ಆನೆ ಹುಲ್ಲು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪೆನ್ನಿಸಿಟಂ ಪರ್‍ಪ್ಯೂರಿಯಂ

ಆನೆ ಹುಲ್ಲು ಪೆನ್ನಿಸಿಟಂ ಪರ್‍ಪ್ಯೂರಿಯಂ ಅಥವಾ ಆನೆಹುಲ್ಲು ಅಥವಾ ದಪ್ಪ ನೇಪಿಯರ್ ಹುಲ್ಲು. ಇದರ ಮೂಲಸ್ಥಾನ ದಕ್ಷಿಣ ಆಫ್ರಿಕ. ಈ ಹುಲ್ಲನ್ನು 1913 - 15 ರ ಸಮಯದಲ್ಲಿ ಭಾರತಕ್ಕೆ ತಂದರು. ಇದಕ್ಕೆ ತೆವಳು ಆಕಾರದ ಪ್ರಕಂದಗಳಿವೆ. ಅಧಿಕ ಫಸಲು ನೀಡುವ ಹುಲ್ಲು. ಫಲವತ್ತಾದ ಭೂಮಿಯಲ್ಲಿ ಬೆಳೆಸಲು ಅನುಕೂಲ. ಸಂತಾನೋತ್ಪತ್ತಿ ಸಾಮಾನ್ಯವಾಗಿ ಟಸಕ್ಸ್ ಅಥವಾ ಸೆಟ್ಸ್‍ಗಳಿಂದ (ಕಂದು). ವರ್ಷಕ್ಕೆ ಸುಮಾರು 8-12 ಬಾರಿ ಕತ್ತರಿಸಬಹುದು. ಒಟ್ಟು ಫಸಲು ವರ್ಷಕ್ಕೆ ಸುಮಾರು 3,000 ಪೌಂಡುಗಳಷ್ಟು. ಈ ಹುಲ್ಲಿನ ಪ್ರಮುಖ ಉಪಯೋಗ ಮೇವಿಗಾಗಿ. ಸಿಲೇಜ್‍ಗಳಿಗೂ ಬಳಸಬಹುದು.

ವಿವರಣೆ[ಬದಲಾಯಿಸಿ]

ಪೆನ್ನಿಸಿಟಂ ಪರ್‍ಪ್ಯೂರಿಯಂ ಎಂಬುದು ದೀರ್ಘಕಾಲಿಕ ಹುಲ್ಲು,ಇದು ಎತ್ತರವಾದ ಮತ್ತು ದೃಢವಾದ ಬಿದಿರು ತರಹದ ಕ್ಲಂಪ್ಗಳನ್ನು ಹೊಂದಿರುತ್ತದೆ.ಇದು ಭಿನ್ನಯುಗ್ಮಜತೆಯಿರುವ ಸಸ್ಯ.ಆದರೆ ಬೀಜಗಳು ಕೆಲವೊಮ್ಮ ಮಾತ್ರ ಸಂಪೂರ್ಣವಾಗಿ ರೂಪವಾಗುತ್ತದೆ .ಹೆಚ್ಚಾಗಿ ಇದು ಪೋಷಕ ಸಸ್ಯದಿಂದ ವೃದ್ಧಿಯಾಗುತ್ತದೆ.ಈ ಜಾತಿಯ ಸಸ್ಯಗಳು, ಹೆಚ್ಚಿನ ಜೀವರಾಶಿ ಉತ್ಪಾದನೆ ಮಾಡುತ್ತವೆ,ಅಂದರೆ ವರ್ಷಕ್ಕೆ 40 ಟನ್ / ಹೆ.ಹಾಗು ವರ್ಷದಲ್ಲಿ ಈ ಬೆಳೆಯನ್ನು ೪ ರಿಂದ ೫ ಬಾರಿ ಬೆಳೆಯಬಹುದು.ಹೆಚ್ಚುವರಿಯಾಗಿ ಕಡಿಮೆ ನೀರು ಮತ್ತು ನ್ಯೂಟ್ರಿಯೆಂಟ್ ಬಳಾಕೆಯಾಗುತ್ತದೆ.

ಆನೆಹುಲ್ಲು

[೧] [೨] [೩]

  1. www.feedipedia.org/node/395
  2. plants.usda.gov/java/profile?symbol=PEPU2
  3. https://www.business.qld.gov.au/industry/agriculture/species/invasive.../elephant-grass[ಶಾಶ್ವತವಾಗಿ ಮಡಿದ ಕೊಂಡಿ]