ಆಗಮೆಮ್ನಾನ್
ಆಗಮೆಮ್ನಾನ್ ಗ್ರೀಕ್ ಪುರಾಣಗಳಲ್ಲಿ ಪ್ರಸಿದ್ಧನಾಗಿರುವ ಮೈಸಿನೀ ದೇಶದ ದೊರೆ[೧]. ಮೆನೆಲಾಸ್‍ನ ಸೋದರ. ಟ್ರಾಯ್ ಮೇಲಿನ ಯುದ್ಧದಲ್ಲಿ ಗ್ರೀಕರ ನಾಯಕ. ತಂದೆ ಅಟ್ರಿಯಸ್ (ಕೆಲವರ ಅಭಿಪ್ರಾಯದಲ್ಲಿ ಪ್ಲೀಸ್ಥೆನೀಸ್). ಮೆನೆಲಾಸ್‍ನ ಹೆಂಡತಿಯಾದ ಹೆಲೆನ್ನಳನ್ನು ಟ್ರಾಯ್ ರಾಜ ಪ್ಯಾರಿಸ್ ಅಪಹರಿಸಿಕೊಂಡು ಹೋಗಲಾಗಿ ಆಗಮೆಮ್ನಾನ್ ಸಹೋದರನೊಡನೆ ಟ್ರಾಯ್ ಮೇಲೆ ಯುದ್ಧ ಹೂಡಿದ. ದಂಡೆತ್ತಿ ಹೋಗಬೇಕಾದ ದಿನ ವಿರುದ್ಧ ಮಾರುತಗಳನ್ನೆಬ್ಬಿಸಿದ ಅರ್ಟೆಮಿಸ್ ದೇವತೆಯ ಉಪಶಮನಕ್ಕಾಗಿ ತನ್ನ ಮಗಳಾದ ಇಫಿಜೀನಿಯಳನ್ನು ಬಲಿಕೊಟ್ಟ. ಯುದ್ಧದ ನಡುವೆ ಅಕಿಲೀಸನೊಡನೆ ಮನಸ್ತಾಪ ಬೆಳೆದು ಅವನೊಡನೆ ಹೊಡೆದಾಡಿದ. ಹತ್ತು ವರ್ಷ ನಡೆದ ಘೋರಯುದ್ಧದಲ್ಲಿ ಗೆದ್ದು ಬಂದಿಯಾದ ಕೆಸ್ಸಾಂಡ್ರಳೊಂದಿಗೆ ಸ್ವದೇಶಕ್ಕೆ ಹಿಂತಿರುಗಿದಾಗ ಅವನ ಹೆಂಡತಿ ಕ್ಲೈಟಮ್ನೆಸ್ಟ್ರ ತನ್ನ ಪ್ರಿಯನೊಂದಿಗೆ ಪಿತೂರಿ ಹೂಡಿ ಅವನನ್ನು ಕೊಲೆ ಮಾಡಿದಳು. ಆಗಮೆಮ್ನಾನನ ಮಕ್ಕಳು ತಂದೆಯ ಕೊಲೆಗೆ ಸರಿಯಾದ ಪ್ರತೀಕಾರ ಮಾಡಿದ ಕಥೆ ಮುಂದಿನದು. ಈ ಪ್ರಸಂಗ ಹೋಮರನ ಈಲಿಯಡ್ ಮಹಾಕಾವ್ಯದಲ್ಲಿದ್ದು ಮುಂದೆ ರಚನೆಗೊಂಡ ಅನೇಕ ರುದ್ರನಾಟಕಗಳಿಗೆ ವಸ್ತುವಾಗಿದೆ.
ಉಲ್ಲೇಖಗಳು
[ಬದಲಾಯಿಸಿ]ಬಾಹ್ಯ ಸಂಪರ್ಕಗಳು
[ಬದಲಾಯಿಸಿ]Agamemnon - Ancient History Encyclopedia