ಆತ್ಮಾನಂದ

ವಿಕಿಪೀಡಿಯ ಇಂದ
Jump to navigation Jump to search


== ಸದ್ಗುರುದೇವ ಆತ್ಮಾನಂದ == ಪೂಜ್ಯ ಶ್ರೀ ಗುರುದೇವ ಆತ್ಮಾನಂದರು, ೧೯೦೪ ರಲ್ಲಿ ಪರಮ ತಪಸ್ವಿಗಳು, ಅವತಾರಿ ಪುರುಷರೂ ಆದ ಶ್ರೀ ಸದ್ಗುರು ಶಿವಾನಂದರ (ನಾಗನೂರ-ಗದಗ) ಏಕಮೇವ ಮಾನಸ ಮತ್ತು ಔರಸ ಪುತ್ರರಾಗಿ ಜನಿಸಿದರು. ಶ್ರೀ ಸದ್ಗುರು ಸಿಧ್ದಾರೂಡರು ಹುಬ್ಬಳ್ಳಿ ಇವರ ಸಮಕಾಲಿನರು, ಆಧ್ಯಾತ್ಮದಲ್ಲಿ ಇವರ ಜೊತೆ ಅನುಭಾವವನ್ನು ಹೊಂದಿದ್ದ ಪೂಜ್ಯ ಶ್ರೀ ಸದ್ಗುರು ಶಿವಾನಂದರು ಆಧ್ಯಾತ್ಮ ಬೊಧೆಗಾಗಿಯೆ ತಮ್ಮ ಜೀವನವನ್ನು ಮುಡುಪಿಟ್ಟರು. ಆತ್ಮನಂದರು ತಮ್ಮ ತಂದೆಯವರ ವಿಶೇಷ ಪೋಷಣೆಯಲ್ಲಿಯೇ ಬೆಳೆದರು. ಅವರು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಪೂಜ್ಯ ಶ್ರೀ ಸದ್ಗುರು ಶಿವಾನಂದರು ತುರ್ಯ ಸ್ಥಿತಿಯನ್ನು ಹೊಂದುತಿದ್ದರು. ಅದು ೨-೩ ದಿನಗಳವರೆಗೆ ಇರುತ್ತಿತ್ತು. ಆಗ ಆತ್ಮಾನಂದರು, ಪೂಜ್ಯ ಶ್ರೀ ಸದ್ಗುರು ಶಿವಾನಂದರ ತುರ್ಯ ಸ್ಥಿತಿಯನ್ನು ಲಕ್ಷ್ಯಪೂರ್ವಕವಾಗಿ ನಿರೀಕ್ಷಿಸಿ, ಅದರ ಗೂಢಾರ್ಥವನ್ನು ತಿಳಿದುಕೊಂಡರು. ಅವರು ೧೯೩೨ ರಲ್ಲಿ "ಪ್ರಾಚೀನ ಭಾರತೀಯ ಇತಿಹಾಸ ಮತ್ತು ಸಂಸ್ಕೃತಿ" ಎಂಬ ವಿಷಯವನ್ನು ತೆಗೆದುಕೊಂಡು, ಬನಾರಸ ಹಿಂದೂ ವಿಶ್ವವಿದ್ಯಾಲಯದ ಎಂ.ಎ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು (ಆಗ ಪಂಡಿತ ಲಾಲ ಬಹದ್ದೂರ ಶಾಸ್ತ್ರಿ ಅವರೊಂದಿಗೆ ಸ್ನೇಹ ಇತ್ತು) ಅಲ್ಲಿಂದ ಮರಳಿದ ನಂತರ, ತಮ್ಮ ತಂದೆಯವರ ವಿಶೇಷ ಮಾರ್ಗದರ್ಶನದಲ್ಲಿ ಹಾಗೂ ತಮ್ಮ ಹಿಂದಿನ ಜನ್ಮದ ಆತ್ಮಾಭ್ಯಾಸದ ತೀವ್ರ ಸಂಸ್ಕಾರದಿಂದ ತೂರ್ಯ ಸ್ಥಿತಿಯನ್ನು ಹೊಂದಿಯೇ ತೀರಬೆಕೆಂದು ನಿಶ್ಚಯಿಸಿದರು. ಎಲ್ಲ ಅಧಿಕಾರ, ಸಂಪತ್ತು, ಐಷಾರಾಮದ ಜೀವನ ಮತ್ತು ಲೋಕ ಪ್ರಸಿದ್ಧಿಯನ್ನು ನಿರ್ಲಕ್ಷಿಸಿ, ಕೆಲವು ಕಾಲ ಸಂಚಾರ ಕೈಗೊಂಡರು. ಸ್ವರೂಪಾವ ಸ್ಥಿತಿಯನ್ನು ಹೊಂದುವ ಸತತ ಅಭ್ಯಾಸದಲ್ಲಿ ತೊಡಗಿ, ಅಲ್ಪಕಾಲದಲ್ಲಿಯೆ ಆತ್ಮಜ್ಞಾನಿ ಎನಿಸಿದರು.

ಬೋಧೆ:[ಬದಲಾಯಿಸಿ]

ಎಲ್ಲ ಜೀವಿಗಳಿಗೆ ಬೇಕಾದದ್ದು ಶಾಶ್ವತ ಸುಖವು. ಅದು ರೂಪರಹಿತವಿದೆ. ಆದರೆ ಅಜ್ಞಾನಿ ಜೀವಿಗಳು ರೂಪಗಳಲ್ಲಿಯೇ ಸುಖವನ್ನು ಹುಡುಕುತ್ತಾರೆ ಮತ್ತು ಕಲ್ಪಿತ ರೂಪಗಳಿಗಾಗಿ ಜಗಳಾಡುತ್ತಾರೆ. ಆದ್ದರಿಂದ ಜೀವಿಗಳು ವ್ಯರ್ಥವಾಗಿ ರೂಪಗಳಲ್ಲಿ ಸುಖವನ್ನು ಹುಡುಕದೆ ಮತ್ತು ಕಲ್ಪಿತ ರೂಪಗಳಿಗಾಗಿ (ಶಿವ, ಪಾರ್ವತಿ, ವಿಷ್ಣು, ಲಕ್ಷ್ಮೀ) ಬಡದಾಡದೆ, ಕೇವಲ ರೂಪರಹಿತ ಸುಖವನ್ನು ನೆನಪಿಗೆ ತಂದು ಕೊಳ್ಳುವದಕ್ಕಾಗಿ ಪೂಜ್ಯ ಶ್ರೀ ಗುರುದೇವ ಆತ್ಮಾನಂದರು "ಓಂ ನಮಃ ಸುಖಾಯ" ಎಂಬ ಮಂತ್ರವನ್ನು ಹೇಳಿದರು. ಅದರಂತೆ ಅಜ್ಞಾನಿ ಜೀವರು ತಮ್ಮ ನಿಜ ಸ್ವರೂಪದ ಹೊರಗೆ ಹುಡುಕಿ ಬಳಲುತಾರೆ. ಹೀಗೆ ಅವರು ವ್ಯರ್ಥ ಬಳಲದೆ ತಮ್ಮ ನಿಜ ಸ್ವರೂಪವೇ ಸುಖವೆಂದು ತಿಳಿದು, ಕೇವಲ ತಮ್ಮ ಸುಖಮಯ ನಿಜಸ್ವರೂಪವನ್ನೇ ನೆನಪಿಗೆ ತಂದುಕೊಳ್ಳಲು "ಓಂ ನಮೋ ನಾನವೆ" ಎಂಬ ಮಂತ್ರವನ್ನು ಹೇಳಿದರು. ಜೀವಿಗಳಿಗೆ ಆನಂದದ ಗುರ್ತು ಭಾವ ಉದಯವಾದಾಗಿನಿಂದಲೇ ಇದೆ. ಅದೇ "ಪ್ರಥಮಾನುಭೂತಿ". ಅದನ್ನು ಹೇಗೊ ಮರೆತಂತಾಗಿದೆ. ಪ್ರಥಮಾನುಭೂತಿಯನ್ನು ನೆನಪಿಸಿಕೊಂಡು ಆನಂದನಿಷ್ಠರಾಗಲು ಶ್ರೀ ಗುರುದೇವರು ಘಂಟಾಘೋಷವಾಗಿ ತಿಳಿಸಿದರು. ಬ್ರಹ್ಮಚರ್ಯಾಶ್ರಮ (ಬಾಲ್ಯದಲ್ಲಿ ಆತ್ಮವಿದ್ಯೆಯ ಅಭ್ಯಾಸ), ಗ್ರಹಸ್ಥಾಶ್ರಮ (ವಿಷಯ ಭೋಗ ವ್ಯವಹಾರ ನಡೆದಾಗಲೆಲ್ಲಾ ಅದರಲ್ಲಿ ಸುಖವಿದೆಯೊ ಅಥವಾ ದುಃಖವಿದೆಯೋ ಎಂಬುದನ್ನು ವಿಚಾರ ಮಾಡುವದು), ವಾನಪ್ರಸ್ಥಾಶ್ರಮ (ಮನೆತನದ ವ್ಯವಹಾರ ಕೈ ಬಿಟ್ಟು ಆತ್ಮವಿಚಾರದಲ್ಲಿ ತೊಡಗುವದು) ಇವು ಪುನಃ ಪ್ರತಿಷ್ಟಾಪನೆಯಾಗದ ಹೊರತು ಸಮಾಜದಲ್ಲಿ ಶಾಂತಿ ನೆಲಸಲಾರದು ಎಂದು ಗುರುದೇವರು ತಿಳಿಸಿಕೊಟ್ಟರು.