ಆನಂದ ನಗರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆನಂದ ನಗರ
village
ಲೋಕಸಭಾ ಶಾಸಕಡಿ. ವಿ. ಸದಾನಂದ ಗೌಡ
Government
 • Typeವಿಧಾನಸಭೆ
Time zoneIST (UTC +5:30)

ಆನಂದ ನಗರ[ಬದಲಾಯಿಸಿ]

ಆನಂದ ನಗರ ಬೆಂಗಳೂರು ನಗರದ ಉತ್ತರ ಭಾಗದಲ್ಲಿ ಇರುವ ಒಂದು ಬಡಾವಣೆ. ಆನಂದ ನಗರ ಹೆಬ್ಬಾಳ ವಿಧಾನಸಭಾ ಕ್ಷೇತ್ರಕ್ಕೆ ಸೇರಿದೆ. ಈ ಬಡಾವಣೆಯು ಬೆಂಗಳೂರು ಬಳ್ಳಾರಿ ರಸ್ತೆ ಅಥವಾ ಬೆಂಗಳೂರು ಅಂತಾರಾಷ್ಟ್ರೀಯ ನಿಲ್ದಾಣ ರಸ್ತೆಗೆ ಹೊಂದುಕೊಂಡಿದೆ. ಪ್ರಖ್ಯಾತ ಹೆಬ್ಬಾಳ ಕೆರೆಯು ಆನಂದ ನಗರದಿಂದ ೧.೫ ಕಿಲೋಮೀಟರ್ ದೂರದಲ್ಲಿದೆ. ಇಲ್ಲಿನ ಪಿನ್ ಕೋಡ್ ೫೬೦೦೨೪.

ಭೌಗೋಳಿಕತೆ[ಬದಲಾಯಿಸಿ]

ಆನಂದ ನಗರವನ್ನು ಚಿಕ್ಕ ಚಿಕ್ಕ ಉಪ ಬಡಾವಣೆಗಳಾಗಿ ವಿಂಗಡಿಸಲಾಗಿದೆ.ಅವುಗಳು ಯಾವುದೆಂದರೆ - ಎಸ್ ಬಿ ಎಂ ಲೇಔಟ್, ಆರ್ ಬಿ ಐ ಲೇಔಟ್, ಎಂ ಎಸ್ ಎಚ್ ಲೇಔಟ್, ಎಚ್ ಎಂ ಟಿ ಲೇಔಟ್ ಎ ಜಿ ಎಸ್ ಲೇಔಟ್ ಮತ್ತು ಆನಂದ ನಗರ ಒಂದನೇ ಬ್ಲಾಕ್. ಇಲ್ಲಿ ಹಲವಾರು ಉದ್ಯಾನವನಗಳನ್ನು ಕಾಣಬಹುದು. ಈ ಉದ್ಯಾನವನಗಳಲ್ಲಿ ಮಕ್ಕಳ ಆಟಿಕೆಗಳು ಹಾಗು ವ್ಯಾಯಾಮ ಉಪಕರಣಗಳನ್ನು ಅಳವಡಿಸಲಾಗಿದೆ. ಇಲ್ಲಿನ ರಸ್ತೆಗಳು ಮತ್ತು ಉದ್ಯಾನವನಗಳಲ್ಲಿ ಸಾಕಷ್ಟು ಮರ ಗಿಡಗಳಿರುವುದರಿಂದ ತಂಪಾದ ವಾತಾವರಣ ಕಂಡು ಬರುತ್ತದೆ.

ಸ್ಥಳ[ಬದಲಾಯಿಸಿ]

ಆನಂದ ನಗರವು ಹೆಬ್ಬಾಳ, ಗಂಗಾ ನಗರ ಹಾಗು ಆರ್ ಟಿ ನಗರಗಳಿಂದ ಸುತ್ತುವರೆದಿದೆ. ಇದು ಹೆಚ್ಚಾಗಿ ವಸತಿ ಪ್ರದೇಶವಾಗಿದ್ದು, ವಾಣಿಜ್ಯ ಚಟುವಟಿಕೆಗಳಿಗೆ ಗಂಗಾ ನಗರ ಅಥವಾ ಆರ್ ಟಿ ನಗರಕ್ಕೆ ಹೋಗಬೇಕಿದೆ. ಆನಂದ ನಗರವು ಕೆಂಪೇಗೌಡ ಬಸ್ ನಿಲ್ದಾಣದಿಂದ ಸುಮಾರು ೯ ಕಿಲೋಮೀಟರ್ ದೂರದಲ್ಲಿದೆ ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ೨೮ ಕಿಲೋಮೀಟರ್ ದೂರದಲ್ಲಿದೆ. ಜನರಿಗೆ ಸಹಾಯವಾಗಲು ಇಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆಗಳು ಹಾಗು ಎ ಟಿ ಎಂ ಗಳಿವೆ. ಏಟ್ರಿಯಾ ಕಾಲೇಜಿನ ಬಳಿ ಆನಂದ ನಗರ ಅಂಚೆ ಕಚೇರಿಯನ್ನು ಕಾಣಬಹುದು.

ಶಿಕ್ಷಣ[ಬದಲಾಯಿಸಿ]

ಆನಂದ ನಗರದಲ್ಲಿ ಕಂಡು ಬರುವ ಪ್ರಮುಖ ವಿದ್ಯಾ ಸಂಸ್ಥೆಗಳೆಂದರೆ

೧. ಏಟ್ರಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ

೨. ವಿದ್ಯಾವಾಹಿನಿ ಪದವಿಪೂರ್ವ ಕಾಲೇಜು

೩. ವಿದ್ಯಾವಾಹಿನಿ ಪದವಿ ಕಾಲೇಜು

೪. ವಿದ್ಯಾವಾಹಿನಿ ಶಾಲೆ

೫. ನ್ಯಾಷನಲ್ ಸ್ಕೂಲ್ ಆಫ್ ಜರ್ನಲಿಸಂ

೬. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ಧಾರ್ಮಿಕ ಸ್ಥಳಗಳು[ಬದಲಾಯಿಸಿ]

ಆನಂದ ನಗರದಲ್ಲಿ ಕಂಡು ಬರುವ ಧಾರ್ಮಿಕ ಸ್ಥಳಗಳು

೧. ಶಿವ ವಿಷ್ಣು ಮಂದಿರ

೨. ಗಂಗಾಧರೇಶ್ವರ ದೇವಸ್ಥಾನ

೩. ಶ್ರೀ ಶಿರಡಿ ಸಾಯಿ ಬಾಬಾ ಮಂದಿರ

"https://kn.wikipedia.org/w/index.php?title=ಆನಂದ_ನಗರ&oldid=978470" ಇಂದ ಪಡೆಯಲ್ಪಟ್ಟಿದೆ