ಆಲನ್ ಕನಿಂಗ್ಹ್ಯಾಂ
ಆಲನ್ ಕನಿಂಗ್ಹ್ಯಾಂ (7 ಡಿಸೆಂಬರ್ 1784 – 30 ಒಕ್ಟೋಬರ್ 1842) ಸ್ಕಾಟ್ಲಂಡ್ನ ಕವಿ.ಲೇಖಕ.
ಬಾಲ್ಯ
[ಬದಲಾಯಿಸಿ]ಡಮ್ಫ್ರಿಷೈರಿನ ಡಾಲ್ವಿಂಗ್ಟನ್ನಲ್ಲಿ ಹುಟ್ಟಿದ. ಇವನ ತಂದೆಗೂ ರಾಬರ್ಟ್ ಬರ್ನ್ಸ್ ಕವಿಗೂ ಗೆಳೆತನವಿತ್ತಾದ ಕಾರಣ ಕನಿಂಗ್ಹ್ಯಾಮನಿಗೆ ಬಾಲ್ಯದಲ್ಲಿ ಆ ಕವಿಮಹಾಶಯನ ಪರಿಚಯ ಲಾಭವಾಯಿತು. ಕಲ್ಲುಕೆಲಸ ಮಾಡುತ್ತಿದ್ದ ತನ್ನ ಅಣ್ಣನೊಡನೆ ಈತ ಕೆಲಸ ಕಲಿಯಲು ಸೇರಿದನಾದರೂ ಬಿಡುವು ದೊರೆತಾಗಲೆಲ್ಲ ವ್ಯಾಸಂಗ, ಲಾವಣಿರಚನೆಗಳಲ್ಲಿ ಆಸಕ್ತನಾಗಿರುತ್ತಿದ್ದ.
ಸಾಹಿತ್ಯ ರಚನೆ
[ಬದಲಾಯಿಸಿ]ಕ್ರೋಮೆಕ್ ಸಂಪಾದಿಸಿರುವ ರಿಮೇನ್ಸ್ ಆಫ್ ನಿತ್ಷೇಡ್ ಅಂಡ್ ಗ್ಯಾಲೊವೆ ಸಾಂಗ್ (1810) ಎಂಬುದರಲ್ಲಿ ಕನಿಂಗ್ಹ್ಯಾಂನ ಕವನಗಳನ್ನು ಕಾಣಬಹುದು. ತನ್ನ ಕವನಗಳಿಂದಾಗಿ ಈತನಿಗೆ ಸ್ಕಾಟ್ ಮತ್ತು ಹಾಗ್‍ರ ಗೆಳೆತನದ ಲಾಭವಾಯಿತು. ಹೀಗಾಗಿ ಈತ ಲಂಡನ್‍ಗೆ ಹೋಗಿ ಅಲ್ಲಿ ಸಂಸತ್ತಿನ ವರದಿಗಾರನಾಗಿಯೂ ಶಿಲ್ಪಿ ಚಾಂಟ್ರೆಯ ಸಹಾಯಕನಾಗಿಯೂ ಕೆಲಸಮಾಡುತ್ತ ತನ್ನ ಸಾಹಿತ್ಯ ಚಟುವಟಿಕೆಗಳನ್ನು ಮುಂದುವರಿಸಿದ. ಈತನ ಪ್ರಸಿದ್ಧ ಕೃತಿಗಳೆಂದರೆ ಟ್ರೆಡಿಷನಲ್ ಟೇಲ್ಸ್ ಆಫ್ ದಿ ಇಂಗ್ಲಿಷ್ ಅಂಡ್ ಸ್ಕಾಟಿಷ್ ಪೆಸೆಂಟ್ರಿ (1822), ದಿ ಸಾಂಗ್ಸ್ ಆಫ್ ಸ್ಕಾಟ್ಲೆಂಡ್, ಏನ್ಷಂಟ್ ಅಂಡ್ ಮಾಡರ್ನ್ (1825), ಲೈವ್ಸ್ ಆಫ್ ದಿ ಮೋಸ್ಟ್ ಎಮಿನೆಂಟ್ ಬ್ರಿಟಿಷ್ ಪೇಂಟರ್ಸ್, ಸ್ಕಲ್ಪ್ಟರ್ಸ್ ಅಂಡ್ ಆರ್ಕಿಟೆಕ್ಟ್‌್ಸ (1829-33). ಲೈಫ್ ಆಫ್ ಸರ್ ಡೇವಿಡ್ ವಿಲ್ಕಿ (1843). ಈತನ ಪ್ರಸಿದ್ಧ ಕವನ ಎ ವೆಟ್ ಷೀಟ್ ಅಂಡ್ ಎ ಪ್ಲೋಯಿಂಗ್ ಸಿ ಎನ್ನುವುದು ಮೇಲೆ ಹೇಳಿದ ಎರಡನೆಯ ಗ್ರಂಥದಲ್ಲಿ ಸೇರಿದೆ. ಇಷ್ಟಲ್ಲದೆ ಈತ ರಾಬರ್ಟ್ ಬರ್ನ್ಸನ ಕೃತಿಗಳನ್ನು ಸಂಪಾದಿಸಿದ್ದಾನೆ ಹಾಗೂ ಮೂರು ಕಾದಂಬರಿಗಳನ್ನು ಬರೆದಿದ್ದಾನೆ.