ಆರ್.ಆರ್.ಪದಕಿ

ವಿಕಿಪೀಡಿಯ ಇಂದ
Jump to navigation Jump to search

ಡಾ.ಆರ್.ಆರ್.ಪದಕಿ(ಡಾ.ರಂಗರಾವ ರಾಮರಾವ ಪದಕಿ)ಯವರು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಉಚಿತವಾಗಿ ಆರೋಗ್ಯ ಸೇವೆ ನೀಡಿ ಡಾ.ಪದಕಿಯೆಂದೆ ಹೆಸರುವಾಸಿಯಾಗಿದ್ದರು.

ಬಾಲ್ಯ[ಬದಲಾಯಿಸಿ]

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ 22ನೇ ಅಗಷ್ಟ್ 1925ರಲ್ಲಿ ಜನಿಸಿದರು.

ವಿದ್ಯಾಭಾಸ[ಬದಲಾಯಿಸಿ]

ಪದಕಿಯವರು ತಾಳಿಕೋಟೆ, ಬಾಗಲಕೋಟೆ, ಗದಗ, ಧಾರವಾಡ, ಮಹಾರಾಷ್ಟ್ರಕೊಲ್ಹಾಪುರದಲ್ಲಿ ಶಿಕ್ಷಣ ಪಡೆದು ಪುಣೆಯ ಬಿಜೆ ಮೆಡಿಕಲ್ ಕಾಲೇಜಿನಲ್ಲಿ 1951 ರಲ್ಲಿ ಎಂಬಿಬಿಎಸ್ ಪದವಿ ಮುಗಿಸಿದ್ದರು.

ಸೇವೆ[ಬದಲಾಯಿಸಿ]

1952 ರಲ್ಲಿ ಸರ್ಕಾರಿ ವೈದ್ಯರಾಗಿ ಮಹಾರಾಷ್ಟ್ರದ ಸಾಂಗ್ಲಿ, ಕರ್ನಾಟಕಕುಮಟಾದಲ್ಲಿ ಸೇವೆ ಸಲ್ಲಿಸಿದ ಅವರಿಗೆ ಸರ್ಕಾರಿ ನೌಕರಿ ಬೇಡವೆನಿಸಿ ರಾಜೀನಾಮೆ ನೀಡಿ 1957ರಲ್ಲಿ ಮುದ್ದೇಬಿಹಾಳದಲ್ಲಿ ಸ್ವಂತ ಕ್ಲಿನಿಕ್ ಸ್ಥಾಪಿಸಿದರು.

ನಿಧನ[ಬದಲಾಯಿಸಿ]

3ನೇ ಅಗಷ್ಟ್ 2018ರಂದು 93ನೇ ವಯಸ್ಸಿನಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಪುತ್ರ (ಇಂಗ್ಲೆಂಡಿನಲ್ಲಿ ಸಾರ್ವಜನಿಕ ಆರೋಗ್ಯ ನಿರ್ದೇಶಕ) ಡಾ.ಕಿಶೋರ ಸೇರಿದಂತೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರಿದ್ದಾರೆ.

ಪ್ರಶಸ್ತಿ[ಬದಲಾಯಿಸಿ]

ಅವರ ಸೇವೆಯನ್ನು ಗುರುತಿಸಿ ಅನೇಕ ಸಂಘ, ಸಂಸ್ಥೆಗಳು ಅನೇಕ ಪ್ರಶಸ್ತಿ ನೀಡಿದರೆ, ರಾಜ್ಯ ಸರ್ಕಾರ 2015 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.[೧]

ಉಲ್ಲೇಖಗಳು[ಬದಲಾಯಿಸಿ]