ಆರ್ಡ್ವಾರ್ಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಆರ್ಡ್ವಾರ್ಕ್

ಈಡೆಂಟೇಟ ಉಪವರ್ಗದ, ಆರಿಕ್ಟೆರೊಪೋಡಿಡೀ ಕುಟುಂಬಕ್ಕೆ ಸೇರಿದ, ಒಂದು ಗೆದ್ದಲು ಬಾಕ ಸ್ತನಿ. ಆರಿಕ್ಟೊರೊಪಸ್ ಏಫರ್ ಇದರ ಶಾಸ್ತ್ರೀಯ ಹೆಸರು. ಇದು ದಕ್ಷಿಣ ಆಫ್ರಿಕ ಖಂಡಕ್ಕೆ ಮಾತ್ರ ಮೀಸಲಾಗಿದೆ.[೧]

ಪ್ಲೈಯೋಸೀನ್ ಕಾಲದ ಕಡೆಯ ಭಾಗದಿಂದಲೂ ಇದರ ಉತ್ತಮ ಅವಶೇಷಗಳು ದೊರೆತಿವೆ. ಅತ್ಯಂತ ದೊಡ್ಡ ಶರೀರ, ಉದ್ದವಾದ ಮೂತಿ. ಶರೀರದ ಮೇಲೆ ತೆಳುವಾಗಿ ರೋಮಗಳು ಹರಡಿಕೊಂಡಿವೆ. ಕಿವಿಗಳು ಉದ್ದ.[೨] ಬೆನ್ನು ಕಮಾನಿನಂತೆ ಬಾಗಿದೆ. ಮುಂದಿನ ಕಾಲಿನಲ್ಲಿ ೪ ಬೆರಳು, ಹಿಂದಿನ ಕಾಲಿನಲ್ಲಿ 5 ಬೆರಳು. ಹಲ್ಲುಗಳಿಗೆ ಬೇರುಗಳಿಲ್ಲ. ಮೇಲುದವಡೆಯಲ್ಲಿ ೮-೧೦ ಹಲ್ಲುಗಳು ಇವೆ. ಹಗಲು ವೇಳೆಯಲ್ಲಿ ಚಿಕ್ಕ ಚಿಕ್ಕ ಗುಹೆಗಳಲ್ಲಿ ನಿದ್ರಿಸಿದ್ದು ರಾತ್ರಿಯ ಕಾಲದಲ್ಲಿ ಮಾತ್ರ ಹೊರಗೆ ಬಂದು ಗೆದ್ದಲು ಮತ್ತು ಇರುವೆಗಳನ್ನು ತಿಂದು ಬದುಕುತ್ತದೆ. ಇತ್ತೀಚೆಗೆ ಇವುಗಳ ಸಂಖ್ಯೆ ಕ್ಷೀಣಿಸುತ್ತಿದೆ.

ಉಲ್ಲೇಖಗಳು[ಬದಲಾಯಿಸಿ]

  1. http://www.awf.org/wildlife-conservation/aardvark
  2. http://news.bbc.co.uk/2/hi/science/nature/2676377.stm