ಆರ್ಕ್ಟೋಟಿಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸುಂದರ ಬೂದು ಹಸುರು ಬಣ್ಣದ ಎಲೆಗಳನ್ನು ಹೊಂದಿರುವ ಗಿಡ (ಬ್ಲೂ ಐಡ್ ಆರ್ ಟ್ರಾನ್ಸವಾಲ್ ಡೈಸಿ). ಹೂಗಳ ಆಕಾರ ದೊಡ್ಡದು. ಜರ್ಬೆರ ಹೂಗಳಂತಿವೆ; ನೀಲಿ ಬಿಳುಪು ಬಣ್ಣ. ಎಲೆಗಳಿಗಿಂತ ಮೇಲೆ ಬೆಳೆದಿರುತ್ತವೆ. ಇವು ರಾತ್ರಿವೇಳೆಯಲ್ಲಿ ಮುಚ್ಚಿಕೊಂಡು ಬೆಳಗಿನಲ್ಲಿ ಪುನಃ ಅರಳುತ್ತವೆ. ಹೀಗೆ ೪ ದಿವಸಗಳವರೆಗೂ ಇರುತ್ತವೆ. ಅನಂತರ ಬಾಡಿಹೋಗುತ್ತವೆ. ಇವು ಬಿಡಿ ಹೂಗಳಾಗಿ ಉಪಯೋಗಿಸಲು ಉಪಯುಕ್ತವಾಗಿವೆ. ಗಿಡ ವಸಂತ ಕಾಲದ್ದಾದರೂ ಚಳಿಗಾಲದಲ್ಲಿ ಚೆನ್ನಾಗಿ ಬೆಳೆಯುತ್ತದೆ. ಮೈದಾನ ಮತ್ತು ಎತ್ತರ ಪ್ರದೇಶಗಳಲ್ಲಿ ಇದನ್ನು ಚೆನ್ನಾಗಿ ಬೆಳೆಸಬಹುದು. ಹೂಗಳು ೩೧/೨ ತಿಂಗಳಲ್ಲಿ ಬರುತ್ತವೆ. ಗಿಡದಿಂದ ಗಿಡಕ್ಕೆ ೧೦-೧೨ ಅಂತರವಿಟ್ಟು ಇವನ್ನು ಮಡಿಗಳಲ್ಲಿ ಬೆಳೆಸಬಹುದು; ಇಲ್ಲವೆ ಕುಂಡಗಳಲ್ಲಾದರೂ ಬೆಳೆಸಬಹುದು. ಇದರಲ್ಲಿ ಆರ್ಕ್ಟೋಟಿಸ್ ಗ್ರಾಂಡಿಸ್ ಬಹು ಉತ್ತಮ ಜಾತಿ.