ಆರ್ಕಿಮಿಡೀಸನ ತತ್ತ್ವ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ದ್ರವದಲ್ಲಿ ಮುಳುಗಿರುವ ವಸ್ತುವಿನ ನಿಜ ಮತ್ತು ತೋರಿಕೆಯ ಭಾರಗಳ ವ್ಯತ್ಯಾಸ ವಸ್ತುವಿನಷ್ಟೇ ಘನಗಾತ್ರ ಇರುವ ದ್ರವದ ಭಾರಕ್ಕೆ ಸಮಾನವೆಂದು ತಿಳಿಸುತ್ತದೆ. ದ್ರವದ ಊರ್ಧ್ವಮುಖ ಸಂಮರ್ದದ (ದ್ರವದ ಈ ಗುಣದ ಹೆಸರು ಪ್ಲವನತೆ, ಪ್ಲವನ ಬಲ ಅಥವಾ ಬಾಯನ್ಸಿ) ಪರಿಣಾಮವಾಗಿ ವಸ್ತುವಿನ ನಿಜಭಾರ ಕಡಿಮೆ ಎಂದು ಭಾಸವಾಗುತ್ತದೆ. ಆರ್ಕಿಮಿಡೀಸನ ತತ್ತ್ವದ ಪ್ರಕಾರ ವಸ್ತುವಿನ ಮುಳುಗಡೆಯಿಂದ ಸ್ಥಾನಪಲ್ಲಟಗೊಂಡ ದ್ರವದ ಭಾರ ಮತ್ತು ಪ್ಲವನಬಲ ಸಮತೋಲನದಲ್ಲಿವೆ. ಪ್ರ.ಶ.ಪು.೩ನೆಯ ಶತಮಾನದಲ್ಲಿ ಗ್ರೀಕ್ ವಿಜ್ಞಾನಿ ಆರ್ಕಿಮಿಡೀಸನಿಗೆ ಸಿರಕ್ಯೂಸ್ನ ದೊರೆ ತನ್ನ ಚಿನ್ನದ ಕಿರೀಟ ಎಷ್ಟರಮಟ್ಟಿಗೆ ಚಿನ್ನದ್ದು ಎಂಬುದನ್ನು ಪರೀಕ್ಷಿಸುವಂತೆ ಆದೇಶವಿತ್ತ. ಇದರ ಪರೀಕ್ಷೆಯ ಸಮಯದಲ್ಲಿ ಮೂಡಿದ ಫಲವೇ ಈ ತತ್ತ್ವ. ಆರ್ಕಿಮಿಡೀಸನ ತತ್ತ್ವವನ್ನು ಪ್ರಮಾಣೀಕರಿಸಲು ಪ್ರಯೋಗಾಲಯಗಳಲ್ಲಿ ಸಾಮಾನ್ಯವಾಗಿ ಸಾಕೆಟ್ ಮತ್ತು ಸಿಲಿಂಡರ್ ಎಂಬ ಪ್ರಯೋಗವನ್ನು ನಡೆಸುತ್ತಾರೆ. ಆರ್ಕಿಮಿಡೀಸನ ತತ್ತ್ವ ಮೇಲ್ಮೈ ಒತ್ತಡವನ್ನು ಪರಿಗಣಿಸುವುದಿಲ್ಲ.