ಆಗಸ್ಟ್ ಅಡಾಲ್ಫ್ ಕುಂಡ್
ಗೋಚರ
ಆಗಸ್ಟ್ ಅಡಾಲ್ಫ್ ಕುಂಡ್ | |
---|---|
ಜನನ | ಆಗಸ್ಟ್ ಅಡಾಲ್ಫ್ ಕುಂಡ್ ೧೮ ನವೆಂಬರ್ ೧೮೩೯ ಜರ್ಮನಿ |
ರಾಷ್ಟ್ರೀಯತೆ | ಜರ್ಮನಿ |
ಜರ್ಮನಿಯ ಭೌತವಿಜ್ಞಾನಿಯಾಗಿದ್ದ ಆಗಸ್ಟ್ ಅಡಾಲ್ಫ್ ಕುಂಡ್‌ರವರು ೧೮೩೯ರ ನವೆಂಬರ್ ೧೮ರಂದು ಮೀಕ್ಲೆನ್‌ಬರ್ಗ್‌ನ ಶ್ವೇರಿನ್‌ನಲ್ಲಿ ಜನಿಸಿದರು. ಅನಿಲಗಳಲ್ಲಿ ಮತ್ತು ಘನಪದಾರ್ಥಗಳಲ್ಲಿ ಶಬ್ದ ಸಂಚರಿಸುವ ವೇಗವನ್ನು ಕಂಡುಹಿಡಿಯಲು ಅನುಕೂಲವಾದ ಸರಳ ಉಪಕರಣ ‘ಕುಂಡ್ ನಳಿಗೆ’ಯನ್ನು (Kundt’s tube) ಕುಂಡ್‌ರವರು ೧೮೬೬ರಲ್ಲಿ ಕಂಡುಹಿಡಿದರು.[೧] ಅಲ್ಲದೆ ಅವರು ಮಿಂಚಿನ ರೋಹಿತದ ಬಗ್ಗೆ ಮತ್ತು ಹರಳುಗಳ ವಿದ್ಯುತ್ ಸ್ವಭಾವಗಳ ಬಗ್ಗೆ ತಮ್ಮ ಪರಿವೀಕ್ಷಣೆಯನ್ನು ಪ್ರಕಟಿಸಿದರು.[೨] ಕುಂಡ್‌ರವರು ೧೮೯೪ರ ಮೇ ೨೧ರಂದು ನಿಧನರಾದರು.