ವಿಷಯಕ್ಕೆ ಹೋಗು

ಆರ್. ಬಿ. ಹೆಬ್ಬಳ್ಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:P3090030.JPG
'ಮುಂಬಯಿ ಕನ್ನಡ ಸಂಘದ ಅಮೃತ ಮಹೋತ್ಸವ ಸಮಾರಂಭದಲ್ಲಿ ಸನ್ಮಾನಿಸಲ್ಪಟ್ಟರು'

ರಾಮುಶೇಟ್ ಎಂದು ತಮ್ಮ ಪ್ರೀತಿಯ ಗೆಳೆಯರಿಂದ ಕರೆಸಿಕೊಳ್ಳಲ್ಪಡುವ, 'ಆರ್.ಬಿ.ಹೆಬ್ಬಳ್ಳಿ'ಯವರು, ಸನ್ ೧೯೬೨ ರಲ್ಲಿ ಬೊಂಬಾಯಿಗೆ ಪಾದಾರ್ಪಣೆಮಾಡಿದರು. ರಾಮಪ್ಪಾ ಬಸಪ್ಪಾ ಹೆಬ್ಬಳ್ಳಿ, ಸುಮಾರು ೫ ದಶಕಗಳ ಹಿಂದೆ, ಮಹಾರಾಷ್ಟ್ರದ ಡೊಂಬಿವಲಿಗೆ ಬಂದು 'ಸ್ಟೊವ್ ರಿಪೇರಿ'ಮಾಡುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ತಮ್ಮ ಕರ್ತವ್ಯ ನಿಷ್ಠೆ ಪ್ರಾಮಾಣಿಕತೆ ಮತ್ತು ಸತತ ಕಾಯಕದಿಂದ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಂಡು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗಿ ಒಬ್ಬ ಯಶಸ್ವಿ ಕಟ್ಟಡ ನಿರ್ಪಾಪಕರೆಂಬ ಘನತೆಗೆ ಪಾತ್ರರಾದರು. ಈಗ 'ಮಹಾರಾಷ್ಟ್ರದ ವೀರಶೈವ ಸಮಾಜದ ಪ್ರಮುಖ'ರಾಗಿ ಕೆಲಸಮಾಡುತ್ತಿರುವ ವೀರಶೈವ ಮಠದ ಪಂಚಪೀಠಾಧೀಶರನ್ನು ಆದರದಿಂದ ಬರಮಾಡಿಕೊಳ್ಳುತ್ತಾರೆ. ಧರ್ಮಸ್ಥಳದ ಮಂಜುನಾಥಸ್ವಾಮಿ, ಅವರ ಆರಾಧ್ಯದೈವವೂ ಹೌದು. ಡಾ. ವೀರೆಂದ್ರ ಹೆಗ್ಗಡೆ, ನಾಡೋಜ ಡಾ.ಪಾಟೀಲ್ ಪುಟ್ಟಪ್ಪ ಇವರ ಆದರ್ಶವ್ಯಕ್ತಿಗಳು. ಮುಂಬಯಿನ ಕನ್ನಡ ಸಂಘ, ಮತ್ತು ಅನೇಕ ಕನ್ನಡಪರ ಸಂಘಸಂಸ್ಥೆಗಳೊಂದಿಗೆ ನಿಕಟ ಸಂಪರ್ಕ ಹೊಂದಿದ ಹೆಬ್ಬಳ್ಳಿಯವರು ಮುಂಬಯಿನ ಕನ್ನಡಿಗರ ಆಶ್ರಯದಾತರೂ ಆಗಿದ್ದಾರೆ.

ಹುಬ್ಬಳ್ಳಿಯ ಸಾವಿತ್ರಿದೇವಿ ಮತ್ತು ಬಸಪ್ಪನವರ ಅಚ್ಚುಮೆಚ್ಚಿನ ಮಗನಾಗಿ ೧೯೪೩ ರ ಜನವರಿ ೧ ನೆಯ ತಾರೀಖು ಜನಿಸಿದ ಆರ್.ಬಿ.ಯವರು, ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿದ ಬಳಿಕ ಡೊಂಬಿವಲಿಗೆ ಬಂದು ತಮ್ಮ ಸೋದರನ ಸ್ಟೊವ್ ರಿಪೇರಿ ಅಂಗಡಿಯಲ್ಲಿ ಸಹಾಯಕರಾಗಿ ಕೆಲಸಕ್ಕೆ ನಿಂತರು. ಸ್ವಲ್ಪದಿನದಲ್ಲೇ ಸಾವಿತ್ರಿ ಫರ್ನೀಚರ್ಸ್ ಎಂಬು ಚಿಕ್ಕ ಗೃಹೋಪಯೋಗಿ ಸಲಕರಣೆಗಳನ್ನು ನಿರ್ಮಿಸುವ ವ್ಯವಸಾಯ ಆರಂಭಿಸಿದರು. ಈ ವೃತ್ತಿಯಲ್ಲಿ ಅವರು ಅತ್ಯಂತ ಶ್ರದ್ಧೆ ಮತ್ತು ಆತ್ಮವಿಶ್ವಾಸವನ್ನು ಪಡೆದರು. ಲೋಕಲ್ ರೈಲಿನಲ್ಲಿ ಪಕ್ಕದ ಥಾಣೆ ಜಿಲ್ಲೆಗೆ ಹೋಗಿ ಬೇಕಾದ ಮರದ ಸಾಮಾನುಗಳನ್ನು ಆಯ್ದು, ಖರೀದಿಸಿ ತಂದು ದಿನಕ್ಕೆ ಸುಮಾರು ೧೫ ತಾಸುಗಳ ಕೆಲಸಮಾಡುತ್ತಿದ್ದರು. ಹೀಗೆಯೇ ಆತ್ಮವಿಶ್ವಾಸವನ್ನು ಬೆಳೆಸಿಕೊಂಡು ಮುನ್ನುಗ್ಗಿ, ಸನ್ ೧೯೭೨ ರಲ್ಲಿ 'ಮಂಜುನಾಥ ರಿಯಲ್ ಎಸ್ಟೇಟ್ ಏಜೆನ್ಸಿ' ಪ್ರಾರಂಭಿಸಿದರು. ಶಂಶದ್ ಬಿಲ್ಡರ್ಸ್ ಪರಿಚಯವಾಗಿ, ಅವರಿಂದ ಕಟ್ಟಡ ನಿರ್ಮಾಣ ಕೆಲಸವನ್ನು ಕಲಿತು ತಮ್ಮ ಕೆಲವು ಆತ್ಮೀಯ ಗೆಳೆಯರ ಸಹಕಾರದಿಂದ ’ಎಂ.ಎಸ್.ಬಿಲ್ಡರ್ಸ್’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು. ಡೊಂಬಿವಲಿಯ ಸಾರಸ್ವತ ಕಾಲೋನಿಯಲ್ಲಿ ಗಂಗಾ, ದುರ್ಗಾ, ಉಮಾಗೌರಿ ಎಂಬ ವಸತಿ ಕಟ್ಟಡಗಳನ್ನು ಕೇವಲ ೨ ವರ್ಷಗಳ ಅವಧಿಯಲ್ಲಿ ಪೂರ್ಣಗೊಳಿಸಿದರಲ್ಲದೆ, ಅತ್ಯಲ್ಪ ಸಮಯದಲ್ಲಿನಿರ್ಮಾಣಗೊಂಡ ಅತ್ಯುತ್ತಮ ಕಟ್ಟಡಗಳೆಂಬ ಪ್ರಶಂಸೆಗೆ ಪಾತ್ರರಾದರು. ಈ ಯಿಂದ ಪ್ರೇರಿತರಾಗಿ ಸುಮಾರು ೨೦ ಕ್ಕೂ ಮೀರಿ ಕಟ್ಟಡಗಳನ್ನು ನಿರ್ಮಿಸಿ, ಗ್ರಾಹಕರಿಗೆ ಶೇಕಡಾ ೮೦% ಗೃಹಸಾಲದ ವ್ಯವಸ್ಥೆಯನ್ನೂ ಮಾಡಿ ಹೆಸರುಗಳಿಸಿದರು.

ಮಂಜುನಾಥ ಬಿಲ್ಡರ್ಸ್

[ಬದಲಾಯಿಸಿ]

ಅಂಬರ್ನಾಥ್ ನಲ್ಲಿ ಸ್ಥಾಪಿಸಿ೨ ಸಾವಿರಕ್ಕೂ ಹೆಚ್ಚು ಫ್ಲಾಟ್ ಗಳಿರುವ ೪೦ ಬೃಹತ್ ಕಟ್ಟಡಗಳನ್ನು ಕಟ್ಟಿ, ಆ ಬಡಾವಣೆಗೆ ಶಿವಬಸವ, ಬಸವಕಲ್ಯಾಣ, ಶಿವಾಲಿಕಾ, ಮತ್ತು ಶಿವಶಕ್ತಿ ನಗರಗಳೆಂದು ನಾಮರಣಗೊಳಿಸಿದರು. ಮತ್ತೊಂದು ಗಮನಾರ್ಹ ಸಂಗತಿಯೆಂದರೆ, ತಾವು ಅಲ್ಲಿ ಕಟ್ಟಿದ ಕಟ್ಟಡಗಳಿಗೆ ದೇಶದ ಮಹತ್ವದ ನದಿಗಳ ಹೆಸರನ್ನು ನೀಡಿದರು. ರಾಜಕಾರಣದಿಂದ ಗಾವುದದೂರ ಸರಿಯುವ ಎಲ್ಲ ಪಕ್ಷಗಳ ರಾಜಕಾರಣಿಗಳ ಜೊತೆಯಲ್ಲಿ ಸ್ನೇಹ ಸೌಹಾರ್ದಗಳನ್ನು ಹೊಂದಿದ್ದಾರೆ. 'ತರಳಬಾಳು ಜಗದ್ಗುರು, ಶ್ರೀ ಶಿವಮೂರ್ತಿಶಾಸ್ತ್ರಿಗಳು' ಸಂಯೋಜಿಸಿದ್ದ ಶಾಂತಿಯಾತ್ರೆಯಲ್ಲಿ ಭಾಗವಹಿಸಿ, ಅಮೆರಿಕ, ಯೂರೋಪ್ ಮತ್ತು ಯು.ಕೆಗಳಿಗೆ ಭೇಟಿನೀಡಿದ್ದರು. ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಗಣನೀಯ ಸೇವೆಸಲ್ಲಿಸಿದ್ದಾರೆ.

ಶಿಕ್ಷಣ ಪ್ರೇಮ

[ಬದಲಾಯಿಸಿ]

'ಹೆಬ್ಬಳ್ಳಿಯವರು ಬಾಲ್ಯದಲ್ಲಿ ವಿದ್ಯಾಭ್ಯಾಸದ ಸೌಲತ್ತಿನಿಂದ ವಂಚಿತರಾದರು, 'ಅಂಬರ್ನಾಥ್' ನಲ್ಲಿ 'ಎಸ್.ನಿಜಲಿಂಗಪ್ಪ ಕನ್ನಡ ಮಾಧ್ಯಮಿಕ ಶಾಲೆ' ಪುನರ್ಚೇತನ ನೀಡಿ ಸುಸಜ್ಜಿತ ಶಾಲಾ ಕಟ್ಟಡ ನಿರ್ಮಾಣಕ್ಕೆ ಆಗಿನ ಮುಖ್ಯಮಂತ್ರಿ 'ರಾಮಕೃಷ್ಣ ಹೆಗ್ಗಡೆ', ನಾಡೋಜ, 'ಡಾ.ಪಾಟೀಲ್ ಪುಟ್ಟಪ್ಪ' ಥಾಣೆಯ ಜಿಲ್ಲಾಧಿಕಾರಿ, 'ಅನಿಲ್ ಗೋಕಾಕ್' ರ, ನೆರವಿನಿಂದ ೧ ಎಕರೆ ನಿವೇಶನ ಪಡೆದರು. ಹೆಬ್ಬಳ್ಳಿಯವರು ಸ್ವತಃ ೫ ಲಕ್ಷರೂದೇಣಿಗೆ ಕೊಡುವುದರ ಮೂಲಕ ಶಾಲಾ ಕೊಠಡಿಗಳನ್ನು ನಿರ್ಮಿಸಿದರು. ಕರ್ನಾಟಕ ಸರಕಾರ ೧ ಕೋಟಿ ಸಹಾಯಧನವನ್ನು ನೀಡಿತು.

ಚಿಕ್ಕ ಮಕ್ಕಳ ಬಗ್ಗೆ ತೀವ್ರ ಆಸಕ್ತಿ

[ಬದಲಾಯಿಸಿ]

ಮಕ್ಕಳ ಮನರಂಜನೆಗಾಗಿ ಕೆಲವು ಮರಾಠಿ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ.

  • 'ಟಾರ್ಜನ್ ಅಂಡ್ ಕೋಬ್ರಾ'
  • 'ಕಿಚಡಿ' ಎಂಬ

ಅಖಿಲ ಭಾರತ ಹೊರನಾಡು ಕನ್ನಡಿಗರ ಮಹಾಮೇಳದ ಆಯೋಜನೆಯ ಜವಾಬ್ದಾರಿ

[ಬದಲಾಯಿಸಿ]

'ಸನ್ ೨೦೧೨ ರ ಅಖಿಲ ಭಾರತ ಹೊರನಾಡ ಕನ್ನಡ ಕನ್ನಡ ಸಂಘಗಳ ೩ ನೇ ಮಹಾಮೇಳ'ವನ್ನು ಡೊಂಬಿವಲಿಯಲ್ಲಿ ಆಯೋಜಿಸುವ ಗುರುತರ ಜವಾಬ್ದಾರಿಯನ್ನು ಹೊತ್ತಿದ್ದಾರೆ.