ಆಫ್ರಿಕನ್ ಕ್ರೌನ್ಡ್ ಈಗಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
African Crowned Eagle

ಆಫ್ರಿಕನ್ ಕ್ರೌನ್ಡ್ ಈಗಲ್ಹ ಹದ್ದುಗಳ ಸಾಮ್ರಾಜ್ಯದಲ್ಲಿಯೇ ಅತಿ ಬಲಿಷ್ಠವಾದ ಹದ್ದು ಎನ್ನುವ ಶ್ರೇಯ ಆಫ್ರಿಕ ಕ್ರೌನ್ಡ್ ಈಗಲಿನದು. ಆಫ್ರಿಕಾದ ಸಹಾರಾ ಸರಹದ್ದಿನಲ್ಲಿ ಹೆಚ್ಚಾಗಿ ಕಂಡು ಬರುವ ಪಕ್ಷಿ ಇದು. ದಟ್ಟ ಕಾನನದಲ್ಲಿ ದಿಟ್ಟವಾಗಿ ಬೇಟೆ ನಡೆಸುವ ಛಾತಿಯದು. ಸಣ್ಣ ಪುಟ್ಟ ಕಡವೆಗಳು, ಕೋತಿಗಳನ್ನು ಸುಲಭಕ್ಕೆ ಬಲಿ ಹಾಕಬಲ್ಲದು. ೧೫-೨೦ ಕೆ.ಜಿ ತೂಕದವರೆಗಿನ ಪ್ರಾಣಿಯನ್ನು ಲೀಲಾಜಾಲವಾಗಿ ಹೊತ್ತೊಯ್ಯಬಲ್ಲದು. ೩೦-೩೫ ಕೆ.ಜಿ ತೂಕದವರೆಗಿನ ಪ್ರಾಣಿಯನ್ನು ಹೊತ್ತೊಯ್ದ ನಿರ್ದೇಶನಗಳೂ ಸಾಕಷ್ಟಿವೆ. ಸುಮಾರು ಒಂದು ಮೀಟರ್ ಎತ್ತರವಿರುವ ಇದರ ರೆಕ್ಕೆಗಳು ಬಿಚ್ಚಿಕೊಂಡಾಗ ಒಟ್ಟು ಉದ್ದ ೨ ಮೀಟರ್ ಇರುತ್ತದೆ. ೨ ಮೀಟರ್ ಅಗಲ ಹಾಗೂ ೩ ಮೀಟರ್ ಉದ್ದದ ಗೂಡುಗಳನ್ನು ನಿರ್ಮಿಸುವುದು ಇದಕ್ಕೆ ಮಾಮೂಲು. ೨ ವರ್ಷಕ್ಕೊಮ್ಮೆ ಸಂತಾನಾ ಅಭಿವೃದ್ಧಿ ನಡೆಸುವ ಈ ಹದ್ದುಗಳು ಗೂಡು ಕಟ್ಟಲು ೫ ತಿಂಗಳಷ್ಟು ಸಮಯ ತೆಗುದುಕೊಳ್ಳುತ್ತದೆ. ಜೋರಾಗಿ ಸದ್ದು ಮಾಡುತ್ತಾ, ರೆಕ್ಕೆಯ ಬಡಿತದ ಮೂಲಕವು ಸದ್ದುಮಾಡುತ್ತಾ ಭಯ ಹುಟ್ಟಿಸುವಂತೆ ಹಾರುತ್ತವೆ. ಗಂಡು ಹಕ್ಕಿಗಳಂತೂ ಸಾಕಷ್ಟು ಮೇಲಕ್ಕೆ ಹಾರಿ ಅಲ್ಲಿಂದ ನೇರವಾಗಿ ಭೂಮಿಯತ್ತ ತಲೆ ಹಾಕಿ ಡೈವ್ ಮಾಡುತ್ತಾ, ಕೆಲವೊಮ್ಮೆ ಗಿರಿಗಿಟ್ಟಳೆಯಂತೆ ತಿರುಗುತ್ತಾ ಹೆಣ್ಣನ್ನು ಆಕರ್ಷಿಸುತ್ತವೆ.