ಆರ್ಡೊವಿಶಿಯನ್ ಸ್ತೋಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆರ್ಡೊವಿಶಿಯನ್ ಸ್ತೋಮ ಎಂದರೆ ಪುರಾತನ ಜೀವಿಯುಗದ (ಪೇಲಿಯೊಜೋಯಿಕ್) (ಸು.230-600 ದಶಲಕ್ಷ ವರ್ಷಗಳವರೆಗೆ ಹಿಂದಿನ ಕಾಲ) ಎರಡನೆಯ ವ್ಯವಸ್ಥೆಯ ಕಲ್ಲುಗಳಿಗೆ ಭೂವಿಜ್ಞಾನದಲ್ಲಿ ಇರುವ ಹೆಸರು. ಕೇಂಬ್ರಿಯನ್ ಅನಂತರ ಆರ್ಡೊವಿಶಿಯನ್ ಮತ್ತು ಇದರ ಅನಂತರ ಸ್ಮೆಲೂರಿಯನ್ ಬರುತ್ತದೆ. ಆರ್ಡೊವಿಶಿಯನ್ ಯುಗದ ಕಾಲ ಸುಮಾರು 425-500 ದಶಲಕ್ಷ ವರ್ಷಗಳಷ್ಟು ಹಿಂದೆ.

ಹಿನ್ನೆಲೆ[ಬದಲಾಯಿಸಿ]

19ನೆಯ ಶತಮಾನದ ಆದಿಯಲ್ಲಿ ಹಳೆಯ ಕೆಂಪು ಮರಳು ಶಿಲಾಸ್ತೋಮದ ಕೆಳಗಿನ ಶಿಲೆಗಳನ್ನು ಮಧ್ಯಂತರ ಶಿಲೆಗಳೆಂದು ಪರಿಗಣಿಸಲಾಗಿತ್ತು. 1831ರಲ್ಲಿ ಮರ್ಚಿಸನ್ ಈ ಶಿಲಾಸ್ತೋಮಗಳ ತುದಿಯಿಂದ ಕೆಳಮುಖವಾಗಿ ಪರಿಶೋಧಿಸಿ ದೊರೆತ ಶಿಲೆಗಳನ್ನೆಲ್ಲ ಸೈಲೂರಿಯನ್ ಸ್ತೋಮಗಳಲ್ಲಿ ಸೇರಿಸಿದ. ಅದೇ ಕಾಲದಲ್ಲಿ ಆಡಂ ಸೆಡ್ಜ್‍ವಿಕ್ ಮಧ್ಯಂತರ ಶಿಲಾಸ್ತೋಮಗಳ ತಳದಿಂದ ಮೇಲ್ಮುಖವಾಗಿ ಪರಿಶೋಧಿಸಿ ದೊರೆತ ಶಿಲೆಗಳಿಂದ ಕೇಂಬ್ರಿಯನ್ ಸ್ತೋಮಗಳೆಂದು ಹೆಸರಿದೆ. ಮರ್ಚಿಸನ್ ಸೈಲೂರಿಯನ್ ಸ್ತೋಮದ ಅಂತ್ಯಭಾಗವಾಗಿ ಸೇರಿಸಿದ್ದ, ಇದರಿಂದ ಕೇಂಬ್ರಿಯನ್-ಸೈಲೂರಿಯನ್ ಸೀಮಾ ಸಮಸ್ಯೆ ಉಂಟಾಯಿತು. 1879ರಲ್ಲಿ ಲ್ಯಾಪ್‍ವರ್ತ್ ಒಂದು ರಾಜೀಸೂತ್ರ ಮುಂದಿಟ್ಟ. ಸೆಡ್ಜ್‍ವಿಕ್- ಮರ್ಜಿಸನ್ ಮಧ್ಯೆ ವಿವಾದಕ್ಕೆ ಎಡೆಗೊಟ್ಟ ಶಿಲೆಗಳನ್ನು ಕೇಂಬ್ರಿಯನ್ ಮತ್ತು ಸೈಲೂರಿಯನ್ ಎರಡರಿಂದಲೂ ಬೇರ್ಪಡಿಸಿ ಅವುಗಳಿಗೆ ಆರ್ಡೊವಿಶಿಯನ್ ಸ್ತೋಮಗಳು ಎಂದು ಹೆಸರಿಟ್ಟ. ಹೀಗೆ ಮಧ್ಯಂತರ ಸ್ತೋಮಗಳನ್ನು ಕೇಂಬ್ರಿಯನ್, ಆರ್ಡೊವಿಶಿಯನ್ ಮತ್ತು ಸೈಲೂರಿಯನ್ ಎಂಬ ಮೂರು ಭಾಗಗಳನ್ನಾಗಿ ವಿಭಜಿಸುವ ಸೂತ್ರಕ್ಕೆ ಎಲ್ಲೆಲ್ಲಿಯೂ ಮನ್ನಣೆ ದೊರೆತಿದೆ. ಆದರೆ ಜರ್ಮನಿಯಲ್ಲಿ ಆರ್ಡೊವಿಶಿಯನ್ ಸ್ತೋಮಗಳನ್ನು ಈಗಲೂ ಸೈಲೂರಿಯನ್ ಸ್ತೋಮದ ಕೆಳ ಭಾಗವೆಂದು ಕರೆಯಲಾಗುತ್ತಿದೆ.[೧]

ಕಾಲಘಟ್ಟ[ಬದಲಾಯಿಸಿ]

ಆರ್ಡೊವಿಶಿಯನ್ ಸ್ತೋಮದ ಎಲ್ಲೆಗಳು ಅಷ್ಟು ಖಚಿತವಾಗಿಲ್ಲ. ಬ್ರಿಟಿಷ್ ಭೂವಿಜ್ಞಾನಿಗಳು ಈ ಸ್ತೋಮಗಳ ಕೆಳ ಎಲ್ಲೆಯನ್ನು ಟ್ರಿಮಡಾಕ್ ಶಿಲೆಗಳ ಮೇಲೆ ಎಳೆಯುತ್ತಾರೆ. ಈ ಶಿಲೆಗಳ ಅನುರೂಪತೆಯೇ ಇಂಥ ನಿರ್ಧಾರಕ್ಕೆ ಆಧಾರ. ಹೀಗೆ ಬ್ರಿಟಿಷ್ ದ್ವೀಪಗಳಲ್ಲಿ ಅರ್ಡೊವಿಶಿಯನ್ ಸ್ತೋಮ ಟ್ರಿಮಡಾಕ್ ಶಿಲೆಗಳ ಅನಂತರ ಪ್ರಾರಂಭವಾಗಿ ನಿಯೊಬೆ ಮತ್ತು ಮಲೊಮ ಎಂಬ ವಿಶಿಷ್ಟ ಟ್ರೈಲೊಬೈಟ್‍ಗಳ ಅವಶೇಷ್‍ಗಳಿಂದ ಕೂಡಿದೆ, ಆದರೆ ಟ್ರಿಮಡಾಕ್ ಶಿಲೆಗಳ ಮೇಲ್ಪದರಗಳಲ್ಲಿ ಡಿಕ್ಟಿಯೊನೀಮ ಫಾಬೆಲಿಪಾರ್ಮೆ ಎಂಬ ಗ್ರಾಪ್ಟೊಲೈಟ್ ಪ್ರಾಣಿಗಳ ಅವಶೇಷಗಳಿವೆ. ಸ್ಕಾಂಡಿನೇವಿಯ ಮತ್ತು ಯೂರೋಪ್ ಖಂಡಭಾಗಗಳಲ್ಲಿ ಡಿಕ್ಟಿಯೊನೀಮ ಇರುವ ಪದರುಗಳನ್ನು ಆರ್ಡೊವಿಶಿಯನ್ ಪದರಗಳಲ್ಲಿ ಸೇರಿಸಲಾಗಿದೆ.[೨]

ಟಕೋನಿಯನ್ ಪ್ರಳಯ ಕಾಲ[ಬದಲಾಯಿಸಿ]

ಉತ್ತರ ಅಮೆರಿಕಾದದಲ್ಲಿ ಪ್ರಿಕೇಂಬ್ರಿಯನ್ ಕಾಲದ ಅನಂತರ, ಅರ್ಡೊವಿಶಿಯನ್ ಕಾಲದ ಮಧ್ಯಭಾಗದಲ್ಲಿ ಗಮನಾರ್ಹ ಜ್ವಾಲಾಮುಖಿ ಕಾರ್ಯಾಚರಣೆ ನಡೆಯಿತು. ಜ್ವಾಲಾಮುಖಿಗಳು ಬೂದಿಯನ್ನು ಹೊರಚೆಲ್ಲಿದವು. ಈ ಬೂದಿ ಸಾಗರ ನಿಕ್ಷೇಪಗಳ ಮಧ್ಯೆ ನೆಲೆನಿಂತು ಬೆಂಟೊನೈಟ್ ಶಿಲೆಗಳಾಗಿ ಮಾರ್ಪಟ್ಟಿರುತ್ತದೆ. ಆರ್ಡೊವಿಶಿಯನ್ ಕೊನೆಯ ಕಾಲದಲ್ಲಿ ಭೂಚಲನೆಯೂ ಉಂಟಾಯಿತು. ಕೇಂಬ್ರಿಯನ್ ಮತ್ತು ಆರ್ಡೊವಿಶಿಯನ್ ಶಿಲೆಗಳು ಈ ಚಲನೆಗೆ ಸಿಕ್ಕ ಪರ್ವತಗಳ ರೂಪದಲ್ಲಿ ಮೇಲೆ ಒಗೆಯಲ್ಪಟ್ಟಿವೆ. ಈ ಭೂ ಚಲನೆಯನ್ನು ಟಕೋನಿಯನ್ ಪ್ರಳಯ ಕಾಲವೆಂದು ಕರೆಯಲಾಗಿದೆ.

ವಿಶಾಲ ಭೂಪ್ರದೇಶಗಳ ನಿರ್ಮಾಣ[ಬದಲಾಯಿಸಿ]

ಬ್ರಿಟಿಷ್ ದ್ವೀಪಗಳಲ್ಲಿ ಈ ಕಾರ್ಯ ಆರ್ಡೊವಿಶಿಯನ್ ಕಾಲದ ಆದಿಯಲ್ಲೇ ಪ್ರಾರಂಭವಾಯಿತು. ಇದರ ಪರಿಣಾಮವಾಗಿ ಶಿಲೆಗಳಲ್ಲಿ ತೀವ್ರತರ ಮಡಿಕೆಗಳುಂಟಾಗಿರುವುದೇ ಅಲ್ಲದೆ, ನಿಕ್ಷೇಪಕಾರ್ಯವೂ ನಿಂತುಹೋಗಿರುತ್ತದೆ. ಈ ಮಡಿಕೆಗಳು ಈಶಾನ್ಯ-ನೈಋತ್ಯಾಭಿಮುಖವಾಗಿದ್ದು, ಸೈಲೂರಿಯನ್ ಕಾಲದ ಅಂತ್ಯದಲ್ಲಿ ನಡೆದ ಕಲೆಡೋನಿಯನ್ ಭೂಚಲನೆಯನ್ನು ಮುನ್ಸೂಚಿಸುತ್ತದೆ. ಬ್ರಿಟಿಷ್ ದ್ವೀಪಗಳಲ್ಲಿ ಜ್ವಾಲಾಮುಖಿ ಕಾರ್ಯಾಚರಣೆ ಎರಡು ಹಂತಗಳಲ್ಲಿ ನಡೆದಿದೆ. ಮೊದಲನೆಯದು ಲೇನೊವಿರ್ನಿಯನ್ ಕಾಲದಲ್ಲಿ. ಇದು ಮುಖ್ಯವಾಗಿ ದಕ್ಷಿಣ ಭಾಗಕ್ಕೆ ಮಿತಿಗೊಂಡಿದೆ. ಗ್ರೀನ್‍ಸ್ವೋನ್ ಮತ್ತು ಪೆಲ್ಸೈಟ್‍ಗಳು ಇಲ್ಲಿನ ಮುಖ್ಯ ಜ್ವಾಲಾಮುಖಿ ಶಿಲೆಗಳು. ಈ ಶಿಲೆಗಳಿಗೆ ಸ್ಪಿಲಿಟಿಕ್ ಶಿಲಾ ವರ್ಗವೆಂದು ಹೆಸರು. ಶಿಲಾರಸದ ಉಗುಳುವಿಕೆಯಿಂದ ನಿಕ್ಷೇಪ ಪ್ರದೇಶಗಳ ತಳ ಕುಸಿಯತೊಡಗಿತು. ಎರಡನೆಯ ಲ್ಯಾಂಡೈಲೊ ಕಾಲದಲ್ಲಿ ಪ್ರಾರಂಭವಾಗಿ ಬಾಲಾ ಕಾಲದ ಆದಿಯಲ್ಲಿ ಕೊನೆಗೊಂಡಿತು. ಈ ಕಾಲದಲ್ಲಾದ ಜ್ವಾಲಾಮುಖಿಜ ಶಿಲೆಗಳಿಗೆ ಆಂಡೆಸಿಟಿಕ್ ಅಥವಾ ಪೆಸಿಪಿಕ್ ಶಿಲಾವರ್ಗವೆಂದು ಹೆಸರು. ಈ ಕಾರ್ಯಾಚರಣೆ ಶಿಲೆಯನ್ನು ಸ್ತರಭಂಗಗೊಳಿಸಿ, ಬೇರ್ಪಟ್ಟ ಶಿಲಾಭಾಗಗಳು ಬಹುದೂರ ನುಣುಚಿ ಹೋಗುವಂತೆ ಮಾಡಿದೆ. ಈ ಕಾಲದ ಅಂತ್ಯದಲ್ಲಿ ವಿಶೇಷ ಭೂಚಲನೆಯುಂಟಾಗಿ, ವಿಶಾಲ ಭೂಪ್ರದೇಶಗಳು ನಿರ್ಮಾಣವಾದವು.[೩]

ಅರ್ಡೊವಿಶಿಯನ್ ಕಾಲದಲ್ಲಿ ಸಾಗರಗಳು ವಿಶಾಲವಾಗಿಯೂ ಭೂಭಾಗಗಳು ಕಿರಿದಾಗಿಯೂ ಇದ್ದುದರಿಂದ ಸಾಗರಾಂತರ ವಾಯುಗುಣವಿದ್ದಿರಬೇಕೆಂದು ಹೇಳಬಹುದು. ಈ ವಾಯುಗುಣ ಸಮಶೀತೋಷ್ಣವಾಗಿ ಇದ್ದಿರಬೇಕು; ಏಕೆಂದರೆ ಉತ್ತರ ಅಮೆರಿಕದ ಶೀತಲವಯ ಪ್ರದೇಶಗಳಲ್ಲಿ ಸಹ, ಸಾಮೂಹಿಕವಾಗಿ ಹವಳಗಳಿರುವುದು ಕಂಡುಬಂದಿದೆ. ಪ್ರಪಂಚದ ನಾನಾಕಡೆಗಳಲ್ಲಿ ಸುಣ್ಣಶಿಲೆ, ಡಾಲೊಮೈಟ್ ಮತ್ತು ಕೆಲವು ಜೀವ್ಯವಶೇಷಗಳನ್ನೊಳಗೊಂಡ ಶಿಲೆಗಳು ಇರುವ ಪ್ರಯುಕ್ತ, ಪ್ರಪಂಚದಲ್ಲೆಲ್ಲ ಏಕ ರೀತಿಯ ವಾಯುಗುಣವಿದ್ದಿರಬೇಕೆಂದು ಹೇಳಬಹುದು.

ಈ ಕಾಲದಲ್ಲಾದ ಭೂಚಲನೆಗಳು ಮತ್ತು ಪರ್ವತಗಳ ಅವತರಣಿಕೆ ನಿಕ್ಷೇಪ ಕಾರ್ಯಗಳಲ್ಲೂ ಭೂ ಮತ್ತು ಜಲಸನ್ನಿವೇಶಗಳ ಮೇಲೂ ಸಾಕಷ್ಟು ಪ್ರಭಾವ ಬೀರಿವೆ. ಇದರಿಂದ ಪ್ರಾಣಿಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಲಸೆ ಹೋಗಲು ಅಡ್ಡಿಯುಂಟಾಯಿತು. ಆದ್ದರಿಂದ ಈ ಕಾಲದ ನಿಕ್ಷೇಪಗಳಲ್ಲಿ ವಿವಿಧ ಮುಖಗಳುಂಟಾದವು. ಅವುಗಳಲ್ಲಿ ಮುಖ್ಯವಾದವು ಎರಡು. ಒಂದನೆಯದು ಸಾಗರ ಆಳದ ನಿಕ್ಷೇಪ ಮುಖ್ಯವಾಗಿ ಜೇಡಿನಿಂದ ಕೂಡಿ, ಗ್ರಾಪ್ಟೊಲೈಟ್ ಅವಶೇಷಗಳನ್ನು ಹೊಂದಿವೆ. ಎರಡನೆಯದು ತೀರ ನಿಕ್ಷೇಪ. ಇದು ಮರಳುಶಿಲೆ ಅಥವಾ ಸುಣ್ಣಶಿಲೆಗಳಿಂದ ಕೂಡಿದೆ. ಕೆಲವು ಕಡೆ ಅವೆರಡೂ ಕೂಡಿ ಇರುವುದೂ ಉಂಟು. ಇದರಲ್ಲಿ ಗ್ರಾಪ್ಟೊಲೈಟ್‍ಗಳ ಅವಶೇಷಗಳಿರುವುದಿಲ್ಲ; ಟ್ರೈಲೊಬೈಟ ಮತ್ತು ಬ್ರೇಕಿಯೊಪೋಡಗಳ ಅವಶೇಷಗಳೇ ಹೆಚ್ಚಾಗಿವೆ.

ಸಾಗರಗಳು[ಬದಲಾಯಿಸಿ]

ಉತ್ತರ ಅಮೆರಿಕದಲ್ಲಿ ಕೇಂಬ್ರಿಯನ್ ಯುಗದ ಅಂತ್ಯದಲ್ಲಿ ಸಾಗರಗಳು ಭೂಭಾಗಗಳಿಂದ ನಿರ್ಗಮಿಸಿದವು. ಆದರೆ ಈ ನಿರ್ಗಮನವಾದ ಸ್ವಲ್ಪ ಕಾಲದಲ್ಲಿಯೇ ಅಂದರೆ ಆರ್ಡೊವಿಶಿಯನ್ ಕಾಲದ ಆದಿಯಲ್ಲಿ ಭೂಭಾಗದ ಮೇಲೆ ಸಾಗರಾಕ್ರಮಣವಾಯಿತು. ಈ ಬಾರಿ ಕೇಂಬ್ರಿಯನ್ ಕಾಲದಲ್ಲಿದ್ದ ಕಾರ್ಡಿಲೆರಾನ್ ಮತ್ತು ಅಪಲೇಷಿಯನ್ ನಿಕ್ಷೇಪ ಪ್ರಾಂತ್ಯಗಳನ್ನಷ್ಟೇ ಅಲ್ಲದೆ ಅವುಗಳನ್ನು ಬೇರ್ಪಡಿಸಿದ್ದ ಕ್ಯಾಸ್ಕಡಿಯನ್ ಭೂಭಾಗವನ್ನು ಸಾಗರಗಳು ಆಕ್ರಮಿಸಿಕೊಂಡವು. ಆದರೆ ಪೂರ್ವಭಾಗದಲ್ಲಿ ಅಪಲೇಶಿಯನ್ ಪ್ರಾಂತವೊಂದನ್ನುಳಿದು ಮಿಕ್ಕ ಕಡೆಗಳಲ್ಲಿ, ಆರ್ಡೊವಿಶಿಯನ್ ಮಧ್ಯಭಾಗದಲ್ಲಿ ಈ ಆಕ್ರಮಣ ತೆರವು ಮಾಡಲ್ಪಟ್ಟಿತು. ಅರ್ಡೊವಿಶಿಯನ್ ಅಂತ್ಯಕಾಲದಲ್ಲಿ ಉಳಿದ ಸಾಗರ ಆರ್ಡೊವಿಶಿಯನ್ ಸ್ತೋಮ

ಉಲ್ಲೇಖಗಳು[ಬದಲಾಯಿಸಿ]

  1. https://www.livescience.com/37584-paleozoic-era.html
  2. https://ucmp.berkeley.edu/paleozoic/paleozoic.php
  3. https://www.scifacts.net/timelines/paleozoic/