ಆನೆದೊಗಲು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆನೆದೊಗಲು

ಆನೆದೊಗಲು ಸಾಮಾನ್ಯವಾಗಿ ಕೈಕಾಲುಗಳು ಯೋನಿದುಟಿಗಳು (ಲೇಬಿಯ), ಬೀಜಚೀಲ (ಸ್ಕ್ರೋಟಂ) ಬಲು ಅಪರೂಪವಾಗಿ ಮೊಗ, ಮೊಲೆಗಳ ಚರ್ಮ, ಚರ್ಮದಡಿಯ ಅಂಗಾಂಶಗಳು ಬರಬರುತ್ತ ದಪ್ಪಗೆ ಬೇರೂರಿದಂತೆ ಬೆಳೆದಿರುವುದು (ಎಲಿಫಂಟಿಯಾಸಿಸ್). ರೋಗ ಕಾಲುಗಳಲ್ಲಿ ಬರುವುದೇ ನಮ್ಮಲ್ಲಿ ಸಾಮಾನ್ಯವಾದುದರಿಂದ ಆನೆಗಾಲು, ಹುತ್ತಗಾಲು ಎನ್ನುವುದುಂಟು. ಸಿರ (ವೆಯ್ನ್) ರಕ್ತನಾಳಗಳು ಇಲ್ಲವೇ ಹಾಲ್ರಸನಾಳಗಳ (ಲಿಂಫ್ಯಾಟಿಕ್ಸ್) ತಡೆಯಾಗಿದ್ದರೆ ಹೀಗಾಗುತ್ತದೆ. ಈ ತಡೆಗೆ ಸಾಮಾನ್ಯ ಕಾರಣ ಎಳೆಹುಳು (ನಿಮೆಟೋಡ್). ಗಂಡು ಹುಳುಗಳು ಬೆಳೆವ ಒಂದು ಹಂತದಲ್ಲಿ ಈ ಹುಳುಗಳು ಮಾನವನ ರಕ್ತ, ಹಾಲ್ರಸ ನಾಳಗಳೊಳಕ್ಕೆ ನುಗ್ಗಿ ಇರುಸಿಕೊಂಡು ಮುಂದೆ ದ್ರವ ಹರಿಯದಂತೆ ಆಟಂಕಿಸುತ್ತವೆ. ಹೀಗಾಗುವ ಮುನ್ನ ಹುಳುಬೇನೆ ಹತ್ತಿದಾಗಲೆಲ್ಲ ಹಾಲ್ರಸನಾಳಗಳುರಿತ (ಲಿಂಫ್ಯಾಂಜೈಟಿಸ್), ಚರ್ಮ ಚರ್ಮದಡಿಯ ಅಂಗಾಂಶಗಳ ಉರಿತವಾಗಿ ಮೇಲಿಂದ ಮೇಲೆ ಚಳಿ ಜ್ವರ ಬರುತ್ತದೆ. ಸೊಳ್ಳೆಗಳಿಂದ ಬರುವ ಈ ರೋಗದಿಂದಲೇ ಅಲ್ಲದೆ, ಪೆಟ್ಟು, ಗಾಯ, ಬೇರೆ ಕಾರಣಗಳ ಉರಿತ, ನವ (ವಿಷಮ) ಗಂತಿಗಳಿಂದಲೂ ಹೀಗಾಗಬಹುದು.[೧][೨][೩]

ಈ ರೋಗಲಕ್ಷಣದ ಹೊಂದಿರುವ ಕೆಲವು ಪರಿಸ್ಥಿತಿಗಳು[ಬದಲಾಯಿಸಿ]

  • ಎಲಿಫಾಂಟಿಯಾಸಿಸ್ ನೊಸ್ಟ್ರಾಸ್: ಸುದೀರ್ಘವಾದ ದೀರ್ಘಕಾಲದ ಲಿಮ್ಫಾಂಗಿಟಿಸ್
  • ಎಲಿಫಾಂಟಿಯಾಸಿಸ್ ಟ್ರಾಪಿಕ ಅಥವಾ ದುಗ್ಧನಾಳ ಫಿಲಾರಿಯಾಸಿಸ್:ಇದು ಪರಾವಲಂಬಿ ಹುಳುಗಳು, ವಿಶೇಷವಾಗಿ ವುಕೆರಿಯಾ ಬ್ರಾಂಕಾಫ್ಟಿಯಿಂದ ಉಂಟಾಗುತ್ತದೆ.
  • ನಾನ್ಫಿಲೇರಿಯಲ್ ಎಲಿಫಾಂಟಿಯಾಸಿಸ್ ಅಥವಾ ಪೊಡೊಕೊನಿಯಾಸಿಸ್:ಇದು ಪ್ರತಿರೋಧಕ ಕಾಯಿಲೆ,ಇದು ದುಗ್ಧರಸ ನಾಳಗಳನ್ನು ಬಾದಿಸುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. www.news-medical.net/health/What-is-Elephantiasis.aspx
  2. www.who.int/mediacentre/factsheets/fs102/en/
  3. www.mamashealth.com/parinfect/elep.asp