ವಿಷಯಕ್ಕೆ ಹೋಗು

ಆನಂದ ದೇವಾಲಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಆನಂದ ದೇವಾಲಯ
အာနန္ဒာဘုရား
ಸ್ಥಳ
ದೇಶಮಯ್‍ನ್ಮಾರ್
Geographic coordinates21°10′14.90″N 94°52′04.28″E / 21.1708056°N 94.8678556°E / 21.1708056; 94.8678556
ಆನಂದ ದೇವಾಲಯ
ಆನಂದ ದೇವಾಲಯ

ಆನಂದ ದೇವಾಲಯ ಪ್ರಾಚೀನ ಬರ್ಮಾದೇಶದ ಅತ್ಯಂತ ಮಹತ್ತರವಾದ ವಾಸ್ತುಶಿಲ್ಪ ಕಲಾಕೃತಿ. ಈ ಭವ್ಯ ದೇವಾಲಯವನ್ನು ನಿರ್ಮಿಸಿದ ಕೀರ್ತಿ ಅನೋರಥನ ಮಗನಾದ ಕ್ಯಾನ್‍ಜಿತ್ಥ (1086-1122) ಮಹಾರಾಜನಿಗೆ ಸೇರಿದುದು. ಆನಂದ ದೇವಾಲಯ ಭಾರತಕ್ಕೂ ಬರ್ಮಾದೇಶಕ್ಕೂ ಇದ್ದ ಸಂಸ್ಕೃತಿ ವಿನಿಮಯದ ಪ್ರತೀಕವಾಗಿದೆ. ಶೈಲಿಯ ಆಧಾರದ ಮೇಲೆ ಇದು ಬಹುಶಃ ಭಾರತೀಯ ಶಿಲ್ಪಗಳಿಂದಲೇ ನಿರ್ಮಿತವಾದ ಕಟ್ಟಡವೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ದೇವಾಲಯ ಸುಮಾರು 564 ಚ.ಅ. ವಿಸ್ತಾರವಾದ ಹೂದೋಟದಲ್ಲಿ ನಿರ್ಮಿತವಾಗಿದೆ. ಕಟ್ಟಡ ಇಟ್ಟಿಗೆಯದು. ಚಚ್ಚೌಕವಾಗಿದ್ದರೂ ನಾಲ್ಕು ದಿಕ್ಕಿಗೂ ಹೊರಚಾಚಿರುವ ಕಮಾನಿನ ಆಕಾರದ ಹಜಾರಗಳು ಇದಕ್ಕೆ ನಕ್ಷತ್ರದ ಆಕಾರವನ್ನು ಕೊಟ್ಟಿವೆ. ಮಧ್ಯದಲ್ಲಿ 31 ಎತ್ತರದ ಬುದ್ಧನ ವಿಗ್ರಹವಿದೆ. ಮುಂಭಾಗದಲ್ಲಿ ಬುದ್ಧನಿಗೆ ನಮಸ್ಕಾರ ಮಾಡುವ ಭಂಗಿಯಲ್ಲಿ ಕ್ಯಾನ್‍ಜಿತ್ಥನ ವಿಗ್ರಹವಿದೆ. ಗೋಡೆಗಳ ಮೇಲೆ ಸುಮಾರು ಒಂದು ಸಾವಿರ ಶಿಲ್ಪಫಲಕಗಳಿದ್ದು, ಅವುಗಳಲ್ಲಿ ಬುದ್ಧನ ಜೀವನಕಥೆಗಳು ಚಿತ್ರಿತವಾಗಿವೆ. ಸುಪ್ರಸಿದ್ಧ ಪಾಶ್ಚಾತ್ಯ ವಿದ್ವಾಂಸರು ಅಭಿಪ್ರಾಯಪಟ್ಟಿರುವಂತೆ ಬರ್ಮಾ ದೇಶದಲ್ಲಿದ್ದರೂ ಇದೊಂದು ಭಾರತೀಯ ದೇವಾಲಯವಾಗಿದೆ.ಇದನ್ನು ಬರ್ಮಾದ ವೆಸ್ಟ್‍ಮಿನ್‍ಸ್ಟರ್ ಅಬೆ ಎಂದು ಕರೆಯಲಾಗುತ್ತದೆ.[][][][]

ಉಲ್ಲೇಖಗಳು

[ಬದಲಾಯಿಸಿ]
  1. "Ananda Temple". Ancient Bagan. Archived from the original on 2010-07-19. Retrieved 2010-03-18.
  2. "Ananda Temple". Myanmar Information 2009. Archived from the original on 2009-03-18. Retrieved 2010-03-18.
  3. Schober, Juliane (2002). Sacred biography in the Buddhist traditions of South and Southeast Asia. Motilal Banarsidass Publ. pp. 87–92. ISBN 81-208-1812-1. Retrieved 2010-03-19.
  4. Murari, Krishna (1985). Cultural heritage of Burma. Inter-India Publications. p. 23. Retrieved 2010-03-19.