ವಿಷಯಕ್ಕೆ ಹೋಗು

ಅ.ರಾ.ಸೇತೂರಾಮರಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಅ.ರಾ.ಸೇ' ಎಂದೇ ಖ್ಯಾತರಾಗಿರುವ ಶ್ರೀ.'ಅಣಜಿರಾಮಣ್ಣ ಸೇತೂರಾಮರಾವ್'ರವರು ತಮ್ಮದೇ ಆದ ಹಾಸ್ಯದ ಛಾಪನ್ನು ಮೂಡಿಸಿ, ವಿಶಿಷ್ಟ ವರ್ಗವೊಂದನ್ನು ಬೆಳೆಸಿಕೊಂಡಿದ್ದ ಹಾಸ್ಯ ಲೇಖಕರು.

ಬದುಕು

[ಬದಲಾಯಿಸಿ]

೧೯೩೧,ಜನೆವರಿ, ೨೬ರಂದು ಚಿತ್ರದುರ್ಗ ಜಿಲ್ಲೆಯ ಭರಮಸಾಗರದಲ್ಲಿ ಜನಿಸಿದರು. ಭರಮಸಾಗರದ ಸುತ್ತಮುತ್ತಲ ಸ್ಥಳಗಳಾದ ಮರಡಿಹಳ್ಳಿ, ಮಾಯಕೊಂಡ, ದುರ್ಗ ಮುಂತಾದ ಊರುಗಳಲ್ಲಿ ಅಧ್ಯಾಪಕರಾಗಿ 'ಕನ್ನಡ ಉಪನ್ಯಾಸಕ'ರಾಗಿ ಸೇವೆಸಲ್ಲಿಸಿ ಕಡೆಗೆ ಕಾಲೇಜಿನ ಉಪನ್ಯಾಸಕರಾಗಿ ನಿವೃತ್ತರಾದರು.

ಅ.ರಾ.ಸೇ.ಯವರು ಕೊರವಂಜಿ ಬಳಗದ ಲೇಖಕರು.ಇವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎಸ್ಸಿ ಮಾಡುವಾಗ 'ಪಂಚ್ ಪತ್ರಿಕೆ 'ಯಿಂದ ಪ್ರಭಾವಿತರಾಗಿ 'ಕೊರವಂಜಿ'ಗೆ ಬರೆದು ಖ್ಯಾತರಾದರು. ೧೯೬೭-೬೮ ರಲ್ಲಿದಾವಣಗೆರೆ ಸರ್ಕಾರಿ ಶಿಕ್ಷಣ ಕಾಲೇಜಿ ನಿಂದ ಬಿ.ಎಡ್,ಕವಿವಿ ಯಿಂದ ಕನ್ನಡ ಎಂ.ಎ ಪಡೆದರು. 'ರಾಶಿ' ಯವರ ಮಗ 'ಶ್ರೀ ಶಿವಕುಮಾರ್' ಪ್ರಾರಂಭಿಸಿದ 'ಅಪರಂಜಿ ನಗೆ ಪತ್ರಿಕೆ'ಗೆ ಸಲಹೆ,ಸೂಚನೆ ,ಲೇಖನ ದಿಂದ ನೆರವಾದರು.

ಅವರು 9 ಎಪ್ರಿಲ್ 2015 ರಂದು ನಿಧನರಾದರು.[]

ಬರಹಗಳು

[ಬದಲಾಯಿಸಿ]
  • ಕುಮಾರವ್ಯಾಸ ಭಾರತದ ೮,೬೦೦ ಪದ್ಯಗಳಿಗೆ ತಾತ್ಪರ್ಯ ಬರೆದಿದ್ದಾರೆ, 'ಕಾಮಧೇನು ಪ್ರಕಾಶನದ ಶ್ರೀ ಶಾಮಸುಂದರ್','ಗಂಜೀಫಾ ಚಿತ್ರ'ಗಳೊಂದಿಗೆ ಅಚ್ಚುಕಟ್ಟಾಗಿ ಪ್ರಕಟಿಸಿ ಕನ್ನಡ ಸಾರಸ್ವತ ಲೋಕಕ್ಕೆ ಉಪಕರಿಸಿದ್ದಾರೆ.' ಈಗ ಜೈಮಿನಿ ಭಾರತಕ್ಕೆ, ತಾತ್ಪರ್ಯ ಬರೆಯಲಾರಂಭಿಸಿದ್ದಾರೆ.
  • 'ನಗೆಮುಗಿಲು'- ಇವರ ಕವನಸಂಕಲನ.
  • ಶೀನಣ್ಣನ ರೋಮಾನ್ಸ್ - ಆಯ್ದ ನಗೆ ಬರಹಗಳ ಸಂಕಲನ
  • 'ಸೊಗದಿರಳು ನಲ್ವಗಲು'-ಇವರ ಕಾದಂಬರಿ.
  • 'ಅನುಭವಾಮೃತ' ದ ತಾತ್ಪರ್ಯ, ಅದರ ಬಗ್ಗೆ ಆಳವಾದ ಅಧ್ಯಯನ ದೊಂದಿಗೆ ಮೂಲದೊಂದಿಗೆತಾತ್ಪರ್ಯ,
  • 'ಪರಮಾರ್ಥಪದಕೋಶ',
  • 'ದೇವಿಪುರಾಣ',
  • 'ಶ್ರೀ ಗುರುಕಥಾಮೃತ'(ಶ್ರೀ ಶಂಕರಲಿಂಗ ಭಗವಾನ್ ಸರಸ್ವತಿ ಪರಮಹಂಸರ ಜೀವನ ಚರಿತ್ರೆ),ಇವರ ಅಮೂಲ್ಯಕೃತಿಗಳು.
  • 'ಹಾಸ್ಯಲೇಖನ'ಗಳನ್ನಲ್ಲದೆ, ಇವರು 'ಕವನಸಂಗ್ರಹ', 'ಕಾದಂಬರಿ', 'ಗದ್ಯ ರೂಪಾಂತರ', 'ಪ್ರವಾಸ ಕಥನಗಳು, 'ಜೀವನ ಚರಿತ್ರೆ'ಗಳನ್ನೂ ಸಹ ಪ್ರಕಟಿಸಿದ್ದಾರೆ.

ಪ್ರಶಸ್ತಿಗಳು

[ಬದಲಾಯಿಸಿ]

ಇವರ “ಮುಗಿಲುಹಳ್ಳಿ ಬಖೈರು” ಹಾಸ್ಯ ಸಂಕಲನಕ್ಕೆ ಸಾಹಿತ್ಯ ಅಕಾಡೆಮಿ ಬಹುಮಾನ ದೊರಕಿದೆ.

ಉಲ್ಲೇಖಗಳು

[ಬದಲಾಯಿಸಿ]