ವಿಷಯಕ್ಕೆ ಹೋಗು

ಆನಂದ್ ಭವನ್, ಅಲಹಾಬಾದ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಆನಂದ್ ಭವನ್ ಇಂದ ಪುನರ್ನಿರ್ದೇಶಿತ)
ಚಿತ್ರ:P3230050.JPG
'ಆನಂದ್ ಭವನ್'-೧೯೧೧
ಚಿತ್ರ:P೧೦.JPG
ಭವನದ ಮುಂದಿನ ಹಸಿರು ಹುಲ್ಲಿನ ಹಾಸು, ಮತ್ತು ನೀರಿನ ಕಾರಂಜಿ'

ಸನ್ ೧೯೦೦ ರಲ್ಲಿ ಮೋತಿಲಾಲ್ ನೆಹರು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ ನಾಯಕರಲ್ಲಿ ಪ್ರಮುಖರು. ವೃತ್ತಿಯಲ್ಲಿ ಅವರು ವಕೀಲರು, ಮೋತಿಲಾಲ್ ತಮ್ಮ ದೊಡ್ಡ ಪರಿವಾರದ ನಿರ್ವಹಣೆಗಾಗಿ, ಅಲಹಾಬಾದ್ ನ ಸಿವಿಲ್ ಲೈನ್ಸ್ ನಲ್ಲಿ ಒಂದು ಬಂಗಲೆಯನ್ನು ಖರೀದಿಸಿದರು. ಇದರ ಹೆಸರು, ಇಶ್ರತ್ ಮಂಝಿಲ್ ಎಂದು. ಅದನ್ನು ಪುನರ್ನಿರ್ಮಿಸಿ ಆನಂದ್ ಭವನ್ ಎಂದು ನಾಮಕರಣ ಮಾಡಿದರು. ಅಲಹಾಬಾದ್ ನಲ್ಲಿ ಈ ಭಾರಿ ಮ್ಯಾನ್ಶನ್ ನ, ಮಾಲೀಕರು. ಮೋತೀಲಾಲ್ ನೆಹರು, ೧೯ ನೆಯ ಶತಮಾನದಲ್ಲಿ ನೆಹರು ಗಾಂಧಿ ಪರಿವಾರ ಇಲ್ಲಿ ಭೇಟಿಯಾಗುತ್ತಿತ್ತು. ಮುಂದೆ ಭಾರತದ ಪ್ರಧಾನಿಯಾಗಿ ಆಯ್ಕೆಯಾದ, ಇಂದಿರಾ ಗಾಂಧಿಯವರು ಇದೇ ಮಹಲ್ ನಲ್ಲಿ ಜನ್ಮಿಸಿದ್ದರು. ಆದರೆ, ಜವಹರ್ ಲಾಲ್ ನೆಹರೂ ಇಲ್ಲಿ ಜನಿಸಲಿಲ್ಲ. ಮೋತಿಲಾಲ್ ನೆಹರೂರವರು ಭಾರತೀಯ ಕಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಎರಡುಬಾರಿ ಆಯ್ಕೆಯಾಗಿದ್ದರು. (೧೯೧೯-೨೦ ಮತ್ತು ೧೯೨೮-೨೯) ದೆಹಲಿಯಲ್ಲಿರುವ 'ಜವಹರ್ ಲಾಲ್ ನೆಹರೂ ಸ್ಮಾರಕ ನಿಧಿ'ಯಿಂದ ಇದರ ನಿರ್ವಹಣೆ, ಹಾಗೂ ಮೇಲ್ವಿಚಾರಣೆಗಳು ನಡೆಯುತ್ತಿವೆ.

ರಾಷ್ಟ್ರಕ್ಕೆ ಸಮರ್ಪಣೆ

[ಬದಲಾಯಿಸಿ]
ಚಿತ್ರ:P1೨.JPG
'ಆನಂದ್ ಭವನ್ ನ ಕೊಠಡಿಗಳಲ್ಲೊಂದು'
ಚಿತ್ರ:P1೫.JPG
'ಆನಂದ್ ಭವನ್ ಮನೆಯಲ್ಲಿ ಸಂಗ್ರಹಿಸಿದ ಪುಸ್ತಕ ಭಂಡಾರ'

ಸನ್ ೧೯೭೦ ರಲ್ಲಿ ಭಾರತದ ಪ್ರಧಾನಿ, ಇಂದಿರಾ ಗಾಂಧಿಯವರು, ತಮ್ಮ ವಾಸದ ಆನಂದ್ ಭವನವನ್ನು ಭಾರತ ಸರಕಾರಕ್ಕೆ ಸಮರ್ಪಿಸಿದರು. ಈಗ ಈಭವನವನ್ನು ಒಂದು 'ಸ್ಮಾರಕ'ವಾಗಿ ಮತ್ತು 'ವಸ್ತುಸಂಗ್ರಹಾಲಯ'ವಾಗಿ ಪರಿವರ್ತಿಸಿದ್ದಾರೆ. 'ಜವಹರ್ ತಾರಾ ವೀಕ್ಷಣಾಲಯ' ಮತ್ತು 'ಜವಾಹರ್ ಬಾಲ್ ಭವನ್', 'ಆನಂದ ಭವನ'ದ ಪರಿಸರದಲ್ಲೇ ಸ್ಥಾಪಿಸಿದ್ದಾರೆ. ಆನಂದ್ ಭವನದಲ್ಲಿ ನೆಹರೂ ಪರಿವಾರದ ಉಡುಪು, ಜೀವನಶೈಲಿಯ ಒಂದು ನೋಟವನ್ನು ಕಾಣಬಹುದು. ಎರಡು ಮಹಡಿಯ ಬಂಗಲೆಯಲ್ಲಿ ಅನೇಕ ಕೊಠಡಿಗಳಿವೆ. ಮಹಾತ್ಮಾ ಗಾಂಧಿಯವರು 'ಅಲಹಾಬಾದಿ'ಗೆ ಬಂದಾಗ, ಆನಂದ್ ಭವನದಲ್ಲಿ ತಂಗುತ್ತಿದ್ದರು.

ಸಂಪರ್ಕಿಸಿ

[ಬದಲಾಯಿಸಿ]