ಆಲ್ಫೊನ್ಸೋ ಮಾವಿನ ಹಣ್ಣು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಆಲ್ಫೊನ್ಸೋ ಮಾವಿನ ಹಣ್ಣು

ಆಲ್ಫೊನ್ಸೋ ಮಾವಿನ ಹಣ್ಣು ವಿಶ್ವದಲ್ಲೇ ಹೆಸರು ಮಾಡಿರುವ ಭಾರತೀಯ ಮಾವಿನ ಹಣ್ಣಿನ ತಳಿಯಲ್ಲೊಂದು. ಇದು ಸ್ವಲ್ಪವೂ ನಾರಿರದ, ಬಹಳ ಸವಿಯಾದ ಕಾರಣ ಇದನ್ನು ಮಾವಿನ ಹಣ್ಣಿನ ತಳಿಗಳಲ್ಲಿ ಅತಿ ಶ್ರೇಷ್ಟ ಎಂದು ಕರೆಯಲಾಗುತ್ತದೆ. ಮಹಾರಾಷ್ಟ್ರದ ರತ್ನಾಗಿರಿ ಮತ್ತು ಗುಜರಾತಿನ ದಕ್ಷಿಣ ಜಿಲ್ಲೆಗಳಾದ ವಲ್ಸಾಡ್ ಮತ್ತು ನವಸಾರಿ ಪ್ರದೇಶಗಳಲ್ಲಿ ಇದರ ಉತ್ಪಾದನೆಯನ್ನು ಹೆಚ್ಚಾಗಿ ಕಾಣಬಹುದು. ಮರಾಠಿಯಲ್ಲಿ 'ಹಾಪೂಸ್' ಎಂದು ಕರೆಯಲ್ಪಡುವ ಈ ಹಣ್ಣು ಭಾರತದ ಅತ್ಯಂತ ದುಬಾರಿ ಮಾವಿನ ಹಣ್ಣು ಎಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಈ ತಳಿಯ ಉತ್ತಮ ದರ್ಜೆಯ ಹಣ್ಣುಗಳು ವಿದೇಶಗಳಿಗೆ ರಫ್ತಾಗುವುದು. ಕನ್ನಡದಲ್ಲಿ (ಉತ್ತರ ಕರ್ನಾಟಕದಲ್ಲಿ) 'ಆಪೂಸ್ ' ಏನ್ನುತ್ತಾರೆ. ಕರ್ನಾಟಕದ ಕಾರವಾರ ಜಿಲ್ಲೆಯಲ್ಲಿಯು ಇದನ್ನು ಬೆಳೆಯುತ್ತಾರೆ. ಪ್ರತಿ ಮಾವು ೧೫೦ ರಿಂದ ೩೦೦ ಗ್ರಾಂ ತೂಗುತ್ತದೆ

(೫.೩ ಮತ್ತು ೧೦.೬ ಔನ್ಸ್).