ಆಯಿಲ್ ಪುಲ್ಲಿಂಗ್

ವಿಕಿಪೀಡಿಯ ಇಂದ
Jump to navigation Jump to search

ಆಯಿಲ್ ಪುಲ್ಲಿಂಗ್ - ಆಯುರ್ವೇದ ಪದ್ಧತಿಯ ಗ್ರಂಥವಾದ ಚರಕಸಂಹಿತೆಯಲ್ಲಿ ಹೇಳಿರುವ ಒಂದು ಚಿಕಿತ್ಸಾ ವಿಧಾನ. ಈ ಪದ್ಧತಿಯಲ್ಲಿ ಸುಮರು ೧೦ ಮಿಲಿಲೀಟರ್ ಅಂದರೆ ಎರಡು ಟೇಬಲ್ ಚಮಚದಷ್ಟು ಶುದ್ಧೀಕರಿಸಿದ ಸೂರ್ಯಕಾಂತಿ ಎಣ್ಣೆ ಅಥವಾ ಶೇಂಗಾ(ಕಡಲೇಕಾಯಿ) ಎಣ್ಣೆಯನ್ನು ಬಾಯಿಯಲ್ಲಿ ಹಾಕಿಕೊಂಡು ೧೦ ರಿಂದ ೧೫ ನಿಮಿಷ ನಿಧಾನವಾಗಿ ಮುಕ್ಕಳಿಸುವರು. ಆಕಸ್ಮಿಕವಾಗಿ ಒಂದಿಷ್ಟು ಎಣ್ಣೆ ಹೊಟ್ಟೆಯಲ್ಲಿ ಹೋದರೆ ಗಾಬರಿ ಆಗಬೇಕಿಲ್ಲ, ಅದರಿಂದ ಏನೂ ಅಪಾಯ ಇಲ್ಲ. ಆಯಿಲ್ ಪುಲ್ಲಿಂಗ್ ನಿಂದ ಸಾಮಾನ್ಯವಾಗಿ ಎಲ್ಲ ರೋಗಗಳು ನಿವಾರಣೆಯಾಗುತ್ತವೆ, ಇದು ರೋಗ ನಿವಾರಕವೂ ರೋಗ ನಿರೋಧಕವೂ ಆಗಿದೆ ಎಂದು ಹೇಳಲಾಗುತ್ತದೆ.