ಆದಿನಾಥ ಸ್ವಾಮಿ ಜಿನಮಂದಿರ, ಸ್ವಾದಿ
ಸ್ಥಳ
[ಬದಲಾಯಿಸಿ]ಶ್ರೀ ಆದಿನಾಥ ಸ್ವಾಮಿ ಜಿನಮಂದಿರ ಉತ್ತರ ಕನ್ನಡ ಜಿಲ್ಲೆ ಸ್ವಾದಿಯಲ್ಲಿದೆ.ಶ್ರೀ ದಿಗಂಬರ ಜೈನ ಮಠದ ಅನತಿ ದೂರದಲ್ಲಿದೆ. ಎಡಭಾಗದಲ್ಲಿ ಶ್ರೀ ಪಾಶ್ರ್ವನಾಥ ಸ್ವಾಮಿಯ ಮಂದಿರ ಮತ್ತು ಬಲಭಾಗದಲ್ಲಿ ಕ್ಷೇತ್ರಪಾಲನ ಗುಡಿ ಇದ್ದು ಇವುಗಳ ಮಧ್ಯದಲ್ಲಿ ಇದೆ.
ಇತಿಹಾಸ
[ಬದಲಾಯಿಸಿ]ಈ ಮಂದಿರವು ಬಹು ಪ್ರಾಚೀನವಾಗಿದ್ದು ಕ್ರಿ ಶ. ಆರನೇ ಶತಮಾನದಲ್ಲಿ ಆಚಾರ್ಯ ಆಕಲಂಕರೇ ಇಲ್ಲಿದ್ದು ಪೂಜಾ ಕೈಂಕರ್ಯಗಳನ್ನು ಕೈಗೊಳ್ಳುತ್ತಿದ್ದರೆಂಬ ಪ್ರತೀತಿ ಇದೆ ಕ್ರಿ.ಶ 722ರಲ್ಲಿ ಸದಾಶಿವರಾಯನೆಂಬವನು ಇದಕ್ಕೆ ವಿಶೇಷವಾದ ಭೂದಾನವನ್ನು ಮಾಡಿದ್ದನೆಂದು ತಿಳಿಸುವ ಪ್ರಾಚೀನ ದಾಖಲೆಯೂ ಇದೆ. ವಿಭಿನ್ನ ಕಾಲಗಳಲ್ಲಿ ಜೀರ್ಣೋದ್ದಾರವನ್ನು ಕಂಡ ಈ ಜಿನಾಲಯವು 1998ರಲ್ಲಿ ಪೂರ್ಣ ಜೀರ್ಣೋದ್ದಾರಗೊಂಡು ಪಂಚಕಲ್ಯಾಣೋತ್ಸವವನ್ನೂ ಕಂಡಿತ್ತು. ಈ ಬಸದಿಗೆ ವಿಭಿನ್ನ ಕಾಲಗಲ್ಲಿ ಬಹಳ ಸಂಖ್ಯೆಯ ಆಚಾರ್ಯರು, ಭಟ್ಟಾರಕರು ಮತ್ತು ಶ್ರಾವಕರು ಚಿತ್ತೈಸಿದ್ದಾರೆ.[೧]
ವಿನ್ಯಾಸ
[ಬದಲಾಯಿಸಿ]ಪ್ರತಿಷ್ಥಾಪನ ವಿಗ್ರಹ ವಿನ್ಯಾಸ
[ಬದಲಾಯಿಸಿ]ಈ ನೂತನ ಬಸದಿಯಲ್ಲಿ ಪ್ರತಿಷಾಪನೆಗೊಂಡಿರುವ ಖಡ್ಗಾಸನ ಭಂಗಿಯಲ್ಲಿರುವ ಶ್ರೀ ಆದಿನಾಥ ಸ್ವಾಮಿಯ ವಿಗ್ರಹವು ಬಹಳ ಮನೋಹರವಾಗಿದ್ದು, ಸುಮಾರು ಎರಡೂವರೆ ಅಡಿ ಎತ್ತರವಿದೆ. ಕಾಲುಗಳ ಎಡಬಲಗಳಲ್ಲಿ ನಿಂತುಕೊಂಡು ಭಂಗಿಯಲ್ಲಿ ಯಕ್ಷ ಯಕ್ಷಿಯರಿದ್ದಾರೆ. ಅವರಿಗಿಂತ ಮೇಲ್ಗಡೆ ಪ್ರಭಾವಳಿಯಲ್ಲಿ ಕಂಬಗಳತಂಹ ರಚನೆಹಳಿದ್ದು, ಅವುಗಳಿಗಿಂತ ಮೇಲ್ಗಡೆಯಲ್ಲಿ ಮಕರ ಮೃಗಗಳೂ, ಅವುಗಳ ಬಾಯಿಯಿಂದ ಹೊರಟ ಮಕರ ತೋರಣವೂ ಪ್ರಭಾವಳಿಯನ್ನು ಅಲಂಕಾಗೊಳಿಸಿವೆ.
ಹೊರಾಂಗಣ ವಿನ್ಯಾಸ
[ಬದಲಾಯಿಸಿ]ಈ ಬಸದಿಗೆ ಮೇಗಿನ ನೆಲೆ ಇಲ್ಲ. ಮಾನಸ್ಥಂಭವಿದೆ. ಪಾರಿಜಾತ ಹೂವಿನ ಗಿಡ ಇಲ್ಲ. ಆದರೆ ಬಸದಿಯ ಅಂಗಳದಲ್ಲಿ ನೆಡಲಾಗಿದೆ. ಈ ಬಸದಿಗೆ ಪ್ರತ್ಯೇಕವಾದ ಚಂದ್ರಶಾಲೆ (ಗೋಪುರ) ಇಲ್ಲ. ಬಸದಿಯ ಎದುರಿಗೆ ಪ್ರವೇಶ ದ್ವಾರದಲ್ಲಿ ದ್ವಾರಪಾಲಕರ ಮೂರ್ತಿಗಳಾಗಲೀ ಅವರ ಚಿತ್ರಗಳಾಗಲೀ ಇಲ್ಲ. ಬಸದಿಯ ಪ್ರಾರ್ಥನಾ ಮಂಟಪದಲ್ಲಿ ಜಯಘಂಟೆ, ಜಾಗಟೆಗಳನ್ನು ತೂಗಿ ಹಾಕಲಾಗಿದೆ. ಬಸದಿಯ ನಿಮೇಶನದ ಬಲಮೂಲೆಯಲ್ಲಿ ಕ್ಷೇತ್ರಪಾಲನ ಸನ್ನಿಧಿಯಿದೆ. ಅಲ್ಲಿ ಬ್ರಹ್ಮದೇವರ ಬಿಂಬವಿದೆ. ನಾಗರಕಲ್ಲುಗಳನ್ನು ಒಂದು ಪೀಠದ ಮೇಲೆ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಸುತ್ತಲೂ ಅಷ್ಪದಿಕ್ಪಾಲಕರ ಕಲ್ಲುಗಳಿದ್ದು, ಅವುಗಳಿಗೂ ಪೂಜೆ ನಡೆಯುತ್ತದೆ.
ಆವರಣ
[ಬದಲಾಯಿಸಿ]ಸ್ವಾಮಿಯ ಶಿರದ ಎಡಬಲಗಳಲ್ಲಿ ಚಾಮರಗಳೂ, ಮೇಲ್ಗಡೆ ಆತಪತ್ರವೂ, ಕೀರ್ತಿಮುಖವೂ ಇವೆ. ದಿವ್ಯಧ್ವನಿಯನ್ನು ನೀಡುತ್ತಿರುವ ದುಂಡಗಾಗಿರುವ ಸ್ವಾಮಿಯ ಮುಖ್ಯ ಪ್ರಸನ್ನ ಭಾವವನ್ನು ಹೊರಸೂಸುತ್ತಾ ಬಹು ಸುಂದರವಾಗಿದೆ. ಈ ಸಿಂಹ ಪೀಠದ ಮೇಲೆ ಸ್ವರ್ಣ ವರ್ಣದ ಪದ್ಮಾಸನಸ್ಥ ಶ್ರೀ ಪಾಶ್ರ್ವನಾಥ ಸ್ವಾಮಿಯ ಬಿಂಬವನ್ನು ಚರಸ್ಥಿತಿಯಲ್ಲಿ ಇಡಲಾಗಿದೆ. ಎದುರುಗಡೆ ಧ್ವಜ ದರ್ಪಣಾದಿ ಪೂಜೆಯ ಸುವಸ್ತುಗಳೂ ಇವೆ. ಶ್ರೀ ಚಕ್ರೇಶ್ವರಿ ದೇವಿಯ ಬಿಂಬವೂ ಇದೆ. ಇವರಿಗೂ ಗೋಮುಖ ಯಕ್ಷರಿಗೂ ಸದಾ ಪೂಜೆ ನಡೆಯುತ್ತದೆ.
ಆಚರಣೆಗಳು
[ಬದಲಾಯಿಸಿ]ಬಸದಿಯಲ್ಲಿ ಪ್ರತಿ ದಿನ ಬೆಳಿಗ್ಗೆ ಅಭಿಷೇಕ ಮತ್ತು ಪೂಜೆ ಹಾಗೂ ಸಾಯಂಕಾಲ ಮಂಗಳಾರತಿ ನಡೆಯುತ್ತದೆ. ನವರಾತ್ರಿಯ ವಿಜಯದಶಮಿಯಂದು ರಥೋತ್ಸವ ನಡೆಯುತ್ತದೆ. ಬಸದಿಯಲ್ಲಿ ಫಾಲ್ಗುನ ಅಷ್ಟಾಹ್ನಿಕ, ಆದಿನಾಥ ಸ್ವಾಮಿಯ ಮೋಕ್ಷ ಕಲ್ಯಾಣ, ದಶಲಕ್ಷಣ ಪರ್ವ, ನೂಲಹುಣ್ಣೆಮೆ, ಜೀವದಯಾಷ್ಪಮಿ, ಮಹಾಮೀರ ಜಯಂತಿ ಇತ್ಯಾದಿಗಳನ್ನು ಆಚರಿಸಲಾಗುತ್ತದೆ.
ಅನುಕೂಲತೆಗಳು
[ಬದಲಾಯಿಸಿ]ಕ್ಷೇತ್ರದಲ್ಲಿ ಯಾತ್ರಿಕರಿಗಾಗಿ ಮುಂದೆ ಹಲವಾರು ಅನುಕೂಲತೆಗಳನ್ನು ಒದಗಿಸಬೇಕೆಂಬ ಯೋಜನೆ ಇದೆ. ಶಾಶ್ವತವಾದ, ಬೇಡಿಕೆ ಇರುವಷ್ಟು ನೀರಿನ ಸರಬರಾಜು, ಅತಿಥಿಗೃಹಗಳು ಇತ್ಯಾಥಿ ಶೀಘ್ರದ ಅವಶ್ಯಕತೆಗಳು. ಇದಕ್ಕಾಗಿ ಸರಕಾರದ ಧನಸಹಾಯವನ್ನು ನಿರೀಕ್ಷಿಸಲಾಗುತ್ತಿದೆ. ಸಮಾಜವು ಸಂಸ್ಥೆಗಳ ನೀಡಬೇಕೆಂಬುದು ಅಪೇಕ್ಷೆ. ಶ್ರೀ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆಯುತ್ತಿರುವ ರೀತಿಯಲ್ಲೇ ಮಂದೆಯೂ ಅಭಿವೃದ್ಧ ಕಾರ್ಯಗಳು ನಡೆದರೆ ಇದೊಂದು ಪ್ರಸಿದ್ಧ ಹಾಗೂ ಜನಾಕರ್ಷಕ ಕ್ಷೇತ್ರವಾಗಿ ಬೆಳಗಬಹುದೆಂದು ನಂಬಲಾಗುತ್ತಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ ಶೇಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ. ಉಜಿರೆ: ಮಂಜೂಶ್ರೀ ಪ್ರಿಂಟರ್ಸ್. p. ೩೪೭.