ಆಲ್ಕೀನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇಥೈಲಿನ್‍ನ ಮೂರುಆಯಾಮದ (3D) ಚಿತ್ರ. ಇದು ಒಂದು ಸರಳ ಆಲ್ಕೀನು

ಕನಿಷ್ಠ ಪಕ್ಷ ಒಂದು ದ್ವಿಬಂಧ (Double bond) ಇರುವ ಅಣುಗಳನ್ನು ಹೊಂದಿರುವ ವಿವೃತಶೃಂಖಲೆಯುಳ್ಳ (Open Chain) ಅಪರ್ಯಾಪ್ತ (ಅನ್‍ಸ್ಯಾಚುರೇಟೆಡ್) ಹೈಡ್ರೋಕಾರ್ಬನ್‍ಗಳ ಸಾರ್ವತ್ರಿಕ ನಾಮಕ್ಕೆ ಆಲ್ಕೀನ್ ಎಂದು ಹೆಸರು. ಇವು ಬಹುವರ್ತನಾಶೀಲ ಗುಣವುಳ್ಳವು. ಇವನ್ನು ಓಲಿಫೀನ್ಸ್ ಅಥವಾ ಎಥಿಲಿನಿಕ್ ಹೈಡ್ರೊಕಾರ್ಬನ್‍ಗಳೆಂದು ಕರೆಯುತ್ತಾರೆ.

Isopentane-2D-skeletal.png Pentane-2D-Skeletal.svg Cyclopentane2d.png
branched-chain straight-chain cyclic
ವಿವೃತಶೃಂಖಲೆ

ರಚನೆ[ಬದಲಾಯಿಸಿ]

ಒಂದೇ ಒಂದು ದ್ವಿಬಂಧವಿರುವ ಆಲ್ಕೀನ್‍ಗಳನ್ನು CnH2n ( n=2 ಅಥವಾ ಹೆಚ್ಚು) ಎಂಬ ಸಾರ್ವತ್ರಿಕ ಸೂತ್ರದಿಂದ ನಿರೂಪಿಸಬಹುದು. ಈ ಶ್ರೇಣಿಯ ಮೊದಲೆರಡರಲ್ಲಿ ಎಥಿಲೀನ್ (ಈಫೇನ್) CH2:CH2 ಪ್ರೊಪಿಲೋನ್ (ಪ್ರೊಪೀನ್) CH2:CH CH3 ಇವು ಸೇರಿವೆ. ಎರಡು ಅಥವಾ ಅಧಿಕ ದ್ವಿಬಂಧಗಳಿರುವಾಗ ಆಲ್ಕೀನುಗಳನ್ನು, ಆಲ್ಕಡೈನ್‍ಗಳು, ಆಲ್ಕಟ್ರೈನಗಳು ಇತ್ಯಾದಿ ಅಥವಾ ಡೈಓಲಿಫಿನ್ಸ್. ಟ್ರೈಓಲಿಫಿನ್ಸ್ ಇತ್ಯಾದಿ ಎಂದೂ ಕರೆವುದುಂಟು. ಒಂದಕ್ಕಿಂತ ಹೆಚ್ಚಿಗೆ ದ್ವಿಬಂಧಗಳುಳ್ಳ ಹೈಡ್ರೊಕಾರ್ಬನ್ನುಗಳಲ್ಲೆಲ್ಲ ಬ್ಯುಟಿಡೈನ್ (1,3-ಬ್ಯುಟಿಡೈನ್) ಅತಿ ಮುಖ್ಯವಾದುದು. CH2:CHCH.CH2.[೧]

ಉಲ್ಲೇಖ[ಬದಲಾಯಿಸಿ]

  1. http://www.chemguide.co.uk/organicprops/alkenes/background.html
"https://kn.wikipedia.org/w/index.php?title=ಆಲ್ಕೀನ್&oldid=758689" ಇಂದ ಪಡೆಯಲ್ಪಟ್ಟಿದೆ