ಆಕರ ಸಂಕೇತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಿ ಭಾಷೆಯಲ್ಲಿರುವ ಸರಳ ಆಕರ ಸಂಕೇತದ ಉದಾಹರಣೆ.

ಗಣಕಯಂತ್ರ ಕ್ರಮವಿಧಿಕರಣದಲ್ಲಿ, ಆಕರ ಸಂಕೇತ (ಸೋರ್ಸ್ ಕೋಡ್) ಎಂದರೆ ಮನುಷ್ಯರು ಓದಬಲ್ಲ ಕ್ರಮವಿಧಿ ಭಾಷೆಯನ್ನು ಬಳಸಿ,[೧] ಸಾಮಾನ್ಯವಾಗಿ ಸಾದಾ ಪಠ್ಯವಾಗಿ ಬರೆದಿರುವ, ಸಂಭಾವ್ಯವಾಗಿ ಟಿಪ್ಪಣಿಗಳುಳ್ಳ (ಕಾಮೆಂಟ್) ಸಂಕೇತದ ಯಾವುದೇ ಸಂಗ್ರಹ. ಒಂದು ಕ್ರಮವಿಧಿಯ ಆಕರ ಸಂಕೇತವು ವಿಶೇಷವಾಗಿ ಗಣಕಯಂತ್ರ ಕ್ರಮವಿಧಿಕರ ಕೆಲಸವನ್ನು ಸರಾಗವಾಗಿಸಲು ವಿನ್ಯಾಸಗೊಂಡಿರುತ್ತದೆ. ಕ್ರಮವಿಧಿಕರು (ಪ್ರೋಗ್ರಾಮರ್) ಹೆಚ್ಚಾಗಿ ಆಕರ ಸಂಕೇತವನ್ನು ಬರೆಯುವ ಮೂಲಕ ಒಂದು ಗಣಕಯಂತ್ರವು ಮಾಡಬೇಕಾದ ಕಾರ್ಯಗಳನ್ನು ನಿರ್ದಿಷ್ಟಪಡಿಸುತ್ತಾರೆ. ಹಲವುವೇಳೆ ಒಂದು ಜೋಡಣಾ ಕ್ರಮವಿಧಿ (ಅಸೆಂಬ್ಲರ್) ಅಥವಾ ಸಂಕಲಕವು (ಕಂಪೈಲರ್) ಆಕರ ಸಂಕೇತವನ್ನು ಗಣಕಯಂತ್ರವು ಕಾರ್ಯಗತಗೊಳಿಸಬಲ್ಲ ದ್ವಿಮಾನ ಯಂತ್ರ ಸಂಕೇತವಾಗಿ (ಮಷೀನ್ ಲ್ಯಾಂಗ್ವೇಜ್) ಪರಿವರ್ತಿಸುತ್ತದೆ. ಆಮೇಲೆ ಆ ಯಂತ್ರ ಸಂಕೇತವನ್ನು ನಂತರದ ಸಮಯದಲ್ಲಿ ಓಡಿಸಲು ಸಂಗ್ರಹಿಸಿಡಬಹುದು. ಪರ್ಯಾಯವಾಗಿ, ಆಕರ ಸಂಕೇತವನ್ನು ವಿವರಣೆ ಮಾಡಿ ತಕ್ಷಣ ಓಡಿಸಬಹುದು.

ಉಲ್ಲೇಖಗಳು[ಬದಲಾಯಿಸಿ]

  1. "Programming in C: A Tutorial" (PDF). Archived from the original (PDF) on 23 February 2015.