ಆರ್ಮಾಂಡ್ ಹಿಪ್ಪೊಲೈಟ್ ಲೂಯಿ ಫಿಝೊ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆರ್ಮಾಂಡ್ ಹಿಪ್ಪೊಲೈಟ್ ಲೂಯಿ ಫಿಝೊ
ಆರ್ಮಾಂಡ್ ಹಿಪ್ಪೊಲೈಟ್ ಲೂಯಿ ಫಿಝೊ
ಜನನ೧೮೧೯ ಸೆಪ್ಟೆಂಬರ್ ೨೩
ಫ್ರಾನ್ಸ್
ಮರಣ೧೮೯೬ ಸೆಪ್ಟೆಂಬರ್ ೧೮
ರಾಷ್ಟ್ರೀಯತೆಫ್ರಾನ್ಸ್
ಕಾರ್ಯಕ್ಷೇತ್ರಗಳುಭೌತವಿಜ್ಞಾನಿ

ಫ್ರಾನ್ಸಿನ ಭೌತವಿಜ್ಞಾನಿಯಾಗಿದ್ದ ಆರ್ಮಾಂಡ್ ಹಿಪ್ಪೊಲೈಟ್ ಲೂಯಿ ಫಿಝೋರವರು ಪ್ಯಾರಿಸ್ಸಿನಲ್ಲಿ ೧೮೧೯ರ ಸೆಪ್ಟೆಂಬರ್ ೨೩ರಂದು ಜನಿಸಿದರು. ಅವರು ತಮ್ಮ ಅನೇಕ ಸಂಶೋಧನೆಗಳನ್ನು ಇನ್ನೊಬ್ಬ ವಿಜ್ಞಾನಿ ಲಿಯಾನ್ ಫೋಕಲ್ಟ್ (೧೮೧೯-೧೮೬೮) ಜೊತೆ ನಡೆಸಿದರು. ಅವರಿಬ್ಬರೂ ೧೮೪೫ರಲ್ಲಿ ಸೂರ್ಯನ ಮೊತ್ತಮೊದಲ ವಿವರವಾದ ಛಾಯಾಚಿತ್ರಗಳನ್ನು ಸೆರೆಹಿಡಿದರು. ಸೂರ್ಯನಿಂದ ಹೊರಹೊಮ್ಮುವ ಶಾಖದ ಕಿರಣಗಳು ವ್ಯತೀಕರಣಕ್ಕೆ (interference) ಒಳಗಾಗುತ್ತದೆ ಎಂಬುದಾಗಿ ಅವರಿಬ್ಬರೂ ೧೮೪೭ರಲ್ಲಿ ಕಂಡುಹಿಡಿದರು. ನಂತರ ಅವರಿಬ್ಬರೂ ಬೇರೆಯಾಗಿ ತಮ್ಮ ಪ್ರತ್ಯೇಕವಾದ ಪ್ರಯೋಗಗಳಲ್ಲಿ ನಿರತರಾದರು. ಆದ್ದರಿಂದ ಆ ಶಾಖದ ಕಿರಣಗಳು ಅಲೆಗಳಂತೆ ವರ್ತಿಸುತ್ತದೆ ಎಂಬ ವಿಷಯ ರುಜುವಾತಾಯಿತು.[೧] ಯಾವುದೇ ಚಲಿಸುವ ಬೆಳಕಿನ ಆಕರದ (ಉದಾ: ತಾರೆಗಳು) ಗೋಚರ ಆವೃತ್ತಿ (observed frequency) ಬದಲಾವಣೆಗೆ ಒಳಗಾಗುತ್ತದೆ.[೨] ಆ ಬದಲಾವಣೆಯನ್ನು ಆ ಬೆಳಕಿನ ಆಕರದ ರೋಹಿತರೇಖೆಗಳ ಪಲ್ಲಟದಿಂದ ಗುರುತಿಸಬಹುದಾಗಿದೆ ಎಂಬುದಾಗಿ ಫಿಝೋರವರು ೧೮೪೮ರಲ್ಲಿ ಕಂಡುಹಿಡಿದರು. ಬೆಳಕಿನ ವೇಗವನ್ನು ಕರಾರುವಾಕ್ಕಾಗಿ (೧೮೪೯ರಲ್ಲಿ) ಲೆಕ್ಕಾಚಾರ ಮಾಡಿದ ಹೆಗ್ಗಳಿಕೆ ಫಿಝೋರವರಿಗೆ ಸಲ್ಲುತ್ತದೆ. ಹಾಗೆಯೇ ಗಾಳಿಯಲ್ಲಿನ ಬೆಳಕಿನ ವೇಗ ನೀರಿನಲ್ಲಿನ ಬೆಳಕಿನ ವೇಗಕ್ಕಿಂತ ಜಾಸ್ತಿಯಾಗಿರುತ್ತದೆ ಎಂಬ ವಿಷಯವನ್ನೂ ಸಹ ಫಿಝೋರವರು ೧೮೫೦ರಲ್ಲಿ ಕಂಡುಹಿಡಿದರು. ಫಿಝೋರವರು ವೆಂಟೇಲ್‌ನಲ್ಲಿ ೧೮೯೬ರ ಸೆಪ್ಟೆಂಬರ್ ೧೮ರಂದು ನಿಧನರಾದರು.

ಉಲ್ಲೇಖಗಳು[ಬದಲಾಯಿಸಿ]