ಆರಿಸ್ಟಾರ್ಕಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರ.ಶ.ಪು.ಸು.೩೧೦-೨೫೦. ಗ್ರೀಸ್ ದೇಶದ (ಸೇಮೋಸ್ನ) ಖಗೋಳಶಾಸ್ತ್ರಜ್ಞ. ಅರ್ಧಗೋಳಾಕಾರದ ನೆರಳುಗಡಿಯಾರವನ್ನು (ಸನ್ ಡಯಲ್) ರೂಪಿಸಿದ. ಸೂರ್ಯನ ಸುತ್ತಲೂ ಭೂಮಿ ಪರಿಭ್ರಮಿಸುತ್ತಿದೆ ಎಂಬುದನ್ನು ಸ್ಥಿರೀಕರಿಸಿದವ ರಲ್ಲಿ ಮೊದಲಿಗ. ಸೂರ್ಯ ಮತ್ತು ಚಂದ್ರ ಇವುಗಳ ದೂರ ಮತ್ತು ಗಾತ್ರಗಳನ್ನು ಅಳೆದ. ಒಂದು ವರ್ಷದ ಅವಧಿ ೩೬೫ ೧/೪ ದಿವಸಗಳೆಂಬುದು ಕೇವಲ ಸರಿಸುಮಾರಾದ ಅವಧಿಯೆಂಬುದಾಗಿ ತಿಳಿಸಿ, ಇದಕ್ಕೆ ಒಂದು ದಿವಸದ ೧/೧೬೨೩ ರಷ್ಟನ್ನು ಸೇರಿಸಬೇಕೆಂಬು ದಾಗಿಯೂ ತಿಳಿಸಿಕೊಟ್ಟ. ಖಗೋಳವಿಜ್ಞಾನದಲ್ಲಿ ಗಮನಾರ್ಹ ಲೆಕ್ಕಾಚಾರಗಳನ್ನು ಮಾಡಿದ. ತನ್ನ ಜೀವಿತಾವಧಿಯಲ್ಲಿ ಸಾಕಷ್ಟು ಅವಹೇಳನಕ್ಕೆ ಒಳಗಾದ. ಅನೇಕ ಶತಮಾನಗಳ ತರುವಾಯ ಆತನ ಪರಿಕಲ್ಪನೆಗಳಿಗೆ ಸೂಕ್ತ ಗೌರವ ಸಿಕ್ಕಿತು.