ಆಲ್ಸೇಸ್ ಲೊರೇನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೊದಲಿಗೆ ಆಲ್ಸೇಸ್ ಮತ್ತು ಲೊರೇನ್ ಪ್ರತ್ಯೇಕ ಪ್ರಾಂತ್ಯಗಳಾಗಿದ್ದು ಈಗ ಇವೆರಡೂ ಪ್ರಾಂತ್ಯಗಳು ಸೇರಿ ಆಲ್ಸೇಸ್ ಲೊರೇನ್ ಎನ್ನಿಸಿಕೊಂಡಿದೆ. ಪಶ್ಚಿಮ ಯುರೋಪಿನ ಫ್ರಾನ್ಸ್ ಮತ್ತು ಜರ್ಮನಿ ದೇಶಗಳ ಗಡಿಭಾಗಗಳಾದ ಈ ಪ್ರದೇಶಗಳು ಮೊದಲಿನಿಂದಲೂ ಫ್ರೆಂಚ್ ಮತ್ತು ಜರ್ಮನರ ಕಲಹಕ್ಕೆ ಕಾರಣವಾಗಿ ಇತಿಹಾಸದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿವೆ. ಇವುಗಳ ಸ್ವಾಮ್ಯವನ್ನು ಪಡೆಯಲು ಎರಡೂ ರಾಷ್ಟ್ರಗಳ ನಡುವೆ ಉಂಟಾದ ಯುದ್ಧ ಭಯಂಕರವೂ ದೀರ್ಘಕಾಲಿಕವೂ ಆದುದು. 1870ರಲ್ಲಿ ಜರ್ಮನರು ಈ ಪ್ರಾಂತ್ಯಗಳನ್ನು ಪಡೆದಾಗ ಆಲ್ಸೇಸ್ ಲೊರೇನ್ ಎಂದು ಕರೆದರು. ಈಗ ಈ ಪ್ರದೇಶ ಫ್ರೆಂಚರ ಅಧೀನದಲ್ಲಿದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: