ವಿಷಯಕ್ಕೆ ಹೋಗು

ಆರ್. ವಿ. ಮೂರ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಮನಾಥ ವೆಂಕಟೇಶ ಮೂರ್ತಿ (ಆರ್.ವಿ.ಮೂರ್ತಿ)
ಜನನನವೆಂಬರ್ ೧೨, ೧೯೦೬
ಮೈಸೂರು
ಮರಣಜುಲೈ, ೨೬, ೧೯೯೧
ರಾಷ್ಟ್ರೀಯತೆಭಾರತೀಯ
ಸಕ್ರಿಯ ವರ್ಷಗಳು೧೯೩೪-೧೯೯೦
ಗಮನಾರ್ಹ ಕೆಲಸಗಳುಪತ್ರಿಕೋದ್ಯಮ, ರಾಜಕೀಯ, ಸಾಮಾಜಿಕ, ಶೈಕ್ಷಣಿಕ ರಂಗದಲ್ಲಿ ಮಾಡಿದ ಪರಿಚಾರಿಕೆ ಅನನ್ಯವಾದುದು.

ಆರ್.ವಿ.ಮೂರ್ತಿಯೆಂದು [] (ನವೆಂಬರ್,೧೨,೧೯೦೬-೨೬, ಜುಲೈ,೧೯೯೧) ರಾಷ್ಟ್ರದಾದ್ಯಂತ ಹೆಸರುವಾಸಿಯಾಗಿದ್ದ ಅವರ ಬಾಲ್ಯದ ಹೆಸರು,ರಾಮನಾಥಪುರ ವೆಂಕಟೇಶ ಮೂರ್ತಿಯೆಂದು,ಸಾಮಾಜಿಕ, ಸಾಂಸ್ಕೃತಿಕ ಧಾರ್ಮಿಕ,ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಆರ್.ವಿ.ಮೂರ್ತಿಯವರು ೧೯೩೬ ರಲ್ಲಿ ತಮ್ಮ ೩೭ ನೇ ವಯಸ್ಸಿನಲ್ಲಿ, ಮುಂಬಯಿಗೆ ಬಂದು,'ಕಾಮರ್ಸ್ ಪತ್ರಿಕೆ'ಯ ಉಪಸಂಪಾದಕರಾಗಿ ಸೇರಿದರು. ಭಾರತದ ವಾಣಿಜ್ಯ, ಆರ್ಥಿಕ ವಿದ್ಯಮಾನ,ರಾಜಕೀಯ, ಭಾರತ ಮತ್ತು ಇಂಗ್ಲೆಂಡ್ ನ ನಡುವಿನ ವಾಣಿಜ್ಯ ವ್ಯವಹಾರ ವಿಸ್ತರಿಸುವ ಸಾಧ್ಯತೆಗಳನ್ನು ಅಧ್ಯಯನಮಾಡಿ ವರದಿಮಾಡಲು ಬ್ರಿಟಿಷ್ ಸರಕಾರ ಬೇಡಿಕೆಮಾಡಿತ್ತು. ಮೂರ್ತಿಯವರು ಇಂಗ್ಲೆಂಡಿಗೆ ಹೋಗಿ ಸಂಬಂಧಪಟ್ಟ ವ್ಯಕ್ತಿಗಳನ್ನು ಭೇಟಿಮಾಡಿ ತಿಳಿದು ವರದಿ ಸಲ್ಲಿಸಿದರು. ೬೪ ಪುಟಗಳ ಕಾಮರ್ಸ್ ಪತ್ರಿಕೆ,ಭಾರತ ಇಂಗ್ಲೆಂಡ್ ನಡುವಿನ ಬಾಂಧವ್ಯ ಬೆಳೆಸುವ ನಿಟ್ಟಿನಲ್ಲಿ ಕೆಲಸಮಾಡಿತು.

ಮೂರ್ತಿಯವರು ಕೆಲಸಮಾಡಿದ ಸಂಸ್ಥೆಗಳು

[ಬದಲಾಯಿಸಿ]

೧೯೩೬ ರಲ್ಲಿ ಮುಂಬಯಿನಗರಕ್ಕೆ ಬಂದು,ವಾಣಿಜ್ಯ,ಅರ್ಥಶಾಸ್ತ್ರಕ್ಕೆ ಸಂಬಂಧಿಸಿದರಾಷ್ಟ್ರದ ಪ್ರಮುಖ ಸಾಪ್ತಾಹಿಕ ಕಾಮರ್ಸ್, ಎಂಬ ಪತ್ರಿಕೆಗೆ ಸಹಸಂಪಾದಕರಾಗಿ ದುಡಿದರು. ಮುಂದೆ ಅವರು ೧೯೪೩ ರಲ್ಲಿ ಅದೇ ಪತ್ರಿಕೆಯ ಪ್ರಧಾನ ಸಂಪಾದಕರಾದ ಪ್ರಥಮ ಭಾರತೀಯರೆಂದು ಹೆಗ್ಗಳಿಕೆಗೆ ಪಾತ್ರರಾದರು.'೧೯೫೧ ರಲ್ಲಿ 'ಭಾರತ್' ಎಂಬ ಹೊಸ ಆಂಗ್ಲ ದೈನಿಕ ಪತ್ರಿಕೆ, ಹಾಗೂ 'ಈಸ್ಟರ್ನ್ ಎಕೋನಮಿಸ್ಟ್' ಪತ್ರಿಕೆಯ ಸಂಪಾದಕರಾಗಿ ದುಡಿದರು. ಆರ್.ವಿ.ಮೂರ್ತಿಯವರು ಬಿ.ಕಾಂ ಪದವೀಧರರು. ಇಂಗ್ಲೀಷ್ ಭಾಷೆಯಲ್ಲಿ ಎಮ್.ಎ.ಪದವಿ ಗಳಿಸಿದರು. ಭಾರತದ ವಾಣಿಜ್ಯ, ಆರ್ಥಿಕ ಸ್ಥಿತಿಗತಿ, ಔದ್ಯೋಗಿತ ವಿದ್ಯಮಾನಗಳನ್ನು ಸಮಗ್ರವಾಗಿ ಅಧ್ಯಯನಮಾಡಿ 'ಕಾಮರ್ಸ್ ಪತ್ರಿಕೆ'ಯಲ್ಲಿ ಬರೆಯುತ್ತಿದ್ದರು.

  • 'ಹಿಂದೂಸ್ಥಾನ್ ಟೈಮ್ಸ್' ಬಳಗದ ಪ್ರತಿನಿಧಿಯಾಗಿ 'ರೆಕಾರ್ಡ್ ಅಂಡ್ ಸ್ಟಾಟಿಸ್ಟಿಕ್ಸ್ ಪತ್ರಿಕೆ'ಯ ಸಂಪಾದಕರಾಗಿ ಕೆಲಸ ನಿರ್ವಹಿಸಿದರು.
  • 'ಪ್ರೆಸ್ ಗಿಲ್ಡ್ ಆಫ್ ಇಂಡಿಯ ಸಂಸ್ಥೆ'ಯ ಸ್ಥಾಪನೆಗೆ ಕಾರಣರಾದರು. ಸಾವಿರಾರು ಪತ್ರಕರ್ತರು ಒಂದೇ ವೇದಿಕೆಯಲ್ಲಿ ಸೇರಲು, ದೇಶವಿದೇಶಗಳ ಗಣ್ಯರು-ಪತ್ರಿಕೋದ್ಯಮಿಗಳು ವಿಚಾರ ವಿನಿಮಯ ಮಾಡಿಕೊಳ್ಳಲು, ಹಾಗೂ ಪತ್ರಿಕಾ ಪ್ರಪಂಚದಲ್ಲಿ ಸಾಮರಸ್ಯ ಮೂಡಿಸಲು ಅನುಕೂಲವಾಯಿತು.

ಬಾಲ್ಯ, ಮತ್ತು ವಿದ್ಯಾಭ್ಯಾಸ

[ಬದಲಾಯಿಸಿ]

ವೆಂಕಟೇಶ ಮೂರ್ತಿಯವರು, ಬಿ.ಎ.ಕೃಷ್ಣಾಚಾರ್, ತಾಯಿ, ಲಕ್ಷ್ಮೀನರಸಮ್ಮ ದಂಪತಿಗಳಿಗೆ ನವೆಂಬರ್,೧೨, ೧೯೦೬ ರಂದು ಜನಿಸಿದರು. ನಾಗರಾಜ ಪೂರ್ಣಯ್ಯನೆಂಬ ಶ್ರೀಮಂತ ವ್ಯಕ್ತಿಯಮನೆಯಲ್ಲಿದ್ದು ಅವರ ನೆರವಿನಿಂದ ಎಮ್.ಎ.ವರೆಗೆ ವಿದ್ಯಾಭ್ಯಾಸಮಾಡಿದರು. ಮೂರ್ತಿಯವರ ಮನೆಯಲ್ಲಿ ಅವರ ತಂದೆಯವರೇ ಮೊದಲ ಪದವೀಧರರಾಗಿದ್ದರು. ವೆಂಕಟೇಶ ಮೂರ್ತಿಯವರು ಸಾಹಿತ್ಯದ ವಿದ್ಯಾರ್ಥಿ. ಎನ್.ಎಸ್. ಸುಬ್ಬರಾವ್ ಪ್ರಾಂಶುಪಾಲರು. ಪ್ರೊ.ಜೆ.ಸಿ.ರ‍್ಯಾಲೋ, ಬಿ.ಎಮ್.ಶ್ರೀ. ಮೊದಲಾದ ಮೇರು ವ್ಯಕ್ತಿಗಳು ಅವರಿಗೆ ಗುರುಗಳಾಗಿದ್ದರು. ತಮ್ಮ ಪದವಿಯ ನಂತರ, ಸೆಂಟ್ರೆಲ್ ಕಾಲೇಜ್ ನಲ್ಲಿ 'ಪಾರ್ಟ್ ಟೈಂ ನೌಕರಿ' ದೊರೆಯಿತು. ಅಲ್ಲಿ ಅವರು ವಾಣಿಜ್ಯ ಸಂಬಂಧಿ ವಿಶಯಗಳನ್ನು ಬೋಧಿಸುತ್ತಿದ್ದರು. ಸ್ವಲ್ಪ ಸಮಯ ಬೆಂಗಳೂರಿನ 'ಟೈಲ್ಸ್ ಫ್ಯಾಕ್ಟರಿ'ಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡಿದರು.

ಪರಿವಾರ

[ಬದಲಾಯಿಸಿ]

ಶ್ರೀಮತಿ ಸರೋಜಮ್ಮನವರು, ಹೆಂಡತಿ, ೮ ಜನ ಮಕ್ಕಳು.

ಕಾಮರ್ಸ್ ಪತ್ರಿಕೆ

[ಬದಲಾಯಿಸಿ]

ಕಾಮರ್ಸ್ ಪತ್ರಿಕೆ, ದಕ್ಷಿಣ ಮುಂಬಯಿಯ 'ಬ್ರಾಡಿ ಹೌಸ್', ವೀರ್ ನಾರಿಮನ್ ರಸ್ತೆಯಲ್ಲಿ ಸ್ಥಾಪಿತವಾದ ಒಂದು ವಾರಪತ್ರಿಕೆ. ಪ್ರತಿ ಶುಕ್ರವಾರ ಪ್ರಕಟಿತವಾಗುತ್ತಿತ್ತು. ಸರ್ ಜೋಸೆಫ್.ಕೆ ಸಂಪಾದಕ ಮಂಡಲಿಯ ಮುಖ್ಯಸ್ಠರಾಗಿದ್ದರು. ಈ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಅಂಕಣ, 'ಮಾರ್ಕೆಟ್ ಗಾಸಿಪ್'ನಲ್ಲಿ ಮೂರ್ತಿಯವರು ಬರೆಯುತ್ತಿದ್ದರು. ೧, ಏಪ್ರಿಲ್, ೧೯೭೩ ರಲ್ಲಿ ತಮ್ಮ ೨೦ ವರ್ಷದ ಸೇವೆಗೆ ವಿದಾಯ ಹೇಳಿದರು.

ಅಖಿಲ ಭಾರತ ಕನ್ನಡ ಸಮ್ಮೇಳನದಲ್ಲಿ

[ಬದಲಾಯಿಸಿ]

೧೯೫೦ ರಲ್ಲಿ ಅಖಿಲಭಾರತ ಕನ್ನಡ ಸಮ್ಮೇಳನದಲ್ಲಿ ಮೂರ್ತಿ ಮುಂಚೂಣಿಯಲ್ಲಿದ್ದರು. ಸಮ್ಮೇಳನದ ಅಧ್ಯಕ್ಷತೆಯನ್ನು ರಾಷ್ಟ್ರಕವಿ, ಗೋವಿಂದ ಪೈ ವಹಿಸಿದ್ದರು. ರಾಮನಾಥ ವೆಂಕಟೇಶ ಮೂರ್ತಿಯವರು ಭಾರತದ ವಾಣಿಜ್ಯ, ಆರ್ಥಿಕ,ಸ್ಥಿತಿಗತಿ,ಔದ್ಯೋಗಿಕ ವಿದ್ಯಮಾನಗಳು ಮೊದಲಾದವುಗಳನ್ನು ಸಮಗ್ರವಾಗಿ ಅಭ್ಯಯಿಸಿ,ಕಾಮರ್ಸ್ ಪತ್ರಿಕೆಯಲ್ಲಿ ಬರೆಯುತ್ತಿದ್ದರು. ಕಾಮರ್ಸ್ ಪತ್ರಿಕೆಯ ಹತ್ತಾರು ವಿಷೇಶಾಂಕಗಳನ್ನು ಹೊರತರುವಲ್ಲಿ ಅವರು ಯಶಸ್ವಿಯಾದರು. ೧೯೪೭ ರಲ್ಲಿ ಭಾರತ ಸ್ವಾತಂತ್ರ್ಯವನ್ನು ಗಳಿಸಿತು. ಮುಂದೆ ಆರ್ಥಿಕವಾಗಿ ಹೇಗೆ ಮುನ್ನಡೆಯಬೇಕು, ಎಂಬ ವಿಷಯವನ್ನು ಕುರಿತು 'ಕಾಮರ್ಸ್ ಪತ್ರಿಕೆ'ಯಲ್ಲಿ ಅನೇಕ ಅಗ್ರಲೇಖನಗಳನ್ನು ಬರೆದು ಪ್ರಕಟಿಸಿದರು. 'ಮುಂಗಡ ಪತ್ರ ಮಂಡನೆಯ ಸಂಧರ್ಭ'ದಲ್ಲಿ ಕಾಮರ್ಸ್ ಪತ್ರಿಕೆಯ ಅಭಿಪ್ರಾಯವೇನು, ಎಂಬುದನ್ನು ಸರಕಾರ, ಅಧಿಕಾರಿಗಳು, ಉದ್ಯಮಿಗಳು ಕಾದುನೋಡುತ್ತಿದ್ದರಂತೆ. ತಮ್ಮ ಪತ್ರಿಕಾ ಸಂಪಾದನೆಯ ವೃತ್ತಿ ಜೀವನದಲ್ಲಿ, ಹಲವಾರು ಮೇರು ವ್ಯಕ್ತಿಗಳನ್ನು ಸಂದರ್ಶಿಸಿ, ತಮ್ಮ ಪತ್ರಿಕೆಯಲ್ಲಿ ದಾಖಲಿಸಿದ್ದಾರೆ.

ಸಂದರ್ಶಿದ ವ್ಯಕ್ತಿಗಳು

[ಬದಲಾಯಿಸಿ]

ತಮ್ಮ ಪತ್ರಿಕಾ ವೃತ್ತಿಯ ಜೀವನದಲ್ಲಿ ಸಂಪಾದಕರಾಗಿ, ಅವರು, ಗಾಂಧೀಜಿ, ನೆಹರೂಜಿ, ಪಟೇಲ್, ಹೋಮಿ ಭಾಭಾ, ಜೆ.ಆರ್.ಡಿ. ಟಾಟಾ, ಬಿರ್ಲಾ, ಬ್ರಿಟಿಷ್ ರಾಜರು,ರಾಣಿ ಎಲಿಝಬೆತ್, ಗವರ್ನರ್ ಗಳು, ಅಮೇರಿಕಾದ ಅಧ್ಯಕ್ಪ, 'ಜಾನ್.ಎಫ್.ಕೆನಡಿ ಮೊದಲಾದ ದಿಗ್ಗಜರನ್ನು ಸಂದರ್ಶಿಸಿ ತಮ್ಮ ಪತ್ರಿಕೆಯಲ್ಲಿ ದಾಖಲಿಸುತ್ತಿದ್ದರು.

ಗೈಡ್ ಚಲನಚಿತ್ರಕ್ಕೆ ಇಂಗ್ಲೀಷ್ 'ಸಬ್ ಟೈಟಲ್' ಒದಗಿಸಿದರು

[ಬದಲಾಯಿಸಿ]

ಹಿಂದಿ ಚಲನ ಚಿತ್ರದ ಅದ್ವಿತೀಯ ನಟ, ದೇವಾನಂದ್, ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ 'ಗೈಡ್ ಚಲನಚಿತ್ರ' ನಿರ್ಮಿಸಿದರು. ಅವರ ಇಂಗ್ಲಿಷ್ ಆವರ್ತಿಗೆ ಆರ್.ವಿ.ಮೂರ್ತಿಯವರು 'ಸಬ್ ಟೈಟಲ್' ಬರೆದುಕೊಟ್ಟರು.

೧೯೫೯ ರಲ್ಲಿ ಸ್ವತಂತ್ರ ಪಕ್ಷದಲ್ಲಿ ಸಕ್ರಿಯರಾದರು

[ಬದಲಾಯಿಸಿ]

ಚಕ್ರವರ್ತಿ ರಾಜಗೋಪಾಲಾಚಾರ್ಯರು ೧೯೫೯ ರಲ್ಲಿ ಸ್ವತಂತ್ರ ಪಕ್ಷವನ್ನು ಸ್ಥಾಪಿಸಿದರು. ಕುಲಪತಿ ಕೆ.ಎಮ್.ಮುನ್ಷಿ, ಮಿನೂ ಮಸಾನಿ, ಆಚಾರ್ಯ ರಂಗ,ನಾರಾಯಣ್ ದಾಂಡೇಕರ್, ಪಿಲೂ ಮೋದಿಯವರ ಜೊತೆಯಲ್ಲಿ ತಮ್ಮ ಯೋಗದಾನವನ್ನು ನೀಡಿದರು. ಮಾಟುಂಗ ಜಿಲ್ಲೆಯಿಂದ ಸ್ವತಂತ್ರ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದರು. ಆದರೆ, ಚುನಾವಣೆಯಲ್ಲಿ ಸೋಲನ್ನು ಅನುಭವಿಸಬೇಕಾಯಿತು.

ಸಾರ್ವಜನಿಕ ಸಂಸ್ಥೆಗಳ ಜೊತೆ ಸಕ್ರಿಯವಾಗಿ ಸೇವೆಸಲ್ಲಿಸಿದರು

[ಬದಲಾಯಿಸಿ]

ಮುಂಬಯಿನಗರದ ವಿದ್ಯಾ ಸಂಸ್ಥೆಗಳಾದ ನ್ಯಾಷನಲ್ ಕನ್ನಡ ಎಜ್ಯುಕೇಶನ್ ಸೊಸೈಟಿ , ಸೌತ್ ಇಂಡಿಯನ್ ಎಜ್ಯುಕೇಷನ್ ಸೊಸೈಟಿ, ಮೈಸೂರ್ ಅಸೋಸಿಯೇಷನ್, ಮುಂಬಯಿ [] ಯ ಸ್ಥಾಪನೆ, ಮತ್ತು ಬೆಳಸುವ ದಿಶೆಯಲ್ಲಿ ಹಲವಾರು ವರ್ಷ ಸೇವೆಸಲ್ಲಿಸಿದ್ದಾರೆ.

೧೯೫೫ ರಲ್ಲಿ ವಾಣಿಜ್ಯ ಕ್ಷೇತ್ರದಲ್ಲಿ ಇದ್ದ ಪ್ರಚಲಿತ ಪತ್ರಿಕೆಗಳು

[ಬದಲಾಯಿಸಿ]

ಜಿಡಿ ಬಿರ್ಲಾ ಆಹ್ವಾನದ ಮೇಲೆ 'ಈಸ್ಟರ್ನ್ ಎಕೊನೊಮಿಸ್ಟ್' ಮತ್ತು 'ಹಿಂದುಸ್ತಾನ್ ಟೈಮ್ಸ್' ದೆಹಲಿ ಪತ್ರಿಕೆಗೆ ಮುಂಬಯಿ ಪ್ರತಿನಿಧಿಯಾಗಿ ಕೆಲಸಮಾಡಿದರು. ೧, ಏಪ್ರಿಲ್, ೧೯೭೩ ರಲ್ಲಿ ತಮ್ಮ ೨೦ ವರ್ಷದ ಸೇವೆಗೆ ವಿದಾಯ ಹೇಳಿದರು. 'ಡೈಲಿ ಕಾಟನ್ ಅಂಡ್ ಮಾರ್ಕೆಟ್ ರೆವ್ಯೂ', ಮತ್ತು 'ಕಾಟನ್ ಟೆಕ್ಸ್ ಟೈಲ್ಸ್ ಪತ್ರಿಕೆಯ ಆನ್ನ್ಯುಯಲ್' ಸಂಚಿಕೆಯಲ್ಲೂ ಬರೆಯುತ್ತಿದ್ದರು.

ಪ್ರಶಸ್ತಿಗಳು

[ಬದಲಾಯಿಸಿ]
  1. ೧೯೭೫ ರಲ್ಲಿ, ಅಖಿಲ ಭಾರತ ಮಾಧ್ವಸಂಘವು ಸಮಾಜ ರತ್ನ ಪ್ರಶಸ್ತಿ ಪ್ರದಾನ ಮಾಡಿತು,

ಆರ್. ವೆಂಕಟೇಶ ಮೂರ್ತಿಯವರು, ಸ್ವಲ್ಪ ಸಮಯ ವೃದ್ಧಾವಸ್ಥೆಗೆ ಸಂಬಂಧಿಸಿದ ಕಾಯಿಲೆಯಿಂದ ನರಳುತ್ತಿದ್ದು ೨೬ ಜುಲೈ, ೧೯೯೧ ರಲ್ಲಿ ನಿಧನರಾದರು.

ಉಲ್ಲೇಖಗಳು

[ಬದಲಾಯಿಸಿ]
  1. An Interview -B.Rangaswamy, Editor of Commerce and wrier,ಆರ್.ವಿ.ಮೂರ್ತಿ, ಪತ್ರಿಕೋದ್ಯಮದ ಮೇರು ಪ್ರತಿಭೆ, ಡಾ.ಲೀಲಾ.ಬಿ ಅಬಿಜಿತ್ ಪ್ರಕಾಶನ, ೨೦೧೯, ಮುಂಬಯಿ,
  2. "The saga of Mysore Association". Archived from the original on 2018-09-15. Retrieved 2019-02-21.
  1. ಆಕರ ಗ್ರಂಥ: ಆರ್.ವಿ.ಮೂರ್ತಿ, ಪತ್ರಿಕೋದ್ಯಮದ ಮೇರು ಪ್ರತಿಭೆ, ಡಾ.ಲೀಲಾ.ಬಿ ಅಬಿಜಿತ್ ಪ್ರಕಾಶನ, ೨೦೧೯, ಮುಂಬಯಿ
  2. ಉತ್ತುಂಗ,ಶ್ರೀ ಮಾಹುಲಿ ಗೋಪಾಲಾಚಾರ್ಯರ ಜೊತೆಗೆ,ಶ್ರೀ. ಆರ್.ವಿ.ಮೂರ್ತಿ ಮತ್ತಿತರು[permanent dead link]
  3. ಹೀಗಿದ್ದರು- ಆರ್ ವಿ ಮೂರ್ತಿ- ಡಾ. ಶ್ರೀನಿವಾಸ ಹಾವನೂರು ಆರ್.ವಿ.ಮೂರ್ತಿ, ಪತ್ರಿಕೋದ್ಯಮದ ಮೇರು ಪ್ರತಿಭೆ, ಡಾ.ಲೀಲಾ.ಬಿ ಅಬಿಜಿತ್ ಪ್ರಕಾಶನ, ೨೦೧೯, ಮುಂಬಯಿ,ಪುಟ ೪೬-೫೫
  4. ಯೂ ಟ್ಯೂಬ್, FFE Youtube

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]