ವಿಷಯಕ್ಕೆ ಹೋಗು

ಅಸ್ಘರ್ ಆಲಿ ಎಂಜಿನಿಯರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಸ್ಘರ್
Engineer in 2010.
ಜನನ(೧೯೩೯-೦೩-೧೦)೧೦ ಮಾರ್ಚ್ ೧೯೩೯
ಸಾಲುಂಬರ್, ರಾಜಸ್ಥಾನ
ಮರಣ14 May 2013(2013-05-14) (aged 74)
ವೃತ್ತಿWriter, activist
ರಾಷ್ಟ್ರೀಯತೆಭಾರತೀಯ
ಪ್ರಮುಖ ಪ್ರಶಸ್ತಿ(ಗಳು)2004: Right Livelihood Award
ಮಕ್ಕಳುಇರ್ಫಾನ್, ಸೀಮಾ ಇಂದೂರ್ಕರ್

(೧೯೩೯ ರ, ಮಾರ್ಚ್, ೧೦-೨೦೧೩ ರ, ಮೇ,೧೪) ಮುಂಬಯಿನ 'ಖ್ಯಾತ ಇಸ್ಲಾಮಿಕ್ ವಿದ್ವಾಂಸ', ಪ್ರಗತಿಪರ ಚಿಂತಕ, ಲೇಖಕ, ದಾವೂದಿ ಬೋಹ್ರಾ ಸುಧಾರಣಾ ನಾಯಕ, ಅಸ್ಘರ್ ಆಲಿ ಇಂಜಿನಿಯರ್,ವಿಶ್ವದಾದ್ಯಂತ ಹೆಸರಾಗಿದ್ದರು.

ಜನನ ಹಾಗೂ ಪರಿವಾರ

[ಬದಲಾಯಿಸಿ]

ರಾಜಾಸ್ಥಾನದ ಸಲುಂಬರ್ ಎಂಬ ಊರಿನಲ್ಲಿ ೧೯೩೯ ರ ಮಾರ್ಚ್, ೧೦ ರಂದು ಜನ್ಮಿಸಿದರು. ಅವರ ತಂದೆ, 'ಶೇಖ್ ಕುರ್ಬಾನ್ ಹುಸೇನ್' ಒಬ್ಬ ಇಸ್ಲಾಮ್ ಮತದ ಪುರೊಹಿತರಾಗಿದ್ದರು. ಮಗನಿಗೆ ಬಾಲ್ಯದಲ್ಲೇ 'ಅರೇಬಿಕ್ ಭಾಷೆ'ಯನ್ನೂ ಅವರು ಕಲಿಸಿದರು. ವಿಶ್ವದ ಮಹತ್ವದ ಧರ್ಮಗಳ ಅಧ್ಯಯನವನ್ನು 'ಆಸ್ಘರ್ ಆಲಿ'ಯವರು ಆಯಾ ಮತಗಳ ಪಂಡಿತರ ಹತ್ತಿರವೇ ವ್ಯಾಸಂಗಮಾಡಿ ಕಲಿತರು. ಆಲಿಯವರು,'ಬೋಹ್ರಾ ಅಮಿಲ್', (ಪುರೋಹಿತ್ಯ) ಕುಟುಂಬದಲ್ಲಿ ಜನಿಸಿದರು. 'ಕುರ್ ಆನ್ ತಪ್ಸಿರ್'(ವಿವರಣೆ) ತದಿಲ್, 'ಕುರ ಆನ್ ನ ಒಳ ಅರ್ಥಗಳ ಬೋಧನೆ' ಫಿಖ್ ತತ್ವಗಳು ಹಾದಿತ್ (ಬೋಧನೆಗಳು) ಮೊದಲಾದ ವಿಷಯಗಳಲ್ಲಿ ಬಾಲ್ಯದಲ್ಲೇ ಅವರಿಗೆ ತರಬೇತಿ ಕೊಡಲಾಯಿತು. ಮಧ್ಯ ಪ್ರದೇಶದ ಇಂದೋರ್ ಶಹರಿನಲ್ಲಿ ಅವರು 'ಸಿವಿಲ್ ಇಂಜಿನಿಯರಿಂಗ್' ವಿಷಯದಲ್ಲಿ ವ್ಯಾಸಂಗ ಮಾಡಿ,ಪದವಿಗಳಿಸಿದರು. ನಂತರ ಮುಂಬಯಿನ ಬಿ.ಎಮ್.ಸಿ. ಕಛೇರಿಯಲ್ಲಿ ಸುಮಾರು ೨ ದಶಕಗಳ ವೃತ್ತಿಜೀವನ ನಿರ್ವಹಿಸಿ, ತಮ್ಮ ಸ್ವಂತ ನಿರ್ಧಾರದಿಂದ ಕೆಲಸಕ್ಕೆ ರಾಜೀನಾಮೆ ಕೊಟ್ಟರು.'ದಾವೂದಿ ಬೋಹ್ರಾ ಸಮಾಜದ ಸುಧಾರಣೆ'ಗಾಗಿ ಚಳುವಳಿಯ ಅಗತ್ಯವಿತ್ತು. ಇದಕ್ಕಾಗಿ ಅವರಿಗೆ ಬಹಳ ಸಮಯ ಬೇಕಿತ್ತು. ೧.೨ ಮಿಲಿಯನ್ ದಾವೂದಿ ಬೊಹ್ರಾ ಮುಸಲ್ಮಾನ್ ಮತಸ್ಥರು ವಿಶ್ವದಾದ್ಯಂತ ವಾಸಿಸುತ್ತಿದ್ದಾರೆ.

ತಮ್ಮ ಜೀವನವನ್ನು ಸಮರ್ಪಿಸಿಕೊಂಡರು

[ಬದಲಾಯಿಸಿ]
ಚಿತ್ರ:A 896331f.jpg
'ಅಸ್ಘರಾಲಿಯವರು ಸಮಾರಂಭವೊಂದರಲ್ಲಿ'

ಸನ್.೧೯೭೨ ರಲ್ಲಿ ಪತ್ರಿಕಾ ಲೇಖನಗಳು ಭಾಷಣಗಳು ರಾಷ್ಟ್ರೀಯ ಅಂತಾರಾಷ್ಟ್ರೀಯ ಸೆಮಿನಾರ್ ಗಳನ್ನೂ ಆಯೋಜಿಸಿ ಜನಾಭಿಪ್ರಾಯಗಳನ್ನು ಮೂಡಿಸಿದರು. ಸನ್.೧೯೭೭ ರಲ್ಲಿ 'ಉದಯಪುರ'ದಲ್ಲಿ ಮೊದಲು ಆಯೋಜಿಸಿದರು. ಅಲ್ಲಿ ಜರುಗಿದ ಸಭೆಯಲ್ಲಿ ಪ್ರಧಾನ ಮಂಡಳಿಯ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಮಾರ್ಗದರ್ಶನದಲ್ಲಿ ಸುಧಾರಣಾ ಕಾರ್ಯಗಳನ್ನು ಹಮ್ಮಿಕೊಂಡರು.ತಮ್ಮ ಅಮೂಲ್ಯ ಸಮಯವನ್ನು ಬೊಹ್ರಾ ಸಮುದಾಯದ ಉದ್ಧಾರಕ್ಕಾಗಿ ಮಿಸಲಾಗಿಟ್ಟರು. ಗೌರವ ಪ್ರಶಸ್ತಿಗಳು ಅರಸಿ ಬಂದವು. ವಿಶ್ವಶಾಂತಿ, ಮಾನವ ಹಕ್ಕುಗಳು, ಮೊದಲಾದ ವಿಶಯಗಳ ಬಗ್ಗೆ ಹಲವಾರು ವಿಚಾರಸಂಕಿರಣಗಳನ್ನುಆಯೋಜಿಸಿದರು. ವಿಶ್ವದ ಹಲವಾರು ಹೆಸರಾಂತ ಪ್ರಮುಖ ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ವಿಸ್ತರಿಸಿ, ಅವರೆಲ್ಲರ ಅಭಿಪ್ರಾಯಗಳನ್ನು ಸಂಗ್ರಹಿಸಿದರು.

ಪ್ರಶಸಿ,ಪುರಸ್ಕಾರಗಳು

[ಬದಲಾಯಿಸಿ]
  • ಸನ್.೧೯೯೦ ರಲ್ಲಿ, ಎಲ್ಲ ಧರ್ಮಗಳ ಬಗ್ಗೆ ಸಹನೆ,ಹೊಂದಾಣಿಕೆ ಕುರಿತುಮಾಡಿದ ಪ್ರಯತ್ನಕ್ಕೆ, ದಾಲ್ಮಿಯಾ ಪ್ರಶಸ್ತಿ
  • ಸನ್.೧೯೯೩ ರಲ್ಲಿ 'ಕಲ್ಕತ್ತಾ ವಿಶ್ವವಿದ್ಯಾಲಯದ ಕೋಮುವಾರು ಸಹನೆಯ ಬಗ್ಗೆ, 'ಡಿ.ಲಿಟ್' ಪದವಿ',
  • ಸನ್.೧೯೯೭ ರಲ್ಲಿ ಪ್ರಶಸ್ತಿ,
  • ಸನ್.೨೦೦೪ ರಲ್ಲಿ ಸ್ವಾಮಿ ಅಗ್ನಿವೇಶ್ ರ ಜೊತೆಗೆ, 'ರೈಟ್ ಲೈವ್ಲಿ ಹುಡ್ ಪ್ರಶಸ್ತಿ',

ಇಸ್ಲಾಮಿ ಅಧ್ಯಯನ ಸಂಸ್ಥೆಗಳು

[ಬದಲಾಯಿಸಿ]

ಸನ್.೧೯೮೦ ರಲ್ಲಿ 'ಇಸ್ಲಾಮಿ ಅಧ್ಯಯನ ಸಂಸ್ಥೆ'ಯ ಸ್ಥಾಪನೆಯಾಯಿತು. ಸನ್.೧೯೯೩ ರಲ್ಲಿ,'ಸಮಾಜ ಮತ್ತು ಜಾತ್ಯಾತೀತ ಅಧ್ಯಯನಕ್ಕೆ ಒಂದು ಸಂಸ್ಥೆ'ಯನ್ನು ಸ್ಥಾಪಿಸಿದರು. 'ವಿಶ್ವದ ದರ್ಮಗಳೆಲ್ಲ ಸಾರುವುದು ಮಾನವ ಕಲ್ಯಾಣವೊಂದೇ' ಎಂಬ ಮಾತನ್ನು ಪುರಸ್ಕರಿಸಿ, ಸುಮಾರು ೫೦ ಕ್ಕೂ ಮಿಗಿಲಾದ ಪುಸ್ತಕಗಳನ್ನು ಬರೆದಿದ್ದಾರೆ.

'ಆಸ್ಘರ್ ಆಲಿ'ಯವರು ಬಹಳ ಸಮಯದಿಂದ ಅಸ್ವಸ್ಥರಾಗಿ ನರಳುತ್ತಿದ್ದರು. ೭೪ ವರ್ಷ ಪ್ರಾಯದ ಆಲಿಯವರು, ಸನ್.೨೦೧೩ ರ,ಮೇ, ೧೪ ರ, ಮಂಗಳವಾರ ಬೆಳಿಗ್ಯೆ, ಮುಂಬಯಿನ ಸಾಂತಾಕೃಜ್(ಪೂ)ದಲ್ಲಿರುವ ಸ್ವಂತ ಮನೆಯಲ್ಲಿ ೮ ಗಂಟೆಗೆ ಕೊನೆಯುಸಿರೆಳೆದರು. ಮಗ 'ಇರ್ಫಾನ್', ಮಗಳು 'ಸೀಮಾ ಇಂದೂರ್ಕರ್', ಹಾಗೂ ಅಪಾರ ಗೆಳೆಯರು, ಮತ್ತು ಬಂಧುಗಳನ್ನು ಅಗಲಿಹೋಗಿದ್ದಾರೆ.ಅಲಿಯವರ ಮಡದಿ ಮೊದಲೇ ನಿಧನರಾಗಿದ್ದರು.

ಅಂತಿಮ ಇಚ್ಛೆ

[ಬದಲಾಯಿಸಿ]

'ಜನಾಬ್ ಅಸ್ಘರ್ ಆಲಿ ಇಂಜಿನಿಯರ್' ರವರ ಅಂತಿಮ ಇಚ್ಛೆಯಂತೆ, 'ಸುನ್ನಿಮತ ಪದ್ಧತಿ'ಯಲ್ಲಿ 'ಸಾಂತಾಕೃಝ್(ಪ)ನ ಸುನ್ನಿ ಮುಸಲ್ಮಾನರ ಖಬ್ರಿಸ್ತಾನ'ದಲ್ಲಿ ಆಲಿಯವರ 'ಅಂತಿಮ ಸಂಸ್ಕಾರ ವಿಧಿ'ಗಳನ್ನು ಬುಧವಾರ,೧೫ ರಂದು ನೆರವೇರಿಸಲಾಯಿತು. ಈ ಸ್ಥಳ ತಮಗೆ ಪ್ರಿಯವಾದದ್ದೆಂದು ತಮ್ಮ 'ಅಂತಿಮ ಇಚ್ಛೆಯ ಫರ್ಮಾನ್' ನಲ್ಲಿ ಅವರು ಬರೆದಿಟ್ಟಿದ್ದರು. ಆಲಿ ಸರ್ದಾರ್ ಜಫ್ರಿ, ಕೈಫಿ ಆಜ್ಮಿ, ಮಜ್ರೂ ಸುಲ್ತಾನ್ ಪುರಿ, ಕೆ.ಎ. ಅಬ್ಬಾಸ್, ಮೊದಲಾದ ಅವರ ಪ್ರಿಯಗೆಳೆಯರ ಶವಗಳನ್ನು 'ಸಾಂತಾಕ್ರೂಝ್ ಸ್ಮಶಾಣ'ದಲ್ಲೇ ದಫನ್ ಮಾಡಲಾಗಿತ್ತು. ಬೊಹ್ರಾ ಖಬರಿಸ್ತಾನದಲ್ಲಿ ಸ್ಥಳ ಹಿಡಿಯುವುದು, ಬಹಳ ಕಷ್ಟಸಾಧ್ಯವಾಗಿತ್ತು.ಸನ್.೧೮೭೦ ರಲ್ಲಿ ಬೊಹ್ರಾ ಪುರೋಹಿತರ ವಿರುದ್ಧ ಮಾಡಿದ ಸುಧಾರಣಾ ಆಂದೋಳನದ ಹಿನ್ನೆಲೆಯಲ್ಲಿ ಬೊಹ್ರಾ ಧರ್ಮದಿಂದ ಅವರನ್ನು ಹೊರಗೆ ಹಾಕಲಾಗಿತ್ತು. ಸನ್. ೨೦೧೧ ರಲ್ಲಿ, ತಮ್ಮ ಆತ್ಮ ಕಥೆ, 'A Living Faith': A Quest for Peace, Harmony and Social Change, ಬಿಡುಗಡೆಯಾದ ಸಮಯದಲ್ಲಿ ಮೀಡಿಯಾವೊಂದರ ಸಂವಾದ ಕಾರ್ಯಕ್ರಮದಲ್ಲಿ ಅವರು, 'ಸರ್ ಸಯ್ಯದ್' ಎಂಬ ದಾರ್ಶನಿಕರಿದ್ದರು. ಅವರ ಜೊತೆ ಒಬ್ಬ 'ಅಂಬೇಡ್ಕರ್' ಸಹಿತ ಇದ್ದಿದ್ದರೆ ಚೆನ್ನಾಗಿತ್ತು ಎಂದು, ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

  • ಕೃಪೆ : ೨ ನೆಯ ಚಿತ್ರ,'ಅವಧಿ ಇ-ಪತ್ರಿಕೆಯಿಂದ'.