ಆನೋಲೀಡ್
ಗೋಚರ
ಆನೋಲೀಡ್ ಸುಮಾರು 1080ರಲ್ಲಿ ರಚಿತವಾದ ಒಂದು ಜರ್ಮನ್ ಕಾವ್ಯ.
ಕಾವ್ಯ ವಸ್ತು
[ಬದಲಾಯಿಸಿ]ಕೊಲೋನ್ ನಗರದ ಆರ್ಚ್‍ಬಿಷಪ್ ಆಗಿದ್ದ ಆನೋ ಎಂಬ ಮಠಾಧಿಕಾರಿಯನ್ನು ಕುರಿತ ಪ್ರಶಸ್ತಿಕಾವ್ಯ.
ಶೈಲಿ
[ಬದಲಾಯಿಸಿ]ತೀರಾ ಸರಳವಾದ, ಜನಾದರಣೆಗೊಳಿಸಬಲ್ಲ ಶೈಲಿಯಲ್ಲಿ ರಚಿತವಾಗಿದ್ದುದರಿಂದ ಇದು ಹಲವರ ದೃಷ್ಟಿ ಸೆಳೆಯಿತು. ಹನ್ನೊಂದನೆಯ ಶತಮಾನದ ಮಧ್ಯದಲ್ಲಿ ಜರ್ಮನ್‍ಭಾಷೆ ಹಳೆಯ ಸ್ವರೂಪವನ್ನು ಕಳೆದು ಮಧ್ಯಯುಗದ ಪ್ರೌಢ ಜರ್ಮನ್ ಸ್ವರೂಪವನ್ನು ತಳೆಯುತ್ತಿದ್ದ ಕಾಲದಲ್ಲಿ ವಿಪರೀತವಾದ ಧಾರ್ಮಿಕ ಕಟ್ಟುಪಾಡುಗಳಿಗೆ ಸಿಕ್ಕಿ ಲೌಕಿಕ ಕಾವ್ಯ ನರಳುತ್ತಿತ್ತು. ಆ ಕಾಲದಲ್ಲಿ ರಚಿತವಾದ ಸಾಹಿತ್ಯಕ ಅಂಶಗಳನ್ನುಳಿಸಿಕೊಂಡ ಕಾವ್ಯ ಇದು. ಇದಕ್ಕೆ ಸ್ವಲ್ಪ ಮುಂಚೆ ಬ್ರಾನ್‍ಬರ್ಗನ್ ಕ್ರೈಸ್ತ ಸಂನ್ಯಾಸಿಯೊಬ್ಬ ಬರೆದ ಎಝೋಲೀಡ್ (1063) ಎಂಬ, ಏಸು ಕ್ರಿಸ್ತನ ಜೀವನ ಹಾಗೂ ಅಂತಿಮಕಾಲಕ್ಕೆ ಸಂಬಂಧಿಸಿದ ಪವಾಡಗಳನ್ನು ನಿರೂಪಿಸುವ ಇನ್ನೊಂದು ಕಾವ್ಯಕ್ಕೆ ಹೋಲಿಸುವುದುಂಟು. ಈ ಎರಡೂ ಕಾವ್ಯಗಳು, ಅತಿ ಧರ್ಮಶ್ರದ್ಧೆಯ ಮಂಜಿನಲ್ಲೂ ಕಾವ್ಯಗುಣಗಳನ್ನುಳಿಸಿಕೊಂಡು ಅರಳಿದ ಸಾಹಿತ್ಯ ಕೃತಿಗಳು.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- (German)Mittelhochdeutsches Textarchiv (mhgta): full text online
- (German) Text with English translation
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: