ವಿಷಯಕ್ಕೆ ಹೋಗು

ಆಂಟಿರೈನಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಂಟಿರೈನಮ್
Temporal range: 5–0 Ma
Recent
Antirrhinum majus
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಪಂಗಡ:
ಕುಲ:
Antirrhinum

Type species
Antirrhinum majus L.
Sections
  • Antirrhinum
  • Orontium
  • Saerorhinum

ಆಂಟಿರೈನಮ್ ಸ್ಕ್ರಾಫ್ಯುಲೇರಿಯೇಸೀ ಕುಟುಂಬಕ್ಕೆ ಸೇಇದೆ. ಮಡಿಗಳಲ್ಲಿ, ಕುಂಡಗಳಲ್ಲಿ, ಕುಂಡಗಳ ಅಂಚುಗಳಲ್ಲಿ ಬೆಳೆಸಲು ಯೋಗ್ಯವಾದ ಆಲಂಕಾರಿಕ ವಾರ್ಷಿಕ ಸಸ್ಯ. ಸ್ವಾಭಾವಿಕವಾಗಿ ಬಹುವಾರ್ಷಿಕವಾದರೂ ವಾರ್ಷಿಕ ಸಸ್ಯವೆಂದೇ ಪರಿಗಣಿಸಲ್ಪಟ್ಟಿದೆ[೧]ಬೀಜಗಳಿಂದ ಮಾತ್ರ ಸಸ್ಯ ವೃದ್ಧಿ[೨]. ಹೂಗಳು ಬಹು ಆಕರ್ಷಣೀಯವಾಗಿದ್ದು ಬಿಳಿ, ಕೆಂಪು, ಕಿತ್ತಳೆ, ಕಗ್ಗೆಂಪು, ಕಾರ್‍ಮೈನ್, ಪಿಂಕ್ ಮುಂತಾದ ಬಣ್ಣಗಳಲ್ಲಿರುತ್ತವೆ.

ಈ ಸಸ್ಯಗಳನ್ನು ಎತ್ತರದವು (75-90 ಸೆಂ.ಮೀ.) ಮಧ್ಯಮ (30-45 ಸೆಂ.ಮೀ.) ತುಂಡು (15-20 ಸೆಂ.ಮೀ.)[೩]ಎಂದು ವಿಂಗಡಿಸಬಹುದು. ತುಂಡುಜಾತಿ ರಾಕರಿಗಳಲ್ಲಿ ಬೆಳೆಸಲು ಉಪಯುಕ್ತವಾಗಿವೆಯಾದುದರಿಂದ ಇವುಗಳನ್ನು ರಾಕ್ ಹೈಬ್ರಿಡ್ ಅಥವಾ ಮ್ಯಾಜಿಕ್ ಕಾರ್ಪೆಟ್‍ಗಳೆಂದೂ ಕರೆಯುವುದುಂಟು. ಹಗುರವಾದ ಸಣ್ಣ ಮರಳು ಮಿಶ್ರಿತ ಮಣ್ಣಿನಲ್ಲಿ ಇವನ್ನು ಬಹು ಸುಲಭವಾಗಿ ಬೆಳೆಯಬಹುದು. ಬೀಜಗಳು ಬಹು ಸೂಕ್ಷ್ಮವಾದ್ದರಿಂದ 1 ಭಾಗ ಬೀಜವನ್ನು 6 ಭಾಗ ಮರಳಿನ ಜೊತೆಯಲ್ಲಿ ಮಿಶ್ರಮಾಡಿ ಎಲ್ಲ ಕಡೆಗೂ ಹರಡುವಂತೆ ಬಿತ್ತನೆ ಮಾಡಬೇಕು. ಎರಡು ಎಲೆಯ ಸಸ್ಯಗಳನ್ನು ಬೀಜ ತಟ್ಟೆಗಳಲ್ಲಿ ಹರಡುವಂತೆ 5 ಸೆಂ.ಮೀ. ಅಂತರಕೊಟ್ಟು ನಾಟಿ ಮಾಡಿ ಪಳಗಿಸಬೇಕು. ಹೀಗೆ ಬೆಳೆದ 7.5 ಸೆಂ.ಮೀ. ಉದ್ದ ಸಸ್ಯಗಳನ್ನು ಮಡಿಗಳಲ್ಲಿ 30-45 ಸೆಂ.ಮೀ. ಅಂತರ ಕೊಟ್ಟು ನೆಡಬೇಕು. ಕುಂಡಗಳಲ್ಲಿ ಬೆಳೆಸುವುದಾದರೆ ಒಂದೊಂದೇ ಸಸಿಯನ್ನು ಮೊದಲು 15 ಸೆಂ.ಮೀ. ಅಳತೆಯ ಕುಂಡಗಳಲ್ಲಿ ಮೊಳೆಯಿಸಿ ಅನಂತರ 20 ಸೆಂ.ಮೀ. ಕುಂಡಕ್ಕೆ ಬದಲಾಯಿಸಿ ಬೆಳೆಸಬೇಕು. ಹೆಚ್ಚಿಗೆ ಗೊಬ್ಬರ ಹಾಕಿದರೆ ಗಿಡ ಎತ್ತರವಾಗಿ ಬೆಳೆದು ಹೂಗಳು ಕಡಿಮೆಯಾಗುತ್ತವೆ; ಹೆಚ್ಚಿಗೆ ನೀರು ಹಾಕಿದರೆ ಗಿಡ ಕೊಳೆತು ಸಾಯುತ್ತದೆ. ಬೇರಿನ ಹತ್ತಿರ ಒಣ ವಾತಾವರಣವಿರಬೇಕಾದ್ದರಿಂದ ಮಳೆಗಾಲದ ಅನಂತರ ಬೆಳೆಸುವುದು ಒಳ್ಳೆಯದು. ಕುಡಿ ಜಿಗುಟುತ್ತಿದ್ದರೆ ಕವಲುಗಳು ಹುಲುಸಾಗಿ ಬಂದು ಗಿಡ ಪೊದೆರೂಪ ತಳೆಯುತ್ತದೆ. 4 ತಿಂಗಳಲ್ಲಿ ಹೂ ಬಿಡುತ್ತದೆ. ಬಾಡಿಹೋದ ಹೂವಿನ ಗುಚ್ಛಗಳನ್ನು ಕತ್ತರಿಸಿ ತೆಗೆದುಹಾಕಿದರೆ ಎರಡನೆಯ ಸಲ ಕೂಡ ಹೂ ಬಿಡುತ್ತದೆ.

ಉಲ್ಲೇಖನಗಳು[ಬದಲಾಯಿಸಿ]