ಆಂಬ್ರೋಸ್ ಗ್ವಿನ್ನೆಟ್ಟ್ ಬೀಎರ್ಸ್
ಆಂಬ್ರೋಸ್ ಗ್ವಿನ್ನೆಟ್ಟ್ ಬೀಎರ್ಸ್ | |
---|---|
ಜನನ | ೨೪ ಜೂನ್ ೧೮೪೨ ಅಮೇರಿಕಾ |
ವೃತ್ತಿ | ಸೈನಿಕ,ಲೇಖಕ,ಸಂಪಾದಕ |
ರಾಷ್ಟ್ರೀಯತೆ | ಅಮೇರಿಕನ್ |
ಪ್ರಕಾರ/ಶೈಲಿ | ಕಥೆ,ವಿಮರ್ಶೆ, ಜೀವನ ಚರಿತ್ರೆ |
ಸಹಿ |
ಆಂಬ್ರೋಸ್ ಗ್ವಿನ್ನೆಟ್ಟ್ ಬೀಎರ್ಸ್ ರವರು ೨೪ ಜೂನ್, ೧೮೪೨ರಂದು ಹಾರ್ಸ್ ಕ್ರೇವ್ ಕ್ರಿಕ್‌ನಲ್ಲಿ ಜನಿಸಿದರು. ಅವರ ತಂದೆಯ ಹೆಸರು ಲಾರ ಶರ್‌ವುಡ್ ಮತ್ತು ತಾಯಿಯ ಹೆಸರು ಮಾರ್ಕಸ್ ಆರೀಲಿಯಸ್ ಬೀಎರ್ಸ್. ತಂದೆ ತಾಯಿ ಬಡವರಾಗಿದ್ದರು ಸಹ, ವಿದ್ಯಾವಂತರಾಗಿದ್ದರು. ಆಂಬ್ರೋಸ್‌ರಲ್ಲಿ ಪುಸ್ತಕದ ಬಗ್ಗೆ, ಹಾಗು ಬರವಣಿಗೆಯ ಕುರಿತಾಗಿ ಪ್ರೆಮ ಹುಟ್ಟಲು ಕಾರಣರಾದರು. ಅವರಿಗೆ ಹದಿಮೂರು ಜನ ಮಕ್ಕಳು, ಆಂಬ್ರೋಸ್ ಹತ್ತನೇಯವರಾಗಿದ್ದರು. ಬಾಲ್ಯವನ್ನು ಇಂಡಿಯಾನ ಎಂಬ ಊರಿನಲ್ಲಿ ಕಳೆದರು. ಹದಿನೈದು ವರ್ಷದಲ್ಲಿ ಆಂಬ್ರೋಸ್‌ರವರು, ಓಹಿಯೋನ ಚಿಕ್ಕ ಪತ್ರಿಕೆಯಲ್ಲಿ, "ಪ್ರಿಂಟರ್'ಸ್ ಡೆವಿಲ್" ಆಗಿ ಕೆಲಸನಿರ್ವಹಿಸಲು ಮನೆ ತೊರೆದರು.[೧]
ಸೇನಾಸೇವೆ
[ಬದಲಾಯಿಸಿ]ಆಂಬ್ರೋಸ್‌ರವರು ತಮ್ಮ ಚಿಕ್ಕಪ್ಪನನ್ನು ಬಹಳ ಗೌರವಿಸುತ್ತಿದ್ದರು. ಚಿಕ್ಕಪ್ಪನ ಸಲಹೆಯಂತೆ, ತಮ್ಮ ಹದಿನೇಳನೆ ವಯಸ್ಸಿನಲ್ಲಿ, "ಕೆನ್‌ಟಕೀ ಮಿಲಿಟರೀ ಇನ್ಸ್ಟಿಟ್ಯೂಟ್" ಸೇರಿದರು. ವಕೀಲರಾದ ತನ್ನ ಚಿಕ್ಕಪ್ಪನೊಂದಿಗೆ ಇದ್ದುಕೊಂಡು, ಕಲಸಶಾಸ್ತ್ರ, ಇತಿಹಾಸ, ಲಾಟಿನ್ ಹಾಗೂ ರಾಜ್ಯಶಾಸ್ತ್ರದಲ್ಲಿ ಶಿಕ್ಷಣವನ್ನು ಪೂರ್ಣಗೊಳಿಸಿದರು.[೨] ೧೯೨೧ರಲ್ಲಿ "ಅಮೇರಿಕನ್ ಸಿವಿಲ್ ಯುದ್ದ" ಶುರುವಾದಾಗ ಅವರು ಆ ಯದ್ಧದ ಸೇನೆಯಲ್ಲಿ ಭಾಗವಹಿಸಿದರು .ವೆಸ್ಟರ್ನ್ ವರ್ಜೀನಿಯ ಕ್ಯಾಂಪೇನ್ (೧೮೬೧), ಶಿಲೊಹ್ ಯುದ್ಧ(೧೮೬೨) ಎಂಬಂತೆ ಹಲವಾರು ಯುದ್ಧದಲ್ಲಿ ಭಾಗವಹಿಸಿದರು. ಅದಾದನಂತರ ಅವರು ಮುಂದಿನ ನಾಲ್ಕು ವರ್ಷದಲ್ಲಿ ಹಲವಾರು ಪ್ರದೇಶಗಳಲ್ಲಿ ತಮ್ಮ ಪ್ರಾಭಲ್ಯವನ್ನು ತೋರಿಸಿದರು. ತಮ್ಮ ೨೩ನೇ ವಯಸಿನಲ್ಲಿ ಬಂದೂಕಿನ ಗುಂಡಿನಿಂದ ಅಸ್ವಸ್ತರಾಗಿದ ಕಾರಣದಿಂದ, ಸೆನಾಸೇವೆ ತೊರೆದರು. ನಂತರ, ಕೆಲವೇ ವರ್ಷಗಳಲ್ಲಿ ಸೇನೆಯಲ್ಲಿ ಮರುಸೆರ್ಪಡೆಯಾದರು. ಈ ಎಲ್ಲಾ ಅನುಭವವು ಅವರಿಗೆ ಭವಿಷ್ಯದಲ್ಲಿ ಯುದದ್ಧ ಕುರಿತು ಪುಸ್ತಕ ಬರೆಯಲು ಸ್ಪೂರ್ತಿಯಾಯಿತು. "ದ ಕ್ರೈ ಅಟ್ ಪಿಕ್ಕೆಟ್ಟ್'ಸ್ ಮಿಲ್"(೧೮೮೮), "ಆ ಸನ್ ಆಫ್ ದ ಗಾಡ್ಸ್"(೧೮೮೮), "ದ ಕುಪ್ ಡಿ ಗ್ರೆಸ್"(೧೮೮೯), ಮುಂತಾದವು ಅವರ ಪ್ರಸಿದ್ಧ ಸಣ್ಣ ಕಥಗಳು. ಅವರು ನಂತರ ಅಲಬಮ ರಾಜ್ಯದಲ್ಲಿ ಕೋಶಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.
ವಿವಾಹ ಜೀವನ
[ಬದಲಾಯಿಸಿ]ಬೀಎರ್ಸ್ ರವರಿಗೆ, ೨೫ ಡಿಸೆಂಬರ್, ೧೮೭೧ರಂದು ಒಬ್ಬ ಶ್ರಿಮಂತನ ಮಗಳಾದ ಮೇರೀ ಮಾಲೀ ಎಂಬ ಹುಡುಗಿಯ ಜೋತೆ ವಿವಾಹವಾಯಿತು. ಅದೇ ವರ್ಷ ಅವರಿಗೆ ಒಂದು ಗಂಡು ಮಗು ಹುಟ್ಟಿತು. ನಂತರದ ದಿನಗಳಲ್ಲಿ ಅವರು ಆಸ್ತಮದ ಕಾಯಿಲೆಯ ತೀವ್ರತೆಯಿಂದ ಬಳಲಾರಂಭಿಸಿದರು. ಚಿಕಿತ್ಸೆಯ ಕಾರಣದಿಂದ ಅವರು ಮನೆಯಿಂದ ದೂರ ಉಳಿದ ಕಾರಣ ಅವರ ವೈವಾಹಿಕ ಜೀವನವು ಅಸ್ತವ್ಯಸ್ತಗೊಂಡಿತು. ಇದೇ ವರ್ಷದಲ್ಲಿ ಅವರ ಹಲವರು ಪುಸ್ತಕಗಳು ಪ್ರಕಟಗೊಂಡವು. ೧೮೭೪ರಲ್ಲಿ ಅವರಿಗೆ ಲೀ ಎಂಬ ಗಂಡು ಹಾಗೂ ೧೮೭೫ರಲ್ಲಿ ಹೆಲೆನ್ ಎಂಬ ಹೆಣ್ಣು ಮಗು ಜನಿಸಿತು. ೧೮೮೭ರಲ್ಲಿ ತಮ್ಮ ಹೊಸ ಪಕಟಣೆ "ಪ್ರಟಿಲ್" ಅರಂಭಿಸಿದರು. ೧೮೮೦ರಲ್ಲಿ ಚಿನ್ನದ ಗಣಿಯಲ್ಲಿ ಕೆಲಸ ನಿರ್ವಹಸಿದರು. ಇದರ ಸಹಯದಿಂದ ಅವರಿಗೆ ಮತಷ್ಟು ಉನ್ನತ ಪ್ರಕಟಣೆಗಳನ್ನು ಪ್ರಕಟಿಸಲು ಸಹಕಾರವಾಯಿತು. ಇವೆಲ್ಲಾ ಕೆಲಸಗಳಿಂದ ಅವರು ಎತ್ತರಕ್ಕೆರಿದರೂ ಸಹ, ಅವರು ಬಹಳ ನಷ್ಟಗಳನ್ನು ಅನುಭವಿಸಿದರು. ಇದೆಲ್ಲದರ ನಡುವೆ, ೧೮೮೮ರಲ್ಲಿ ಅವರ ವೈವಾಹಿಕ ಜೀವನ ಮುರಿದು ಬಿದ್ದಿತು. ನಂತರದಲ್ಲಿ ೨೭ ಏಪ್ರಿಲ್, ೧೯೦೫ರಂದು ಅವರ ಪತ್ನಿ ಹಾಗೂ ೧೮೮೯ರಲ್ಲಿ ಅವರ ಹಿರಿಯ ಪುತ್ರ ವಿಧಿವಶರಾದರು. ಇದದಾ ನಂತರ, ೧೮೯೯ರಲ್ಲಿ ಅವರು ವಾಶಿಂಗ್‌ಟನ್.ಡಿ.ಸಿಗೆ ಸ್ತಳಾಂತರ ಗೊಂಡರು. ನಂತರದ ದಿನಗಳಲ್ಲಿ, ಅವರು "ದ ಅರ್ಗೋನತ್", "ದ ಓವರ್‌ಲ್ಯಾಂಡ್ ಮಂತ್ಲೀ", "ದ ಕ್ಯಾಲಿಫಾರ್ನಿಯ", "ದ ವಾಸ್ಪ್" ಮುಂತಾದವುಗಳನ್ನು ಪ್ರಕಟಿಸಿದ್ದಾರೆ. ಬೀಎರ್ಸ್‌ರವರು ೧೮೭೨ರಿಂದ ೧೮೭೫ ರವಗೆ ಇಂಗ್ಲಂಡ್ಡಿನಲ್ಲಿ ಉಳಿದುಕೊಂಡು ಅನೇಕ ಹಾಸ್ಯ ಪುಸ್ತಕ ರಚಿಸಿದ್ದಾರೆ, ಅವರ ಪ್ರಕಟಣೆಗಳ ಎಲ್ಲಾ ಸಂಕ್ಷಿಪ್ತ ವರದಿಯನ್ನು ಅವರು ೧೮೭೩ರಲ್ಲಿ ದ 'ಫ಼ೈನ್ಡ್ಸ್ ಡಿಲೈಟ್' ಎಂಬ ಪುಸ್ತಕವನ್ನು ಲಂಡನ್ ನಲ್ಲಿ ಜಾನ್ ಕ್ಯಾಂಡನ್ ಡೊಡ್ ಗ್ರಿಲ್ ಎಂಬ ಹೆಸರಿನಲ್ಲಿಯಲ್ಲಿ ಪ್ರಕಟಿಸಿದರು. ಅಮೇರಿಕಕ್ಕೆ ಹಿಂತಿರುಗಿದ ಮೇಲೆ ಸ್ಯಾನ್ ಫ್ರಾನ್ಸಿಸ್ಕೋನಲ್ಲಿ ವಾಸಿಸಿದರು. ೧೮೭೯ರಿಂದ ೧೮೮೦ರವರೆಗೆ ಡಕೋಟ ಪ್ರದೇಶದಲ್ಲಿರುವ ರಾಕರ್‌ವಿಲ್ಲೆ ಮತ್ತು ಡೆಡ್‌ವುಡ್ ನಲ್ಲಿ ನ್ಯೂಯಾರ್ಕ್ ಗಣಿಗಾರಿಕೋದ್ಯಮದಲ್ಲಿ ಸ್ಥಳಿಯ ಮುಖ್ಯಸ್ಥರಾಗಬೇಕೆಂಬ ಪ್ರಯತ್ನ ವಿಫಲವಾಯಿತು. ಅವರು ಸ್ಯಾನ್ ಫ್ರಾನ್ಸಿಸ್ಕೋಗೆ ಮರುಳಿ ಪತ್ರಿಕೋಧ್ಯಮವನ್ನು ಪುನರಾರಂಭಿಸಿದರು. ಜನವರಿ ೧, ೧೮೮೧ರಿಂದ ಸೆಪ್ಟಂಬರ್ ೧೧, ೧೮೮೫ರವರೆಗೆ, ದ ವಾಸ್ಪ್ ಎಂಬ ಮಾಸಿಕ ಪತ್ರಿಕೆಗೆ ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು. ಇವರು ವಿಲಿಯಮ್ ರಾಂದೋಲ್ಫ್ ಹರ್ಸ್ಟ್‌ರವರ ಪತ್ರಿಕೆಯಲ್ಲಿ ಮೊಟ್ಟಮೊದಲ ವ್ಯವಸ್ಥಿತ ಕಾಲಮುಗಾರ ಮತ್ತು ಸಂಪಾಧಕರಾಗಿ ಕಾರ್ಯ ನಿರ್ವಹಿಸಿದರು. ಅವರು ೧೯೦೬ರವರೆಗೆ ಹರ್ಸ್ಟ್‌ನಲ್ಲೇ ಕಾರ್ಯ ನಿರ್ವಹಿಸಿದರು.
ರಚನಾಕೃತಿ
[ಬದಲಾಯಿಸಿ]ಬೀಎರ್ಸ್ ರವರು ಆಂಗ್ಲ ಭಾಷೆಯ ವಿಧ್ವಾಂಸರಾಗಿದ್ದರು. ೧೯ನೇ ಶತಮಾನದಲ್ಲಿ ಅವರ ಲೇಖನೆಗಳು ಬಹಳ ಹುರಿದುಂಭಿಸುವಂತಿದ್ದವು. ಅವರು ಯುದ್ಧದ ಕರಾಳತೆಯನ್ನು ಕಣ್ಣು ಕಟ್ಟುವಂತೆ ಬರೆಯುತ್ತಿದರು. 'ಎನ್ ಅಕರೆನ್ಸ್ ಆಫ್ ಔವ್ಲ್ ಕ್ರೀಕ್ ಬ್ರಿಡ್ಜ್', 'ಕಿಲ್ಡ್ ಅಟ್ ರೆಸಾಕ' ಎಂಬಂತೆ ಹಲವಾರು ಯುದ್ಧದ ಕುರಿತಾದ ಪುಸ್ತಕಗಳನ್ನು ಪ್ರಕಟಿಸಿದ್ದರೆ.[೩] ಇದರೊಂದಿಗೆ ಹಲವಾರು ಪದ್ಯಗಳನ್ನು ಸಹ ಪ್ರಕಟಿಸಿದ್ದಾರೆ. ಅಕ್ಟೋಬರ್ ೧೯೧೩, ತಮ್ಮ ೭೧ವಯಸ್ಸಿನಲ್ಲಿ ಅವರು ತಮ್ಮ ಉದ್ಯೋಗದಿಂದ ಮರೆಯಾಗಿ ವಾಷಿಂಟನ್.ಡಿ.ಸಿಗೆ ತಮ್ಮ ಹಳೆಯ ಯುದ್ಧ ಕಂಡಕ್ಕೆ ಮರಳಿದರು, ಹಾಗೂ ಹಲವಾರು ಐತಿಹಾಸಿಕ ಯುದ್ಧಗಳಿಗೆ ಸಾಕ್ಷಿಯಾದರು. [೪] ಇದಾದ ನಂತರ ತಮ್ಮ ಆತ್ಮಿಯ ಮಿತ್ರನಿಗೆ ೨೬ ದಿಸೆಂಬರ್, ೧೯೧೩ರಂದು ಒಂದು ಪತ್ರ ಬರೆದರು. ಆ ಪತ್ರದಲ್ಲಿ, "ನಾನು ನನ್ನ ಅರಿಯದ ಉದ್ದಿಷ್ಟ ಕಾರಣಕ್ಕೆ ತೆರಳುತ್ತಿದ್ದೆನೆ" ಎಂದು ಸೂಚಿಸಿದರು. ಅದಾದ ನಂತರ ಅವರ ಜೀವನದ ಯಾವ ಮಹಿತಿಯೂ ಲೋಖಕ್ಕೆ ದೊರೆತಿಲ್ಲ. ಅವರು ವಿದಿವಶರಾದ ಯಾವುದೇ ಸಾಕ್ಷಾದಾರಗಳು ಸಹ ಇಂದಿಗೂ ದೊರೆತ್ತಿಲ್ಲ.
ಯುದ್ದ ಕಥೆಗಳು
[ಬದಲಾಯಿಸಿ]- ವನ್ ಆಫ್ ದ ಮಿಸ್ಸಿಂಗ್
- ಎ ಬ್ಯಾಫಲ್ಡ್ ವನ್ ಅಂಬೂಸ್ಕದೆ,
- ದಿ ಅಫೇರ್ ಅಟ್ ಕೌಳ್ತೆಸ್ ನಾಚ್,
- ಎ ಸನ್ ಆಫ್ ತೆ ಗಾಡ್ಸ್
- ವನ್ ಕೈಂಡ್ ಆಫ್ ಆಫೀಸರ್,
- ಎ ಟಫ್ ಟುಸ್ಸೆಲ್,
- ಎ ಅಕ್ಯೂವರೆನ್ಸ್ ಅಟ್ ಔಲ್ ಕ್ರೀಕ್ ಬ್ರಿಡ್ಜ್,
- ಚಿಕಮಾಗಾ,ಬೋರ್ಡೆಡ್ ವಿಂಡೊ
- ದಿ ಕೌಪ್ ಡಿ ಗ್ರೇಸ್,
- ವನ್ ಆಫೀಸರ್ ವನ್ ಮ್ಯಾನ್,
- ದಿ ಸ್ಟೋರೀ ಆಫ್ ಕಾನ್ಶಿಯೆನ್ಸ್,
- ಎ ಹಾರ್ಸ್ಮನ್ ಇನ್ ದಿ ಸ್ಕೈ,
- ದಿ ಮಾಕಿಂಗ್ ಬರ್ಡ್,
- ಜಾರ್ಜ್ ಥರ್ಸ್ಟನ್,
- ಎ ಮ್ಯಾನ್ ವಿತ್ ಟೂ ಲಿವ್ಸ್ ಇತ್ಯಾದಿ
ಭಯಾನಕ ಕಥೆಗಳು
[ಬದಲಾಯಿಸಿ]- ಹೈತಾ ದಿ ಶೆಪರ್ಡ್,
- ದಿ ಸೀಕ್ರೆಟ್ ಆಫ್ ಮಾಕರ್ಗೇರ್ಸ್ ಗುಲ್ಚ್,
- ದಿ ಐಸ್ ಆಫ್ ತೆ ಪ್ಯಾಂತರ್,
- ದಿ ಇನ್ಹ್ಯಾಬಿಟೆಂಟ್ ಆಫ್ ಕರ್ಕೊಸ,
- ದಿ ಡೆತ್ ಆಫ್ ಆಲ್ಪೈನ್ ಫರೈಸೆರ್,
- ಎ ವಾಚರ್ ಬೈ ದ ಡೆಡ್,
- ದಿ ಮ್ಯಾನ್ ಅಂಡ್ ದಿ ಸ್ನೇಕ್,
- ಜಾನ್ ಮೊರ್ಟೋನ್ಸೋನ್ಸ್ ಫ್ಯೂನರಲ್,
- ದಿ ಡ್ಯಾಮ್ಡ್ ಥಿಂಗ್ ,
- ಮೊಕ್ಕ್ಸೋನ್ಸ್ ಮಾಸ್ಟರ್ ಇತ್ಯಾದಿ.
ಹೊರಗಿನ ಸಂಪರ್ಕ
[ಬದಲಾಯಿಸಿ]- www.biography.com/people/ambrose-bierce-9212162
- www.britannica.com/biography/Ambrose-Bierce
- www.ambrosebierce.org
ಉಲ್ಲೇಖಗಳು
[ಬದಲಾಯಿಸಿ]- ↑ ಬೀಎರ್ಸ್‌ರವ ಲೇಖನಗಳು http://www.historicjournalism.com/ambrose-bierce-1.html
- ↑ ಆಂಬ್ರೋಸ್ ಬೀರ್ಸ್‌ರ ಯೋಜನೆ http://www.ambrosebierce.org/timeline2.html Archived 2009-09-04 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಬೀಎರ್ಸ್‌ರ ಬರವಣಿಗೆಗಳು http://www.gutenberg.org/ebooks/author/206
- ↑ ಬೀಎರ್ಸ್‌ರ ಕೊನೆಯ ಪತ್ರ http://www.rjgeib.com/thoughts/bierce/ambrose-bierce.html