ವಿಷಯಕ್ಕೆ ಹೋಗು

ಆಲ್ಫ್ರೆಡ್ ಲೂಯಿಸ್ ಕ್ರೋಬರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಲ್ಫ್ರೆಡ್ ಲೂಯಿಸ್ ಕ್ರೋಬರ್

ಆಲ್ಫ್ರೆಡ್ ಲೂಯಿಸ್ ಕ್ರೋಬರ್ (೧೧ ಜೂನ್ ೧೮೭೬[೧] - ೫ ಅಕ್ಟೋಬರ್ ೧೯೬೦[೨]) ಒಬ್ಬ ಅಮೇರಿಕನ್ ಸಾಂಸ್ಕೃತಿಕ ಮಾನವಶಾಸ್ತ್ರಜ್ಞ . ಅವರು ೧೯೦೧ ರಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಫ್ರಾಂಜ್ ಬೋವಾಸ್ ಅವರ ಅಡಿಯಲ್ಲಿ ಪಿಎಚ್‌ಡಿ ಪಡೆದರು ಮತ್ತು ಕೊಲಂಬಿಯಾ ಮಾನವಶಾಸ್ತ್ರದಲ್ಲಿ ಮೊದಲನೇ ಡಾಕ್ಟರೇಟ್ ಪದವಿ ನೀಡಿದ್ದು ಇದೇ ವ್ಯಕ್ತಿಗೆ . ಇವರು ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಮಾನವಶಾಸ್ತ್ರ ವಿಭಾಗಕ್ಕೆ ನೇಮಕಗೊಂಡ ಮೊದಲ ಪ್ರಾಧ್ಯಾಪಕರೂ ಆಗಿದ್ದರು .ಇವರು ಮೆಚ್ಚುಗೆ ಪಡೆದ ಕಾದಂಬರಿಕಾರ , ಕವಿ ಮತ್ತು ಸಣ್ಣ ಕಥೆ ಉರ್ಸುಲಾ ಕೆ. ಲೆ ಗುಯಿನ್ ನ ತಂದೆ ಎಂದೂ ಹೆಸರುವಾಸಿಯಾಗಿದ್ದಾರೆ.[೩]

ಜನನ ಮತ್ತು ಜೀವನ[ಬದಲಾಯಿಸಿ]

೧೮೭೬ ರಲ್ಲಿ ನ್ಯೂ ಜರ್ಸಿಯ ಹೊಬೊಕೆನ್ ಎಂಬಲ್ಲಿ ಇವರು ಜನಿಸಿದರು .[೪] ಈತನ ತಂದೆತಾಯಿ ಜರ್ಮನ್ ಮೂಲದ ಪ್ರಾಟೆಸ್ಟಂಟರು. ಅವರು ಇಂಗ್ಲಿಷ್ ಭಾಷೆಯನ್ನು ಸಮರ್ಥವಾಗಿ ಮಾತನಾಡುತ್ತಿದ್ದರಾದರೂ ಮನೆಯ ಭಾಷೆ ಜರ್ಮನ್ ಆಗಿತ್ತು. ಕ್ರೋಬರನಿಗೆ ಬಾಲ್ಯದಲ್ಲಿಯೇ ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳ ಪರಿಚಯವಾಯಿತು. ಹುಡುಗನಾಗಿದ್ದಾಗಲೇ ಹೀಗೆ ನಾಲ್ಕು ಭಾಷೆಗಳ ಪರಿಚಯವಾದುದರಿಂದ ಭಾಷಾಶಾಸ್ತ್ರದಲ್ಲಿ ಇವನ ಆಸಕ್ತಿ ಕೆರಳಿತು. ಪ್ರಾಥಮಿಕ ವಿದ್ಯಾಭ್ಯಾಸ ಎಥಿಕಲ್ ಕಲ್ಚರ್ ಶಾಲೆಯಲ್ಲಿ ನಡೆಯಿತು. ಅಲ್ಲಿ ಪ್ರಾಚೀನ ಇತಿಹಾಸದ ಬಗ್ಗೆ ಕ್ರೋಬರನ ಆಸಕ್ತಿ ಕೆರಳಿತು. ಕೆಲ ಕಾಲದ ಅನಂತರ ಕ್ರೋಬರ್ ಮತ್ತು ಅವನ ಕೆಲವು ಮಿತ್ರರ ಗುಂಪೊಂದು ಸೈಂಟಿಫಿಕ್ ಸೊಸೈಟಿ ಎಂಬ ಸಂಘವೊಂದನ್ನು ಸ್ಥಾಪಿಸಿಕೊಂಡು ಪಳೆಯುಳಿಕೆಗಳು, ಖನಿಜಗಳು, ಮತ್ತು ಜೀವಶಾಸ್ತ್ರಕ್ಕೆ ಸಂಬಂಧಪಟ್ಟ ಮಾದರಿಗಳು-ಮುಂತಾದುವನ್ನು ಸಂಗ್ರಹಿಸಿ ಅವುಗಳ ಬಗ್ಗೆ ಪ್ರಬಂಧಗಳನ್ನು ತಯಾರಿಸಿ ಪರಸ್ಪರ ಓದಿ ಚರ್ಚಿಸುತ್ತಿದ್ದರು. ಹೀಗಾಗಿ ಕ್ರೋಬರ್ ಪ್ರಾಕೃತಿಕ ಚರಿತ್ರೆ ಮತ್ತು ಜೀವಶಾಸ್ತ್ರದ ಬಗ್ಗೆ ಹೆಚ್ಚು ಆಸಕ್ತಿಯನ್ನು ತಳೆದ.[೫]

ಶಿಕ್ಷಣ[ಬದಲಾಯಿಸಿ]

ಅನಂತರ ಕ್ರೋಬರ್ ಕೊಲಂಬಿಯ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡಿ ಎಂ.ಎ. ಡಿಗ್ರಿ ಪಡೆದು (೧೮೯೭) ಫ್ರಾನ್ಜ್ ಬೋಆಸನ ವಿದ್ಯಾರ್ಥಿಯಾಗಿ ಮಾನವಶಾಸ್ತ್ರ ಭಾಗವೊಂದರ ಅಧ್ಯಯನ ನಡೆಸಿ ಪಿಎಚ್‍ಡಿ. ಡಿಗ್ರಿಯನ್ನು ಪಡೆದರು(೧೯೦೧). ಅದೇ ವರ್ಷ ಬಕ್ರ್ಲಿಯ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದಲ್ಲಿ ಮಾನವಶಾಸ್ತ್ರ ವಿಭಾಗವೊಂದನ್ನು ತೆರೆದು ತನ್ನ ನಿವೃತ್ತಿಕಾಲದವರೆಗೂ ಅಲ್ಲಿದ್ದುಕೊಂಡು ಅದರ ಅಭಿವೃದ್ಧಿಗಾಗಿ ಕೆಲಸ ಮಾಡಿದ.[೬] ಕ್ರೋಬರ್ ಮಾನವಶಾಸ್ತ್ರವನ್ನು ತನ್ನ ಆಧ್ಯಯನ ಮಾರ್ಗವನ್ನಾಗಿ ಮಾಡಿಕೊಂಡುದಕ್ಕೆ ಮುಖ್ಯ ಕಾರಣ ಮಾನವನ ಸಂಸ್ಕೃತಿ ಮತ್ತು ಬೆಳೆವಣಿಗೆಯ ಬಗ್ಗೆ ಅವನಿಗಿದ್ದ ಅಪಾರವಾದ ಆಸಕ್ತಿ. ಇವರು ರಾಜಕೀಯ ಮತ್ತು ಸಾಮಾಜಿಕ ನೀತಿಗಳಲ್ಲಿ ಪ್ರಜಾಪ್ರಭುತ್ವವಾದಿಯಾಗಿದ್ದರು. ಜನತೆಯ ಉದ್ಧಾರದ ಬಗ್ಗೆ ಇವನಿಗೆ ಅಪಾರವಾದ ಆಸಕ್ತಿ ಇತ್ತು. ಕ್ಯಾಲಿಫೋನಿರ್ಯಯಾದ ಇಂಡಿಯನ್ನರ ಭೂ ಆಕ್ರಮಣ ಚಳವಳಿಯಲ್ಲಿ ಈತ ಸಕ್ರಿಯ ಪಾತ್ರವಹಿಸಿದ. ೧೯೩೦ ರಲ್ಲಿ ಮೊದಲಬಾರಿಗೆ ಬ್ಯೂರೋ ಆಫ್ ಇಂಡಿಯನ್ ಅಫೆರ್ಸ್ ಎಂಬ ಸಂಸ್ಥೆ ಜಾನ್ ಕಾಲಿಯರ್‍ನ ನೇತೃತ್ವದಲ್ಲಿ ಪ್ರಾರಂಭವಾದಾಗ ಅದರಲ್ಲಿ ಕ್ರೋಬರ್ ಮಾನವಶಾಸ್ತ್ರಜ್ಞನಾಗಿ ಕೆಲಸ ಮಾಡಿದನಲ್ಲದೆ ಸಂಸ್ಥೆ ಇಂಡಿಯನ್ನರ ಸಮಸ್ಯೆಗಳತ್ತ ಗಮನ ಹರಿಸಬೇಕೆಂಬ ಸೂಚಿಸಿ ಸಂಶೋಧಕರಿಗೆ ವ್ಯಾಸಂಗ ಮಾಡುವುದಕ್ಕೂ ಅದರ ಪ್ರಕಟಣೆಗೂ ಹೆಚ್ಚಿನ ಸ್ವತಂತ್ರ್ಯವಿರಬೇಕಾದ್ದು ಅಗತ್ಯವೆಂದು ತಿಳಿದು ಅದಕ್ಕಾಗಿ ಹೋರಾಡಿದರು .[೭]

ವೈಯಕ್ತಿಕ ಜೀವನ[ಬದಲಾಯಿಸಿ]

ಕ್ರೋಬರ್ ೧೯೦೬ ರಲ್ಲಿ ಹೆನ್ರಿಯೆಟಾ ರೋಥ್‌ಚೈಲ್ಡ್ ಅವರನ್ನು ವಿವಾಹವಾದರು. ಅವರು ಕ್ಷಯರೋಗ (ಟಿಬಿ) ಗೆ ತುತ್ತಾದರು ಮತ್ತು ಹಲವು ವರ್ಷಗಳ ಅನಾರೋಗ್ಯದ ನಂತರ ೧೯೧೩ ರಲ್ಲಿ ನಿಧನರಾದರು. ೧೯೨೬ ರಲ್ಲಿ ಅವರು ಥಿಯೋಡೋರಾ ಕ್ರಾಕಾವ್ ಬ್ರೌನ್ ಎಂಬವರನ್ನು ಮತ್ತೆ ವಿವಾಹವಾದರು .[೮]

ಗೌರವಗಳು ಮತ್ತು ಪ್ರಶಸ್ತಿಗಳು[ಬದಲಾಯಿಸಿ]

ಅಮೇರಿಕನ್ ಅಕಾಡೆಮಿ ಆಫ್ ಆರ್ಟ್ಸ್ ಅಂಡ್ ಸೈನ್ಸಸ್ - ೧೯೧೨
ಕ್ರೋಬರ್ ಐದು ಗೌರವ ಪದವಿಗಳನ್ನು ಪಡೆದರು (ಯೇಲ್, ಕ್ಯಾಲಿಫೋರ್ನಿಯಾ, ಹಾರ್ವರ್ಡ್, ಕೊಲಂಬಿಯಾ, ಚಿಕಾಗೊ)
ಎರಡು ಚಿನ್ನದ ಪದಕ
ಅಮೇರಿಕನ್ ಮಾನವಶಾಸ್ತ್ರೀಯ ಸಂಘದ ಅಧ್ಯಕ್ಷ ೧೯೧೭-೧೯೧೮[೯]

ನಿಧನ[ಬದಲಾಯಿಸಿ]

ಆಲ್ಫ್ರೆಡ್ ಲೂಯಿಸ್ ಕ್ರೋಬರ್ ರವರು ೫ ಅಕ್ಟೋಬರ್ ೧೯೬೦ ರಂದು ಪ್ಯಾರಿಸ್ ನಲ್ಲಿ ಮರಣ ಹೊಂದಿದರು .[೧]

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ https://www.britannica.com/biography/A-L-Kroeber
  2. https://www.ancestry.com/search/categories/34/?name=Sanylvan+C+W+Bdo
  3. https://web.archive.org/web/20141009153302/http://anthropology.berkeley.edu/content/history
  4. https://www.nytimes.com/1960/10/06/archives/drkroeberdies-anthropologist-authority-on-indians-taught-at.html
  5. https://www.encyclopedia.com/people/social-sciences-and-law/anthropology-biographies/franz-boas
  6. Castelnovo, Walter; Ferrari, Elena (13 June 2013). "ECEG2013- 13th European Conference on eGovernment: ECEG 2013" (in ಇಂಗ್ಲಿಷ್). Academic Conferences Limited. Retrieved 11 January 2020.
  7. https://www.ncbi.nlm.nih.gov/pmc/articles/PMC6075721/
  8. https://www.encyclopedia.com/people/social-sciences-and-law/anthropology-biographies/alfred-louis-kroeber
  9. https://publishing.cdlib.org/ucpressebooks/view?docId=ft1p300479;chunk.id=0;doc.view=print