ಆಪ್ಟೆರಿಕ್ಸ್
ಕಿವಿ | |
---|---|
North Island brown kiwi (Apteryx mantelli) | |
Scientific classification | |
Type species | |
Apteryx australis | |
Species | |
Apteryx haastii Great spotted kiwi | |
The distribution of each species of kiwi | |
Synonyms | |
Stictapteryx Iredale & Mathews, 1926 |
ಆಪ್ಟೆರಿಕ್ಸ್ ಕೀವೀ ಎಂಬ ಹಾರಲಾಗದ ಪಕ್ಷಿಯ ವಂಶನಾಮ.ನ್ಯೂಜಿಲೆಂಡಿನ ಮೂಲನಿವಾಸಿ.ನ್ಯೂಜೀಲ್ಯಾಂಡಿನ ರಾಷ್ಟೀಯ ಲಾಂಛನ.ನ್ಯೂಜೀಲ್ಯಾಂಡಿಗರನ್ನು ಕಿವೀಸ್ ಎಂದೇ ಕರೆಯುವುದು ವಾಡಿಕೆಯಾಗಿದೆ.[೨]
ವೈಜ್ಞಾನಿಕ ಹೆಸರು
[ಬದಲಾಯಿಸಿ]ಆಪ್ಟೆರಿಕ್ಸ್ ಆಸ್ಟ್ರಾಲಿಸ್ ಎಂಬುದು ಇದರ ವೈಜ್ಞಾನಿಕ ನಾಮ.ಇದರ ಕೂಗು ಕೀವೀ ಎಂದು ಧ್ವನಿಸುವುದರಿಂದ ಅದೇ ಹೆಸರು ಪಕ್ಷಿ ರೂಢವಾಗಿದೆ.
ಲಕ್ಷಣಗಳು
[ಬದಲಾಯಿಸಿ]ಇದರ ರೆಕ್ಕೆ ಬಹಳ ಮೊಟಕು; ಪುಕ್ಕದ ಗರಿಗಳು ಬಿಡಿಬಿಡಿ. ಪೃಷ್ಠಭಾಗ ಬಹಳ ನಶಿಸಿರುವುದರಿಂದ ಮೊಟಕಾಗಿ ಕಾಣುತ್ತದೆ. ಕೀವೀ ಗಾತ್ರದಲ್ಲಿ ದೊಡ್ಡ ಕೋಳಿಯನ್ನು ಹೋಲುವುದು. ಇದರ ಕೊಕ್ಕು ಅತಿ ಉದ್ದವಾಗಿ ಬಾಗಿದೆ. ಕೊಕ್ಕಿನ ತುದಿಯಲ್ಲಿ ನಾಸಿಕ ರಂಧ್ರಗಳು ಇವೆ. ಈ ಪಕ್ಷಿಗಳ ಗ್ರಹಣ ಮತ್ತು ಶ್ರವಣ ಶಕ್ತಿ ಅತಿ ಚುರುಕು; ಆದರೆ ದೃಷ್ಟಿ ಸ್ವಲ್ಪ ಮಂದ. ಕಾಲುಗಳು ಬಹಳ ದಪ್ಪ; ಪ್ರತಿ ಕಾಲಿನಲ್ಲೂ ನಾಲ್ಕು ಬೆರಳುಗಳು, ಪ್ರತಿ ಬೆರಳಿನಲ್ಲಿಯೂ ಮೊನಚಾದ ಒಂದು ಉಗುರು. ನಾಲ್ಕು ಬೆರಳುಗಳಲ್ಲಿ ಒಂದು ಮಾತ್ರ ಹಿಂದಕ್ಕೆ ತಿರುಗಿದೆ. ರೇಗಿಸಿದಾಗ ಇವು ಮೈಮೇಲೆ ಬೀಳಲು ಹಿಂಜರಿಯುವುದಿಲ್ಲ.
ವಾಸ
[ಬದಲಾಯಿಸಿ]ವಾಸ ದಟ್ಟವಾದ ಕಾಡುಗಳಲ್ಲಿ. ಇದು ನಿಶಾಚರಿ.
ಆಹಾರ
[ಬದಲಾಯಿಸಿ]ಈ ಹಕ್ಕಿ ತನ್ನ ಉದ್ದವಾದ ಕೊಕ್ಕಿನಿಂದ ಇರುವೆ, ಗೆದ್ದಲುಹುಳು ಮತ್ತು ಎರೆಹುಳುಗಳನ್ನು ಗೂಡುಗಳಿಂದ ಎಳೆದು ತಿನ್ನುತ್ತದೆ. ಬೆಳದಿಂಗಳ ರಾತ್ರಿಯಲ್ಲಿ ಇವುಗಳ ಗರಿಗಳು ಥಳಥಳ ಹೊಳೆಯುತ್ತವೆ. ಆದ್ದರಿಂದ ಒಂದು ಕಂಪನಿಯವರು ತಾವು ತಯಾರಿಸುವ ಬೂಟ್‍ಪಾಲಿಷ್‍ಗೆ ಕೀವೀ ಪಾಲಿಷ್ ಎಂದೇ ಹೆಸರಿತ್ತಿದ್ದಾರೆ. ಈ ಜಾತಿಯ ಪಕ್ಷಿಗಳಲ್ಲಿ ಗಂಡಿಗೆ ಶಿಶ್ನವಿದೆ; ಕೀವೀ ಪಕ್ಷಿಯ ತತ್ತಿ ಬಹು ದೊಡ್ಡದು[೩]. ತಂದೆ ತಾಯಿ ಪಕ್ಷಿಗಳು ಮೊಟ್ಟೆಗಳನ್ನು ಜೋಪಾನವಾಗಿ ಕಾಪಾಡಿ, ಮರಿಗಳಾದ ಮೇಲೆ ಆನಂದದಿಂದ ಅವುಗಳ ಸಂಗಡ ನಲಿಯುತ್ತವೆ.
ಪ್ರಬೇಧಗಳು
[ಬದಲಾಯಿಸಿ]ಈ ಪಕ್ಷಿಜಾತಿಯಲ್ಲಿ ಮೂರು ವಂಶಗಳು ಮಾತ್ರ ಉಳಿದಿವೆ. ಅವೆಲ್ಲ ಬಹುಮಟ್ಟಿಗೆ ಒಂದನ್ನೊಂದು ಹೋಲುತ್ತವೆ. ಅವುಗಳಲ್ಲಿ ಕೀವೀ ಎಂದು ಕರೆಯುವ ಆಪ್ಟೆರಿಕ್ಸ್ ಆಸ್ಟ್ರೀಲಿಕ್ಸ್ ಎಂಬುದೇ ದೊಡ್ಡ ಪಕ್ಷಿ.
ಉಪಯೋಗ
[ಬದಲಾಯಿಸಿ]ಮಾಂಸಕ್ಕೆಂದು ಇವನ್ನು ಜನರು ಕೊಲ್ಲುವರು.
ಉಲ್ಲೇಖಗಳು
[ಬದಲಾಯಿಸಿ]- ↑ Davies, S.J.J.F. (2003). "8 Birds I Tinamous and Ratites to Hoatzins". In Hutchins, Michael (ed.). Grzimek's Animal Life Encyclopedia (2 ed.). Farmington Hills, MI: Gale Group. pp. 89–90. ISBN 0-7876-5784-0.
- ↑ "Kiwis/Kiwi - New Zealand Immigration Service (Summary of Terms)". Glossary.immigration.govt.nz. Archived from the original on 2009-04-26. Retrieved 2012-09-13.
- ↑ "Birds: Kiwi". San Diego Zoo. Retrieved 2008-09-19.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- "Great Spotted Kiwi", Species: birds, ARKive, archived from the original on 2007-06-14, retrieved 2016-04-20.
- "Land birds: Kiwi", Native animals: birds, NZ: Department of Conservation, archived from the original on 2009-10-03, retrieved 2016-04-20.
- Kiwi recovery, NZ: BNZ Save The Kiwi Trust.
- Kiwi, TerraNature.
- How the Kiwi Lost his Wings (PDF) (Maori legend), Kiwi newz, archived from the original (PDF) on 2021-01-06, retrieved 2016-04-20.
- "Kiwi", Te Ara – the Encyclopedia of New Zealand, NZ: The Government, archived from the original on 2008-06-08, retrieved 2016-04-20.
- "North Island Brown Kiwi feeding in the wild", YouTube (daylight video), Google.
- Pests & threats, Taranaki Kiwi Trust, archived from the original on 2012-04-02, retrieved 2016-04-20.
- "Case studies on 1080: the facts", 1080 and kiwi, NZ: 1080 facts, archived from the original on 2011-12-02, retrieved 2016-04-20.