ವಿಷಯಕ್ಕೆ ಹೋಗು

ಆರ್ಟೆಮಿಸ್ ಕೂಪರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

thumb|ಆರ್ಟೆಮಿಸ್

ಪ್ರಾರಂಭಿಕ ಪರಿಚಯ[ಬದಲಾಯಿಸಿ]

ಆರ್ಟೆಮಿಸ್ ಕೂಪರ್ ರವರು ೨೨ ಏಪ್ರಿಲ್ ೧೯೫೩ ಲಂಡನ್ ನಲ್ಲಿ ಜನಿಸಿದರು. ಅವರು ಒಬ್ಬ ಬ್ರಿಟೀಷ್ ಬರಹಗಾರ್ತಿ ಅವರ ತಂದೆ ಏರಡನೇ ವಿಸ್ಕೌಂಟ್ ನಾರ್ವಿಚ್ ಮತ್ತು ಅವರ ತಾಯಿ ಆನ್ನೆ (ನೀ ಕ್ಲಿಫರ್ಡ್) ಮತ್ತು ಅವರಿಗೆ ಒಬ್ಬ ಸಹೋದರ ಇದ್ದನು, ಅವನ ಹೆಸರು ಹಾನ್. ಅವರು ಒದುವುದರಲ್ಲಿ ಬಹಳ ಉತ್ತಮವಾಗಿದ್ದರು.ಅವರು ಆಕ್ಸ್ಪ್ ರ್ಡ್ ಸೇಂಟ್ ಹೊಗ್ ಕಾಲೇಜಿಗೆ ತೆರೆಳಿದರು ಮತ್ತು ಇಂಗ್ಲೀಷ್ ಭಾಷೆ ಮತ್ತು ಸಾಹಿತ್ಯದಲ್ಲಿ ಪದವಿಯನ್ನು ಪಡೆದರು ಇವರು ೧೯೮೬ ರಲ್ಲಿ ಅವರ ಸಹಲೇಖಕ ಮತ್ತು ಹಿತಿಹಾಸಕಾರ ಆಂಥೋನಿ ಬೀವರ್ರನ್ನು ವಿವಾಹವಾದರು.[೧] ಈ ದಂಪತಿಗೆ ಇಬ್ಬರು ಮಕ್ಕಳು. ಗಂಡು ಮಗುವಿನ ಹೆಸರು ಆಡಮ್ ಮತ್ತು ಹೆಣ್ಣು ಮಗುವಿನ ಹೆಸರು ನೆಲ್ಲಾ. ಇವರಿಗೆ ಚಿಕ್ಕಂದಿನಿಂದಲೆ ಪುಸ್ತಕ ಓದುವುದು ಮತ್ತು ಬರೆಯುವುದೆಂದರೆ ತುಂಬ ಇಷ್ಹ್ತ. ಮೊಟ್ಟಮೊದಲನೆಯದಾಗಿ ಇವರಿಗೆ ಕೃತಿಗಳನ್ನು ಬರೆಯುವುದಕ್ಕೆ ಸ್ಪೂರ್ತಿಯಾದವರು ಅವರ ತಂದೆ ತಾಯಿ ಅಜ್ಜ ಮತ್ತು ಅಜ್ಜಿ . ಅವರ ಜೀವನದಲ್ಲಿ ನಡೆಯುತ್ತಿದ್ದ ಘಟನೆಗಳನ್ನು ಇವರ ಭಾವಕ್ಕೆ ಅನುಸಾರವಾಗಿ ಅನುವಾದಿಸಿ ತಮ್ಮ ಕೃತಿಗಳನ್ನು ತಮ್ಮದೆ ಆದ ಅದ್ಬುತ ಶೈಲಿಯಲ್ಲಿ ಪ್ರಕಟಿಸುತ್ತಿದ್ದರು.

ಪುಸ್ತಕಗಳು ಹಾಗು ಪ್ರಕಟನೆಗಳು[ಬದಲಾಯಿಸಿ]

ಅವರ ಮೊದಲ ಪುಸ್ತಕ ಅವರ ಅಜ್ಜಿ ಡಫ಼್ ಮತ್ತು ಡಯಾನ ಕೂಪರ್ನ ಪ್ರತಿಗಳ ಒಂದು ಆವೃತ್ತಿಯಾಗಿದೆ. ಇದನ್ನು "ಎ ಡ್ಯೂರಬಲ್ ಪೈರ್" ಎಂದು ಕರೆಯಲಾಗುತ್ತಿತ್ತು. ೧೯೩೯ - ೧೯೪೫ ರಲ್ಲಿ ಕೈರೋದಲ್ಲಿ ನಡೆದ ಮಹಾಯುದ್ದದ ಬಗ್ಗೆ ಸಂಶೋದನೆ ನಡೆಸಿ ತಮ್ಮ ಕೃತಿಗಳಲ್ಲಿ ಸಂಕ್ಷಿಪ್ತವಾಗಿ ೧೯೮೯ರಲ್ಲಿ ವಿವರಿಸಿ ಪ್ರಕಟಿಸಿದ್ದಾರೆ. ಇತರ ಬರಹಗಾರರು ಕೂಡ ಇದರ ಬಗ್ಗೆ ಸಂಶೋದನೆ ನಡೆಸಿದ್ದರೆ, ಅದರಲ್ಲಿ ಇವರುಕೂಡ ಒಬ್ಬರು ೧೯೯೦ ಅವರ ಮಗಳಾದ ಎಲೀನರ್ ಅರೋಗ್ಯ ದಕ್ಕೆಂದ ಇಪ್ಪತ್ತು ನಾಲ್ಕು ಘಂಟೆಯಲ್ಲಿ ಸಾವಿನ ಅಂಚಿಗೆ ಹೋದಾಗ ಇವರು ಈ ಪುಸ್ತಕದ ಮೇಲೆ ಕೆಲಸ ಮಾದುತ್ತಿದ್ದರು ಇದನ್ನು ಅವರು ೧೯೯೨ರಲ್ಲಿ ಬಿಡುಗಡೆ ಮಾಡಿದ "ಎ ಚೈಲ್ಡ್ಸ್ ಫ಼ೇಟ್ ಫಾರ್ ಲೈಫ್" ಎಂಬ ಪುಸ್ತಕದಲ್ಲಿ ಈ ಸಂಘಟನೆ ಕುರಿತು ಸಂಪೂರ್ಣವಾಗಿ ಬರೆದಿದ್ದಾರೆ . ಇವರ ಜೀವನದಲ್ಲಿ ಆ ಘಟನೆಯ ಕೆಲವು ವರ್ಷಗಳ ನಂತರ ೧೯೯೪ರಲ್ಲಿ ನಗರ ವಿಮೋಚನೇಯ ೫೦ನೇ ವಾರ್ಷಿಕೋತ್ಸವದಂದು ಒಂದು ಪುಸ್ತಕ ಬಿಡುಗಡೆ ಮಾಡುವಂತೆ ಆಯೋಜಿಸುತ್ತಾರೆ. ಆದರೆ ಅವರು ಗರ್ಭಿಣಿಯಾಗಿದ್ದ ಕಾರಣ ತಮ್ಮ ಪುಸ್ತಕದ ಮೇಲೆ ಕೆಲಸ ಮಾಡಲು ಅಸಾದ್ಯಾರಾಗಿದ್ದರು. ಆಗ ಅವರೆಲ್ಲ ಗಂಡನಾದ ಆಥೋನಿಯವರು ಅವರ ಸಹಾಯಕ್ಕೆ ಬಂದರು. ಆ ಸಮಯದಲ್ಲಿ ಒಬ್ಬ ಪತಿಯಾಗಿ ಮಾಡಬೇಕಾದ ಎಲ್ಲ ಕೆಲಸಗಳನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದರು. ಕೂಪರ್ ರವರ ನೊವಿನಲ್ಲಿ ತನ್ನ ಗಂಡನಾದ ಆಥೋನಿರವರು ಭಾಗಿಯಾಗಿದ್ದರು.

ನಂತರ ಆ ಕೃತಿಯನ್ನು ಪ್ರಕಟಿಸಿದರು. ಆದಕಾರಣ "ಪ್ಯಾರೀಸ್ ಆಪ್ಟರ್ ದಿ ಲಿಬರೇಷನ್" ಎಂಬ ಪುಸ್ತಕ ಬಿಡುಗಡೆ ಆಯಿತು. ಇವರು ಮೊದಲು ಬರೆದ ಜೀವನ ಚರಿತ್ರೆ ಎಲಿಜಬೆತ್ ಡೇವಿಡ್ ರವರದ್ದು. ಇದು ೧೯೯೯ರಲ್ಲಿ ಹೊರಬಂದಿತು. ಆನಂತರ ಅವರಿಗೆ ಪ್ಯಾಟ್ರಿಕ್ ಲೇಫ಼್ ಫೆರ್ಮೋರ್ರ ಜೀವನ ಚರೆತ್ರೆಯನ್ನು ಬರೆಯುವ ಅವಕಾಶ ಸಿಕ್ಕಿತು ಇದು ಅವರ ಜೀವನದ ಒಂದು ಅತ್ಯುತ್ತಮ ಅವಕಾಶವೆಂದು ಅವರಿಗೆ ತಿಳಿದಿತ್ತು, ಆದರೆ ಅವರಿಗೆ ತನಗೆ ಕೊಟ್ಟಿರುವ ಕೆಲಸವನ್ನು ಉತ್ತಮ ಹಾಗು ಉನ್ನತ ರೀತಿಯಲ್ಲಿ ಮಾಡುತ್ತಾರೆಂಬ ನಂಬಿಕೆ ಇರಲಿಲ್ಲ.

[೨] ಆಕೆಗೆ ಪ್ಯಾಡಿ ಎಂಬ ಸ್ನೇಹಿತ ಇದ್ದನು.ಆತನ ಅತ್ಯುತ್ತಮ ಬರಹಗಳ ಪುಸ್ತಕವನ್ನು ಸಂಪದಿಸಿದರು.ಮಾರ್ಚ್ ೨೦೧೩ರಲ್ಲಿ ಅವರ ಕಾದಂಬರಿಕಾರ ಏಲಿಜಿಬೆತ್ ಜೇನ್ ಹೊವಾರ್ಡ್ ಅವರ ಜೀವನಚರಿತ್ರೆಯನ್ನು ಬರೆಯಲು ಪ್ರಾರಂಬಿಸಿದರು.ಇದನ್ನು ೨೦೧೬ರಲ್ಲಿ ಪ್ರಕಟಿಸಲಾಯಿತು .ಕೂಪರ್ನ ಮೊದಲ ಪುಸ್ತಕವು ಅವಳ ಅಜ್ಜಿ ಲೇಡಿ ಡಯಾನಾ ಕೂಪರ್ನ ಪತ್ರಗಳ ಸಂಗ್ರಹವಾಗಿದೆ.ಪ್ಯಾಟ್ರಿಕ್ ಲೇಫ಼್ ಫೆರ್ಮೋರ್ ರವರ ಜೀವನ ಚರಿತ್ರೆ ೨೦೧೨ರಲ್ಲಿ ಕಾಣಿಸಿಕೊಂಡಾಗ ಅದು ಬಿಬಿಸಿ ರೇಡಿಯೊ ೪ರಲ್ಲಿ ದಾರವಾಹಿಯಗಿತ್ತು ಸೆಪ್ಟ್ಂಬರ್ ೨೦೧೩ರಲ್ಲಿ "ದಿ ಬ್ರೋಕನ್ ರೋಡ್" ನಿಂದ ಇದು ನಡೆಯುತು. ೧೯೩೦ರಲ್ಲಿ ಇದು ಹಾಲೆಂಡ್ ಆಫ಼್ ಹುಕ್ನಿಂಡ ಇಸ್ತಾನ್ಬುಲ್ಗೆ ವಾಕಿಂಗ್ ಟ್ರಿಪ್ ನ ಮೂರನೆಯ ಪರಿಮಾಣದ ಪರಿಣಾಮಕಾರಿಯಾಗಿತ್ತು. ೨೦೧೭ರಲಲ್ಲಿ ಕೂಪರ್ ರವರು ರಾಯಲ್ ಸೊಸೈಟಿ ಆಫ಼್ ಲಿಟರೇರ್ಚ್ ನ ಫೆಲೋ ಆಗಿ ಆಯ್ಕೆಯಾದರು.

ಉಲೇಖಗಳು[ಬದಲಾಯಿಸಿ]