ವಿಷಯಕ್ಕೆ ಹೋಗು
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.

ಆಕ್ಸಿಜನ್ ಚಕ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಕ್ಸಿಜನ್ ಚಕ್ರ

[ಬದಲಾಯಿಸಿ]

ಪರಿಸರದಲ್ಲಿ ವ್ಯವಸ್ಥೆಯಲ್ಲಿ ಎಲ್ಲಾ ಮೂಲವಸ್ತುಗಳೂ ಚಕ್ರಿಯವಾಗಿ ಜೈವಿಕ ಮತ್ತು ಅಜೈವಿಕ ಘಟಕಗಳ ನಡುವೆ ಚಲಿಸುತ್ತಿರುತ್ತದೆ.ಜೀವ ಮಂಡಲ ಮಟ್ಟದಲ್ಲೂ ಕೂಡ ಮೂಲವಸ್ತುಗಳ ಮತ್ತು ಪೋಷಕಾಂಶಗಳ ಚಕ್ರೀಯ ಚಲನೆಯನ್ನು ಕಾಣಬಹುದು. ಹೀಗೆ ಮೂಲ ವಸ್ತುಗಳ ಚಕ್ರೀಯ ಚಲನೆಯನ್ನು ಜೀವ ಭೂರಾಸಾಯನಿಕ ಚಕ್ರಗಳೆಂದು ಕರೆಯುತ್ತಾರೆ.ಜೀವಿಗೋಳದಲ್ಲಿ ಜೈವಿಕ ಮತ್ತು ಅಜೈವಿಕ ಘಟಕಗಳ ನಡುವಿನ ಪರಸ್ಪಾರವಲಂಬನೆಯನ್ನ ಜೀವ ಭೂರಾಸಾಯನಿಕ ಚಕ್ರಗಳು ನಿರೂಪಿಸುತ್ತವೆ. ಇಂತಹ ಚಕ್ರಗಳಲ್ಲಿಆಕ್ಸಿಜನ್ ಚಕ್ರ ವು ಒಂದು ಜೀವ ಭೂರಾಸಾಯನಿಕ ಚಕ್ರವಾಗಿದ್ದು ಆಕ್ಸಿಜನ್ ನ ಚಕ್ರಿಯ ಚಲನೆಯ ಬಗ್ಗೆ ತಿಳಿಸುತ್ತದೆ. ಜೀವಿಗಳಿಗೆ ಆಕ್ಸಿಜನ್ ಕೂಡ ಅತ್ಯವಶ್ಯ ಪೋಷಕಾಂಶವಾಗಿದೆ.ಅದರಲ್ಲಿಯೂ ಶಕ್ತಿ ಬಿಡುಗಡೆಗಾಗಿ ನಡೆಯುವ ಶರ್ಕರಗಳ ಉತ್ಕಷಣೆಗಾಗಿ ಆಕ್ಸಿಜನ್ ತುಂಬಾ ಅವಶ್ಯಕವಾಗಿದೆ. ಆಕ್ಸಿಜನ್ ವಾತಾವರಣದ ಅನಿಲಗಳ ಗರಿಷ್ಟ ಪ್ರಮಾಣದಲ್ಲಿ ದೊರೆಯುವ ಎರಡನೇ ಅನಿಲವಾಗಿದೆ. ವಾತಾವರಣದಲ್ಲಿ ಆಕ್ಸಿಜನ್ ಮುಕ್ತವಾದ ಅನಿಲ ಆಕ್ಸಿಜನ್ ನ ಅಣುಗಳ ರೂಪದಲ್ಲಿ ದೊರೆಯುತ್ತದೆ. ಅದಲ್ಲದೆ ನೀರಿನಲ್ಲೂ ಸಹ ಆಕ್ಸಿಜನ್ ಕರಗಿದ ರೂಪದಲ್ಲಿ ದೊರೆಯುತ್ತದೆ,ಜೊತೆಗೆ ಇಂಗಾಲದ ಡೈ ಆಕ್ಸಡ್ ಹಾಗೂ ನೀರಿನಲ್ಲಿ ಸಂಯುಕ್ತ ರೂಪದಲ್ಲಿಯೂ ಲಭ್ಯವಿದೆ.

ಶರ್ಕರ ಉತ್ಕಷಣೆಗಾಗಿ ಸಸ್ಯಗಳ, ಪ್ರಾಣಿಗಳ ಹಾಗೂ ಇನ್ನಿತರ ಜೀವಿಗಳ ಉಸಿರಾಟ ಕ್ರಿಯೆಯ ಮೂಲಕ ಆಕ್ಸಿಜನ್ ನೇರವಾಗಿ ವಿನಿಮಯ ಮೂಲವನ್ನು ತಲಪುತ್ತದೆ.ಇದಲ್ಲದೆ, ದ್ಯುತಿ ಸಂಶ್ಲೇಷಣೆ ಕ್ರಿಯೆಯಲ್ಲಿ ಇಂಗಾಲದ ಡೈ ಆಕ್ಸಡ್ ಹಾಗೂ ನೀರಿನ ಸಂಯುಕ್ತ ಸಸ್ಯಗಳ ದೇಹವನ್ನು ಪ್ರವೇಶಿಸುತ್ತವೆ.ಇದೆ ದ್ಯುತಿ ಸಂಶ್ಲೇಷಣೆ ಕ್ರಿಯೆಯಲ್ಲಿ ಒಂದು ಉಪ ಉತ್ಪನ್ನವಾಗಿ ಆಕ್ಸಿಜನ್ ಸಸ್ಯಗಳಿಂದ ಹೊರಬರುತ್ತದೆ.ಉಸಿರಾಟ ಕ್ರಿಯೆಯಿಂದಾಗಿ ಎಲ್ಲಾ ಜೀವಿಗಳ ದೇಹದಿಂದ ಆಕ್ಸಿಜನ್, ಇಂಗಾಲದ ಡೈ ಆಕ್ಸಡ್ ಹಾಗೂ ನೀರಿನಲ್ಲಿ ಸಂಯುಕ್ತ ರೂಪದಲ್ಲಿ ಹೊರಬರುತ್ತದೆ. ಬ್ಯಾಕ್ಟೀರಿಯ ಮತ್ತು ಶಿಲೀಂಧ್ರಗಳಿಂದ ಉಂಟಾಗುವ ಸತ್ತ ಜೀವಿಗಳ ದೇಹದ ವಿಘಟನೆ ಕ್ರಿಯೆಯಿಂದಲೂ ಇಂಗಾಲದ ಡೈ ಆಕ್ಸಡ್ ಹಾಗೂ ನೀರು ಉತ್ಪತ್ಪಿಯಾಗುತ್ತದೆ. ಜನ ಸಾಮನ್ಯ ಮನೆಗಳಲ್ಲಿ ವಾಹನಗಳಲ್ಲಿ ಹಾಗೂ ಕೈಗಾರಿಕೆಗಳಲ್ಲಿ ಬಳಸುವ ಸೌದೆ, ಕಲ್ಲಿದ್ದಲು,ನೈಸರ್ಗಿಕ ಅನಿಲ ಹಾಗೂ ಪೆಟ್ರೋಲಿಯಂ ವಸ್ತುಗಳ ದಹನ ಕ್ರಿಯೆಯಲ್ಲಿ ವಾತವರಣದ ಆಮ್ಲಜನಕ ಬಳಕೆಯಾಗುತ್ತದೆ. ಉಸಿರಾಟ,ವಿಘಟನೆ ಹಾಗೂ ದಹನಕ್ರಿಯೆ ಇವುಗಳಲ್ಲಿ ಉತ್ಪತ್ಪಿಯಾಗುವ ಇಂಗಾಲದ ಡೈ ಆಕ್ಸಡ್ ಹಾಗೂ ನೀರು ಮತ್ತೆ ದ್ಯುತಿ ಸಂಶ್ಲೇಷಣೆ ಕ್ರಿಯೆಯಲ್ಲಿ ಸಸ್ಯಗಳಿಗೆ ಒದಗಿಸುತ್ತದೆ.

ಉಲ್ಲೇಖಗಳು

[ಬದಲಾಯಿಸಿ]


Oxygen cycle