ವಿಷಯಕ್ಕೆ ಹೋಗು

ಆರೋನ್ ಸ್ವಾರ್ಟ್ಜ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆರೋನ್ ಸ್ವಾರ್ಟ್ಜ್
ಸ್ವಾರ್ಟ್ಜ್ ೨೦೦೮ರಲ್ಲಿ
ಜನನ(೧೯೮೬-೧೧-೦೮)೮ ನವೆಂಬರ್ ೧೯೮೬
ಮರಣJanuary 11, 2013(2013-01-11) (aged 26)
Cause of deathನೇಟು ಹಾಕಿಕೊಂಡು ಆತ್ಮಹತ್ಯೆ
ವೃತ್ತಿ(ಗಳು)ಸಾಫ್ಟ್‌ವೇರ್ ಡೆವೆಲಪರ್, ಲೇಖಕ, ಇಂಟರ್ನೆಟ್ ಕ್ರಾಂತಿಕಾರಿ
ಜಾಲತಾಣaaronsw.com

ಆರೋನ್ ಎಚ್. ಸ್ವಾರ್ಟ್ಜ್ (ಇಂಗ್ಲೀಷ್‌ನಲ್ಲಿ:Aaron H. Swartz, ನವೆಂಬರ್ ೮, ೧೯೮೬ – ಜನವರಿ ೧೧, ೨೦೧೩) ಒಬ್ಬ ಅಮೇರಿಕನ್ ಕಂಪ್ಯೂಟರ್ ಪ್ರೋಗ್ರಾಮರ್, ಲೇಖಕ, ಕ್ರಾಂತಿಕಾರಿ, ರಾಜಕೀಯ ದಾಖಲೆಕಾರ, ರಾಜಕೀಯ ಸಂಘಟಕ, ಮತ್ತು ಇಂಟರ್ನೆಟ್ ಕ್ರಾಂತಿಕಾರಿ ಆಗಿದ್ದರು. ಸ್ವಾರ್ಟ್ಜ್ RSSನ ರೂಪುರೇಷಗಳ ಸಂಗ್ರಹ "RSS 1.0"ದ ಸಹ ಲೇಖಕ ಕೂಡ, ಮತ್ತು ವೆಬ್‌ಸೈಟ್ ಫ್ರೇಮ್‌ವರ್ಕ್ web.py ಹಾಗೂ ಮುಕ್ತ ಗ್ರಂಥಾಲಯದ ಅರ್ಕಿಟೆಕ್ಚರ್‌ ಕೂಡ ಅಭಿವೃದ್ದಿ ಪಡಿಸಿದರು. ಆಗಿಂದ್ದಾಗ್ಗೆ ರೆಡ್‌ಇಟ್‌ನ ಸಹ-ಸಂಸ್ಥಾಪಕನೆಂದು ಕರೆಯಲ್ಪಟ್ಟರೂ, ರೆಡ್‌ಇಟ್‌ನ ಮೂಲ ಸಂಸ್ಥಾಪಕರು ಇದನ್ನು ಒಪ್ಪದೆ, ವಿವಾದಾಸ್ವದವಾಗಿಸಿದ್ದಾರೆ.[][][] ಸ್ವಾರ್ಟ್ಜ್ ಸಮಾಜಶಾಸ್ತ್ರ, ನಾಗರಿಕ ಜಾಗೃತಿ ಮತ್ತು ಕ್ರಾಂತಿಯ ಕಡೆಗೆ ತಮ್ಮ ಗಮನವನ್ನು ಕೇಂದ್ರೀಕರಿಸಿದ್ದರು. ೨೦೧೦ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾನಿಲಯದ ಸೆಂಟರ್ ಫಾರ್ ಎಥಿಕ್ಸ್‌ನ ಸದಸ್ಯರಾಗಿದ್ದರು. ಡಿಮ್ಯಾಂಡ್ ಪ್ರೋಗ್ರೆಸ್‌ನ ಆನ್‌ಲೈನ್ ಗುಂಪಿನ ಸಹಸಂಸ್ಥಾಪಕ ಕೂಡ (ಇತ್ತೀಚೆಗೆ ಈ ಗುಂಪು ರಿಚರ್ಡ್ ಓ'ಡ್ವಯೆರ್ ಅವರನ್ನು ಬೆಂಬಲಿಸಲು ಧ್ವನಿ ಎತ್ತಿತ್ತು) ಮತ್ತು ನಂತರ ಯು.ಎಸ್ ಹಾಗೂ ಅಂತರರಾಷ್ಟ್ರೀಯ ಕ್ರಾಂತಿಕಾರಿ ಗುಂಪುಗಳಾದ ರೂಟ್‌ಸ್ಟ್ರೈಕರ್ಸ್ ಹಾಗೂ ಅವಾಜ್ ಜೊತೆಗೂ ಕೆಲಸ ಮಾಡಿದ್ದಾರೆ. ಜನವರಿ ೬, ೨೦೧೧ ರಂದು, ಸ್ವಾರ್ಟ್ಜ್ ಅವರನ್ನು JSTOR ನಿಂದ ಶೈಕ್ಷಣಿಕ ನಿಯತಕಾಲಿಕೆಗಳನ್ನು ವ್ಯವಸ್ಥಿತವಾಗಿ ಡೌನ್ಲೋಡ್ ಮಾಡಿರುವ ಆರೋಪಕ್ಕೆ ಬಂಧಿಸಲಾಗಿತ್ತು, ಹಾಗೂ ಈ ವಿಷಯ ಫೆಡರಲ್ ವಿಚಾರಣೆಗೂ ಎಡೆ ಮಾಡಿಕೊಟ್ಟಿತ್ತು. [][] ಜನವರಿ ೧೧, ೨೦೧೩ರಂದು, ಸ್ವಾರ್ಟ್ಜ್ ಬ್ರೂಕ್ಲಿನ್, ನ್ಯೂಯಾರ್ಕ್‌ನ ತಮ್ಮ ಅಪಾರ್ಟ್‌ಮೆಂಟಿನಲ್ಲಿ ಸತ್ತಿರುವುದು ಕಂಡುಬಂತು; ತಮ್ಮನ್ನು ತಾವು ನೇಟು ಹಾಕಿಕೊಂಡಿರುವುದಾಗಿ ವರದಿಯಾಗಿದೆ.[][]

ಜೀವನ ಮತ್ತು ಕೆಲಸ

[ಬದಲಾಯಿಸಿ]
ಸ್ವಾರ್ಟ್ಜ್ ೨೦೦೨ರಲ್ಲಿ (ವಯಸ್ಸು ೧೫ ) ಲಾರೆನ್ಸ್ ಲೆಸ್ಸಿಗ್ ಜೊತೆ ಕ್ರಿಯೇಟೀವ್ ಕಾಮನ್ಸ್ ಲಾಂಚ್ ಪಾರ್ಟಿಯಲ್ಲಿ

ಪ್ರಕಟಣೆಗಳು

[ಬದಲಾಯಿಸಿ]
  • Swartz, Aaron (2002). "MusicBrainz: A Semantic Web Service". Intelligent Systems. IEEE. 17 (1): 76–77. doi:10.1109/5254.988466. ISSN 1541-1672. {{cite journal}}: Unknown parameter |month= ignored (help)
  • Swartz, Aaron; Hendler, James (2001), "The Semantic Web: A Network of Content for the Digital City", Proceedings of the Second Annual Digital Cities Workshop, Kyoto, JP: Blogspace {{citation}}: Unknown parameter |month= ignored (help).
  • Gruber, John; Swartz, Aaron (2004), Markdown definition, Daring fireball {{citation}}: Unknown parameter |month= ignored (help).

ಬಾಹ್ಯಕೊಂಡಿಗಳು

[ಬದಲಾಯಿಸಿ]
  1. Ohanian, Alexis, Twitter.
  2. "…there was a third cofounder of Reddit, who was…", Today I learned…, Reddit
  3. Ohanian, Alexis, +, Google.
  4. Kirschbaum, Connor (August 3, 2011). "Swartz indicted for JSTOR theft". The Tech. Massachusetts Institute of Technology. Retrieved January 12, 2013.
  5. "Police Log". The Tech. Massachusetts Institute of Technology. February 18, 2011. Archived from the original on ಜನವರಿ 15, 2013. Retrieved January 12, 2013.
  6. "World", News, UK: The BBC {{citation}}: |contribution= ignored (help).
  7. "Statement from the family of Aaron Swartz", Business insider, 2013 {{citation}}: Unknown parameter |month= ignored (help).