ಆದಮ್ ಜಿ. ರೀಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆದಮ್ ಜಿ. ರೀಸ್
ಆದಮ್ ಜಿ. ರೀಸ್
ಜನನ
ಆದಮ್ ಜಿ. ರೀಸ್

೧೯೬೯ ಡಿಸೆಂಬರ್
ಅಮೇರಿಕ
ರಾಷ್ಟ್ರೀಯತೆಅಮೇರಿಕ

ಅಮೇರಿಕದ ಖಭೌತವಿಜ್ಞಾನಿಯಾಗಿರುವ (astrophysicist) ಆದಮ್ ಜಿ. ರೀಸ್‌ರವರು ೧೯೬೯ರ ಡಿಸೆಂಬರ್ ತಿಂಗಳಲ್ಲಿ ವಾಷಿಂಗ್‌ಟನ್‌ನಲ್ಲಿ ಜನಿಸಿದರು. ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದಲ್ಲಿ ಖಗೋಳವಿಜ್ಞಾನದಲ್ಲಿ ಪ್ರೊಫೆಸರ್ ಆಗಿರುವ ರೀಸ್‌ರವರು ಬಾಲ್ಟಿಮೋರ್‌ನ ಸ್ಪೇಸ್ ಟೆಲಿಸ್ಕೋಪ್ ಸೈನ್ಸ್ ಇನ್‌ಸ್ಟಿಟ್ಯೂಟ್‌ನ ವಿಜ್ಞಾನ ವಿಭಾಗದಲ್ಲಿ ಹಿರಿಯ ವಿಜ್ಞಾನಿಯಾಗಿದ್ದಾರೆ. ಸೂಪರ್‌ನೋವದ ಅಧ್ಯಯನ ನಡೆಸುತ್ತಿರುವ ರೀಸ್‌ರವರು ಉಚ್ಚ-ಝೆಡ್ ತಂಡದ (High-Z supernovae search) ಸದಸ್ಯರಾಗಿದ್ದಾರೆ. ಅವರು ಬ್ರಿಯಾನ್ ಪಿ. ಸ್ಮಿತ್‌ರವರ ಜೊತೆ ಕೆಲಸ ಮಾಡಿ, ೧೯೯೮ರಲ್ಲಿ ಅನಂತವಿಶ್ವದ ವೇಗವೃದ್ಧಿ ವ್ಯಾಕೋಚನ ಪ್ರಕ್ರಿಯೆಗೆ (accelerating expansion of the universe) ನೇರವಾದ ಸಾಕ್ಷ್ಯಗಳನ್ನು ಗಳಿಸಿದರು. ಆ ಸಂಶೋಧನೆ ೧೯೯೮ರ ’ವರುಷದ ಸಂಶೋಧನೆ’ ಎಂಬುದಾಗಿ ’ಸೈನ್ಸ್ ಮ್ಯಾಗಜೀನ್‌ನಲ್ಲಿ ಪ್ರಕಟವಾಯಿತು. ನಂತರ ೨೦೦೨ರಲ್ಲಿ ರೀಸ್‌ರವರು ಹಬಲ್ ಬಾಹ್ಯಾಕಾಶ ದೂರದರ್ಶಕದ ಸಹಾಯದಿಂದ ಅತ್ಯಂತ ದೂರದಲ್ಲಿರುವ ೨೫ ಸೂಪರ್‌ನೋವಾಗಳ ಆಧ್ಯಯನವನ್ನು ನಡೆಸಿದರು. ಆ ಅಧ್ಯಯನದಿಂದ ಅನಂತವಿಶ್ವ ವೇಗವಾಗಿ ವ್ಯಾಕೋಚನ ಪ್ರಕ್ರಿಯೆಗೆ ಒಳಗಾಗುತ್ತಿದೆ ಎಂಬುದಾಗಿ ಕಂಡುಹಿಡಿದರು. ಆ ಸಂಶೋಧನೆಗೆ ನೀಡಲಾದ ೨೦೧೧ರ ಭೌತವಿಜ್ಞಾನಕ್ಕೆ ಮೀಸಲಾದ ನೊಬೆಲ್ ಪ್ರಶಸ್ತಿಯನ್ನು ಅವರು ಬ್ರಿಯಾನ್ ಪಿ. ಸ್ಮಿತ್ ರವರ ಜೊತೆ ಹಂಚಿಕೊಂಡಿದ್ದಾರೆ.[೧] ಇದಕ್ಕೆ ಮೊದಲು ಅವರು ಅನೇಕ ಪ್ರತಿಷ್ಠಿತ ಸಂಘಸಂಸ್ಥೆಗಳ ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]