ವಿಷಯಕ್ಕೆ ಹೋಗು

ಆರ್ಮೊನಿಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೆಂಜಮಿನ್ ಫ್ರ್ಯಾಂಕ್ಲಿನ್ ಅಭಿವೃದ್ಧಿಪಡಿಸಿದ ಹೊಸ ಬಗೆಯ ಆರ್ಮೋನಿಕ

ಆರ್ಮೊನಿಕಇದೊಂದು ಸಂಗೀತವಾದ್ಯ. ಇದಕ್ಕಿರುವ ಗಾಜಿನ ಅಥವಾ ಲೋಹದ ಕೊಳವೆಗಳ ಮೇಲೆ ಒದ್ದೆ ಬೆರಳನ್ನು ಆಡಿಸಿದಾಗ ಉಂಟಾಗುವ ಘರ್ಷಣೆ ಯಿಂದಾಗಿ ಶಬ್ದೋತ್ಪತ್ತಿಯಾಗುತ್ತದೆ. ಬಹಳ ಹಿಂದಿನ ಕಾಲದಿಂದಲೇ ಪೌರಸ್ತ್ಯ ದೇಶಗಳಲ್ಲಿ ಮತ್ತು ೧೫ನೆಯ ಶತಮಾನದಿಂದ ಯುರೋಪಿನಲ್ಲಿ ಈ ವಾದ್ಯದ ಪರಿಚಯ ಸಾಕಷ್ಟಿತ್ತು. ಜರ್ಮನಿಯ ಖ್ಯಾತ ಸಂಗೀತಕೃತಿಕಾರ ಗ್ಲೂಕ್ ತನ್ನ ಲಂಡನ್ನಿನ ಭೇಟಿಯ ಸಮಯದಲ್ಲಿ (೧೭೪೫) ಈ ವಾದ್ಯವನ್ನು ನುಡಿಸಿದ. ಆಸ್ಟ್ರಿಯದ ಖ್ಯಾತ ಸಂಗೀತಕೃತಿಕಾರ ಮೊಜಾರ್ಟ್ ಈ ವಾದ್ಯವೂ ಸೇರಿದಂತೆ ಅಳವಡಿಸಿದ ಗೀತೆ (ಪಂಚಮೇಳ, ಕ್ವಿಂಟೆಟ್) ಒಂದನ್ನು ಸೂಚಿಸಿದ. ಅನಂತರ ಕೀಲಿಮಣೆಯನ್ನುಳ್ಳ ಈ ವಾದ್ಯದ ಮತ್ತೊಂದು ಬಗೆ ಬಂತು. ಬೆಂಜಮಿನ್ ಫ್ರ್ಯಾಂಕ್ಲಿನ್ ಸುಧಾರಣೆ ಮಾಡಿದ ಗಾಜಿನ ವಾದ್ಯಗಳ ಗುಂಪಿಗೆ ಇದು ಸೇರಿದೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
Videos