ಆಲ್ಬರ್ಟ್ ಝೆಂಟ್-ಗಿಯೋಗ್ರ್ಯಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಲ್ಬರ್ಟ್ ಝೆಂಟ್-ಗಿಯೋಗ್ರ್ಯಿ
ಆಲ್ಬರ್ಟ್ ಝೆಂಟ್-ಗಿಯೋಗ್ರ್ಯಿ
ಜನನ
ಆಲ್ಬರ್ಟ್ ಝೆಂಟ್-ಗಿಯೋಗ್ರ್ಯಿ

1893 ಸೆಪ್ಟೆಂಬರ್ 16
ಅಮೇರಿಕ
ರಾಷ್ಟ್ರೀಯತೆಅಮೇರಿಕ

ಹಂಗರಿಯಲ್ಲಿ ಹುಟ್ಟಿದ ಅಮೇರಿಕದ ಜೀವರಸಾಯನವಿಜ್ಞಾನಿಯಾಗಿದ್ದ ಆಲ್ಬರ್ಟ್ ಝೆಂಟ್-ಗಿಯೋಗ್ರ್ಯಿಯವರು 1893ರ ಸೆಪ್ಟೆಂಬರ್ 16ರಂದು ಬುಡಾಪೆಸ್ಟ್ನಲ್ಲಿ ಜನಿಸಿದರು. 1928ರಲ್ಲಿ ಝೆಂಟ್-ಗಿಯೋಗ್ರ್ಯಿಯವರು ಕೇಂಬ್ರಿಜ್ನಲ್ಲಿದ್ದಾಗ ಅವರು ಇನ್ನೊಬ್ಬ ವಿಜ್ಞಾನಿ ಫ್ರೆಡರಿಕ್ ಹಾಪ್ಕಿನ್ಸ್ರವರ (1861-1947) ಕೈಕೆಳಗೆ ಕೆಲಸ ಮಾಡುತ್ತಿದ್ದರು. ಆಗ ಅವರು ಅಡ್ರೀನಲ್ ಗ್ರಂಗಳಿಂದ (ಅಂದರೆ ಹೊಟ್ಟೆಯಲ್ಲಿ ಬೆನ್ನಿಗಂಟಿರುವ ಎರಡೂ ಮೂತ್ರಪಿಂಡಗಳ ಮೇಲೆ ಕುಲಾವಿಯಂತಿರುವ ಎರಡು ಸಣ್ಣ ಗ್ರಂಗಳಿಂದ) ಒಂದು ಪದಾರ್ಥವನ್ನು ಕಂಡುಹಿಡಿದು ಅದಕ್ಕೆ ಕಹೆಕ್ಸ್ಯುರೇನಿಕ್ ಆಮ್ಲಕಿ (hexuronic acid) ಎಂಬುದಾಗಿ ನಾಮಕರಣ ಮಾಡಿದರು. ಸ್ವಾರಸ್ಯವೆಂದರೆ ಝೆಂಟ್-ಗಿಯೋಗ್ರ್ಯಿಯವರು ಸಿ-ಜೀವಸತ್ವವನ್ನು ಹೊಂದಿರುದ ಕೋಸುಗಳು ಮತ್ತು ಕಿತ್ತಲೆಹಣ್ಣುಗಳಿಂದಲೂ ಸಹ ಅದೇ ಪದಾರ್ಥವನ್ನು ಬೇರ್ಪಡಿಸಿದರು. 1930ರಲ್ಲಿ ಅವರು ಮತ್ತೆ ಹಂಗರಿಯಲ್ಲಿದ್ದಾಗ ಅಲ್ಲಿನ ಬೆಳೆಯಾದ ಮತ್ತು ಹೆಕ್ಸ್ಯುರೇನಿಕ್ ಆಮ್ಲವನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವ ಪಪ್ರಿಕಾದಿಂದ ಶುದ್ಧವಾದ ಶ್ವೇತವರ್ಣದ ಹರಳುಗಳನ್ನು ತಯಾರಿಸಿದರು. ನಂತರ ಹೆಕ್ಸ್ಯುರೇನಿಕ್ ಆಮ್ಲವನ್ನು ಕಆಂಟಿಸ್ಕೋರ್ಬ್ಯೂಟಿಕ್ ಆಮ್ಲಕಿ ಎಂಬುದಾಗಿ ಕರೆಯಲು ಅವರು ಸೂಚಿಸಿದರು. ಕೊನೆಗೆ ಆ ಆಮ್ಲಕ್ಕೆ ಕಅಸ್ಕಾರ್ಬಿಕ್ ಆಮ್ಲಕಿ (ascorbic acid) ಎಂದು ಕರೆಯಲಾಯಿತು.ಝೆಂಟ್-ಗಿಯೋಗ್ರ್ಯಿಯವರ ಈ ಸಂಶೋಧನೆ ಮುಂದೆ ಇತರ ವಿಜ್ಞಾನಿಗಳಾದ ವಾಲ್ಟರ್ ಹಾವರ್ತ್ (1883-1950) ಮತ್ತು ಪಾಲ್ ಕರೆರ್ (1889-1971) ಅವರುಗಳು ಅಸ್ಕಾರ್ಬಿಕ್ ಆಮ್ಲ ಅಥವಾ ಸಿ-ಜೀವಸತ್ವವನ್ನು (vitamin C) ಸಂಶ್ಲೇಷಿಸಲು ಸಾಧ್ಯವಾಯಿತು. ಹಾಗಾಗಿ ವಾಲ್ಟರ್ ಹಾವರ್ತ್ ಮತ್ತು ಪಾಲ್ ಕರೆರ್ರವರುಗಳಿಗೆ 1937ರ ರಸಾಯನವಿಜ್ಞಾನಕ್ಕೆ ಮೀಸಲಾದ ನೊಬೆಲ್ ಪ್ರಶಸ್ತಿಯನ್ನೂ, ಝೆಂಟ್-ಗಿಯೋಗ್ರ್ಯಿಯವರಿಗೆ ಅದೇ ವರುಷದ ಶರೀರವಿಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಮೀಸಲಾದ ನೊಬೆಲ್ ಪ್ರಶಸ್ತಿಯನ್ನೂ ನೀಡಲಾಯಿತು. 1940ರಲ್ಲಿ ಝೆಂಟ್-ಗಿಯೋಗ್ರ್ಯಿಯವರು ಮೈಯೋಸಿನ್ನಿಂದ (myosin) ಎರಡು ವಿಧದ ಸ್ನಾಯು-ಪ್ರೋಟೀನ್ಗಳನ್ನು (muscle protein) ಬೇರ್ಪಡಿಸಿದರು. ಅಲ್ಲಿಯವರೆವಿಗೂ ಆ ಪ್ರೋಟೀನ್ಗಳನ್ನು ಒಂದೇ ಟಕ ಎಂಬುದಾಗಿ ನಂಬಲಾಗಿತ್ತು. 1940ರಲ್ಲಿಯೇ ಝೆಂಟ್-ಗಿಯೋಗ್ರ್ಯಿಯವರು ಜಂಬೀರ ಫಲಗಳ (citrus fruits) ಅಧ್ಯಯನವನ್ನು ನಡೆಸಿದರು. ಆ ಅಧ್ಯಯನದಿಂದ ನಿಂಬೆಹಣ್ಣಿನ ಸಿಪ್ಪೆಯಿಂದ ಪಿ-ಜೀವಸತ್ವವನ್ನು (vitamin P) ಅವರು ತಯಾರಿಸಿದರು. ಕ್ಯಾನ್ಸರ್ ರೋಗದಿಂದ ನರಳುತ್ತಿರುವ ರೋಗಿಗಳಿಗೆ ನೀಡುವ ವಿಸ್ತಾರವಾದ ವಿಕಿರಣ ರಪಿಯಿಂದ (radiation therapy) ದೇಹದಲ್ಲಿನ ಲೋಮನಾಳಗಳು (capillaries) ತಮ್ಮ ಕೆಲಸವನ್ನು ಕುಂಠಿತಗೊಳಿಸುವ ಸಾಧ್ಯತೆ ಇರುತ್ತದೆ. ಆ ಸಮಸ್ಯೆಯ ನಿವಾರಣೆಗೆ ಪಿ-ಜೀವಸತ್ವವನ್ನು ರೋಗಿಗೆ ನೀಡಲಾಗುತ್ತದೆ.[೧] 1960ರಲ್ಲಿ ಝೆಂಟ್-ಗಿಯೋಗ್ರ್ಯಿಯವರು ನಮ್ಮ ಶರೀರದಲ್ಲಿ ರೋಗ ಸೊಂಕು ಇತ್ಯಾದಿಗಳ ವಿರುದ್ಧ ಪ್ರತಿರಕ್ಷೆ (ಶ್ವೇತರಕ್ತಕಣಗಳ) ಬೆಳವಣಿಗೆಗೆ (immunological system) ನೆರವಾಗುವ ಅತಿ ಮುಖ್ಯ ಅಂಗವಾಗಿರುವ ತೈಮಸ್ನ ಗ್ರಂಯ (Thymus gland) ಅಧ್ಯಯನ ನಡೆಸಿದರು. ಆ ಅಧ್ಯಯನದ ಪರಿಣಾಮವಾಗಿ ಅವರು ದೇಹದ ಬೆಳವಣಿಗೆಯನ್ನು ನಿಯಂತ್ರಿಸುವುವೆಂದು ಹೇಳಲಾದ ಅನೇಕ ಸಂಯುಕ್ತಗಳನ್ನು ತೈಮಸ್ನಿಂದ ಬೇರ್ಪಡಿಸಿದರು. ಝೆಂಟ್-ಗಿಯೋಗ್ರ್ಯಿಯವರು 1986ರ ಅಕ್ಟೋಬರ್ 22ರಂದು ನಿಧನರಾದರು.

ಉಲ್ಲೇಖಗಳು[ಬದಲಾಯಿಸಿ]