ವಿಷಯಕ್ಕೆ ಹೋಗು

ಆಮ್ಲಗಳು ಮತ್ತು ಪ್ರತ್ಯಾಮ್ಲಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಮ್ಲಗಳು ಮತ್ತು ಪ್ರತ್ಯಾಮ್ಲಗಳು.ಇಲ್ಲಿ ಆಮ್ಲಗಳು ಹುಳಿ ರುಚಿ ಹೊಂದಿದ್ದು ನೀಲಿ ಲಿಟ್ಮಸ್ ಅನ್ನು ಕೆಂಪು ಬಣ್ಣಕ್ಕೆ ಮತ್ತು ಪ್ರತ್ಯಾಮ್ಲಗಳು ಕಹಿ ರುಚಿಯನ್ನು ಹೊಂದಿದ್ದು ಕೆಂಪು ಲಿಟ್ಮಸ್ ಅನ್ನು ನೀಲಿ ಬಣ್ಣಕ್ಕೆ ಬದಲಾಯಿಸುವ ಸಾಮರ್ಥ್ಯ ಹೊಂದಿದೆ.

ಹಿನ್ನೆಲೆ[ಬದಲಾಯಿಸಿ]

ಜಲ ದ್ರಾವಣದಲ್ಲಿರುವ ಹೈಡ್ರಾಕ್ಸೈಡ್ ಆಯಾನನ್ನು (ಔಊ __) ಬಿಡುಗಡೆ ಮಾಡುವ, ಆಮ್ಲಗಳನ್ನು ತಟಸ್ಥಗೊಳಿಸುವ (ನ್ಯೂಟ್ರಲೈಸ್) ಅಥವಾ ಎಲೆಕ್ಟ್ರಾನ್ ಕೊರತೆ ಇರುವ ವಸ್ತುವಿನೊಡನೆ ಸಂಯೋಜನೆಗೊಂಡು ಅದಕ್ಕೆ ಎಲೆಕ್ಟ್ರಾನ್ ನೀಡುವ ವಸ್ತು ಪ್ರತ್ಯಾಮ್ಲ (ಬೇಸ್). ಈ ವಿವರಗಳನ್ನು ನಿಖರವಾದ ವ್ಯಾಖ್ಯೆಗಳೆಂದೇನೂ ಭಾವಿಸಬೇಕಾಗಿಲ್ಲ. ಕ್ಷಾರ ಲಿಟ್ಮಸ್ಸನ್ನು ನೀಲಿ ಬಣ್ಣಕ್ಕೆ ತಿರುಗಿಸುವುದು. ಮುಟ್ಟಿದರೆ ಸಾಬೂನು ಮುಟ್ಟಿದ ಭಾವನೆ ಬರುವುದು. ಖಾರವಾಗಿದ್ದು ನಾಲಿಗೆಯನ್ನು ಕೊರೆಯುವುದು. [೧]ಕ್ರಮೇಣ ಆ ಗುಣಗಳ ಜೊತೆಗೆ ಇನ್ನೂ ಕೆಲವು ವಿಶಿಷ್ಟಗುಣಗಳನ್ನು ಸೇರಿಸಲಾಯಿತು. ಮಂದ (ಡೈಲ್ಯೂಟ್) ಆಮ್ಲ ಹುಳಿ. ಆಮ್ಲಗಳು ಸಾಮಾನ್ಯವಾಗಿ ಕಾರ್ಬೊನೇಟುಗಳೊಡನೆ ವರ್ತಿಸಿ ಕಾರ್ಬನ್ ಡೈಆಕ್ಸೈಡನ್ನುಂಟುಮಾಡುವುವು. ಲಿಟ್ಮಸ್ ಅಲ್ಲದೆ ಇತರ ಅನೇಕ ಸಾವಯವ ವರ್ಣ ದ್ರವ್ಯಗಳೂ ಆಮ್ಲ ಪ್ರತ್ಯಾಮ್ಲಗಳಲ್ಲಿ ವಿಶಿಷ್ಟ ಬಣ್ಣವನ್ನು ಹೊಂದುವುವು. ಉದಾಹರಣೆಗೆ, ಮಿಥೈಲ್ ಆರೆಂಜ್, ಆಮ್ಲಗಳಲ್ಲಿ ಗುಲಾಬಿ ಕೆಂಪು ಬಣ್ಣವನ್ನೂ ಪ್ರತ್ಯಾಮ್ಲಗಳಲ್ಲಿ ಹಳದಿ ಬಣ್ಣವನ್ನೂ ಹೊಂದುವುದು. ಫಿನಾಲ್‍ಫ್ತಲೀನ್ ಆಮ್ಲಗಳಲ್ಲಿ ನಿರ್ವರ್ಣವಾಗಿರುವುದು. ಪ್ರತ್ಯಾಮ್ಲಗಳಲ್ಲಿ ಗುಲಾಬಿ ಕೆಂಪುಬಣ್ಣ ಹೊಂದುವುದು. ಆಮ್ಲಗಳು ಮತ್ತು ಪ್ರತ್ಯಾಮ್ಲಗಳು ಅನೇಕ ರಾಸಾಯನಿಕ ಪರಿವರ್ತನೆಗಳ ವೇಗವರ್ಧಕಗಳಾಗಿರುವುವು.

ರಚನೆ[ಬದಲಾಯಿಸಿ]

ಆಮ್ಲಗಳ ರಚನೆಯಲ್ಲಿ ಕಂಡುಬರುವ ಕೆಲವೊಂದು ಸಾದೃಶ್ಯಗಳು ಅವುಗಳ ವಿಶಿಷ್ಟಗುಣಗಳಿಗೆ ಕಾರಣವೆಂಬ ಭಾವನೆಯನ್ನು ಮೊಟ್ಟಮೊದಲು ಪ್ರತಿಪಾದಿಸಿದವ ಲೆವಾಸಿಯೆ. ಎಲ್ಲ ಆಮ್ಲಗಳ ಅಣುಗಳಲ್ಲಿಯೂ ಆಕ್ಸಿಜನ್ನಿನ (ಆಮ್ಲಜನಕ) ಪರಮಾಣುವಿದ್ದು, ಈ ಆಕ್ಸಿಜನ್ ವಸ್ತುವಿಗೆ ಆಮ್ಲೀಯ ಗುಣವನ್ನುಂಟುಮಾಡುವುದೆಂದು ಅವನ ಭಾವನೆಯಾಗಿತ್ತು. ಅನ್ವರ್ಥಕವಾದ ಆಕ್ಸಿಜನ್ ಎಂಬ ಹೆಸರನ್ನು ಈ ಮೂಲವಸ್ತುವಿಗೆ ಲೆವಾಸಿಯೆಯೇ ಕೊಟ್ಟ. ಇದರ ಅನಂತರ ಡೇವಿ ಮ್ಯೂರಿಯಾಟಿಕ್ ಆಮ್ಲದಲ್ಲಿ (ಹೈಡ್ರೋಕ್ಲೋರಿಕಾಮ್ಲ) ಆಕ್ಸಿಜನ್ನಿನ ಅಗತ್ಯವಿಲ್ಲವೆಂದು ತೋರಿಸಿದ. ಒಂದು ವಸ್ತು ಆಮ್ಲೀಯ ಗುಣ ಹೊಂದಲು ಆಕ್ಸಿಜನ್ನಿನ ಅಗತ್ಯವಿಲ್ಲ, ಪ್ರತಿ ಆಮ್ಲದ ಅಣುವಿನಲ್ಲಿಯೂ ಇರುವ ಹೈಡ್ರೊಜನ್ ಪರಮಾಣು ವಸ್ತುವಿನ ಆಮ್ಲೀಯಗುಣಕ್ಕೆ ಕಾರಣ ಎಂಬುದು ಇವನ ಮತ. ಲೇಬೆಗ್ ಆಮ್ಲೀಯ ಗುಣವುಳ್ಳ ಅನೇಕ ಸಾವಯವ ಸಂಯುಕ್ತಗಳ ಸಂಶೋಧನೆ ಮಾಡಿ ಪ್ರತಿಯೊಂದು ಆಮ್ಲದ ಅಣುವಿನಲ್ಲಿಯೂ ಲೋಹದಿಂದ ಪಲ್ಲಟಿಸಲ್ಪಡಬಹುದಾದ ಹೈಡ್ರೊಜನ್ ಪರಮಾಣು ಒಂದಾದರೂ ಇದ್ದು, ಇದು ವಸ್ತುವಿನ ಆಮ್ಲೀಯ ಗುಣಕ್ಕೆ ಕಾರಣವೆಂದು ಪ್ರತಿಪಾದಿಸಿ ಡೇವಿಯ ಭಾವನೆಯನ್ನು ಪುಷ್ಟೀಕರಿಸಿದ. ಪಲ್ಲಟಿಸಲ್ಪಡಬಹುದಾದ ಹೈಡ್ರೊಜನ್ ಪರಮಾಣುವನ್ನು ಅವುಗಳ ಅಣುವಿನಲ್ಲಿ ಹೊಂದಿದ ವಸ್ತುಗಳು ಆಮ್ಲಗಳು ಎಂಬ ಭಾವನೆ ಬಹುಕಾಲ ಬಳಕೆಯಲ್ಲಿತ್ತು. ಪ್ರಥಮ ಪಾಠಗಳಲ್ಲಿ ಆಮ್ಲಗಳ ಈ ವಿವರಣೆಯನ್ನು ಈಗಲೂ ನೀಡುವರು. ಆದರೆ ಈ ವಿವರಣೆ ಆಮ್ಲಗಳ ಪ್ರಬಲತೆಗಳಲ್ಲಿ (ಸ್ಟ್ರೆಂಗ್ತ್), ವೇಗವರ್ಧಕ ಸಾಮಥ್ರ್ಯದಲ್ಲಿ ಮತ್ತು ವಿದ್ಯುದ್ವಾಹಕತ್ವದಲ್ಲಿ ಕಂಡುಬರುವ ಹೆಚ್ಚಿನ ವ್ಯತ್ಯಾಸಗಳನ್ನು ವಿವರಿಸಲಾಗಲಿ ಅಥವಾ ರಚನೆಯಲ್ಲಿ ಹೈಡ್ರೊಜನ್ ಇರದ ಅಲ್ಯೂಮಿನಿಯಂ ಕ್ಲೋರೈಡ್ ಮುಂತಾದ ವಸ್ತುಗಳ ದ್ರಾವಣಗಳು ಆಮ್ಲೀಯಗುಣಗಳನ್ನು ಏಕೆ ಪ್ರದರ್ಶಿಸುವುವೆಂದು ವಿವರಿಸಲು ಸಮರ್ಥವಾಗಿಲ್ಲ. ಈಚಿನ ವರ್ಷಗಳಲ್ಲಿ ಆಮ್ಲಗಳ ವಿಷಯಗಳಲ್ಲಿ ನಮ್ಮ ಭಾವನೆಗಳು ವಿಶೇಷ ಮಾರ್ಪಾಡಾಗಿ ಅನೇಕ ಹೊಸ ಭಾವನೆಗಳು ಪ್ರತಿಪಾದಿತವಾಗಿವೆ. [೨]

ರಾಚನಿಕ ನಿರ್ಧಾರಕಗಳು (ಸ್ಟ್ರಕ್ಚರಲ್ ಕ್ರೈಟೀರಿಯ)[ಬದಲಾಯಿಸಿ]

ರಾಚನಿಕವಾಗಿ ಒಂದು ಜೊತೆ ಎಲೆಕ್ಟ್ರಾನನ್ನು ಕೊಡುವ ಸಾಮಥ್ರ್ಯವುಳ್ಳ ಪರಮಾಣುವನ್ನು ಹೊಂದಿರುವ ಎಲ್ಲ ವಸ್ತುಗಳೂ ಪ್ರತ್ಯಾಮ್ಲಗಳು. ಒಂದು ಜೊತೆ ಎಲೆಕ್ಟ್ರಾನನ್ನು ಗ್ರಹಿಸುವ ಸಾಮಥ್ರ್ಯ ಹೊಂದಿರುವ ಎಲ್ಲ ವಸ್ತುಗಳೂ ಆಮ್ಲಗಳು. ಈ ಪ್ರತ್ಯಾಮ್ಲ ಆಮ್ಲಗಳು ನಿರ್ದೇಶಕ ಸಹ ಸಂಯೋಜಕ ಸಾಮಥ್ರ್ಯವಿರುವ ಕೋಆರ್ಡಿನೇಟ್ ಕೋವೆಲೆಂಟ್ ಬಂಧದ ಮೂಲಕ ಸಂಯೋಜಿಸಿ ಸಂಯುಕ್ತವಾಗುವುದೇ ತಟಸ್ಥೀಕರಣ. ಇದರಿಂದಾಗಿ ಫಲಿತವಸ್ತು ಅಯಾನ್‍ಗಳಾಗಿ ವಿಶ್ಲೇಷಿಸಬಹುದು. ಅಥವಾ ಬೇರೊಂದು ರೀತಿಯಲ್ಲಿ ಪುನರ್ಯೋಜಿತವಾಗಬಹುದು. ಇಲ್ಲವೆ, ಯಾವ ವ್ಯತ್ಯಾಸವನ್ನೂ ಹೊಂದದೆ ಇರಬಹುದು

ಸರ್ವಸಮನ್ವಯತೆ[ಬದಲಾಯಿಸಿ]

ಆಮ್ಲ ಮತ್ತು ಪ್ರತ್ಯಾಮ್ಲಗಳೆಂಬ ಪದಗಳು ನಿರಪೇಕ್ಷ ಪದಗಳಲ್ಲ. ಇವು ಸಾಪೇಕ್ಷ ಪದಗಳಾಗಿದ್ದು ಕೆಲವೊಂದು ವಿಶಿಷ್ಟ ಸನ್ನಿವೇಶಕ್ಕೆ ಸಂಬಂಧ ಹೊಂದಿರುವ ಪದಗಳು ಎನ್ನುವುದು ಸ್ಪಷ್ಟವಾಗಿರುವುದು. ಈಗ ನಾವು ಸಂಬಂಧ ವಿಮರ್ಶಿಸಿದ ಬೇರೆ ಬೇರೆ ವಾದಗಳು ಪರಸ್ಪರ ವಿರುದ್ಧ ವಾದಗಳಾಗಿಲ್ಲ. ಒಂದು ರೀತಿಯಲ್ಲಿ ಇವು ಪರಸ್ಪರ ಪೂರಕಗಳು. ಪ್ರತಿಯೊಂದು ವಾದವೂ ಆಯಾ ದೃಷ್ಟಿಯಿಂದ ಸರಿಯಾಗಿರುವುದು. ಉದಾಹರಣೆಗೆ, ನೀರಿನ ದ್ರಾವಣದಲ್ಲಿ ಹೈಡ್ರೊಕ್ಲೋರಿಕ್ ಆಮ್ಲ- ಸೋಡಿಯಂ ಹೈಡ್ರಾಕ್ಸೈಡ್‍ಗಳ ಅನುಮಾಪನವನ್ನು ಪರಿಶೀಲಿಸುವಾಗ ನಾವು ಅರೀನಿಯಸ್ ವಾದಕ್ಕಿಂತ ಮುಂದೆ ಹೋಗಬೇಕಾದುದಿಲ್ಲ. ದ್ರವ ಅಮೋನಿಯದಂಥ ಜಲೇತರ (ನಾನಾಏಕ್ವಿಯಸ್) ದ್ರಾವಕಗಳಲ್ಲಿ ನಡೆಯುವ ಪರಿವರ್ತನೆಗಳ ಪರಿಶೀಲನೆಯಲ್ಲಿ ದ್ರಾವಕ ವ್ಯವಸ್ಥೆಗಳ ವಾದವನ್ನು ಅನುಸರಿಸಬೇಕಾಗುವುದು. ಯಾವುದೇ ಒಂದು ದೃಷ್ಟಿಕೋನ ಎಲ್ಲ ಸನ್ನಿವೇಶಗಳನ್ನು ವಿವರಿಸಲು ಸಮರ್ಥವಾಗಿದೆ ಎನ್ನಲಾಗುವುದಿಲ್ಲ. ಸರ್ವಸಮನ್ವಯತೆ ಹೆಚ್ಚು ಜಟಿಲವಾಗಿರುವುದು. ವ್ಯಾಪ್ತಿ ಕಡಿಮೆಯಾಗಿದ್ದರೂ ಅನೇಕ ದೃಷ್ಟಿಕೋನಗಳು ಅವುಗಳ ಸರಳತೆಯ ಕಾರಣದಿಂದ ಕೆಲವು ವಿಶೇಷ ಸನ್ನಿವೇಶಗಳಲ್ಲಿ ಬಳಸಲಾಗದಿದ್ದರೂ ಹೆಚ್ಚು ಉಪಯುಕ್ತವಾದವು. ಒಂದೊಂದು ವಾದ ಒಂದೊಂದು ಅನ್ವಯ ಕ್ಷೇತ್ರವನ್ನು ಹೊಂದಿದ್ದು ಈ ಎಲ್ಲ ವಾದಗಳ ಮೂಲಭೂತ ಜ್ಞಾನ ಆಮ್ಲ-ಪ್ರತ್ಯಾಮ್ಲಗಳ ಪೂರ್ಣ ವಿವರಣೆಯನ್ನರಿಯಲು ಅಗತ್ಯ. ಸಿದ್ಧಾಂತದ ಆಧಾರದ ಮೇಲೆ ಯಾವ ವಸ್ತುಗಳು ಆಮ್ಲಗಳು, ಯಾವ ವಸ್ತುಗಳು ಪ್ರತ್ಯಾಮ್ಲಗಳು ಎಂದು ನಿರ್ಣಯಿಸುವುದು ಕಷ್ಟವಾದುದಾದರೂ ಕೆಲವು ವಸ್ತುಗಳು ಆಮ್ಲಗಳೆಂದೂ ಕೆಲವು ವಸ್ತುಗಳು ಪ್ರತ್ಯಾಮ್ಲಗಳೆಂದೂ ದೀರ್ಘ ಕಾಲದಿಂದಲೂ ಸುಪರಿಚಿತವಾಗಿದೆ. ಇಂಥ ಕೆಲವು ಸುವಿಧಿತ ಪ್ರಮುಖ ಆಮ್ಲ ಮತ್ತು ಪ್ರತ್ಯಾಮ್ಲಗಳನ್ನು ಇವುಗಳ ಪ್ರಾಮುಖ್ಯವನ್ನು ಈ ಕೆಳಗೆ ಸಂಗ್ರಹವಾಗಿ ಕೊಟ್ಟಿದೆ.

ಉಪಯೋಗಗಳು[ಬದಲಾಯಿಸಿ]

ಆಮ್ಲಗಳು: ಅಮ್ಲಗಳನ್ನು ಖನಿಜ ಆಮ್ಲಗಳು ಮತ್ತು ಸಾವಯವ ಆಮ್ಲಗಳು ಎಂದು ಎರಡು ವರ್ಗಗಳಾಗಿ ವಿಂಗಡಿಸಬಹುದು. ಖನಿಜ ಆಮ್ಲಗಳ ಪೈಕಿ ಔಪಯೋಗಿಕ ದೃಷ್ಟಿಯಿಂದ ಸಲ್ಫ್ಯೂರಿಕ್ ಆಮ್ಲ (ಊ2Sಔ4) ಅಗ್ರಸ್ಥಾನ ಹೊಂದಿದೆ. ಫಲವತ್ಕಾರಿಗಳು (ಫರ್ಟಿಲೈಸರ್ಸ್), ರೇಯಾನ್, ನೂಲುಗಳು (ಟೆಕ್ಸ್‍ಟೈಲ್ಸ್), ವರ್ಣ ದ್ರವ್ಯಗಳು, ಸ್ಪೋಟಕಗಳು, ಸಂಶ್ಲೇಷಿತ ಶುದ್ಧಿಕಾರಕಗಳು (ಸಿಂಥೆಟಿಕ್‍ಡಿಟರ್ಜೆಂಟ್), ಅಯಾನ್ ವಿನಿಮಯಿಗಳು (ನೋಡಿ- ಅಯಾನ್-ವಿನಿಮಯಿಗಳು), ವಿವಿಧ ನಿರವಯವ ಮತ್ತು ಸಾವಯವ ಸಂಯುಕ್ತಗಳು, ಇತ್ಯಾದಿಗಳ ತಯಾರಿಕೆಗಳಲ್ಲಿಯೂ ಪೆಟ್ರೋಲಿಯಂ ಶುದ್ಧೀಕರಣ, ಲೋಹಗಳ ಶುದ್ಧೀಕರಣ, ಅದುರುಗಳಿಂದ ಲೋಹಗಳನ್ನು ತೆಗೆಯುವುದು ಮುಂತಾದ ಕಾರ್ಯಗಳಲ್ಲಿಯೂ ಸೀಸ ಸಂಗ್ರಾಹಕಗಳಲ್ಲಿಯೂ (ಲೆಡ್‍ಅ ಕ್ಯುಮ್ಯುಲೇಟರ್ಸ್) ಈ ಆಮ್ಲವನ್ನು ಆಗಾಧ ಪ್ರಮಾಣದಲ್ಲಿ ಬಳಸುವರು. ಹೈಡ್ರೊಕ್ಲೋರಿಕ್ ಆಮ್ಲ (ಊಅಟ) ಉಪಯುಕ್ತತೆಯಲ್ಲಿ ಎರಡನೆಯ ಸ್ಥಾನ ಹೊಂದಿದೆ. ಉಕ್ಕಿನ ಸಾಮಾನುಗಳ ಮೇಲೆ ತವರ ಅಥವಾ ಸತುವಿನ ಲೇಪ ಕೊಡುವ ಮುಂಚೆ ಅಥವಾ ಇವುಗಳನ್ನು ಎನ್ಯಾಮೆಲ್ ಮಾಡುವ ಮುಂಚೆ, ಈ ವಸ್ತುಗಳನ್ನು ಹೈಡ್ರೊಕ್ಲೋರಿಕ್ ಆಮ್ಲದಲ್ಲಿ ಅದ್ದಿ, ಇವುಗಳ ಮೇಲ್ಮೈಯನ್ನು ಶುದ್ಧಗೊಳಿಸುವರು. ಇದಕ್ಕಾಗಿ ಈ ಆಮ್ಲ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸಲಾಗುವುದು. ಇದನ್ನು ವಿವಿಧ ಲೋಹಗಳ ಕ್ಲೋರೈಡುಗಳ ತಯಾರಿಕೆಯಲ್ಲಿಯೂ ವರ್ಣ ದ್ರವ್ಯಗಳೂ, ಔಷಧಗಳು ಮತ್ತು ಇತರ ಅನೇಕ ವಸ್ತುಗಳ ತಯಾರಿಕೆಯಲ್ಲಿಯೂ ಉಪಯೋಗಿಸುವರು. ನೈಟ್ರಿಕ್ ಆಮ್ಲ (ಊಓಔ3) ಕೈಗಾರಿಕೆಗಳಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ, ಈ ಆಮ್ಲವನ್ನು ವಿಶೇಷವಾಗಿ ವರ್ಣ ದ್ರವ್ಯಗಳ ಮತ್ತು ಸ್ಫೋಟಕಗಳ ತಯಾರಿಕೆಗಳಲ್ಲಿ ಉಪಯೋಗಿಸುವರು. ನೈಟ್ರೇಟುಗಳು ಉತ್ತಮವಾದ ಸಸಾರಜನಕ ಫಲವತ್ಕಾರಿಗಳು (ನೈಟೋಜಿನಸ್ ಫರ್ಟಿಲೈಸರ್ಸ್).[೩][೪]

ಫಾಸ್ಫಾರಿಕ್ ಆಮ್ಲ (ಊ2ಅಔ4) ಇನ್ನೊಂದು ಖನಿಜ ಆಮ್ಲ. ಫಾಸ್ಫರಸ್ ಅಂಶದಲ್ಲಿ ಸಮೃದ್ಧವಾಗಿರುವ ಟ್ರಿಪಲ್ ಫಾಸ್ಫೇಟ್ ಎಂಬ ಫಾಸ್ಫಾಟಿಕ್ ಫಲವತ್ಕಾರಿಯ ತಯಾರಿಕೆಯಲ್ಲಿ ಇದನ್ನು ವಿಶೇಷವಾಗಿ ಬಳಸಬಹುದು.

ಕಾರ್ಬಾನಿಕ್ ಆಮ್ಲ (ಊ2ಅಔ3) ದ್ರಾವಣದಲ್ಲಿ ಮಾತ್ರ ಅಸ್ತಿತ್ವವನ್ನು ಹೊಂದಿರುವ ಆಮ್ಲ. ಎಲ್ಲ ಅನಿಲ ಸಂಸ್ಕಾರಿಕ (ಏರೇಟೆಡ್) ಪಾನೀಯಗಳಲ್ಲಿಯೂ ಈ ಆಮ್ಲ ವಿಲೀನವಾಗಿರುವುದಲ್ಲದೆ ಇದನ್ನು ಪ್ರಮುಖ ಪ್ರತ್ಯಾಮ್ಲಗಳಲ್ಲಿ ಒಂದಾದ ವಾಷಿಂಗ್ ಸೋಡ ಅಥವಾ ಸೋಡಿಯಂ ಕಾರ್ಬೋನೇಟನ ಓಚಿ2ಅಔ3 ತಯಾರಿಕೆಯಲ್ಲಿ ವಿಶೇಷವಾಗಿ ಬಳಸಬಹುದು.[೫]

ಬೋರಿಕ್ ಆಮ್ಲ (ಊ2ಃಔ3): ರೋಗಾಣುನಿರೋಧಕ ಗುಣವನ್ನು ಹೊಂದಿರುವ ಈ ಆಮ್ಲವನ್ನು ಔಷಧಾಲಯಗಳಲ್ಲಿ ಗಾಯಗಳ ಚಿಕಿತ್ಸೆಯಲ್ಲಿ ಉಪಯೋಗಿಸುವರು.

ಸಾವಯವ ಆಮ್ಲಗಳು: ಎಲ್ಲ ಸಾವಯವ ಆಮ್ಲಗಳ ಅಣುಗಳಲ್ಲಿಯೂ ಮತ್ತು ಅಸಿಟಿಕ್ ಆಮ್ಲಗಳ ಅಣುಗಳಲ್ಲಿಯೂ ಕಾರ್ಬಾಕ್ಸಿಲಿಕ್ ಗುಂಪು ಅಔಔಊ ಇರುವುದು. ಫಾರ್ಮಿಕ್ ಆಮ್ಲ ಊ.ಅಔಔಊ ಮತ್ತು ಅಸಿಟಿಕ್ ಆಮ್ಲ ಅಊ3ಅಔಔಊ ಗಳು ಅತ್ಯಂತ ಸರಳವಾದ ಎರಡು ಸಾವಯವ ಆಮ್ಲಗಳು. ಅಸಿಟಿಕ್ ಆಮ್ಲವನ್ನು ಪಾಶ್ಚಾತ್ಯ ದೇಶಗಳಲ್ಲಿ ವಿನಿಗರ್ ಎಂಬ ಹೆಸರಿನಿಂದ ಹುಳಿ ರುಚಿ ಕೊಡಲು ಆಹಾರ ಪದಾರ್ಥಗಳಲ್ಲಿ ವಿಶೇಷವಾಗಿ ಬಳಸುವರು. ಅನೇಕ ಸಾವಯವ ಸಂಯುಕ್ತಗಳ ತಯಾರಿಕೆಯಲ್ಲಿಯೂ ಸಫೇಡು (ವೈಟ್‍ಲೆಡ್) ಎಂಬ ಪ್ರಮುಖ ಬಿಳಿಯ ಬಣ್ಣದ ತಯಾರಿಕೆಯಲ್ಲಿಯೂ ಅಸಿಟಿಕ್ ಆಮ್ಲವನ್ನು ಬಳಸುವರು. ಹೆಚ್ಚಿನ ಇಂಗಾಲ ಪರಮಾಣುಗಳು ಅಣುವಿನಲ್ಲಿರುವ ಇದೇ ಗುಂಪಿನ ಅಮ್ಲಗಳಾದ ಸ್ಟೀರಿಕ್ ಆಮ್ಲ ಅ17ಊ35.ಅಔಔಊ ಮತ್ತು ಪಾಮಿಟಿಕ್ ಆಮ್ಲ ಊ3ಅ. ಗಳನ್ನು ಹೆಚ್ಚಿನ ಉಷ್ಣದಲ್ಲಿರುವ ಹಬೆಯ (ಸೂಪರ್‍ಹೀಟೆಡ್ ಸ್ಟೀಂ) ಸಹಾಯದಿಂದ ಕೊಬ್ಬಿನ ಜಲ ವಿಶ್ಲೇಷಣ (ಹೈಡ್ರೊಲಿಸಿಸ್) ಮಾಡಿ ತಯಾರಿಸುವರು. ಈ ಆಮ್ಲಗಳನ್ನು ಮೇಣದ ಬತ್ತಿಯ ತಯಾರಿಕೆಯಲ್ಲಿ ಉಪಯೋಗಿಸುವರು. [೬]

ಉಲ್ಲೇಖಗಳು[ಬದಲಾಯಿಸಿ]

  1. https://www.britannica.com/science/oxide
  2. https://www.siyavula.com/read/science/grade-11/types-of-reactions/13-types-of-reactions-01
  3. https://www.quora.com/What-are-10-examples-of-bases-that-see-use-everyday
  4. "ಆರ್ಕೈವ್ ನಕಲು". Archived from the original on 2019-01-15. Retrieved 2020-01-11.
  5. https://www.webmd.com/drugs/2/drug-61366/carbolic-acid-topical/details
  6. "ಆರ್ಕೈವ್ ನಕಲು". Archived from the original on 2020-01-11. Retrieved 2020-01-11.