ಅಸಿಲಿಡೇ

ವಿಕಿಪೀಡಿಯ ಇಂದ
Jump to navigation Jump to search
ಅಸಿಲಿಡೆ

ಅಸಿಲಿಡೇ, ಡಿಪ್ಟೆರ ಉಪವರ್ಗದ ಒಂದು ಕುಟುಂಬ. ರೂಢನಾಮ ದರೋಡೆ ನೊಣ-ಈ ನೊಣಗಳು ಕೆಚ್ಚೆದೆಯಿಂದ ಇತರ ಕೀಟಗಳ ರಕ್ತವನ್ನು ಹೀರುವುದರಿಂದ ಈ ಹೆಸರು. ಕೊಡತಿ ಹುಳುಗಳನ್ನು ಮುತ್ತಿ ನಾಶಮಾಡುತ್ತವೆ. ರೋಮಗಳ ಹೊದಿಕೆಯಿರುವ ದೊಡ್ಡ ದೇಹ. ಸುಮಾರು 1" ಉದ್ದ, ಬಣ್ಣ ಹಳದಿ; ಕೆಂಬಣ್ಣದ ದಪ್ಪ ಕಾಲುಗಳ ಮೇಲೆ ಕೂದಲಿನಂಥ ರಚನೆಗಳು; ಹೊಟ್ಟೆಯ ಕೆಳಭಾಗ ಕಪ್ಪು; ರೆಕ್ಕೆಗಳು ದೊಡ್ಡದಾಗಿವೆ, ಬಣ್ಣ ಕಂದು. ಈ ನೊಣದ ಮರಿಗಳು ತೇವದ ಭೂಮಿಯಲ್ಲಿ ವಾಸಮಾಡುತ್ತವೆ; ಇತರ ಜೀವಿಗಳನ್ನು ಕೊಂದು ತಿನ್ನುತ್ತವೆ. ಅಮೆರಿಕದ ಟ್ರಾನ್ಸ್‍ಪೇಮಿಯ ಎವಿಪೊರ ಎಂಬ ಪ್ರಭೇದ ಜೇನು ನೊಣಗಳನ್ನೇ ತಿಂದು ಬದುಕುವುದು.

ಮಾರ್ಫಾಲಜಿ[ಬದಲಾಯಿಸಿ]

ವಾಯಸ್ಕ ನೊಣವು ೧ ರಿಂದ ೧.೫ ಅಷ್ಟು ಉದ್ದ ಇರುತ್ತದೆ.ಇದರ ಆಕಾರವು ಸಾಧಾರಣವಾಗಿ ಉದ್ದವಾಗಿ, ಚೂಪಾದ ಹೊಟ್ಟೆ,ಹಾಗು ನೀಳವಾಗಿರುತ್ತದೆ.ರಾಬರ್ ಫ್ಲೈಸ್ ಗಳು ದಪ್ಪ, ಸ್ಪೈನಿ ಕಾಲುಗಳು ಮತ್ತು ಇವುಗಳು ,ತಮ್ಮ ತಲೆಯಲ್ಲಿರುವ ಎರಡು ದೊಡ್ಡ ಸಂಯುಕ್ತ ಕಣ್ಣುಗಳ ನಡುವೆ ಒಂದು ವಿಶಿಷ್ಟವಾದ ಖಿನ್ನತೆಯಲ್ಲಿ ಮೂರು ಸರಳ ಕಣ್ಣುಗಳು (ocelli) ಹೊಂದಿರುತ್ತವೆ

ಉಲ್ಲೇಖಗಳು[ಬದಲಾಯಿಸಿ]

[೧] [೨]

  1. http://www.geller-grimm.de/genera15.htm
  2. http://www.bt-images.net/beautiful-eyes/robber-fly/
"https://kn.wikipedia.org/w/index.php?title=ಅಸಿಲಿಡೇ&oldid=907773" ಇಂದ ಪಡೆಯಲ್ಪಟ್ಟಿದೆ