ಆದಿನಾಥ ಸ್ವಾಮಿ ಬಸದಿ, ಭಾವಂತರಬೆಟ್ಟು, ಕರಾಯ
ಸ್ಥಳ
[ಬದಲಾಯಿಸಿ]ಆದಿನಾಥ ಸ್ವಾಮಿ ಬಸದಿ, ಬಾವಂದಬಿಟ್ಟು ಕರಾಯ. ಈ ಬಸದಿಯು ಬೆಳ್ತಂಗಡಿ ಪೇಟೆಯಿಂದ ಸುಮಾರು ಹದಿನೈದು ಕಿಲೋಮೀಟರ್ ದೂರವಿದೆ. ಬೆಳ್ತಂಗಡಿಯಿಂದ ಗುರುವಾಯನಕೆರೆಯ ಮೂಲಕ ಉಪ್ಪಿನಂಗಡಿಗೆ ಹೋಗುವಾಗ ಕಲ್ಲೇರಿ ಎಂಬ ಸ್ಥಳ ಸಿಗುತ್ತದೆ. ಅಲ್ಲಿಂದ ಮಡಂತ್ಯಾರ್ ಮಾರ್ಗವಾಗಿ ಸುಮಾರು ೧ ಕಿಲೋಮೀಟರ್ ಹೋದರೆ ಈ ಬಸದಿಯು ಸಿಗುತ್ತದೆ. ಬಸದಿಯು ತಣ್ಣೀರುಪಂತ ಗ್ರಾಮಕ್ಕೆ ಒಳಪಟ್ಟಿದೆ. ಬಾವಂದಬಿಟ್ಟು ಬಸದಿಗೆ ಹೋಗಲು ಸಾಕಷ್ಟು ಸಾರ್ವಜನಿಕ ವಾಹನದ ವ್ಯವಸ್ಥೆ ಇದ್ದು ಇತರ ಜೀಪು ರಿಕ್ಷಾ ಇತ್ಯಾದಿಗಳು ಲಭ್ಯವಿರುತ್ತದೆ.[೧]
ಮೂರ್ತಿ ಪೂಜೆ
[ಬದಲಾಯಿಸಿ]ಈ ಬಸದಿಯಲ್ಲಿ ಶ್ರೀ ಆದೀಶ್ವರ ಸ್ವಾಮಿಯು ಪೂಜೆಗೊಳ್ಳುವ ಮೂಲ ನಾಯಕ ತೀರ್ಥಂಕರರಾದ ಪದ್ಮರಾಗ ಮಣೆಯ ಬಿಂಬ ಕಂಚಿನ ಪ್ರಭಾವಳಿಯಿಂದ ಅಲಂಕೃತವಾಗಿದೆ. ಜಿನಬಿಂಬ ಕಂಚಿನ ಪೀಠದ ಮೇಲಿದೆ. ಇಲ್ಲಿ ಎರಡು ಜನ ಯಕ್ಷಯಕ್ಷಿಣಿಯರು ಇದ್ದಾರೆ. ಇವರು ಗೋಮುಖ ಯಕ್ಷ ಮತ್ತು ಚಕ್ರೇಶ್ವರಿ ಯಕ್ಷಿ ವಾಸ್ತವವಾಗಿ ಗೋಮುಖ ಯಕ್ಷನಿಗೆ ಗೋವಿನ ಮುಖವಿರಬೇಕಿತ್ತು. ಆದರೆ ಈ ಬಸದಿಯಲ್ಲಿ ಯಕ್ಷನಿಗೆ ಗೋಮುಖ ಇಲ್ಲ ಎನ್ನುವುದು ಒಂದು ವಿಶೇಷ. ಯಕ್ಷಯಕ್ಷಿಣಿಯರು ಇಬ್ಬರಿಗೂ ೬+೬ ಒಟ್ಟು ೧೨ ಕೈಗಳಿದ್ದು ಶಂಕ, ಚಕ್ರ ಇತ್ಯಾದಿ ವಿವಿಧ ಆಯುಧ ಪಾಣಿಗಳಾಗಿದ್ದಾರೆ. ತೀರ್ಥಂಕರರ ಮೂರ್ತಿಯ ಕೆಳಗೆ ವೃಷಭ ಲಾಂಛನವಿದೆ.
ಶಾಸನ
[ಬದಲಾಯಿಸಿ]ಈ ಬಸದಿಯು ಸುಮಾರು ೧೮೧೨ ರಲ್ಲಿ ಪುನರ್ ನಿರ್ಮಾಣಗೊಂಡಿದೆ ಎನ್ನಲಾಗಿದೆ. ಅಂದರೆ ೧೯ನೇ ಶತಮಾನದ ಪ್ರಾರಂಭದಲ್ಲಿ ಅಂದರೆ ಈ ಬಸದಿಯಲ್ಲಿರುವ ಒಂದು ಜಿನಬಿಂಬವನ್ನು ಪರೀಕ್ಷಿಸಿ ನೋಡಿದಾಗ ಅದರ ಮೇಲೆ ಹೀಗೆಂದು ಬರೆದಿತ್ತು. “ ಶ್ರೀ ಮತು ಶಕ ವರ್ಷ ೧೩೮೧ನೆಯ ಪ್ರಮಾಥಿ ಸಂವತ್ಸರದ ಕಾರ್ತಿಕ ಶುದ್ಧ ಪಾಡ್ಯ ಶುಕ್ರವಾರದಲು ಬೆಳತಂಗಡಿಯ ಮುಡಕುಂಡ ಸೆಟ್ಟಿಯ ಮಗ ಕುಂಡಾರ್ತ ಬಳಿಯ ಮುಂಡ ದೇವರು ಸೆಟ್ಟಿ ಅನಂತನೋಂಪಿಯ ಉದ್ಯಪನ ನಿಮಿತ್ತವಾಗಿ ಶ್ರೀ ಅನಂತ ತೀತ್ಥೇðಶ್ವರ ಪ್ರತಿಕೃತಿಯನು ಕಂಚಿನಲಿ ಪೀಠ ಪ್ರಭಾವಳಯ ಸಹವಾಗಿ ಮಾಡಿಸಿ ತನಗೆ ಸ್ವರ್ಗಾಪವರ್ಗಬೇಕೆಂಬ ಅಭೀಷ್ಟದಿಂದ ಸುಮುಹೂರ್ತದಲಿ ಪ್ರತಿಷ್ಠೆಯನು ಮಾಡಿಸಿ ಅಪರಿಮಿತ ಕೀರ್ತಿಮುಣ್ಯವನು ಉಪಾರ್ಜಿಸಿಕೊಂಡನು. ಶ್ರೀ ವೀತರಾಗ ಶರಣು ಇನ್ನೊಂದು ಚತುರ್ವಿಂಶತಿ ತೀರ್ಥಂಕರ ಮೂರ್ತಿಯ ಪೀಠದಮೇಲೆ ಬರವಣಿಗೆ ಇತ್ತು “ಸ್ವಸ್ತಿ ಶ್ರೀ ಸಕಲೋದ್ಧರ ಶಾಲಿವಾಹನ ಶಕವರ್ಷ ೧೫೩೪ನೆಯ ರುಷ (ವೃಷ)ಸಂವತ್ಸರದ ಕನ್ಯಾಮಾಸ ೨೮ನೆಯ ಸುಕ್ರವಾರದಲ್ಲು ನಾಡಳಂ ಬಳಿಯ ಸಾಂತಯ ಸೆಟ್ಟಿಯರು ಶುಕ್ರಸ್ಕಂದ ನೋಹಿಯನುದ್ಯಾಪನಂ ಮಾಡಿಸಿ ತೀರ್ಥಂಕರ ಬಸ್ತಿಯಲಿ ಯಿರಿಸಿದ ಚತುರ್ವಿಂಶತ್ಥಿತಿರ್ಥಕರ ಪ್ರತುಮೆ೧” ಈ ಶಾಸನಗಳ ಅಧ್ಯಯನದಿಂದ ಬಾವಂತಬೆಟ್ಟಿನ ಈ ಬಸದಿಯು ಈಗಿನಂತೆ ಆಧುನಿಕ ರೂಪದಲ್ಲಿದೆ. ಚಿಕ್ಕ ರೂಪದಲ್ಲಿರದೇ ಕ್ರಿಸ್ತಶಕ ೧೪೫೯ ನೇ ಇಸವಿಯಲ್ಲಿ ನಿರ್ಮಾಣಗೊಂಡಿತ್ತು. ಅತಿ ಪ್ರಾಚೀನ ಬಸದಿಗಳಲ್ಲಿ ಇದೊಂದು ಎಂದು ಹೇಳಲಾಗಿದೆ.
ಪೂಜೆ
[ಬದಲಾಯಿಸಿ]ಬಸದಿಯಲ್ಲಿ ಬೆಳಗ್ಗೆ ಮತ್ತು ಸಾಯಂಕಾಲ ಪೂಜೆ ನಡೆಸಲಾಗುತ್ತದೆ. ಬಸದಿಯ ಗಂಧಕುಟಿಯಲ್ಲಿ ಶ್ರುತ, ಗಣಧರಪಾದ, ಚವ್ವೀಸ ತೀರ್ಥಂಕರರು, ಸರ್ವಹ್ಣ ಯಕ್ಷ ಮೂರ್ತಿಗಳಿವೆ. ಹಾಗೂ ಶ್ರುತ್ತದಲ್ಲಿ ಶಾಸ್ತ್ರದ ಬೀಜಾಕ್ಷರ ಮಂತ್ರಗಳಿವೆ. ಪರ್ವಗಳ ಸಂದರ್ಭದಲ್ಲಿ ತೀರ್ಥಂಕರರಿಗೆ ಅಭಿಷೇಕ ಮಾಡುತ್ತಾರೆ. ಇಲ್ಲಿ ಯಕ್ಷಯಕ್ಷಿಣಿಯರು ಮತ್ತು ಉದ್ಘಾಟನೆ ಮಾಡಿದ ಮೂರ್ತಿಗಳು ಅಷ್ಟಮ ನಂದೀಶ್ವರ ಮತ್ತು ಅನಂತನಾಥ ಸ್ವಾಮಿ ಬಸದಿಯಲ್ಲಿ ಪದ್ಮಾವತಿ ಅಮ್ಮನವರ ಮೂರ್ತಿ ಇದೆ. ಅದು ಪಂಚಲೋಹದ ದೇವಸ್ಥಾನದಲ್ಲಿದ್ದು ಉತ್ತರಕ್ಕೆ ಮುಖ ಮಾಡಿಕೊಂಡಿದೆ ಇತ್ಯಾದಿಗಳನ್ನು ತೋರಿಸಿ ಸೀರೆ ಉಡಿಸಲಾಗುತ್ತದೆ. ಶುಕ್ರವಾರ ವಿಶೇಷವಾಗಿ ಪೂಜೆ ನಡೆಯುತ್ತದೆ. ಹಾಗೂ ಈ ದಿವಸ ಡೋಲು ಗಂಟೆವರೆಗೂ ಸಹ ಮಾಡುವ ಕ್ರಮವೂ ಇದೆ. ಪೂಜೆಯಲ್ಲಿ ದೇವಿಗೆ ಫಲವಸ್ತು ಚರು ಇತ್ಯಾದಿಗಳನ್ನು ಸಮರ್ಪಿಸುತ್ತಾರೆ. ಪದ್ಮಾವತಿ ದೇವಿಗೆ ವಿಶೇಷ ಹರಕೆಗಳನ್ನು ಹೇಳಿ ಕೊಳ್ಳಲಾಗುತ್ತದೆ. ಮದುವೆಯಾಗದ ಹೆಣ್ಣುಮಕ್ಕಳು ಭಯಭೀತಿಯಿಂದ ತಮ್ಮ ಹರಕೆಯನ್ನು ಹೇಳಿಕೊಂಡರೆ ಅವರಿಗೆ ವಿವಾಹವಾಗುತ್ತದೆ. ನೂಲಹುಣ್ಣಿಮೆ ನವರಾತ್ರಿ ಪೂಜೆ ಧನು ಪೂಜೆ ನಡೆಯುತ್ತಿವೆ.
ಕಟ್ಟಡ ವಿನ್ಯಾಸ
[ಬದಲಾಯಿಸಿ]೨೦೦೦ನೇ ಇಸವಿಯಲ್ಲಿ ಪದ್ಮಾವತಿ ಅಮ್ಮನವರ ಬಿಂಬ ಹೊಸದಾಗಿ ಪ್ರತಿಷ್ಠಾಪನೆ ಗೊಂಡಿದೆ. ಹಾಗೂ ಅನೇಕ ಪೂಜೆಗಳು ನಡೆದಿವೆ. ಈ ಬಸದಿಯಲ್ಲಿ ಬ್ರಹ್ಮದೇವರ ಮೂರ್ತಿ ಇದೆ ಎರಡು ಕೈಯುಳ್ಳ ಈ ಮೂರ್ತಿ ಕುದುರೆಯ ಮೇಲೆ ಕುಳಿತ ಭಂಗಿಯಲ್ಲಿ ಇರುತ್ತದೆ. ಕೆಳಗಿನ ಇತ್ಯಾದಿಗಳ ಆಕೃತಿಗಳಿಂದ ಬ್ರಹ್ಮದೇವರು ಬಸದಿಯ ರಕ್ಷಣೆ ಮಾಡುತ್ತಾರೆ. ಆದರೆ ಪದ್ಮಾವತಿ ಅಮ್ಮನವರ ಪ್ರಭಾವವೇ ಜಾಸ್ತಿ ದೇವರ ದರ್ಶನ ಬರುವ ಕ್ರಮವಿಲ್ಲ ಗರ್ಭಗುಡಿಯಿಂದ ಹೊರಗೆ ಬರುವಂತೆ ಶುಕನಾಸಿ ಯೆಡನಾಳಿ, ಗಂಧಕುಟ, ತೀರ್ಥಂಕರ ಮಂಟಪ ಮತ್ತು ಪ್ರಾರ್ಥನಾ ಮಂಟಪ ಎಂಬ ಮಂಟಪಗಳು ಇವೆ. ತೀರ್ಥಂಕರ ಮಂಟಪದಲ್ಲಿ ಪೂಜೆ ಇತ್ಯಾದಿಗಳನ್ನು ಮಾಡುತ್ತಾರೆ ಮತ್ತು ಇಲ್ಲಿಗೆ ಕಲಶ ಸ್ನಾನ ಮಾಡಿದವರಿಗೆ ಮಾತ್ರ ಪ್ರವೇಶ ಮತ್ತು ಪ್ರಾರ್ಥನಾ ಮಂಟಪಗಳು ಒಟ್ಟಿಗೆ ಇದ್ದು. ಇಲ್ಲಿ ಹೋಮ ಇತ್ಯಾದಿ ಕ್ರಮಗಳನ್ನು ಮಾಡುತ್ತಾರೆ. ಬಸದಿಯ ಗರ್ಭಗೃಹದ ಹೊರಗೆ ಎದುರಿಗೆ ಶ್ರೀ ಸುಪಾರ್ಶ್ವನಾಥ ಸ್ವಾಮಿ ಮತ್ತು ಶ್ರೀ ವೃಷಭನಾಥ ಸ್ವಾಮಿಯ ಚಿತ್ರಗಳು ಮೇಲಿದೆ ಘಟ ಮಂಟಪಕ್ಕೆ ಟೈಲ್ಸ್ ಹಾಕಲಾಗಿದೆ ಮತ್ತು ಅದರ ಹೊರಗಿರುವ ಜಗಲಿಯ ನೆಲದಿಂದ ಕೂಡಿದೆ. ಬಸದಿಯ ಎದುರು ಗೋಪುರ ಇದೆ ಅದರ ಗೋಡೆಯ ಮೇಲೆ ಯಾವುದೇ ಚಿತ್ರಗಳಿಲ್ಲ ಈ ಗೋಪುರವನ್ನು ವಿವಿಧ ವಿಶೇಷ ಪೂಜೆ ಮತ್ತು ಇತರ ಕ್ರಮಗಳನ್ನು ಕಾರ್ಯಕ್ರಮಗಳ ಸಂದರ್ಭದಲ್ಲಿ ಬಳಸುತ್ತಾರೆ. ಕಂಬಗಳಿವೆ ಚಿತ್ರಗಳಿಲ್ಲ ಕಾರ್ಯಾಲಯದ ಕಚೇರಿ ಎಂಬುದನ್ನು ಪ್ರತ್ಯೇಕ ಕೊಠಡಿಯಲ್ಲಿ ಗೋಪುರವನ್ನು ಇದಕ್ಕೆ ಬಳಸುತ್ತಾರೆ. ಎಂಬುದು ಅವರಿಗೆ ಗರ್ಭಗೃಹದ ಸುತ್ತಲೂ ಅಂಗಳ ಇದೇ ಪರಿಸರದಲ್ಲಿ ಪಾರಿಜಾತ ಹೂವಿನ ಗಿಡ ತ್ರಿಶೂಲ ಮುಂತಾದವುಗಳನ್ನು ಇಡಲಾಗಿದೆ. ಕ್ಷೇತ್ರಪಾಲನ ಸನ್ನಿಧಾನ ಕಲ್ಲಿನಲ್ಲಿ ರೇಖಾಚಿತ್ರದ ರೂಪದಲ್ಲಿ ಇದು ಒಂದು ಗಮನಾರ್ಹವಾದದ್ದು, ಇಲ್ಲಿ ನಾಗನಕಲ್ಲು ಇದೆ ಕ್ಷೇತ್ರಪಾಲ ಬಸದಿಯನ್ನು ಕಾಯುತ್ತಾನೆ ಮತ್ತು ರಕ್ಷಿಸುತ್ತಾನೆ ಎಂದು ಅವರು ಹೇಳುತ್ತಾರೆ. ಬಲಿಕಲ್ಲು ಮತ್ತು ಅಷ್ಟದಿಕ್ಪಾಲಕ ಕಲ್ಲುಗಳಿವೆ.
ಉಲ್ಲೇಖಗಳು
[ಬದಲಾಯಿಸಿ]- ↑ ಶೇಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಉಜಿರೆ: ಮಂಜೂ ಶ್ರೀ ಪ್ರಿಂಟರ್ಸ್. pp. ೨೩೫.