ಆರ್ಥರ್ ಎಡ್ವಿನ್ ಕೆನ್ನೆಲ್ಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆರ್ಥರ್ ಎಡ್ವಿನ್ ಕೆನ್ನೆಲ್ಲೆ
ಆರ್ಥರ್ ಎಡ್ವಿನ್ ಕೆನ್ನೆಲ್ಲೆ
Born
ಆರ್ಥರ್ ಎಡ್ವಿನ್ ಕೆನ್ನೆಲ್ಲೆ

೧೮೬೧ ಡಿಸೆಂಬರ್ ೧೭
ಬ್ರಿಟನ್
Nationalityಬ್ರಿಟನ್

ಬ್ರಿಟನ್ ಸಂಜಾತ ಮತ್ತು ಅಮೇರಿಕದ ಭೌತವಿಜ್ಞಾನಿ ಆರ್ಥರ್ ಎಡ್ವಿನ್ ಕೆನ್ನೆಲ್ಲೆಯವರು (ಭಾರತವನ್ನು ಬ್ರಿಟಿಷರು ಆಳುತ್ತಿದ್ದ ಕಾಲದಲ್ಲಿ) ೧೮೬೧ರ ಡಿಸೆಂಬರ್ ೧೭ರಂದು ಮುಂಬೈನ ಕೊಲಾಬಾದಲ್ಲಿ ಜನಿಸಿದರು. ಕೆನ್ನೆಲ್ಲೆಯವರು ೧೮೮೭ರಲ್ಲಿ ಅಮೇರಿಕದ ಪ್ರಜೆಯಾದರು.[೧] ನಮ್ಮ ಭೂಮಿಯ ವಾತಾವರಣದ ಮೇಲ್ಪದರದಲ್ಲಿ ವಿದ್ಯುದಾವೇಶದ ಕಣಗಳ ಪದರವೊಂದು ಅಸ್ತಿತ್ವದಲ್ಲಿದೆ, ಅವು ರೇಡಿಯೋ ತರಂಗಗಳನ್ನು ಪ್ರತಿಫಲಿಸಿ ಭೂಮಿಯ ಕಡೆಗೆ ವಾಪಸ್ಸು ಕಳುಹಿಸುತ್ತದೆ ಎಂಬುದಾಗಿ ಕೆನ್ನೆಲ್ಲೆಯವರು ಮತ್ತು ಆಲಿವರ್ ಹೆವಿಸೈಡ್‌ರವರು (೧೮೫೦-೧೯೨೫) ಪ್ರತ್ಯೇಕವಾಗಿ ೧೯೦೨ರಲ್ಲಿ ಪ್ರತಿಪಾದಿಸಿದರು. ಆದ್ದರಿಂದ ಆ ಪದರವನ್ನು ‘ಕೆನ್ನೆಲ್ಲೆ-ಹೆವಿಸೈಡ್ ಪದರ’ ಎಂಬುದಾಗಿ ಕರೆಯಲಾಯಿತು.[೨] ೧೦೦ಕಿ,ಮೀ.ಗಳ ಎತ್ತರದಲ್ಲಿ ಇರುವ ಆ ಪದರದ ಅಸ್ತಿತ್ವವನ್ನು ಕಂಡುಹಿಡಿದ ಎಡ್ವರ್ಡ್ ಆಪಲ್‌ಟನ್‌ರವರು (೧೮೯೨-೧೯೬೫) ೧೯೨೪ರಲ್ಲಿ ದೃಢಪಡಿಸಿದರು. ನಂತರದ ದಿನಗಳಲ್ಲಿ ಆ ಪದರವನ್ನು ‘ಅಯಾನುಗೋಳ’ ಎಂದು ಕರೆಯಲಾಗಿದೆ. ಕೆನ್ನೆಲ್ಲೆಯವರು ೧೯೩೯ರ ಜೂನ್ ೧೮ರಂದು ಮೆಸಾಚುಸೆಟ್ಸ್‌ನ ಬಾಸ್ಟನ್‌ನಲ್ಲಿ ನಿಧನರಾದರು.

ಉಲ್ಲೇಖಗಳು[ಬದಲಾಯಿಸಿ]