ ಏಕಮಾನದಲ್ಲಿ, ಇದನ್ನು ಸೆಕೆಂಡಿಗೆ ಕೆ.ಜಿ. ಮೀಟರ್‌ನಲ್ಲಿ ಅಳೆಯಲಾಗುತ್ತದೆ (kg⋅m/s). ಒಂದು ಕಾಯದ ಆವೇಗದ ಬದಲಾವಣೆಯ ಪ್ರಮಾಣ ಅದರ ಮೇಲೆ ವರ್ತಿಸುತ್ತಿರುವ ನಿವ್ವಳ ಬಲಕ್ಕೆ ಸಮಾನವಾಗಿರುತ್ತದೆ ಎಂದು ನ್ಯೂಟನ್‍ನ ಎರಡನೇ ಚಲನಾ ನಿಯಮ ಹೇಳುತ್ತದೆ.

ಆವೇಗವು ನಿರ್ದೇಶ ಸಂದರ್ಭದ ಮೇಲೆ ಅವಲಂಬಿಸಿರುತ್ತದೆ, ಆದರೆ ಯಾವುದೇ ಜಡ ಸಂದರ್ಭದಲ್ಲಿ ಅದು ಒಂದು ಸಂರಕ್ಷಿತ ಪರಿಮಾಣವಾಗಿದೆ, ಅಂದರೆ ಒಂದು ಮುಚ್ಚಿದ ವ್ಯವಸ್ಥೆಯು ಬಾಹ್ಯ ಬಲಗಳಿಂದ ಬಾಧಿತವಾಗದಿದ್ದರೆ, ಅದರ ಒಟ್ಟು ರೇಖೀಯ ಆವೇಗವು ಬದಲಾಗುವುದಿಲ್ಲ. ಆವೇಗವು ವಿಶೇಷ ಸಾಪೇಕ್ಷತೆಯಲ್ಲೂ ಸಂರಕ್ಷಿತವಾಗಿರುತ್ತದೆ, ಮತ್ತು ಬದಲಾದ ರೂಪದಲ್ಲಿ, ವಿದ್ಯುದ್ಬಲವಿಜ್ಞಾನ, ಕ್ವಾಂಟಮ್ ಯಂತ್ರಶಾಸ್ತ್ರ, ಕ್ವಾಂಟಮ್ ಕ್ಷೇತ್ರ ಸಿದ್ಧಾಂತ, ಮತ್ತು ಸಾಮಾನ್ಯ ಸಾಪೇಕ್ಷತೆಯಲ್ಲೂ ಸಂರಕ್ಷಿತವಾಗಿರುತ್ತದೆ. ಇದು ದೇಶ ಮತ್ತು ಕಾಲದ ಮೂಲಭೂತ ಸಮ್ಮಿತಿಗಳಲ್ಲಿ ಒಂದಾದ ರೂಪಾಂತರ ಸಮ್ಮಿತಿಯ ಅಭಿವ್ಯಕ್ತಿಯಾಗಿದೆ.