ವಿಷಯಕ್ಕೆ ಹೋಗು

ಆರ್ಕೀಡ್ ಹೂವುಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸೀತಾಳಿಹೂವು - Rhynchostylis retusa.

ಆರ್ಕೀಡೇಷಸ್ ಅಂದ್ರೆ ಆರ್ಕೀಡ್ ಎಂದರ್ಥ. ಆರ್ಕೀಡ್ ಹೂವುಗಳು ಎಂದರ್ಥ. ಇದರ ಕನ್ನಡ ಅರ್ಥ ಸೀತೆ ಹೂವಿನ ಗಿಡ, ಮರಬಾಳೆ ಗಿಡದ, ಸೀತಾಳೆ ಗಡ್ಡೆಯ, ಸಾಲಾಮಿಸ್ರಿಯಾ ಎಂಬೆಲ್ಲ ಅರ್ಥವನ್ನು ಸೂಚಿಸುತ್ತದೆ. ಆರ್ಕೀಡ್ ಎಂದರೆ ಸೀತೆ ಹೂವಿನ ಗಿಡ, ಸೀತಾಳೆ ಗೆಡ್ಡೆ, ಮರಬಾಳೆ, ಏಕದಳ ಬೀಜವರ್ಗದ, ಉಜ್ವಲ ವರ್ಣಗಳ ಚಿತ್ರ, ವಿಚಿತ್ರ ಹೂಬಿಡುವ ಗಡ್ಡೆ ಬೇರಿನ ಸಸ್ಯ ಜಾತಿ. ಎಂದು ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್-ಕನ್ನಡ ನಿಘಂಟು ಹೇಳುತ್ತದೆ. ಆರ್ಕೀಡ್ ಶಬ್ದದ ಮೂಲ ಆರ್ಕೀಸ್ ಆಗಿರುತ್ತದೆ. ಈ ಸಸ್ಯ ಜಾತಿಯ ಹೆಸ್ರು ಗ್ರೀಕ್ ಮೂಲ್ದ್ದಾಗಿದೆ. ಆರ್ಖಿಸ್ ಎಂದರೆ ತರಡು ಬೇಳೆಗಳು ಎಂದಾಗುತ್ತದೆ. ಆರ್ಕೀಡ್ ನ ಕೆಲವು ತಳಿಗಳಲ್ಲಿ ಅವಳಿ ಆಲೂಗಡ್ಡೆಯ ಹಾಗಿನ ಗಡ್ಡೆಗಳಿಂದಾಗಿ ಅಟ್ವಾ ಬೇರಿನ ದುಂಡು ಭಾಗಳಿಂದಾಗಿ ಹಾಗೆ ಕರೆಯಲ್ಪಡುತ್ತದೆ. ಆರ್ಕೀಡ್ ಎಂಬ ಪದವನ್ನು ೧೮೪೫ರಲ್ಲಿ ಜೊನ್ ಲಿಂಡ್ಲೇಯಿಂದ ಆರ್ಕೀಡೇಷಿಯಾ ಇದರ ಸಂಕ್ಷಿಪ್ತ ರೂಪವಾಗಿ ಪರಿಚಯಿಸಲ್ಪಟ್ಟಿತು.

ಆರ್ಕೀಡ್ಗಳ ಸ್ವಭಾವಗಳು[ಬದಲಾಯಿಸಿ]

ಆರ್ಕೀಡ್ ಗಳು ಇತರ ಗಿಡಗಳಿಗಿಂತ ಭಿನ್ನ ಮತ್ತು ಪ್ರತ್ಯೇಕವಾಗಿ ಗುರುತಿಸಬಹುದು. ಅವುಗಳು ಫಲೀಕರಣರಹಿತ ಜನನಕ್ಕೆ ಸಂಬಂಧಿಸಿದ ಜಾತಿಯವು.ಅವುಗಳಲ್ಲಿ ಒಂದು ಹೂವಿನಲ್ಲಿ ಪುಷ್ಪಪಾತ್ರದ ದಳಗಳೂ, ಶಲಾಕೆಗಳೂ, ಕೇಸರಗಳೂ ಸಮ ಸಂಖ್ಯೆಯಲ್ಲಿ ಅಳವಟ್ಟಿರುವವು. ಹಲವು ಎಲೆ ತಲೆ ಕೆಳಗಾದ ಹೂವುಗಳು, ಬಹುತೇಕವಾಗಿ ಪರಿವರ್ತಿತ ಪಕಳೆಗಳು ಮತ್ತು ಅತ್ಯಂತ ಚಿಕ್ಕ ಬೀಜಗಳು.ಇದರಿಂದಾಗಿ ಆರ್ಕೀಡ್ ಗಳು ಇತರ ಸಸ್ಯಗಳಿಗಿಂತ ಭಿನ್ನ. ಆರ್ಕೀಡ್ ಗಳು ವಿವಿಧ ಆಕರ್ಷಕ ಬಣ್ಣಗಳಲ್ಲಿ ಮತ್ತು ಬಗೆ ಬಗೆಯ ಪರಿಮಳದೊಂದಿಗೆ ಹೂಗಳನ್ನು ಅರ್ಳಿಸುತ್ತವೆ. ಸಾಮಾನ್ಯವಾಗಿ ಆರ್ಕೀಡ್ ಕುಟುಂಬ ಎಂದು ಕರೆಯಲಾಗುತ್ತದೆ. ಅವುಗಳು ಸುಮಾರು ೨೧,೯೫೦ ಮತ್ತು ೨೬,೦೪೯ರ ನಡುವೆ ಸ್ವೀಕೃತಗೊಂಡ ಅತಿ ದೊಡ್ಡ ಸಂಖ್ಯೆಯಲ್ಲಿರುವ ಹೂವನ್ನು ಅರಳಿಸುವ ಸಸ್ಯಗಳಾಗಿವೆ. ಮತ್ತು ೮೮೦ ತಳಿಗಳಲ್ಲಿ ಅಥವಾ ಜಾತಿಗಳಲ್ಲಿ ಸಿಗುತ್ತವೆ. ಹೆಚ್ಚಿನ ಆರ್ಕೀಡ್ ಗಳು ವಸಂತ ಮಾಸದಲ್ಲಿ ಅರಳುತ್ತವೆ. ಆದರೆ ಆರ್ಕೀಡ್ ಗಳ ಪ್ರಕಾರಗಳನ್ನು ಹೊಂದಿ ಅಪವಾದವೆನ್ನುವಂತೆ ಎಲ್ಲಾ ಕಾಲದಲ್ಲಿಯೂ ಅರಳುತ್ತವೆ. ಅವುಗಳು ಮೊನೋಕೋಟೈಲೆಡೋಸ್ ಕುಟುಂಬದವು. ಅಂದರೆ ಅವುಗಳು ಮೂರು ಭಾಗಗಳಲ್ಲಿ ಅರಳುತ್ತವೆ. ಮತ್ತು ಒಂದೇ ಬೀಜ ಉತ್ಪತ್ತಿ ಮಾಡುವ ಎಲೆಯನ್ನು ಹೊಂದಿರುತ್ತವೆ. ಅತಿ ದೊಡ್ಡ ತಳಿ ಬುಲ್ ಬೋಫಿಲ್ಲಂ ಸುಮಾರು ಎರಡು ಸಾವಿರದಷ್ಟು ಕಂಡು ಬಂದರೆ, ಎಪಿಡೆಂಡ್ರಮ್ ೧೫೦೦ ಜಾತಿಗಳಲ್ಲಿ ಮತ್ತು ಡೆಮ್ದ್ರೋಬಿಯಂ ೧೪೦೦ರಷ್ಟು, ಪ್ಲ್ಯುರೋತಲಿಸ್ ೧೦೦೦ ಜಾತಿಗ್ಸಳಲ್ಲಿ ಕಂಡು ಬರುತ್ತವೆ. ಈ ಆರ್ಕೀಡ್ ಕುಟುಂಬದಲ್ಲಿ ವೆನಿಲ್ಲಾವೂ ಸೇರಿದೆ. ಒರ್ಕಿಸ್ ಒಂದು ಬಗೆಯ ತಳಿ. ಇನ್ನೂ ಕೆಲವು ಸಸ್ಯಗಳಾದ ಫ್ಹಾಲೈನೋಪ್ಸಿಸ್ ಮತ್ತು ಕೆಟ್ಲೆಯಾ ಕೂಡಾ ಆರ್ಕೀಡ್ ಜಾತಿಗೆ ಸೇರಿದ್ದಾಗಿರುತ್ತವೆ. ಆರ್ಕೀಡ್ ಎಲ್ಲಿ ಬೆಳೆಯುತ್ತವೆ? ಇದು ಅಂಟಾರ್ಟಿಕಾದ ಹೊರತಾಗಿ ಎಲ್ಲ ರಾಷ್ಟ್ರಗಳಲ್ಲಿ ಕಂಡು ಬರುತ್ತವೆ. ಆರ್ಕೀಡ್ ಗಳನ್ನು ಅಲಂಕಾರಕ್ಕಾಗಿ, ವಿಜ್ನಾನಕ್ಕಾಗಿ, ಅಥವಾ ಆಹಾರಕ್ಕಾಗಿ ಬೆಳೆಯಲಾಗುತ್ತವೆ. ಅವುಗಳು ಹೆಚ್ಚಾಗಿ ಕೊಲಂಬಿಯಾ, ಇಕ್ವೇಡರ್,ಬ್ರೆಜಿಲ್, ಮತ್ತು ಅಟ್ಲಾಂಟಿಕ್ ಕಾಡಿನಲ್ಲಿ ೧೫೦೦ ತಳಿಯಷ್ಟು ಬೆಳೆಯ್ತ್ತವೆ. ಭಾರತದಲ್ಲಿ ಅತಿ ಹೆಚ್ಚು ವೈವಿಧ್ಯತೆಯಲ್ಲಿ ಹಿಮಾಲಯದ ದಕ್ಷಿಣ ಭಾಗಗಳಾದ ಅರುಣಾಚಲಪ್ರದೇಶ, ಮೇಘಾಲಯ, ಆಸ್ಸಾಂ, ತ್ರಿಪುರಾಗಳಲ್ಲಿ ಕಂಡು ಬರುತ್ತವೆ. ಚೀನಾ ದೇಶದ ಪರ್ವತ ಪ್ರದೇಶಗಳಲ್ಲಿ, ಸೆಂಟ್ರಲ್ ಅಮೇರಿಕಾದ ಮತ್ತು ದಕ್ಷಿಣ ಪೂರ್ವ ಅಮೇರಿಕಾದಲ್ಲಿ ಹಲವಾರು ಬಗೆಯ ಆರ್ಕೀಡ್ ಗಳು ಕಂಡು ಬರುತ್ತವೆ. ಬೆಚ್ಚಗಿನ ಸ್ಥಳಗಳಲ್ಲಿ, ಹ್ಜುಲ್ಲು ತುಂಬ ಇರುವ ಸ್ಥಳಗಳಲ್ಲಿ, ಅಥವಾ ಒಣ್ಗಿದ ಹುಲ್ಲಿನ ಸವಾನಾ ಮತ್ತು ಬಂಡೆಗಲ್ಲುಗಳ ಗದ್ದೆಯಲ್ಲಿ ಆರ್ಕೀಡ್ ಗಳು ನೆಲದಲ್ಲಿ ಬೆಳೆಯುತ್ತವೆ. ಅವುಗಳಿಗೆ ಭದ್ರವಾದ ಬೇರುಗಳಿರುತ್ತವೆ. ಮತ್ತು ಕೆಲವೊಮ್ಮೆ ಅವುಗಳು ಶಕೆಯಿಂದ ಅಥವಾ ಚಳಿಯಿಂದ ರಕ್ಷಿಸಿಕೊಳ್ಳಲು ಗಡ್ಡೆಗಳನ್ನು ಹೊಂದಿರುತ್ತವೆ. ಆ ಗಡ್ಡೆಗಳು ಅವುಗಳನ್ನು ಸುದೀರ್ಘ ಕಾಲದ ಬರ ಮತ್ತು ಬೆಂಕಿಯಿಂದ ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತವೆ. ಅವುಗಳನ್ನು ವಸಂತ ಋತುವಿನಲ್ಲಿ ಅರಳಲು ಬೇಕಾದ ಸತ್ವಯುತ ಆಹಾರವನ್ನು ಸಂಗ್ರಹಿಸಲು ಉಪಯೋಗಿಸುತ್ತವೆ. ಚಳಿಯಿಂದ ರಕ್ಷಣೆ ಸಿಗದಿದ್ದರೆ ಬೇರುಗಳು ಒಣಗಿ ಮುದುಡಿ ಹೋಗುತ್ತವೆ. ಕೆಲವು ಆರ್ಕೀಡ್ ತಳಿಗಳು ಕಾಡಿನಲ್ಲಿ ನಾಶವಾಗುತ್ತಿವೆ. ಮುಖ್ಯವಾಗಿ ಇದಕ್ಕೆ ಕಾರಣವೇನೆಂದರೆ ಜನರು ಕಾಡನ್ನು ಕೃಷಿಗಾಗಿ ಕಡಿಯುತ್ತಿರುವುದೇ ಆಗಿದೆ. ಕಾಂಡ ಮತ್ತು ಬೇರುಗಳು ಎಲ್ಲ ಆರ್ಕೀಡ್ ಗಳು ನಿರಂತರ ಬೀಜಗಳು ಯಾ ಹೂಗಳನ್ನು ಬಿಡುವ ಸಸ್ಯ. ಅವುಗಳಿಗೆ ಯಾವುದೇ ಶಾಶ್ವತ ಕೊಂಬೆಗಳು ಬೆಳೆದಿರುವ ರಚನೆ ಇರುವುದಿಲ್ಲ. ಮತ್ತು ಅವುಗಳು ಎರಡು ಬಗೆಯ ವಿನ್ಯಾಸಗಳಲ್ಲಿ ಬೆಳೆಯಲು ಸಾಧ್ಯ.

  • ಒಂದೇ ಕಾಂಡವಾಗಿ ಬೆಳೆಯುವಂತಹದು; ಶಾಖೆಯ ಏಕಾಂಗಿ ಕುಡಿಯಿಂದ ಬೆಳೆಯುತ್ತದೆ. ಪ್ರತಿ ವರ್ಷ ಎಲೆಗಳ ಸೇರ್ಪಡೆಯು ಸಸ್ಯದ ಶಿಖರದಿಂದ ಆಗುತ್ತದೆ. ಮತ್ತು ಕುಡಿಯು ಆ ಪ್ರಕಾರವಾಗಿ ಉದ್ದಕ್ಕೆ ಬೆಳೆಯುತ್ತ ಹೋಗುತ್ತದೆ. ಈ ಏಕಮುಖಿ ಆರ್ಕೀಡ್ ಗಳ ಕುಡಿಯು ಹಲವಾರು ಮೀಟರ್ ಗಳಷ್ಟು ಉದ್ದಕ್ಕೆ ಬೆಳೆಯುತ್ತದೆ. ಅವುಗಳಲ್ಲಿ ವಂದಾ ಮತ್ತು ವೆನಿಲಾ ಆ ಜಾತಿಯವು.
  • ಕಾಂಡವಾಗಿ ಬೆಳೆಯುವ ಆರ್ಕೀಡ್: ಈ ಆರ್ಕೀಡ್ ಗೆ ಎದುರಿಗೆ ಅತಿ ಹೊಸ ಬೆಳವಣಿಗೆ ಮತ್ತು ಹಿಂದೆ ಅತಿ ಹಳೆಯ ಬೆಳವಣಿಗೆ ಕಾಣುತ್ತದೆ. ಸಸ್ಯವು ಪಕ್ಕಕ್ಕಿರುವ ಚಿಗುರುಗಳ ಸರಣಿಗಳನ್ನು ಉತ್ಪಾದಿಸುತ್ತವೆ. ಆ ಚಿಗುರುಗಳು ನಿಶ್ಚಿತ ಆಕಾರಕ್ಕೆ ಬೆಳೆಯುತ್ತವೆ ಹೂವನ್ನು ಅರಳಿಸುತ್ತವೆ ಮತ್ತೆ ಬೆಳವಣಿಗೆ ನಿಂತು ಬಿಡುತ್ತದೆ. ಅದರ ಜಾಗದಲ್ಲಿ ಬೇರೊಂದು ಚಿಗುರು ಉಂಟಾಗುತ್ತದೆ. ಕಾಂಡವಾಗಿ ಬೆಳೆಯುವ ಆರ್ಕೀಡ್ ಗಳು ಪಾರ್ಶ್ವಕ್ಕೆ ಬೆಳೆಯುತ್ತವೆ.ವಿನಹ ಲಂಬವಾಗಿ ಬೆಳೆಯುವುದಿಲ್ಲ. ಅವುಗಳ ಆಧಾರದ ಮೇಲ್ಮೈಯನ್ನು ಅನುಸರಿಸಿ ಪಾರ್ಶ್ವಕ್ಕೆ ಬೆಳೆಯುತ್ತವೆ. ಬೆಳವಣಿಗೆ ಹೊಸ ಎಲೆಗಳಿಂದ ಮುಂದುವರಿಯುತ್ತದೆ. ಹೊಸ ಎಲೆಗಳು ಅವುಗಳದೇ ಎಲೆಗಳನ್ನು ಮತ್ತು ಬೇರುಗಳೊಂದಿಗೆ ಹಿಂದಿನ ವರ್ಷದ

ಗಿಡದಿಂದ ಅಥವಾ ಮುಂದಿನ ಗಿಡಗಳಿಂದ ಚಿಗುರಿ ಬೆಳವಣಿಗೆ ಮುಂದುವರಿಯುತ್ತದೆ. ಕ್ಯಾಟ್ಲಿಯಾ ಈ ಪ್ರಕಾರದ ಆರ್ಕೀಡ್ ಆಗಿದೆ. ಪಾರ್ಶ್ವವಾಗಿ ಬೆಳೆಯುವ ಆರ್ಕೀಡುಗಳು ಕಣ್ಣಿಗೆ ಕಾಣುವಂತಹ ಮಿಥ್ಯಾ ಗಡ್ಡೆಗಳನ್ನು ಹೊಂದಿರುತ್ತವೆ. ಆ ಮಿಥ್ಯಾ ಬಲ್ಬುಗಳು ತುದಿಯಗುಂಟ ಬಳ್ಳಿಯಂತೆ ಬೆಳೆಯುತ್ತವೆ. ಅಥವಾ ನೆಲದ ಸ್ವಲ್ಪ ಅಡಿಯಲ್ಲಿ ಮಣ್ಣಿನಲ್ಲಿ ಬೆಳೆಯುತ್ತವೆ. ಭೂಮಿಯಮೇಲಿನ ಅರ್ಕೀಡುಗಳು ನೆಲದ ಒಳಗಡೆ ಉದ್ದಕ್ಕೂ ಹರಿಯುತ್ತ ತಾಳಿನ ಉದ್ದಕ್ಕೂ ಬೇರು ಬಿಡುವ ಕಾಂಡವಾಗಿರಬಹುದು ಅಥವಾ ನೆಲದೊಳಗಿನ ಗೆಡ್ಡೆಯಂತಹ ಕಾಂಡ ಭಾಗದ ರೂಪ ಹೊಂದಿರಬಹುದು. ಅಥವಾ ನೆಲದಡಿಯ ದುಂಡಗಾದ ಬೇರಿನ ರೂಪವನ್ನು ತಾಳಬಹುದು. ಕೆಲವು ಪಾರ್ಶ್ವ ಬೆಳೆಯುವ ಆರ್ಕೀಡ್ ಗಳಾದ ಆರ್ಕೀಸ್ ಮತ್ತು ಒಫ್ರೈಸ್ ಗಳಿಗೆ ಭೂಮಿಯ ಮೇಲ್ಮೈಯಡಿಯಲ್ಲಿನ ಎರಡು ಗೆಡ್ಡೆ ಬೇರುಗಳನ್ನು ಹೊಂದಿರುತ್ತವೆ. ಒಂದನ್ನು ಆಹಾರವಾಗಿ ಬಳಸಲಾಗುತ್ತದೆ. ಚಳಿಗಾಲದ ಅವಧಿಗೆಂದು ಕಾದಿರಿಸಲಾಗುವುದು. ಇತರ ಆರ್ಕೀಡ್ ಬೆಳವಣಿಗೆಗೆ ಒದಗಿಸಲು ಉಪಯೋಗಿಸಲಾಗುತ್ತವೆ. ಆ ಉಳಿದ ಆರ್ಕೀಡ್ ಗಳ ಬೆಳವಣಿಗೆ ಕಣ್ಣಿಗೆ ಕಾಣುವಂಥದ್ದಾಗಿರುತ್ತದೆ. ಉಷ್ಣ ಮತ್ತು ಆರ್ದ್ರ ಹವಾಮನಗಳಲ್ಲಿ ಹಲವು ಭೂಮಿಯಡಿಯ ಆರ್ಕೀಡ್ ಗಳಿಗೆ ಮಿಥ್ಯಾ ಬಲ್ಬುಗಳ ಅಗತ್ಯವಿರುವುದಿಲ್ಲ. ಎಫಿಫೈಟಿಕ್ ಆರ್ಕೀಡ್ ಗಳಿಗೆ ನೆಲದಲ್ಲೋ, ನೀರಿನಲ್ಲೋ ಆಗಿರದ ಗಾಳಿಯಲ್ಲಿ ಬೆಳೆದ ಬೇರುಗಳನ್ನು ಹೊಂದಿರುತ್ತವೆ. ಕೆಲವೊಮ್ಮೆ ಆ ಬೇರುಗಳು ಹಲವಾರು ಮೀಟರ್ ಗಳಷ್ಟು ಉದ್ದವಿರುತ್ತವೆ. ಉಳಿದ ಹಳೆಯ ಬೇರುಗಳ ಭಾಗದಲ್ಲಿ ಒಂದು ಪರಿವರ್ತಿತ ಸ್ಪೊಂಜಿನಂತಹ ನಿಜತೊಗಟೆ ಅಥವಾ ಎಳೆಯ ಸಸ್ಯಗಳ ಹೊರಪೊರೆಯೊಳಗಣ ಭಾಗವಾದ ವೆಲೆಮನ್ ಎಂಬುದನ್ನು ಹೊಂದಿರುತ್ತದೆ. ಅದು ಆರ್ದ್ರತೆಯನ್ನು ಹೀರಿಕೊಳ್ಳುವ ಕೆಲಸವನ್ನ್ಯು ಮಾಡುತ್ತದೆ. ಅದು ಸತ್ತ ಕೋಶಗಳಿಂದ ಮಾಡಲ್ಪಟ್ಟಿರುತ್ತದೆ. ಮತ್ತು ಅದು ಬೆಳ್ಳಿ-ಬೂದು ಬಣ್ಣ ಅಥವಾ ಕಂದು ಬಣ್ಣದ್ದಾಗಿರುತ್ತದೆ. ಕೆಲವು ಆರ್ಕೀಡ್ ಗಳಲ್ಲಿ ವೆಲೆಮನ್ ಸ್ಪೊಂಜಿ ಮತ್ತು ಕೋಶಗಳ ಹಾದಿಯಲ್ಲಿ ನಾರಿನಂತಹ ಬುಡಗಳನ್ನು ಅಥವಾ ಕಾಂಡವನ್ನು ಹೊಂದಿರುತ್ತವೆ. ಅದನ್ನು ಟ್ಲೋಸಮ್ಸ್ ಎಂದು ಕರೆಯಲಾಗುತ್ತದೆ ಸಸ್ಯಗಳ ಹೊರ ಪೊರೆಯೊಳಗಣ ನಿಜತೊಗಟೆ ಬೇರುಗಳ ಕೋಶಗಳು ಬಲ ಕೋನದಲ್ಲಿ ಬೆಳೆಯುತ್ತವೆ. ಬೇರಿನ ಸುತ್ತ ಬೆಳೆದು ಅದಕ್ಕೆ ಭದ್ರವಾದ ಹಿಡಿತಕ್ಕೆ, ಬೆಂಬಲಕ್ಕೆ ಅವಕಾಶ ಮಾಡಿಕೊಡುತ್ತದೆ. ಅದಕ್ಕೆ ಬೇಕಾಗುವ ಪೋಷಕಾಂಶಗಳು ಮುಖ್ಯವಾಗಿ ಪ್ರಾಣಿಗಳ ಮಲ ಮೂತ್ರ ವಿಸರ್ಜನೆಯಿಂದ ಮತ್ತು ಭೂಮಿಯ ಇತರ ಸೇಂದ್ರೀಯ ಕೊಳೆತ ಅವಶೇಷಗಳಿಂದ ಪೂರೈಸಿಕೊಳ್ಳುತ್ತದೆ. ವಯಸ್ಸಾಗುತ್ತಿದ್ದಂತೆ ಮಿಥ್ಯಾಬಲ್ಬುಗಳು ತಮ್ಮ ಎಲೆಗಳನ್ನು ಕಳಚಿಬಿಡುತ್ತವೆ.ಮತ್ತು ಜಡವಾಗಿರುತ್ತವೆ. ಈ ಹಂತದಲ್ಲಿ ಅದನ್ನು ಬೆನ್ನುಬಲ್ಬು ಅಥವಾ ಗೆಡ್ಡೆ ಎಂದು ಕರೆಯಲಾಗುತ್ತದೆ. ಬೆನ್ನು ಗಡ್ಡೆಗಳು ಸಸ್ಯಕ್ಕೆ ಇನ್ನೂ ಪೋಷಕಾಂಶಗಳನ್ನು ಹಿಡಿದಿಟ್ಟುಕೊಂಡಿರುತ್ತವೆ. ಆದರೆ ಮಿಥ್ಯಾ ಗೆಡ್ಡೆಗಳು ಸಾಮಾನ್ಯವಾಗಿ ವಶಪಡಿಸಿಕೊಳ್ಳುತ್ತವೆ. ಬೆನ್ನೆಗಡ್ಡೆಯಲ್ಲಿರುವ ಕೊನೆಯ ಸಂಗ್ರಹವನ್ನೂ ಉಪಯೋಗಿಸಿಕೊಳ್ಳುತ್ತದೆ. ಕೊನೆಗೆ ಬೆನ್ನುಗಡ್ಡೆ ಸಾಯುತ್ತದೆ. ಮಿಥ್ಯಾಗಡ್ಡೆಯು ಸಾಮಾನ್ಯವಾಗಿ ಐದು ವರ್ಷಗಳಕಾಲ ಬದುಕಿರುತ್ತವೆ.ಗಮನಕ್ಕೆ ಬರದ ಮಿಥ್ಯಾ ಗಡ್ಡೆಗಳಿಲ್ಲದ ಆರ್ಕೀಡುಗಳಿಗೆ ಕೂಡಾ ಬೆಳವಣಿಗೆ ಇದೆ. ಪಾರ್ಶ್ವ ಆರ್ಕೀಡ್ ಸಸ್ಯದ ಭಾಗವಾಗಿ ಅದಕ್ಕೆ ವೈಯುಕ್ತಿಕ ಬೆಳವಣಿಗೆ ಇದೆ.

ಎಲೆಗಳು[ಬದಲಾಯಿಸಿ]

ಹೆಚ್ಚಿನ ಏಕದಳಗಳಂತೆ ಆರ್ಕೀಡ್ ಗಳಿಗೆ ಸಾಮಾನ್ಯವಾಗಿ ಸಮಾಂತರ ನರಗಳಿರುವ ಸರಳ ಎಲೆಗಳನ್ನು ಹೊಂದಿರುತ್ತವೆ. ಕೆಲವು ವೆನಿಲೋಯಿಡ್ಸ್ ಆರ್ಕೀಡುಗಳು ಆಯಾತಾಕ್ರದ ಬಲೆ ಅಥವಾ ಜಾಲದ ಶಿರಾನ್ಯಾಸ ಎಲೆಗಳನ್ನು ಹೊಂದಿರುತ್ತವೆ. ಎಲೆಗಳು ಅಂಡಾಕೃತಿಯಲ್ಲಿ ಏಣುಗಳು ಎರಡೂ ಕಡೆಗೂ ತುದಿ ಮೊನೆಗೂಡುವಂತೆ ಹೋಗುವ ಆಕಾರದ್ದು. ಅಥವಾ ವರ್ತುಲಾಕಾರವಾಗಿರಬಹುದು. ಮತ್ತು ಅವುಗಳ ಸೈಜುಗಳು ಭಿನ್ನ ಭಿನ್ನವಾಗಿರುತ್ತವೆ.ಅವುಗಳ ಗುಣ ಲಕ್ಷಣಗಳನ್ನು ಪತ್ತೆ ಹಚ್ಚಬಹುದಾಗಿದೆ. ಅವುಗಳು ಸಾಮಾನ್ಯವಾಗಿ ಸಹಜವಾಗಿ ಕಾಂಡದಲ್ಲಿ ಒಂದು ಎಲೆ ಒಂದು ಪಕ್ಕಕ್ಕೆ, ಮುಂದಿನ ಎಲೆ ಮತ್ತೊಂದು ಪಕ್ಕಕ್ಕೆ ಒಡೆಯುವ ಎಲೆಗಳಾಗಿರುತ್ತವೆ. ಕೆಲವೊಮ್ಮೆ ಮಡಚಿಕೊಂಡಿರುವ ಅಥವಾ ಸುಕ್ಕು ಸುಕ್ಕಾಗಿರುತ್ತವೆ. ಮತ್ತು ಎಲೆಯ ಕಾವಿನ ಬುಡದ ಎಲೆಗೆ ಅಂಟಿಕೊಂಡಿರುವ್ಂತಿರುತ್ತದೆ. ಆರ್ಕೀಡ್ ಎಲೆಗಳು ಕೆಲವೊಮ್ಮೆ ಸಿಲಿಕದೊಂದಿಗೆ ಸಂಯೋಗಗೊಂಡ ಅಥವಾ ಸಿಲಿಕಯುಕ್ತ ಶರೀರಗಳನ್ನು ಹೊಂದಿರುತ್ತವೆ. ಆ ಬೊಡಿಗಳನ್ನು ಸ್ಟೆಗ್ಮಾಟಾ ಎಂದು ಕರೆಯಲಾಗುತ್ತದೆ. ಆರ್ಕೀಡ್ ನ ಎಲೆಗಳು ನಾರುಯುಕ್ತವಾಗಿವೆ. ಎಲೆಗಳ ಆಕಾರವು ಸಸ್ಯ ಇರುವ ನಿರ್ದಿಷ್ಟ ಸಸ್ಯದ ಸ್ವಾಭಾವಿಕ ನೆಲೆ ಅಥವಾ ಹುಟ್ಟಿ ಬೆಳೆದ ಸ್ಥಳಗಳಿಗೆ ಹೊಂದಿಕೆಯಾಗುವಂತೆ ಇರುತ್ತವೆ. ಸೂರ್ಯ ಪ್ರಕಾಶಕ್ಕೆ ಒಡ್ಡಿಕೊಂಡಿರುವ ಅಥವಾ ಅಪರೂಪಕ್ಕೊಮ್ಮೆ ತುಂಬ ಒಣಗಿದ ನಿವೇಶನದಲ್ಲಿ ಬೆಳೆಯುವ ಆರ್ಕೀಡ್ ಗಳ ಎಲೆಗಳು ದಪ್ಪವಾಗಿ ಅಥ್ಗವಾ ಥಿಕ್ ಆದ ಒರಟಾದ ಎಲೆಗಳು, ಮತ್ತು ಮೇಣದಂತಿರುವ ಮೇಲ್ಮೈ. ತೆಳುವಾದ ಗಾಜಿನ ಹೊರಪೊರೆ. ಅವಶ್ಯಕವಾದ ನೀರಿನ ಪೂರೈಕೆಯನ್ನು ಉಳಿಸಿಜ್ಕೊಳ್ಳಲು ಗಾಜಿನ ಹೊರಪೊರೆಯನ್ನು ಹೊಂದಿರುತ್ತವೆ. ನೆರಳಿನ ತಳಿಗಳು ಉದ್ದ, ತೆಳು ಎಲೆಗಳನ್ನು ಹೊಂದಿರುತ್ತವೆ. ಹೆಚ್ಚಿನ ಆರ್ಕೀಡುಗಳ ಎಲೆಗಳು ಬಹುವಾರ್ಷಿಕ ಅಂದರೆ ಅವುಗಳು ಹಲವಾರು ವರ್ಷಗಳವರೆಗೆ ಬದುಕಿರುತ್ತವೆ. ಇನ್ನು ಕೆಲವು ವಿಶೇಷವಾಗಿ ಮಡಚಿಕೊಂಡಿರುವ ಅಥವಾ ಸುಕ್ಕು ಸುಕ್ಕಾಗಿರುವ ಎಲೆಗಳಿರುವ ಆರ್ಕೀಡ್ ಗಳು ವರ್ಷಕ್ಕೊಮ್ಮೆ ಎಲೆಗಳನ್ನು ಕಳಚಿಕೊಳ್ಳುತ್ತವೆ. ಮತ್ತು ಹೊಸ ಎಲೆಗಳನ್ನು ಹೊಸ ಗೆಡ್ಡೆಗಳೊಂದಿಗೆ ಬೆಳೆಯುತ್ತವೆ. ಉದಾಹರಣೆಗಾಗಿ ಕಟಾಸೆಟಮ್ ಅರ್ಕೀಡು ಹಾಗೆಯೇ ಎಲೆಗಳನ್ನು ಬೆಳೆಸುತ್ತವೆ. ಕೆಲವು ಆರ್ಕೀಡುಗಳ ಎಲೆಗಳನ್ನು ಅಲಂಕಾರಿಕ ಎಂದು ಪರಿಗಣಿಸಲ್ಪಟ್ಟಿದೆ. ಮಕೊಡೆಸ್ ಸಂಡೇರಿಯಾನಾ, ಇದೊಂದು ಅರ್ಧ ಭೂಮಿಯಡಿ ಇನ್ನೊಂದರ್ಧ ಭೂಮಿಯ ಹೊರಗೆ ಬೆಳೆಯುವ ಆರ್ಕೀಡ್ ಸಸ್ಯ. ಅಥವಾ ಅರೆಭೂಮಿ ಆರ್ಕೀಡುಗಳ ಎಲೆಗಳು ಮಿಂಚುವ ಬೆಳ್ಳಿ ಮತ್ತು ಚಿನ್ನದ ಪೊರೆಯ ತೆಳು ಹಸುರಿನ ಹಿನ್ನೆಲೆ ಹೊಂದಿರುವ ಆಕರ್ಷಕ ಎಲೆಗಳಾಗಿವೆ. ಎಲೆಯು ಹೃದಯಾಕಾರದಲ್ಲಿದ್ದು, ಕುಳಿ ಜಾಗದಲ್ಲಿ ತೊಟ್ಟಿರುವ ಸೈಕೋಪ್ಸೈಲ್ಲಾ ಲಿಮ್ಮಿಂಘೈ ಆರ್ಕೀಡಿನ ಎಲೆಗಳು ಕಂದು-ಹಸಿರು ಬಣ್ಣವನ್ನು ಹೊಂದಿದ್ದು, ಹೂವುಗಳಿಂದ ಸೃಷ್ಟಿಸಲ್ಪಟ್ಟ ಕೆಂಗಂದು ಬಣ್ಣದ ಊದಾ ವರ್ಣದ್ರವ್ಯಗಳಿಂದಾಗಿ ಕಂದು ಬಣ್ಣದ ಬೆರಕೆ ಎದ್ದು ಕಾಣಿಸುವ ಗುರುತುಗಳೊಂದಿಗೆ ಆಕರ್ಷಕವಾಗಿ ಕಂಡು ಬರುತ್ತವೆ. ಉಷ್ಣ ವಲಯದ ಮತ್ತು ಏಶ್ಯಾದ ಉಪೌಷ್ಣ ವಲಯದ ಲೇಡೀಸ್ ಸ್ಲಿಪ್ಪರ್ಸ್ ಮತ್ತು ಪಾಫಿಯೊಡಿಲುಮ್ ಇವುಗಳು ಆಕರ್ಷಕ ಬಣ್ಣದ ಮಚ್ಚೆಗಳಿಂದ ಚಿತ್ರಿಸಲ್ಪಟ್ಟು ತುಂಬ ಸುಂದರವಾಗಿ ಕಾಣಿಸಿಕೊಳ್ಳುತ್ತವೆ. ಕಾರಣ ಏನೆಂದರೆ ಅಸಮವಾದ ಲವಣಾಂಶದ ಹಂಚುವಿಕೆಯಿಂದಾಗಿ ಬಣ್ಣಗಳು ಹಾಗೆ ಆಕರ್ಷಕವಾಗಿವೆ. ಅಂತೆಯೇ ಫಾಲೈನೋಪ್ಸಿಸ್ ಇದು ಕಡು ಕೆಂಪು ಬಣ್ಣದ ಆರ್ಕೀಡ್ ಅದರ ಎಲೆಗಳು ಚುಕ್ಕೆಗಳುಳ್ಳ ಕಡು ಹಸಿರು ಮತ್ತು ತೆಳು ಹಸಿರು ಎಲೆಗ್ಳನ್ನು ಹೊಂದಿದೆ. ಜ್ಯೂವೆಲ್ ಆರ್ಕೀಡ್, ಲ್ಯೂಡಿಸಿಯಾ ಡಿಸ್ಕಲರ್ ಅದರ ಆಕರ್ಷಕ ಎಲೆಗಳಿಗಾಗಿ ಬೆಳೆಸಲಾಗುವುದೆ ವಿನಹ ಅದರ ಹೂವುಗಳಿಗಾಗಿ ಅಲ್ಲ. ಕೆಲವು ಆರ್ಕೀಡುಗಳು ಉದಾಹರಣೆಗ್ಗಿ ಡೆಂಡ್ರೊಫೈಲೆಕ್ಸ್ ಮತ್ತು ಟಾಯನಿಯೊಫೈಲ್ಲಮ್ ಅವುಗಳ ಹಸಿರು ಬೇರುಗಳ ಮೇಲೆ ದ್ಯುತಿಸಂಶ್ಲೇಷಣೆಯಿಂದಾಗಿ ಅವಲಂಬಿಸಿದೆ. ಮತ್ತು ಸಾಮಾನ್ಯವಾಗಿ ಬೆಳೆದ ಎಲೆಗಳ ಕೊರತೆಯಿರುತ್ತದೆ. ಅಂತೆಯೇ ಒಂದೊಂದು ಸುತ್ತಿನಲ್ಲಿಯೂ ದಳಗಳ ಸಂಖ್ಯೆ ಬೇರೆ ಬೇರೆಯಾಗಿರುವ ಪುಷ್ಪ ಸ್ವಯಂ ಪೌಷ್ಟಿಕ ಸಸ್ಯಗಳು ಕೂಡಾ ಇಂಥದ್ದೇ ಬಣ್ಣ ವೈವಿಧ್ಯವನ್ನು ಹೊಂದಿರುತ್ತವೆ. ಕೊರಲ್ಲೊರ್ಹಿಝಾ ಹವಳ ಅರ್ಕೀಡುಗಳು ಎಲೆಗಳನ್ನೇ ಹೊಂದಿರುವುದಿಲ್ಲ. ಮತ್ತು ಅದರ ಬದಲಿಗೆ ತಮ್ಮ ಬೇರುಗಳನ್ನು ದೊಡ್ಡ ಬಲಿತ ಮರಗಳ ಬೇರುಗಳ ಸುತ್ತ ಸುತ್ತಿಕೊಳ್ಳುತ್ತವೆ. ಮತ್ತು ವಿಶಿಷ್ಟ ಶಿಲೀಂದ್ರ ಅಥವಾ ಫಂಗಿಯನ್ನು ಸಕ್ಕರೆಯ ಬೆಳೆ ಕೊಯ್ಯಲು ಉಪಯೋಗಿಸುತ್ತವೆ. ಹೂವುಗಳು ಆರ್ಕಿಡೇಷಿಯಾವು ಹಲವು ಬಗೆಯ ವೈವಿಧ್ಯಮಯ ರಚನೆಗಳಿಗಾಗಿ ಪ್ರಸಿದ್ಧವಾಗಿವೆ. ಕ್ಯಾಟ್ಲಿಯಾ ಕಲ್ಟಿವರ್, ವಂದಾ ಕಲ್ಟಿವರ್ ಕೆಲವು ಆರ್ಕೀಡುಗಳಿಗೆ ಒಂದೇ ಹೂವಿರುತ್ತದೆ. ಆದರೆ ಹೆಚ್ಚಿನವುಗಳಿಗೆ ಜೊಂಪೆ ಅಥವಾ ಗುಚ್ಚ್ಛವಾಗಿರುವ ಹೂಗೊಂಚಲನ್ನು ಹೊಂದಿರುತ್ತವೆ. ಕೆಲವೊಮ್ಮೆ ದೊಡ್ಡ ಸಂಖ್ಯೆಯಲ್ಲಿರುತ್ತವೆ. ಹೂಬಿಡುವ ಕಾಂಡವು ತಳ ಅಥವಾ ಬುಡದಲ್ಲಿ ಇರುವವಗಳಾಗಿರುತ್ತವೆ. ಅಂದರೆತ ಳ ಅಥವಾ ಬುಡದ ಗೆಡ್ಡೆಯಿಂದ ಉತ್ಪಾದಿಸಲ್ಪಡುತ್ತವೆ. ಉದಾಹರಣೆಗಾಗಿ ಸಿಂಬಿಡಿಯಮ್, ಕೊನೆಯಲ್ಲಿರುವ ಮುಖ್ಯ ಕಾಂಡ್ದ ತುದಿಯಿಂದ ಬೆಳೆಯುತ್ತದೆ. ಉದಾಹರಣೆಗಾಗಿ ಕ್ಯಾಟ್ಲಿಯಾ ಅಥವಾ ಕವಲುಮೂಲೆ, ಎಲೆಯ ಎಲೆಗೂ ಕಾಂಡಕ್ಕೂ ನಡುವೆ ಬೆಳೆಯುತ್ತವೆ. ಉದಾಹರಣೆಗಾಗಿ ವಂದಾ ಆರ್ಕೀಡ್. ರ್ಕೀಡ್ ಹೂವುಗಳು ಆದಿಯಲ್ಲಿ ಇಕ್ಕೆಡೆಯ ದ್ವಿಪಾರ್ಶ್ವಕ ಹೊಂದಿಕೆಯಿರುವ ಸಸ್ಯಗಳಾಗಿವೆ. ಇಷ್ಟಾದರೂ ಕೆಲವು ಆರ್ಕೀಡ್ ತಳಿಗಳಾದ ಮೊರ್ಮೊಡೆಸ್, ಲ್ಯುಡಿಸಿಯಾ ಮತ್ತು ಮ್ಯಾಕೊಡಸ್ ಗಳಲ್ಲಿ ಇಂತಹ ಸಾಂಗತ್ಯವನ್ನು ಕಾಣಲು ಕಷ್ಟ. ಆರ್ಕೀಡ್ ಹೂವುಗಳಿಗೆ ಹಲವು ಏಕದಳ ಸಸ್ಯಗಳಂತೆ, ಶುಷ್ಕ ಫಲ ಕೊಡದ ಎರಡು ಸುರುಳಿ ಅಂಶಗಳನ್ನು ಹೊಂದಿರುತ್ತವೆ. ಬಾಹ್ಯ ಸುರುಳಿಗೆ ಮೂರು ಪುಷ್ಪ ಪಾತ್ರದ ಪತ್ರ ಯಾ ದಳವನ್ನು ಹೊಂದಿರುತ್ತವೆ ಮತ್ತು ಒಳಗಿನ ಸುರುಳಿಗೆ ಮೂರು ಪಕಳೆಗಳು ಇರುತ್ತವೆ. ಪುಷ್ಪ ಪಾತ್ರದ ಪತ್ರವು ಸಾಮಾನ್ಯವಾಗಿ ಪಕಳೆಗಳಂತೆ ಇರುತ್ತವೆ. ಹಾಗಾಗಿ ಅದನ್ನು ಟಿಪಾಲ್ಸ್ ಎಂದು ಕರೆಯಲಾಗುತ್ತದೆ. ಆದರೆ ಅವುಗಳು ಸಂಪೂರ್ಣ ವಿಭಿನ್ನವಾಗಿರಬಹುದು. ಆರ್ಕೀಡುಗಳ ಪ್ರಯೋಜನಗಳು ಆರ್ಕೀಡಿನ ಸುಗಂಧವು ಹೆಚ್ಚಾಗಿ ಪರಿಮಳದ್ರವ್ಯವನ್ನು ತಯಾರಿಸುವವರು ಅದರಲ್ಲಿರುವ ಶಕ್ತಿಶಾಲಿ ಪರಿಮಳ ದ್ರವ್ಯವನ್ನು ಗುರುತಿಸಲು ವಿಶ್ಲೇಷಣೆಗೆ ಒಳಗಾಗುತ್ತದೆ. ಹೂವುಗಳ ಸೌಂದರ್ಯವನ್ನು ಕಂಡು ಆನಂದಿಸುವವರು ಅದರ ಕೃಷಿ ಮಾಡುತ್ತಾರೆ. ಹೆಚ್ಚಿನ ಕೃಷಿ ಮಾಡಲ್ಪಡುವ ಆರ್ಕೀಡುಗಳು ಉಷ್ಣ ಪ್ರದೇಶದವು. ಆದರೆ ಕೆಲವು ಶೀತಪ್ರದೇಶದಲ್ಲಿ ಬೆಳೆಯುವ ಆರ್ಕೀಡುಗಳು ಕೂಡ್ ಮಾರುಕಟ್ಟೆಯಲ್ಲಿ ಕಂಡು ಬರುತ್ತವೆ. ಸಮಶೀತೋಷ್ಣ ತಳಿಗಳಾದ ಒಫೈರೈಸ್, ಜೇನು ಆರ್ಕೀಡುಗಳು, ಗ್ಯಾಮ್ನಾಡೆನಿಯಾ, ಕೊನೊಪ್ಸಿಯಾ (ಪರಿಮಳಯುಕ್ತ ಆರ್ಕೀಡ್) ಅನಾಕಾಂಪ್ಟಿಸ್ ಪಿರಾಮಿಡೈಲಿಸ್ (ಪಿರಾಮಿಡ್ ಆಕಾರದ ಆರ್ಕೀಡ್ ) ಮತ್ತು ಡಾಕ್ಟೈಲೊರ್ಝಾ (ಸಾಮಾನ್ಯ ಚಿಟ್ಟೆಯುಳ್ಳ ಆರ್ಕೀಡ್) ಇವುಗಳೂ ಕೂಡಾ ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಎಲ್ಲ ಪ್ರಕಾರಗಳ ಆರ್ಕೀಡುಗಳಿಗೆ ತಳಿಗಳ ಮತ್ತು ಸಂಗ್ರಾಹಕರಿಂದ ತುಂಬ ಬೇಡಿಕೆಯಿದೆ. ಹಾಗಾಗಿ ನೂರಾರು ಸೊಸೈಟಿಗಳು ಮತ್ತು ಕ್ಲಬ್ಬುಗಳು ಜಗತ್ತಿನಾದ್ಯಂತ ಸ್ಥಾಪಿಸಲಾಗಿವೆ. ಕೆಲವು ಸಣ್ಣ ಸಂಸ್ಥೆಗಳಾಗಿರಬಹುದು. ಉದಾಹರಣೆಗಾಗಿ ಸದರ್ ಲ್ಯಾಂಡ್ ಶೈರ್ ಆರ್ಕೀಡ್ ಸೊಸೈಟಿ,, ಅಥವಾ ದೊಡ್ಡ ರಾಷ್ಟ್ರೀಯ ಮಟ್ಟದ ಅಮೇರಿಕನ್ ಆರ್ಕೀಡ್ ಸೊಸೈಟಿಯಂತಹ ಸಂಸ್ಥೆಗಳೂ ಇವೆ. ಆಹಾರವಾಗಿ ಆರ್ಕೀಡುಗಳ ಬಳಕೆ ವೆನಿಲಾ ವಿಶೇಷವಾಗಿ ಪ್ಲೆನಿಫೋಲಿಯಾದ ಒಣಗಿದಬೀಜದ ಬೀಜಕೋಶಗಳನ್ನ್ ವಾಣಿಜ್ಯಿಕವಾಗಿ ಬೇಕಿಂಗ್ ನಲ್ಲಿ, ಪರಿಮಳಕ್ಕಾಗಿ, ಪರಿಮಳ ದ್ರವ್ಯ ತಯಾರಿಕೆಯಲ್ಲಿ ಮತ್ತು ಸುಗಂಧ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ನೆಲದಲ್ಲಿ ಬೆಳೆಯುವ ಆರ್ಕೀಡುಗಳ ನೆಲದಡಿಯ ಗಡ್ಡೆಯನು ಮುಖ್ಯವಾಗಿ ಆರ್ಕಿಸ್ ಮೆಸ್ಕ್ಯುಲಾ ನೇರಳೆ ಬಣ್ಣದ ಆರ್ಕೀಡ್ ಆಗಿದ್ದು, ಅದನ್ನು ಪುಡಿ ಹಿಟ್ಟು ಮಾಡಲಾಗುತ್ತದೆ ಮತ್ತು ಅದನ್ನು ಅಡುಗೆಗೆ ಉದಾಹರಣೆಗಾಗಿ ಬಿಸಿ ಟೀ, ಕಾಫಿ, ಬಿಯರ್ ಲೆಮನೇಡ್ ಪಾನೀಯಗಳಲ್ಲಿ ಅರ್ಕೀಡ್ ಒಣ್ಗಿದ ಗೆಡ್ಡೆಗಳಿಂದ ಮಾಡಿದ ಅಡುಗೆಯಲ್ಲಿ ಬಳಸುವ ಪುಷ್ಟಿಕರವಾದ ಹಿಟ್ಟನ್ನು ಬಳಸಲಾಗುತ್ತದೆ. ಜ್ಯುಮೆಲ್ಲಿಯಾ ಆರ್ಕೀಡಿನ ಒಣಗಿದ ಎಲೆಗಳನ್ನು ರಮ್ ಗೆ ಪರಿಮಳ ಬರಲು ಉಪಯೋಗಿಸಲ್ಪಡುತ್ತದೆ. ಕೆಲವು ಸತ್ತ ಯಾ ಕೊಳೆತ ಜೈವಿಕ ಪದಾರ್ಥದಿಂದ ಜೀವಿಸುವ ಆರ್ಕೀಡ್ ತಳಿಗಳ ಗುಂಪು `ಗ್ಯಾಸ್ಟ್ರೋಡಿಯಾ' ವು ಬಟಾಟೆಯಂತಹ ಗಡ್ಡೆಗಳನ್ನು ಉತ್ಪಾದಿಸುತ್ತವೆ. ಮತ್ತು ಆಸ್ಟ್ರೇಲಿಯಾದ ಮೂಲ ನಿವಾಸಿಗಳು ಸೇವಿಸುತ್ತಿದ್ದರು. ಮತ್ತು ಇದನ್ನು ಯಶಸ್ವಿಯಾಗಿ ಕೃಷಿ ಮಾಡಬಹುದು. ವಿಶೇಷವಾಗಿ `ಗ್ಯಾಸ್ಟ್ರೋಡಿಯಾ ಸೆಸಮೋಯಿಡೆಸ್' ಅವುಗಳ ಕಾಡು ತಳಿಗಳು ಇನೂ ಇವೆ. ಆದಿ ಮೂಲ ನೆಲೆಸು ಸ್ಥಳಗಳಲ್ಲಿ ಕಂಡು ಬರುವುದು. ಆಸ್ಟ್ರೇಲಿಯಾದಲ್ಲಿರುವ ಕ್ಯು-ರಿಂಗ್-ಗೈ ಬೇಸ್ ನ್ಯಾಶನಲ್ ಪಾರ್ಕಿನಲ್ಲಿ ಇದನ್ನುಕಾಣಬಹುದು. ಆದಿವಾಸಿಗಳು ಆ ಸಸ್ಯವನ್ನು, ಸಸ್ಯದ ಸಸ್ಯದ ಸ್ವಾಭಾವಿಕ ನೆಲೆಯಲ್ಲಿ ಅದರ ಗೆಡ್ಡೆಯ ಪರೆಇಮಳವನ್ನು ಗುರುತಿಸಿದ ನಂತರ ಪತ್ತೆ ಮಾಡಿದರು.

ಸಾಂಪ್ರದಾಯಿಕ ಔಷಧಿಯ ಉಪಯೋಗಳು[ಬದಲಾಯಿಸಿ]

ಅರ್ಕೀಡುಗಳನ್ನು ಹಲವಾರು ರೋಗಗಳಿಗೆ, ದೈಹಿಕ ಅಸ್ವಾಸ್ಥ್ಯಗಳಿಗೆ ಸಾಂಪ್ರದಾಯಿಕ ಔಷಧವಾಗಿ ಬಳಸಲ್ಪಡುತ್ತಿದೆ. ಚೈನಾದಲ್ಲಿ ಇದನ್ನು ಗಿಡಮೂಲಿಕೆಯ ರೋಗನಿವಾರ್ಣೆಗಾಗಿ ಕ್ರಿ. ಪೂ. ೨೮೦೦ ನೆ ಇಸವಿಯಲ್ಲಿ ಬಳಸಲಾಗಿತ್ತು. ಗ್ಯಾಸ್ಟ್ರೋಡಿಯಾಎಲಾಟಾವು ಅತಿ ಪ್ರಾಚೀನ ಚೈನಾದಲ್ಲಿ ಚೈನೀಸ್ ಮಟೀರಿಯಲ್ ಮೆಡಿಸಿನ್ ದಲ್ಲಿ ಮೂರು ಔಷಧೀಯ ಅರ್ಕೀಡುಗಳಲ್ಲಿ ಒಂದು ಎಂದು ಪಟ್ಟಿ ಮಾಡಲಾಗಿದೆ. ೧೦೦ ಏ ಡಿ ಯಲ್ಲಿ ಥಿಯೊಫ್ರೈಸ್ಟಸ್ ಆರ್ಕೀಡುಗಳನ್ನು ತನ್ನ `ಎನ್ಕ್ವೈರಿ ಇಂಟು ಪ್ಲಾಂಟ್'ನಲ್ಲಿ ಪ್ರಕಟಿಸಿದ್ದಾನೆ.

ಸಾಂಸ್ಕೃತಿಕ ಸಂಕೇತ[ಬದಲಾಯಿಸಿ]

ಆರ್ಕೀಡ್ ಗಳು ಸಾಂಸ್ಕೃತಿಕ ಮೌಲ್ಯಗಳೊಂದಿಗೆ ತಳಕು ಹಾಕಿಕೊಂಡಿದೆ. ಉದಾಹರ್ಣೆಗಾಗಿ ಆರ್ಕೀಡ್ ಇದು ಚೈನಾದ ಶಾಓಕ್ಸಿಂಗ್ ಇದರ `ಸಿಟಿ ಫ್ಲವರ' ಆಗಿದೆ. ಕ್ಯಾಟ್ಲಿಯಾ ಮೊಸ್ಸಿಯಾವು ವೆನಿಝುವಾಲಾದ ರಾಷ್ಟ್ರೀಯ ಹೂವಾಗಿದೆ. ಮತ್ತು ಕ್ಯಾಟ್ಲಿಯಾ ಟ್ರಿಯಾನೆಯಿಯು ಕೊಲಂಬಿಯಾದ ರಾಷ್ಟ್ರೀಯ ಹೂವಾಗಿದೆ. ವಂದಾ ಮಿಸ್ ಜೊಆಕ್ವಿಮ್ ಇದು ಸಿಂಗಾಪುರದ ರಾಷ್ಟ್ರೀಯ ಹೂವಾಗಿದೆ.

ನೋಡಿ[ಬದಲಾಯಿಸಿ]

ಆರ್ಕೀಡ್

ಉಲ್ಲೇಖ[ಬದಲಾಯಿಸಿ]

???