ಆಲ್ಬಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
View of Palais de la Berbie
St-Madeleine Church, Albi
Collégiale Saint-Salvi, the oldest church in Albi, dedicated to Saint Salvius

ಫ್ರಾನ್ಸಿನ ಟೂಲೋಜ್ ನಗರದಿಂದ 68 ಕಿ.ಮೀ. ದೂರದಲ್ಲಿ ಟಾರ್ನಾ ನದಿ ತಟದಲ್ಲಿದೆ. ಟಾರ್ನಾ ವಿಭಾಗದ ರಾಜಧಾನಿ. ಜನಸಂಖ್ಯೆ 41,400. ಗೋಥಿಕ್ ಮಾದರಿಯಲ್ಲಿ ನಿರ್ಮಿಸಲಾಗಿರುವ ಸಾಲವಿ, ಸೆಸಿಲಿ ಎಂಬೆರಡು ಪ್ರಾರ್ಥನಾಮಂದಿರಗಳು (ಕೆಥಡ್ರಲ್) ಇದೆ. ಇದರಲ್ಲಿ ಸೆಸಿಲಿ ಎಂಬುದು ದಕ್ಷಿಣ ಫ್ರಾನ್ಸ್ನಲ್ಲಿ ಅತ್ಯಂತ ಸುಂದರವಾದುದು. ಕೋಟೆಯಾಗೂ ಉಪಯೋಗವಾಗುತ್ತಿದ್ದುದು ಇದರ ವೈಶಿಷ್ಟ್ಯ. ಸಿಮೆಂಟು, ಗಾಜು, ಕೃತಕ ರೇಷ್ಮೆಬಟ್ಟೆ ಮತ್ತು ಕೃಷಿಯಂತ್ರಗಳನ್ನು ತಯಾರಿಸುವ ಕಾರ್ಖಾನೆಗಳಿವೆ.

"https://kn.wikipedia.org/w/index.php?title=ಆಲ್ಬಿ&oldid=1051903" ಇಂದ ಪಡೆಯಲ್ಪಟ್ಟಿದೆ